Categories
ಫುಟ್ಬಾಲ್

SAFF ಚಾಂಪಿಯನ್‌ಶಿಪ್: ಟೈ ಬ್ರೇಕರ್‌ನಲ್ಲಿ ಭಾರತ 4-2 ಗೋಲುಗಳಿಂದ ಲೆಬನಾನ್ ಅನ್ನು ಸೋಲಿಸಿ ಫೈನಲ್‌ಗೆ ಪ್ರವೇಶ

SAFF ಚಾಂಪಿಯನ್‌ಶಿಪ್‌ನಲ್ಲಿ, ಭಾರತ ತಂಡವು ಲೆಬನಾನ್ ಅನ್ನು ಟೈ-ಬ್ರೇಕರ್‌ನಲ್ಲಿ ಸೋಲಿಸಿತು. ಸೆಮಿಫೈನಲ್‌ನಲ್ಲಿ ಪುನರಾವರ್ತಿತ ಹೆಚ್ಚುವರಿ ಸಮಯದ ನಂತರವೂ ಎರಡೂ ಕಡೆಯಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಅಂತಿಮವಾಗಿ ಭಾರತ ತಂಡ ಶೂಟೌಟ್‌ನಲ್ಲಿ ಜಯ ಸಾಧಿಸಿತು.
ಮೊದಲಾರ್ಧದಲ್ಲಿ, ಭಾರತ ತಂಡವು ಆಕ್ರಮಣಕ್ಕೆ ಅತ್ಯುತ್ತಮವಾಗಿ ಪ್ರಯತ್ನಿಸಿತು ಆದರೆ ಲೆಬನಾನ್ ಕೌಂಟರ್ ಅಷ್ಟೇ ಪ್ರಬಲವಾಗಿತ್ತು. ಲೆಬನಾನಿನ ಕಡೆಯಿಂದಲೂ ಪ್ರಯತ್ನಗಳನ್ನು ಮಾಡಲಾಯಿತು ಆದರೆ ಯಶಸ್ವಿಯಾಗಲಿಲ್ಲ.
105 ನಿಮಿಷಗಳ ನಂತರವೂ ಯಾವುದೇ ಗೋಲು ಬಾರದೆ ಪಂದ್ಯದ ಫಲಿತಾಂಶ ತಿಳಿಯಲಿಲ್ಲ. ಪಂದ್ಯದಲ್ಲಿ ಮತ್ತೊಮ್ಮೆ ಹೆಚ್ಚುವರಿ ಸಮಯ ನೀಡಲಾಯಿತಾದರೂ ಅಲ್ಲಿಯೂ ಉಭಯ ತಂಡಗಳ ಆಟ ಸಮಬಲಗೊಂಡಿದ್ದರಿಂದ ಪಂದ್ಯ ಟೈ ಬ್ರೇಕರ್‌ಗೆ ಹೋಯಿತು. ಟೈ ಬ್ರೇಕರ್‌ನಲ್ಲಿ ಭಾರತ ತಂಡ 4-2 ಅಂತರದಲ್ಲಿ ಜಯ ಸಾಧಿಸಿತು.
ಟೈ ಬ್ರೇಕರ್‌ನಲ್ಲಿ ಭಾರತ ತಂಡದ ಪರ ಮಹೇಶ್, ಉದಾಂತ, ಅನ್ವರ್ ಮತ್ತು ಸುನಿಲ್ ಛೆಟ್ರಿ ಗೋಲು ಗಳಿಸಿದರು. ಟೀಂ ಇಂಡಿಯಾ ಈಗ ಅಂತಿಮ ಪಂದ್ಯದಲ್ಲಿ ಕುವೈತ್ ವಿರುದ್ಧ ಆಡಬೇಕಿದೆ. ಲೀಗ್ ಹಂತದಲ್ಲಿ ಭಾರತ ಮತ್ತು ಕುವೈತ್ ನಡುವೆ ಪಂದ್ಯವೂ ನಡೆದಿತ್ತು. ಇಬ್ಬರ ನಡುವಿನ ಆ ಪಂದ್ಯ 1-1 ಡ್ರಾದಲ್ಲಿ ಅಂತ್ಯಗೊಂಡಿತ್ತು.
*ಸುರೇಶ್ ಭಟ್ ಮುಲ್ಕಿ*
*ಸ್ಪೋರ್ಟ್ಸ್ ಕನ್ನಡ*
Categories
ಕ್ರಿಕೆಟ್

