Categories
ಕ್ರಿಕೆಟ್

ಸೌದಿ ಅರೇಬಿಯಾ- A.T.S ಕಪ್-2021-ಪ್ರತಿಷ್ಟಿತ 15 ಫ್ರಾಂಚೈಸಿಗಳ ಜಿದ್ದಾಜಿದ್ದಿನ ಹೋರಾಟಕ್ಕೆ ಸಜ್ಜಾದ ಜೆದ್ದಾ

ಕೋಟ ರಾಮಕೃಷ್ಣ ಆಚಾರ್-ಸ್ಪೋರ್ಟ್ಸ್ ಕನ್ನಡ ವರದಿ
A.T.S ಕ್ರಿಕೆಟ್ ಕ್ಲಬ್ ಜೆದ್ದಾ ಇವರ ಆಶ್ರಯದಲ್ಲಿ,
ಮಂಗಳೂರು ಕ್ರಿಕೆಟ್ ಅಸೋಸಿಯೇಷನ್ ಜೆದ್ದಾ ಇವರ ಸಹಯೋಗದೊಂದಿಗೆ ಡಿಸೆಂಬರ್ 9,10 ಮತ್ತು 11 ರಂದು ಅದ್ಧೂರಿಯ A.T.S ಕಪ್-2021 ಪಂದ್ಯಾಕೂಟ ಆಯೋಜಿಸಲಾಗಿದೆ.
15 ಪ್ರತಿಷ್ಠಿತ ಫ್ರಾಂಚೈಸಿಗಳು ಭಾಗವಹಿಸಲಿರುವ
 ಎ. ಟಿ.ಎಸ್-2021 ಪಂದ್ಯಾವಳಿಯ ಜೆರ್ಸಿ ಅನಾವರಣ ಕಾರ್ಯಕ್ರಮವು ನವೆಂಬರ್ 25ರಂದು ಸೌದಿ ಅರೇಬಿಯದ ಲಾ ಸನಿ ಹೋಟೆಲ್ ನಲ್ಲಿ ಜರಗಿತು.
 ಮುಖ್ಯ ಅತಿಥಿಗಳಾಗಿ ಡಾ. ಅಬ್ದುಲ್ ಶಕೀರ್, ಮಿಯಾನ್ ಹಬೀಬ್, ಜಾವೇದ್ ಮಿಯಾಂದಾದ್, ಶಾಹುಲ್,ಅಝೀಜುದ್ದೀನ್,ಮೊಹಮ್ಮದ್ ಅಝಾನ್,ಬೆನೆಡಿಕ್ಟ್ ಸೆರಾ, ಹಮೀದ್ ಔಝಾನ್,ಜೈನುದ್ದೀನ್ ಮುನ್ನಾರ್ ಭಾಗವಹಿಸಿದ್ದರು.
ಎ.ಟಿ.ಎಸ್ ಕಪ್ ನ ಕೋಶಾಧಿಕಾರಿಯಾಗಿರುವ ಅಲೋಕ್ ಪ್ರಭು ಉಪಸ್ಥಿತರಿದ್ದು ಗಣ್ಯರೆಲ್ಲರನ್ನೂ ಸ್ವಾಗತಿಸಿದರು.
ನಂತರದಲ್ಲಿ ಎ. ಟಿ.ಎಸ್ ಕಪ್ ನ ಇದುವರೆಗಿನ ನೆನಪುಗಳನ್ನು ಮತ್ತೊಮ್ಮೆ ಎಲ್. ಇ. ಡಿ ಸ್ಕ್ರೀನ್ ಮೂಲಕ ವೀಕ್ಷಿಸಿ ಈ ಬಾರಿ ಸ್ಪರ್ಧಿಸುತ್ತಿರುವ ಹದಿನೈದು ತಂಡಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು.
ಕೆ. ಪಿ.ಸಿ.ಸಿ ಯ ಕರ್ನಾಟಕ ರಾಜ್ಯದ ಅಧ್ಯಕ್ಷರಾಗಿರುವ ಡಾ.ಶಕೀಲ್ ಮಾತನಾಡಿ ಎ. ಟಿ.ಎಸ್ ತಂಡ  ಉತ್ತಮ ಯೋಜನೆಗಳಿಗೆ ಸದಾ ನನ್ನ ಬೆಂಬಲವಿದೆ.ಒಳ್ಳೆಯ ಉದ್ದೇಶದೊಂದಿಗೆ ಮುಂದಿಡುವ ಹೆಜ್ಜೆ ಎಂದಿಗೂ ಯಶಸ್ಸನ್ನು ಕಾಣುತ್ತದೆ. ಎ. ಟಿ.ಎಸ್ ತಂಡದ ಪ್ರಯತ್ನಗಳು ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸಿದರು.ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಮಾತನಾಡಿ ಎ. ಟಿ.ಎಸ್ ತಂಡಕ್ಕೆ ಹಾಗೂ ಭಾಗವಹಿಸುತ್ತಿರುವ ಪ್ರತಿ ತಂಡಕ್ಕೂ ಶುಭ ಹಾರೈಸಿದರು.
