Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಜಾನ್ಸನ್ ಕುಂದಾಪುರ ತಂಡದ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಅದ್ಧೂರಿಯ ಕ್ರಿಕೆಟ್ ಪಂದ್ಯಾಟ

ಕುಂದಾಪುರ-ರಾಜ್ಯ,ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಜಯಿಸಿದ ಜಾನ್ಸನ್ ಕುಂದಾಪುರ ತಂಡದ ಆಶ್ರಯದಲ್ಲಿ,
ಕುಂದಾಪುರದ ಗಾಂಧಿ ಮೈದಾನದಲ್ಲಿ ಡಿಸೆಂಬರ್ 30,31 ಮತ್ತು ಜನವರಿ 1 ರಂದು ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಅದ್ಧೂರಿಯ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.

ಟೂರ್ನಮೆಂಟ್ ನ ಪ್ರಥಮ ಬಹುಮಾನ 4,04,000 ರೂ,ದ್ವಿತೀಯ ಬಹುಮಾನ 2,02,000ರೂ ನಗದು ಸಹಿತ ಆಕರ್ಷಕ ಟ್ರೋಫಿಗಳು ಮತ್ತು ವೈಯಕ್ತಿಕ ಬಹುಮಾನ ರೂಪದಲ್ಲಿ ವಿಶೇಷ ಉಡುಗೊರೆಗಳನ್ನು ನೀಡಲಾಗುತ್ತಿದೆ.

ಮುಂಬಯಿ,ಮಧ್ಯಪ್ರದೇಶ,ಚೆನ್ನೈ,ಕೇರಳ ಮತ್ತು ಕರ್ನಾಟಕ ಸೇರಿದಂತೆ ಆಹ್ವಾನಿತ 16 ರಿಂದ 20 ತಂಡಗಳು ಭಾಗವಹಿಸಲಿದೆ ಎಂದು ಜಾನ್ಸನ್ ಕುಂದಾಪುರ ತಂಡದ ಮಾಲೀಕರಾದ ರವಿ ಹೆಗ್ಡೆ ಸ್ಪೋರ್ಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.