ವಿಶ್ವಕಪ್ 2023: ಆಸ್ಟ್ರೇಲಿಯಾದ ಮೊದಲ ಪಂದ್ಯ ಭಾರತದ ವಿರುದ್ಧ

ODI ವಿಶ್ವಕಪ್ ಅನ್ನು ಅತಿ ಹೆಚ್ಚು ಬಾರಿ ಗೆದ್ದ ಆಸ್ಟ್ರೇಲಿಯಾ ತಂಡವನ್ನು ಈ ವರ್ಷವೂ ನೆಚ್ಚಿನ ತಂಡವೆಂದು ಪರಿಗಣಿಸಲಾಗಿದೆ. ಆಸ್ಟ್ರೇಲಿಯಾ ಇದುವರೆಗೆ ಐದು ಬಾರಿ ಏಕದಿನ ವಿಶ್ವಕಪ್ ಗೆದ್ದಿದೆ. ವಿಶ್ವಕಪ್ ಇತಿಹಾಸದಲ್ಲಿ ಯಾವುದೇ ತಂಡ ಇಷ್ಟು ಬಾರಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿರಲಿಲ್ಲ. ಈ ಬಾರಿಯ ವಿಶ್ವಕಪ್‌ನಲ್ಲೂ ಆಸ್ಟ್ರೇಲಿಯಾ ಅತ್ಯಂತ ಬಲಿಷ್ಠವಾಗಿ ಕಾಣುತ್ತಿದೆ.
ಇತ್ತೀಚೆಗಷ್ಟೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತವನ್ನು ಸೋಲಿಸುವ ಕೆಲಸವನ್ನು ಆಸ್ಟ್ರೇಲಿಯಾ ಮಾಡಿತ್ತು. ಆಸ್ಟ್ರೇಲಿಯ ತಂಡ ಟೆಸ್ಟ್‌ಗಿಂತ ಏಕದಿನ ಪಂದ್ಯಗಳಲ್ಲಿ ಬಲಿಷ್ಠವಾಗಿದೆ. ಮಿಚೆಲ್ ಮಾರ್ಷ್, ಕ್ಯಾಮರೂನ್ ಗ್ರೀನ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತಹ ಆಲ್ ರೌಂಡರ್ ಆಟಗಾರರು ತಂಡವನ್ನು ಅಪಾಯಕಾರಿಯಾಗಿ ಮಾಡಲು ಕೆಲಸ ಮಾಡುತ್ತಾರೆ.
 *ಆಸ್ಟ್ರೇಲಿಯಾ ತಂಡದಲ್ಲಿ ಹಲವು ಮ್ಯಾಚ್ ವಿನ್ನರ್‌ಗಳು*
ಭಾರತದ ವಿರುದ್ಧ ಮೊದಲ ಪಂದ್ಯ ಆಡುತ್ತಿರುವ ಆಸ್ಟ್ರೇಲಿಯಾ ತಂಡದಲ್ಲಿ ಹಲವು ಮ್ಯಾಚ್ ವಿನ್ನರ್ ಆಟಗಾರರಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ಎರಡನ್ನೂ ಅಗ್ರ ನಾಲ್ಕು ತಂಡಗಳಲ್ಲಿ ಎಣಿಕೆ ಮಾಡಲಾಗುತ್ತಿದೆ. ಆಸ್ಟ್ರೇಲಿಯಾ ಮತ್ತು ಭಾರತವನ್ನು ಹೊರತುಪಡಿಸಿ, ಪಾಕಿಸ್ತಾನ-ಇಂಗ್ಲೆಂಡ್ ಕೂಡ ಫೇವರಿಟ್ ಎಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವ ತಂಡಗಳು ಈ ಬಾರಿಯ ವಿಶ್ವಕಪ್‌ನಲ್ಲಿ ಪ್ರಭಾವಿ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗುತ್ತವೆ ಎಂಬುದು ಕುತೂಹಲ ಮೂಡಿಸಿದೆ.
ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ 2023 ರ ವಿಶ್ವಕಪ್‌ನಲ್ಲಿ  ಯಶಸ್ಸನ್ನು ನಿರ್ಮಿಸಲು ಉತ್ಸುಕರಾಗಿದ್ದಾರೆ. ” 2023ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ, ಭಾರತ ತಂಡವನ್ನು ಎದುರಿಸುವ ಅದ್ಭುತ ತಂಡಕ್ಕೆ ಇದು ಬೃಹತ್ ಸಂದರ್ಭವಾಗಿದೆ. ಭಾರತ ಆಸ್ಟ್ರೇಲಿಯವನ್ನು ಆತಿಥ್ಯ ವಹಿಸುತ್ತದೆ. ಇವೆರಡು ತಂಡಗಳು  WTC ಫೈನಲ್‌ಗೆ ಪ್ರವೇಶ ಪಡಕೊಳ್ಳುವ ಸಾಧ್ಯತೆಗಳು ಇವೆ ” ಎಂದು ಮಾಜಿ ಕ್ರಿಕೆಟಿಗ  ಹಾಗೂ ಕ್ರಿಕೆಟ್ ವಿಶ್ಲೇಷಕ  ನಾಸಿರ್ ಹುಸೇನ್  ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
Categories
ಕಬಡ್ಡಿ

ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್: ಫೈನಲ್‌ನಲ್ಲಿ ಇರಾನ್ ಅನ್ನು ಸೋಲಿಸುವ ಮೂಲಕ 11 ನೇ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಗೆದ್ದುಕೊಂಡ ಭಾರತ

ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ 2023: ಭಾರತೀಯ ಕಬಡ್ಡಿ ತಂಡವು ಇರಾನ್ ಅನ್ನು ಸೋಲಿಸುವ ಮೂಲಕ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದಿದೆ. ಎರಡು ದಿನಗಳಲ್ಲಿ ಇರಾನ್ ತಂಡವನ್ನು ಎರಡು ಬಾರಿ ಸೋಲಿಸುವ ಮೂಲಕ ಭಾರತ ಈ ಅದ್ಭುತ ಕಾರ್ಯವನ್ನು ಮಾಡಿದೆ. ಫೈನಲ್‌ನಲ್ಲಿ ಭಾರತ 42-32 ಅಂಕಗಳಿಂದ ಇರಾನ್ ತಂಡವನ್ನು ಸೋಲಿಸಿತು.
ಈ ಹೈ-ವೋಲ್ಟೇಜ್ ಫೈನಲ್‌ನಲ್ಲಿ ಭಾರತವು ಮೊದಲಾರ್ಧದಲ್ಲಿ 23-11 ರಿಂದ ಪ್ರಾಬಲ್ಯ ಸಾಧಿಸಿತು. ಆದರೆ ಇರಾನ್ ನಂತರ ದ್ವಿತೀಯಾರ್ಧದಲ್ಲಿ ತಮ್ಮ ನಾಯಕ ಮೊಹಮ್ಮದ್ರೇಜಾ ಶಾದಲುಯಿ ಚಯಾನೆಹ್ ಅವರ ಉತ್ತಮ ಆಟದಿಂದಾಗಿ ಅಂತರವನ್ನು ಗಣನೀಯವಾಗಿ ಕಡಿಮೆ ಮಾಡಲು ಪ್ರೇರೇಪಿಸಿತು. ಆದರೆ ಕೊನೆಯ ಕ್ಷಣದಲ್ಲಿ ಶಾದಲೂಯಿ ಮಾಡಿದ ತಪ್ಪಿನಿಂದಾಗಿ ಯಾವುದೇ ತೊಂದರೆಗಳಿಲ್ಲದೆ ಭಾರತ ಪ್ರಶಸ್ತಿ ಎತ್ತಿ ಹಿಡಿಯಿತು. ಮುಂಭಾಗದಿಂದ ಮುನ್ನಡೆ ಸಾಧಿಸಿದ ಭಾರತದ ಸ್ಟಾರ್ ಮತ್ತು ತಂಡದ ನಾಯಕ ಪವನ್ ಸೆಹ್ರಾವತ್ ಎದುರಾಳಿ ವಿರುದ್ಧ ಹೆಚ್ಚಿನ ಅಂಕಗಳನ್ನು ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಒಂದು ಹಂತದಲ್ಲಿ ಆಟ ಮುಗಿಯಲು ಎರಡು ನಿಮಿಷ ಬಾಕಿ ಇರುವಾಗ ಇರಾನ್ ಭಾರತದ ಮುನ್ನಡೆಯನ್ನು 38-31ಕ್ಕೆ ಕಡಿತಗೊಳಿಸಿ ಪಂದ್ಯವನ್ನು ಸಸ್ಪೆನ್ಸ್ ಗೆ ತಂದಿತು. ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಭಾರತ 64-20 ಅಂತರದಲ್ಲಿ ಹಾಂಕಾಂಗ್ ತಂಡವನ್ನು ಮಣಿಸಿ ಲೀಗ್ ಹಂತವನ್ನು ಅಜೇಯವಾಗಿ ಮುಗಿಸಿತ್ತು.
ಈ ವರ್ಷಾಂತ್ಯದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಭಾರತವನ್ನು ಸಜ್ಜುಗೊಳಿಸಿರುವುದರಿಂದ ಭಾರತಕ್ಕೆ ಗೆಲುವು ದೊಡ್ಡದಾಗಿದೆ. ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಪ್ರಮಾಣಿತ ಕಬಡ್ಡಿ ಸ್ಪರ್ಧೆಯಾಗಿದೆ. ಇದನ್ನು ಮೊದಲು 1980 ರಲ್ಲಿ ಆಯೋಜಿಸಲಾಯಿತು. ಈ ಟೂರ್ನಿಯಲ್ಲಿ ಭಾರತ ಮತ್ತೊಂದು ಪದಕ ಗೆಲ್ಲುವ ಮೂಲಕ 8ನೇ ಪದಕ ಗೆದ್ದುಕೊಂಡಿದೆ.
Categories
ಕ್ರಿಕೆಟ್

