Categories
ಕ್ರಿಕೆಟ್

ಸೆಪ್ಟೆಂಬರ್ 28, 29ರಂದು ಬೆಂಗಳೂರು ಕೆ.ಆರ್.ಪುರಂ ಸರಕಾರಿ ಕಾಲೇಜಿನ ಅಂಗಣದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ

ಬೆಂಗಳೂರಿನ ಕೆ‌‌.ಆರ್.ಪುರಂ ಟೀಮ್ ಥಂಡರ್ಸ್ ಇವರ ಆಶ್ರಯದಲ್ಲಿ 2 ದಿನಗಳ ಹಗಲಿದ ರಾಜ್ಯ ಮಟ್ಟದ ಪಂದ್ಯಾಕೂಟ “ಥಂಡರ್ ಕಪ್ ಸೀಜನ್-3” K.P.L ಇದೇ ಬರುವ 28 ಹಾಗೂ 29ರಂದು ಕೆ.ಆರ್.ಪುರಂ ಸರಕಾರಿ ಕಾಲೇಜಿನ ಅಂಗಣದಲ್ಲಿ ನಡೆಯಲಿದೆ.

ಈಗಾಗಲೇ ಪ್ರತಿಷ್ಟಿತ 24 ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ವಿಲ್ಸನ್ ಚೆಂಡಿನಲ್ಲಿ ಪಂದ್ಯಾಟಗಳು ನಡೆಯಲಿದೆ. ಪ್ರತಿ ಇನ್ನಿಂಗ್ಸ್ 5 ಓವರ್ ಗಳದ್ದಾಗಿರುತ್ತದೆ. ಪಂದ್ಯಾಟ ಟೈ ಆದಲ್ಲಿ ಸೂಪರ್ ಓವರ್ ನಡೆಸಲಾಗುತ್ತದೆ, ಅನುಮಾನಾಸ್ಪದ ಬೌಲಿಂಗ್ ಅ್ಯಾಕ್ಷನ್ ಅವಕಾಶವಿರುವುದಿಲ್ಲ.

ಪಂದ್ಯಾಕೂಟದ ವಿಜೇತ ತಂಡ 50,000 ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ್ಸ್ ತಂಡ 25,000 ನಗದು ಹಾಗೂ ಆಕರ್ಷಕ ಟ್ರೋಫಿ ಪಡೆಯಲಿದ್ದಾರೆ.ಇನ್ನಿತರ ವಿಶಿಷ್ಟ ವೈಯಕ್ತಿಕ ಬಹುಮಾನ ಆಟಗಾರರನ್ನು ಹುರಿದುಂಬಿಸಲಿದೆ.

ಈ ಪಂದ್ಯಾಕೂಟದ ನೇರ ಪ್ರಸಾರ ಯಾಸೀನ್ ನೇತೃತ್ವದ “Y Sports”ಬಿತ್ತರಿಸಲಿದ್ದು,”ಸ್ಪೋರ್ಟ್ಸ್ ಕನ್ನಡ” ವೆಬ್ಸೈಟ್ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಸಹಕರಿಸಲಿದೆ ಎಂದು ಪಂದ್ಯಾಕೂಟ ವ್ಯವಸ್ಥಾಪನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರ್.ಕೆ.ಆಚಾರ್ಯ ಕೋಟ