Categories
ಕಾಫಿ ವಿತ್ ಅರ್ ಕೆ

ಚಿಟ್ ಚಾಟ್-60 ವಿತ್ ಕಾಮೆಂಟ್ರಿ ಶಿವ – ಕ್ರೀಡಾ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧಕರ ಸಂದರ್ಶನ

ಕ್ರೀಡೆಯ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ,ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕಳೆದ ಎರಡೂವರೆ ದಶಕಗಳ ಹಿಂದೆ ಮೂರು ದಶಕಗಳಿಂದ ರಾಜ್ಯ ಟೆನ್ನಿಸ್ ಕ್ರಿಕೆಟ್ ನ  ಅನುಭವಿ ವೀಕ್ಷಕ ವಿವರಣೆಕಾರ ಹಾಗೂ ಅಂಪಾಯರ್ ಕೋಟ ಶಿವನಾರಾಯಣ ಐತಾಳ್ ರವರು ಸ್ಥಾಪಿಸಿದ್ದ ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಿದ್ದರು.
ಜಿಲ್ಲಾ ಮಟ್ಟದ ಡಬಲ್ ವಿಕೆಟ್ ಪಂದ್ಯಾವಳಿ ಮೊತ್ತ ಮೊದಲ ಬಾರಿಗೆ ಸಂಘಟಿಸಿದ್ದು,
ಟೊರ್ಪೆಡೋಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಹಾಗೂ ಟೆನ್ನಿಸ್ ಬಾಲ್ ನ ತೆಂಡುಲ್ಕರ್ ಹರಿಪ್ರಸನ್ನ(ಪುಟ್ಟ)ಪ್ರಥಮ ಸ್ಥಾನಗಳಿಸಿದ್ದು,ಇಲೆವೆನ್ ಅಪ್ ಕೋಟ ತಂಡದ ಪದ್ಮನಾಭ ಆಚಾರ್ ಹಾಗೂ ಮಿಥುನ್ ಹಂದೆ ದ್ವಿತೀಯ ಬಹುಮಾನ ಗಳಿಸಿರುವುದು
ನೆನಪಿನ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ.ಅಂತೆಯೇ ಒಂದು ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ,2 ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಹಾಗೂ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ ಸಂಸ್ಥೆ ಇತ್ತೀಚೆಗಷ್ಟೇ ತನ್ನ ಬೆಳ್ಳಿಹಬ್ಬವನ್ನು ಆಚರಿಸಿದೆ.
ಹಲವಾರು ಟಿ.ವಿ ಕಾರ್ಯಕ್ರಮಗಳಲ್ಲಿ ಪ್ರಸಿದ್ಧ ಕ್ರಿಕೆಟ್ ವಿಶ್ಲೇಷಕರ ಜೊತೆ ಅಂತರಾಷ್ಟ್ರೀಯ ಪಂದ್ಯಗಳ ವಿಶ್ಲೇಷಣೆ ನಡೆಸಿದ ಅನುಭವ ಹೊಂದಿರುವ ಶಿವನಾರಾಯಣ ಐತಾಳರು ಈ ಸಂಸ್ಥೆಯಿಂದ ವಿನೂತನ‌ ಪ್ರಯತ್ನಕ್ಕೆ ಕೈ ಹಾಕಿದ್ದು,ಹಿರಿಯ ಹಾಗೂ ಕಿರಿಯ ಕ್ರೀಡಾಲೋಕದ ಸಾಧಕರು,ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸಾಧಕರನ್ನು ಅವರಿದ್ದಲ್ಲಿಗೇ ತೆರಳಿ ಸಂದರ್ಶನ ನಡೆಸಿ ಪ್ರಸಾರಗೊಳಿಸುವ ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲಿದ್ದಾರೆ.
Categories
ಕ್ರಿಕೆಟ್ ರಾಜ್ಯ

ತುಮಕೂರು ” ಚಕ್ರವರ್ತಿ ಟ್ರೋಫಿ-2020

ತುಮಕೂರು ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ,ಚಕ್ರವರ್ತಿ ಗೆಳೆಯರ ಬಳಗದ ನಾಯಕ ಪ್ರಕಾಶ್.ಟಿ.ಸಿ ಸಾರಥ್ಯದಲ್ಲಿ,ಕೆ.ಪಿ.ಸಿ.ಸಿ ಸದಸ್ಯರು ಕೃಷ್ಣಮೂರ್ತಿ ಪಿ.ಎನ್, ಕೆ. ಶ್ರೀಧರ್,ದನಿಯ ಕುಮಾರ್,ಚೇತನ್,ಪ್ರಸನ್ನ ಕುಮಾರ್,ಸೋಮಶೇಖರ್ ರವರ ಮಾರ್ಗದರ್ಶನದಲ್ಲಿ ಇದೇ ಬರುವ ಫೆಬ್ರವರಿ 28 ರಿಂದ ಮಾರ್ಚ್ 1 ರ ತನಕ ಮೂರು ದಿನಗಳ ಹೊನಲು ಬೆಳಕಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ “ಚಕ್ರವರ್ತಿ ಟ್ರೋಫಿ-2020” ಬಿ.ಹೆಚ್.ರಸ್ತೆ ತುಮಕೂರಿನ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ರಾಜ್ಯದ 20 ತಂಡಗಳು ಭಾಗವಹಿಸುವ ಪ್ರತಿಷ್ಟಿತ ಪಂದ್ಯಾವಳಿಯ ವಿಜೇತ ತಂಡ 2.5 ಲಕ್ಷ ಹಾಗೂ ರನ್ನರ್ಸ್ ತಂಡ 1.5 ಲಕ್ಷ ನಗದು ಸಹಿತ ಮಿರುಗುವ ಟ್ರೋಫಿಗಳನ್ನು ಪಡೆಯಲಿದ್ದು ಇನ್ನಿತರ ವೈಯಕ್ತಿಕ ಆಕರ್ಷಕ ಬಹುಮಾನಗಳು ಆಟಗಾರರಿಗೆ ನೀಡಲಾಗುತ್ತಿದೆ.

ಪಂದ್ಯಾವಳಿಯ ನೇರ ಪ್ರಸಾರ M.Sports ಬಿತ್ತರಿಸಿದರೆ,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ, ಪ್ರಸಿದ್ಧ ವೀಕ್ಷಕ ವಿವರಣೆಕಾರರಾದ ಕೋಟ ಶಿವನಾರಾಯಣ ಐತಾಳ್ ಹಾಗೂ ಪ್ರಶಾಂತ್ ಅಂಬಲಪಾಡಿ ಭಾಗವಹಿಸಲಿದ್ದಾರೆ.