ಎ. ಟಿ.ಎಸ್ ಕಪ್ ನ ಅಧ್ಯಕ್ಷರಾದ ಇಸ್ಮಾಯಿಲ್ ಅಬ್ದುಲ್ ಖಾದರ್,ಎ. ಟಿ.ಎಸ್ ಕಪ್ ಎರಡನೇ ಸೀಸನ್ ಹಮ್ಮಿಕೊಂಡಿರುವ ಯೋಜನೆಗಳ ಕುರಿತಾಗಿ ಸಂಕ್ಷಿಪ್ತವಾಗಿ ಮಾತನಾಡಿದರು .
ತಂಡದ ನಾಯಕರಾದ ಅಬ್ದುಲ್ ಜಲೀಲ್, ಉಪಾಧ್ಯಕ್ಷರಾದ ಯೋಗಾನಂದ ಆಚಾರ್ಯ,ಪ್ರಧಾನ ಕಾರ್ಯದರ್ಶಿಯಾಗಿರುವ ಸಂಶುದ್ದೀನ್,ಸದಸ್ಯರಾದ ಶಮ್ಮೀರ್ ಕಾರ್ನಾಡ್, ಶಬ್ಬೀರ್ ಕಾರ್ನಾಡ್, ಫಝ್ಲು  ಹೊನ್ನಾಳ,ಜಸೀಮ್ ಕಲ್ಲಡ್ಕ ಉಪಸ್ಥಿತರಿದ್ದರು.
ಈ ಪಂದ್ಯಾವಳಿಯ ಮಂಗಳೂರು ಕ್ರಿಕೆಟ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ  ನಡೆಯಲಿದ್ದು ಇದರ ಸದಸ್ಯರಾದ ಆಲಿ ಕಥಾರ್,ಮೊಹಮ್ಮದ್ ಫಯಾಜ್,ಸಾಧಿಕ್ ರದ್ವಾ,ಶಾಹುಲ್,ಅಶ್ರಫ್ ಅಡೂರು, ಇರ್ಫಜ್ ಬೊಳ್ವಾಯಿ ಉಪಸ್ಥಿತರಿದ್ದರು .
ಅಬ್ದುಲ್ ಸಲೀಂ,ಅತೀಶ್ ಮೊಹಮ್ಮದ್,ಆಸೀಫ್ ರೋಶನ್,ಪೂರ್ಕಾನ್  ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.ಮೀಡಿಯಾ ಪಾರ್ಟ್ನರ್ ಆಗಿರುವ EPITOME ಕಾರ್ಯಕ್ರಮವನ್ನು ಯುಟ್ಯೂಬ್ ಹಾಗೂ ಫೇಸ್ಬುಕ್ ಮುಖೇನ ಲೈವ್ ವೀಕ್ಷಣೆಗೆ ಅವಕಾಶ ಕಲ್ಪಿಸಿದರು.
ಕಾರ್ಯಕ್ರಮದಲ್ಲಿ  ಪಂದ್ಯಾವಳಿಯಲ್ಲಿ ಭಾಗವಹಿಸುವ 15 ತಂಡಗಳ ಮಾಲಕರೂ,ತಂಡದ ನಾಯಕರು ಭಾಗವಹಿಸಿದ್ದರು.ಒಟ್ಟು 22 ಪಂದ್ಯಗಳಿದ್ದು   ಸೌದಿ ಅರೇಬಿಯಾದ ಬೇರೆ ಬೇರೆ ಭಾಗಗಳಿಂದ  ಸರಿಸುಮಾರು 225 ಆಟಗಾರರು  ಭಾಗವಹಿಸಲಿದ್ದಾರೆ.ಗರಿಷ್ಟ ನಗದು ಬಹುಮಾನ ಹಾಗೂ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರಿಗೆ ಚಿನ್ನದ ನಾಣ್ಯಗಳ ಉಡುಗೊರೆ ಪಡೆಯಲಿದ್ದಾರೆ.