Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಕ್ರಿಕೆಟ್

ಸಾಯಿ ಸ್ಟ್ರೈಕರ್ಸ್ ಪೊಲಿಪು ಮಡಿಲಿಗೆ ಇಂಡಿಪೆಂಡೆನ್ಸ್ ಟ್ರೋಫಿ

ಉಡುಪಿ: ರಾಮದೂತ ವ್ಯಾಯಾಮ ಶಾಲೆಯ ಅಂಗಸಂಸ್ಥೆ  ಕುತ್ಪಾಡಿ ಫ್ರೆಂಡ್ಸ್, ಕುತ್ಪಾಡಿ ಇವರ ಆಶ್ರಯದಲ್ಲಿ 13 ಆಗಸ್ಟ್,  ಭಾನುವಾರದಂದು ಜಿಲ್ಲಾ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಕೂಟ ”ಇಂಡಿಪೆಂಡೆನ್ಸ್ ಟ್ರೋಫಿ-2023” ಉದ್ಯಾವರ ಪಂಚಾಯತ್ ಮೈದಾನದಲ್ಲಿ ನಡೆಯಿತು.
ದಿವಂಗತ ನವೀನ್ ಆಚಾರ್ಯ ಇವರ ಸ್ಮರಣಾರ್ಥವಾಗಿಈ ಟೂರ್ನಮೆಂಟ್ ನಡೆಸಲಾಗಿತ್ತು.
ಫೈನಲ್ ಪಂದ್ಯದಲ್ಲಿ ಸಾಯಿ ಸ್ಟ್ರೈಕರ್ಸ್ ಪೊಲಿಪು ತಂಡವು ಖತರ್ನಾಕ್ ಮಲ್ಲಾರ್ ತಂಡವನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿತು.
ವಿಜೇತರಾದ  ಸಾಯಿ ಸ್ಟ್ರೈಕರ್ಸ್ ಪೊಲಿಪು ತಂಡಕ್ಕೆ ಪ್ರಥಮ ಬಹುಮಾನ ರೂ. 22,222 ಮತ್ತು ಟ್ರೋಫಿ ಹಾಗೂ ರನ್ನರ್ ಅಪ್ ತಂಡ ಖತರ್ನಾಕ್ ಮಲ್ಲಾರ್ ಗೆ ದ್ವಿತೀಯ ಬಹುಮಾನ ರೂ. 11,111ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು. ಖತರ್ನಾಕ್ ಮಲ್ಲಾರ್ ತಂಡದ ಧೀರಜ್ ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿಯನ್ನು ಪಡೆದುಕೊಂಡರು.  ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್ ಮ್ಯಾನ್ ಆಗಿ ಸಾಯಿ ಸ್ಟ್ರೈಕರ್ಸ್ ತಂಡದ ಸುಮಿತ್,  ಬೆಸ್ಟ್ ಬೌಲರ್ ಆಗಿ ಅದೇ ತಂಡದ ಭರತ್ ಆಯ್ಕೆಯಾದರು.  ಫೈನಲ್ ಪಂದ್ಯದ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ಕೂಡ ಭರತ್ ಪಡಕೊಂಡರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗಿರಿರಾಜ್ ಸಂಪಿಗೆನಗರ- ಉದ್ಯಮಿ, ಗಣೇಶ್ ಕುಮಾರ್ ಸಂಪಿಗೆನಗರ- ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷರು, ಅಯೂಬ್ ಸಾಹೇಬ್- ಮಾಜಿ ಅಧ್ಯಕ್ಷರು ರಾಮದೂತ್ ವ್ಯಾಯಾಮ ಶಾಲೆ ಕುತ್ಪಾಡಿ, ಜಯಪ್ರಕಾಶ್ ಆಚಾರ್ಯ- ಅದ್ಯಕ್ಷರು ರಾಮದೂತ್ ವ್ಯಾಯಮ ಶಾಲೆ ಕುತ್ಪಾಡಿ, ಕೋಟ ರಾಮಕೃಷ್ಣ ಆಚಾರ್ಯ-  ಸ್ಪೋರ್ಟ್ಸ್ ಕನ್ನಡ ಡಾಟ್ ಕಾಮ್  ನ ಪ್ರಧಾನ ಸಂಪಾದಕರು, ರಾಧಾಕೃಷ್ಣ ಶ್ರೇಯಾನ್- ಗ್ರಾಮ ಪಂಚಾಯತ್ ಅದ್ಯಕ್ಷರು ಉದ್ಯಾವರ, ಅಶೋಕ್ ಭಂಡಾರಿ ಕುತ್ಪಾಡಿ – ಉದ್ಯಮಿ  ಹಾಗೂ ಜಿತೇಂದ್ರ ಶೆಟ್ಟಿ, ಸಮಾಜ ಸೇವಕರು ಮುಂತಾದವರು ಉಪಸ್ಥಿತರಿದ್ದರು.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಕ್ರಿಕೆಟ್

ಕುತ್ಪಾಡಿ ಫ್ರೆಂಡ್ಸ್, ಕುತ್ಪಾಡಿ ಆಶ್ರಯದಲ್ಲಿ ಇಂಡಿಪೆಂಡೆನ್ಸ್ ಟ್ರೋಫಿ-2023

ಉಡುಪಿ: ಇಲ್ಲಿನ ಕುತ್ಪಾಡಿ ಫ್ರೆಂಡ್ಸ್, ಕುತ್ಪಾಡಿ ಇವರ ಆಶ್ರಯದಲ್ಲಿ ದಿವಂಗತ ನವೀನ್ ಆಚಾರ್ಯ ಇವರ ಸ್ಮರಣಾರ್ಥ ಮಾನ್ಸೂನ್ ಮಾದರಿಯ ಜಿಲ್ಲಾ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಕೂಟ ”ಇಂಡಿಪೆಂಡೆನ್ಸ್ ಟ್ರೋಫಿ-2023” ಉದ್ಯಾವರ ಪಂಚಾಯತ್ ಗ್ರೌಂಡ್ ನಲ್ಲಿ ತಾರೀಕು 13-08-2023ನೇ ಆದಿತ್ಯವಾರ ನಡೆಯಲಿದೆ.
ಈ ಟೂರ್ನಮೆಂಟ್ ಗೆ ಭಾಗವಹಿಸಲು ಪ್ರವೇಶ ಶುಲ್ಕ ರೂ. 2,500  ಆಗಿದ್ದು ವಿಜೇತರಿಗೆ ಪ್ರಥಮ ಬಹುಮಾನ ರೂ. 22,222+ ಟ್ರೋಫಿ ಮತ್ತು ದ್ವಿತೀಯ ಬಹುಮಾನ ರೂ. 11,111+ ಟ್ರೋಫಿ ನೀಡಲಾಗುವುದು.
ಹೆಚ್ಚಿನ ವಿವರಗಳಿಗೆ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:
7353363108
8073029559