Categories
ಸ್ಪೋರ್ಟ್ಸ್

ವಿಶ್ವ ಬಂಟರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಒಕ್ಕೂಟದ ನಿರ್ದೇಶಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರಿಗೆ ಆಹ್ವಾನ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಉಡುಪಿ ಅಜ್ಜರಕಾಡು ಮೈದಾನದಲ್ಲಿ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ದಿನಾಂಕ 28.10.2023 ಮತ್ತು 29.10.2023 ರಂದು ನಡೆಯಲಿರುವ  ವಿಶ್ವ ಬಂಟರ ಕ್ರೀಡಾಕೂಟ ಹಾಗೂ ವಿಶ್ವ ಬಂಟರ ಸಾಂಸ್ಕೃತಿಕ ವೈಭವ  ಕಾರ್ಯಕ್ರಮ ಒಕ್ಕೂಟದ ನಿರ್ದೇಶಕರಾದ ಶ್ರೀ ಪ್ರವೀಣ್ ಶೆಟ್ಟಿ ವಕ್ವಾಡಿಯವರನ್ನು ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಒಕ್ಕೂಟದ ಪರವಾಗಿ ಹೂಗುಚ್ಚ ನೀಡಿ  ಪ್ರೀತಿಪೂರ್ವಕವಾಗಿ ಆಹ್ವಾನಿಸಿದರು.
ಅಧ್ಯಕ್ಷರ ಆದರದ ಆಹ್ವಾನ ಸ್ವೀಕರಿಸಿದ ಶ್ರೀ ಪ್ರವೀಣ್ ಶೆಟ್ಟಿ ವಕ್ವಾಡಿಯವರು ತನ್ನ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಉಪಾಧ್ಯಕ್ಷ ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿ ಉಪಸ್ಥಿತರಿದ್ದರು.
Categories
ಕ್ರಿಕೆಟ್

ದುಬೈ-ಕ್ರೀಡೆ ಜೀವನದ ಅವಿಭಾಜ್ಯ ಅಂಗ-ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ

ಕರ್ನಾಟಕ ಸಂಘ ಶಾರ್ಜಾ ಯುಎಇ ಇವರ ಆಶ್ರಯದಲ್ಲಿ ನಡೆದ ಯುಎಇ ಮಟ್ಟದ ಪುರುಷರ ವಾಲಿಬಾಲ್ , ಪುರುಷರ ಮತ್ತು ಮಹಿಳೆಯರ ತ್ರೋಬಾಲ್ ಪಂದ್ಯಾಟ , 27 ಭಾನುವಾರ ಅಜ್ಮನ್ ಅಕಾಡೆಮಿಯಲ್ಲಿ ನಡೆಯಿತು.
ಈ ಸಮಾರಂಭದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರು ಶ್ರೀ ಎಂ.ಇ.ಮೂಳೂರು. ಮುಖ್ಯ ಅತಿಥಿಗಳಾಗಿ ಸಂಘದ ಪ್ರಮುಖ ಸಲಹೆಗಾರರು ಮತ್ತು ಉದಾರ ದಾನಿಗಳು ಸಮಾಜಸೇವಕರು ಆಗಿರುವ ಶ್ರೀ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಫಾರ್ಚುನ್ ಗ್ರೂಪ್ಸ್ ಆಫ್ ಹೋಟೆಲ್ಸ್, ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣ ಸ್ವಾಮಿಗಳು  ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಶ್ರೀ ಎಂ.ಎನ್.ಸುರೇಶ್  ಮತ್ತು ಸಂಘದ ಪದಾಧಿಕಾರಿಗಳು , ಕ್ರೀಡಾಪಟುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಕ್ರೀಡಾ ಜೀವನದ ಅವಿಭಾಜ್ಯ ಅಂಗ ಕ್ರೀಡಾ ಚಟುವಟಿಕೆಗಳಿಗೆ ನನ್ನ ಸಹಕಾರ ಮತ್ತು ಬೆಂಬಲ ಇದ್ದೇ ಇರುತ್ತದೆ ಎಂದು ಎಲ್ಲಾ ಕ್ರೀಡಾ ಪಟುಗಳಿಗೂ ಶುಭ ಹಾರೈಸಿದರು.
ಬೆಳಿಗ್ಗೆ ಪ್ರಾರಂಭಗೊಂಡ ಕ್ರೀಡಾ ಚಟುವಟಿಕೆ ಮುಸಂಜೆವರೆಗೆ ನಡೆಯಿತು. ಯುಎಇ 15ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಲೀಗ್ ಮಾದರಿಯ ಪಂದ್ಯಾಟದಲ್ಲಿ ಪುರುಷರ ವಾಲಿಬಾಲ್ ವಿಭಾಗದಲ್ಲಿ  ಟೀಮ್ ಡಿ3 ವಿಜಯಶಾಲಿಗಳಾದರೆ ಪುರುಷರ ತ್ರೋಬಾಲ್ ವಿಭಾಗದಲ್ಲಿ ಕೋಸ್ಟಲ್ ಫ್ರೆಂಡ್ಸ್ ಮತ್ತು ಮಹಿಳೆಯರ ತ್ರೋಬಾಲ್ ಪಂದ್ಯಾವಳಿಯಲ್ಲಿ ಬಂಟ್ಸ್ ದುಬೈ ವಿಜಯಿಶಾಲಿ ಆಗುವ ಮೂಲಕ ಮಯೂರ  ಕಪ್ ತನ್ನದಾಗಿಸಿಕೊಂಡಿದೆ.
ಪಂದ್ಯಾಟದ ಕಾರ್ಯಕ್ರಮ ನಿರೂಪಣೆಯನ್ನು ಸ್ಪೋರ್ಟ್ಸ್ ಕನ್ನಡ ಗಲ್ಫ್ ಪ್ರತಿನಿಧಿ ವಿಘ್ನೇಶ್ ಕುಂದಾಪುರ ನಡೆಸಿದರು.
Categories
ಭರವಸೆಯ ಬೆಳಕು

