Categories
ಕ್ರಿಕೆಟ್

ಡಿಸೆಂಬರ್ 23,24 ಹಾಗೂ 25  ಕೋಲಾರದ ಸೋಮಯಾಜಲಹಳ್ಳಿಯಲ್ಲಿ ಧೋನಿ ಪ್ರೀಮಿಯರ್ ಲೀಗ್ – 2019 

ಚಿನ್ನದ ನಿಕ್ಷೇಪಗಳನ್ನು ಆವಿಷ್ಕರಿಸಿದ್ದ ಕೋಲಾರದ ಮಣ್ಣಿನಲ್ಲಿ ಯುವ ಪ್ರತಿಭೆಗಳ ಅನ್ವೇಷಣೆ ಕಳೆದ ಋತುವಿನಿಂದ ಪ್ರಾರಂಭವಾಗಿದೆ. ಭಾರತೀಯ ತಂಡದ ಯಶಸ್ವಿ ಕಪ್ತಾನ,ಚಮತ್ಕಾರಿ ಗೂಟ ರಕ್ಷಕ ಮಹೇಂದ್ರ ಸಿಂಗ್ ಧೋನಿ ಅಭಿಮಾನಪೂರ್ವಕವಾಗಿ, ಶಾಮೀರ್ ಮಾಲೀಕತ್ವದ S.A.S ಹಾಗೂ SPL ರೂವಾರಿ MKS ಗ್ರೂಪ್ ನ ಮಾಲೀಕ ನದೀಮ್ ಅಖ್ತರ್ ಇವರೀರ್ವರ ದಕ್ಷ ಸಾರಥ್ಯದಲ್ಲಿ ಡಿಸೆಂಬರ್ 23,24 ಹಾಗೂ 25 ರಂದು ಕೋಲಾರದ ಸೋಮಯಾಜಲಹಳ್ಳಿಯ ಈಡನ್ ಗಾರ್ಡನ್ ಅಂಗಣದಲ್ಲಿ 3 ದಿನಗಳ ಕ್ರಿಕೆಟ್ ಪಂದ್ಯಾವಳಿ ಧೋನಿ ಪ್ರೀಮಿಯರ್ ಲೀಗ್-2019 ನಡೆಯಲಿದೆ.

ಕೋಲಾರ ಜಿಲ್ಲೆಯ ಆಟಗಾರರಿಗೆ ಸೀಮಿತವಾಗಿರುವ ಈ ಪಂದ್ಯಾವಳಿಯಲ್ಲಿ ಶ್ರೀನಿವಾಸಪುರ ತಾಲ್ಲೂಕಿನ 9 ಆಟಗಾರರಿಗೆ ಒಂದೊಂದು ತಂಡದಲ್ಲಿ ಅವಕಾಶ ನೀಡಲಾಗಿದ್ದು, 8 ಫ್ರಾಂಚೈಸಿಗಳು ಸ್ಪರ್ಧಿಸಲಿದೆ. ಕಳೆದ ವಾರ ಹಿರಿಯ ವೀಕ್ಷಕ ವಿವರಣೆಕಾರ ಶಿವನಾರಾಯಣ ಐತಾಳ್ ಕೋಟ ಇವರಿಂದ ಆಕ್ಷನ್ ಪ್ರಕ್ರಿಯೆ ನಡೆದಿದ್ದು, 8 ಫ್ರಾಂಚೈಸಿಗಳ ವಿವರ ಈ ಕೆಳಗಿನಂತಿದೆ.

  1. ಫ್ರೆಂಡ್ಸ್ ಕ್ರಿಕೆಟರ್ಸ್

2) ಸ್ಟಾರ್ ವರ್ಟೆಕ್ಸ್

3 ) ನಂದಮೂರಿ ಲಯನ್ಸ್

4 ) ರೈಸಿಂಗ್ ಸ್ಟಾರ್ಸ್

5) ನೇತಾಜಿ ಕ್ರಿಕೆಟರ್ಸ್

6) ಬ್ರ್ಯಾಂಡ್ ಯುವ ಕ್ರಿಕೆಟರ್ಸ್

7) S.A.S ಕ್ರಿಕೆಟರ್ಸ್

8) ದಾದಾ ಕ್ರಿಕೆಟರ್ಸ್

ಪಂದ್ಯಾವಳಿಯ ವಿಜೇತ ತಂಡ 1 ಲಕ್ಷ ನಗದು,ರನ್ನರ್ಸ್ ತಂಡ 50 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು,ಇನ್ನಿತರ ವೈಯಕ್ತಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.ಪಂದ್ಯಾವಳಿಯ ನೇರ ಪ್ರಸಾರ M.Sports ಬಿತ್ತರಿಸಲಿದ್ದು,ಸ್ಪೋರ್ಟ್ಸ್‌ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.