ಉಡುಪಿ- ಗೋಪೂಜಾ ಪುಣ್ಯದಿನದಂದು ಕಾಮಧೇನು ಗೋಶಾಲೆ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಿದ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ

ಬ್ರಹ್ಮಾವರ ತಾಲೂಕಿನ ನಂಚಾರಿನ ಪತಂಜಲಿ ಯೋಗ ಗುರುಗಳು ಹಾಗೂ ಉತ್ತಮ ಹೈನುಗಾರರು ಪ್ರಶಸ್ತಿ ಪುರಸ್ಕೃತರಾದ ರಾಜೇಂದ್ರ ಚಕ್ಕೇರ ಇವರ 6 ಎಕರೆ ಭೂಮಿಯಲ್ಲಿ ಅನಾಥ,ಅಪಘಾತಕ್ಕೀಡಾದ ಹಾಗೂ ಕಟುಕರ ಕೈಗಳಿಂದ ರಕ್ಷಿಸಲ್ಪಡುವ ಗೋವುಗಳಿಗೆ ಆಶ್ರಯ ತಾಣ ಹಾಗೂ ಆಧುನಿಕ ಪಶುಚಿಕಿತ್ಸಾಲಯ ನಿರ್ಮಾಣಕ್ಕಾಗಿ ಕಾಮಧೇನು ಗೋಶಾಲೆ ಮಹಾಸಂಘ ಟ್ರಸ್ಟ್ (ರಿ) ಸ್ಥಾಪಿಸಲಾಗಿದೆ.
ನವೆಂಬರ್ 17 ರಂದು ಗೋಶಾಲೆಯ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ.ಈ ಬಗ್ಗೆ ಸಂಸ್ಥೆಯ ವತಿಯಿಂದ ಕುಂದಾಪುರದ ವಕ್ವಾಡಿ ಮೂಲದ ಪ್ರಸಿದ್ಧ ಹೋಟೆಲ್ ಉದ್ಯಮಿ ದುಬೈ ನ ಫಾರ್ಚೂನ್ ಸಮೂಹ ಸಂಸ್ಥೆಗಳ ಮಾಲಕರು ಮತ್ತು ಆಡಳಿತ ನಿರ್ದೇಶಕರು,ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ(ಯು.ಎ‌‌.ಇ)ಯ ಅಧ್ಯಕ್ಷರು,ಕ್ರೀಡಾ ಪ್ರೋತ್ಸಾಹಕರು ಹಾಗೂ ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವನ್ನು ಭೇಟಿ ಮಾಡಿ ತಿಳಿಸಲಾಗಿತ್ತು.
ನವೆಂಬರ್ 5 ಗೋಪೂಜೆಯ ಪುಣ್ಯದಿನದಂದು ಸ್ವಗ್ರಹಕ್ಕೆ ಆಹ್ವಾನಿಸಿ ಕಾಮಧೇನು ಗೋಶಾಲೆಗೆ ಆರ್ಥಿಕ ಸಹಾಯವನ್ನು ನೀಡಿ,ಮುಂದಿನ ದಿನಗಳಲ್ಲೂ ಕೂಡ ಗೋಶಾಲೆಯ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆಯನ್ನು ನೀಡಿದರು.