ಭಾರತವು ಗೆದ್ದ ಮೊದಲ ಕ್ರಿಕೆಟ್ ವಿಶ್ವಕಪ್ ನೆನಪು.

ಆ ಐತಿಹಾಸಿಕ ಘಟನೆಗೆ ಇಂದಿಗೆ 40 ವರ್ಷ.
1983- ಜೂನ್ 25 ಭಾರತ ಕ್ರಿಕೆಟ್ ತಂಡ ಇತಿಹಾಸ ಬರೆದಿತ್ತು!
——————————
ನನಗೆ ಈ ದೃಶ್ಯವು ಕೊಟ್ಟಷ್ಟು ಪ್ರೇರಣೆಯನ್ನು ಬೇರೆ ಯಾವುದೂ ಕೊಡಲು ಸಾಧ್ಯವೇ ಇಲ್ಲ. ಕಾರ್ಕಳದ ನಮ್ಮ ಮನೆಯ ಜಗಲಿಯಲ್ಲಿ ನಾವು ಒಂದಿಷ್ಟು ಗೆಳೆಯರು ಕಿವಿಗೆ ಪುಟ್ಟ ರೇಡಿಯೋ ಹಚ್ಚಿ ವೀಕ್ಷಕ ವಿವರಣೆ ಕೇಳಿದ ನೆನಪು ಮರೆತು ಹೋಗುವುದಿಲ್ಲ! ಭಾರತ ಗೆದ್ದಾಗ ಮಧ್ಯರಾತ್ರಿಯ ಹೊತ್ತು ಎಲ್ಲರೂ ಸೇರಿ ಒಂದಿಷ್ಟು ದುಡ್ಡನ್ನು ಒಟ್ಟು ಮಾಡಿ  ಕಾರ್ಕಳದ ಪಟಾಕಿ ಅಂಗಡಿಯವರನ್ನು ಎಬ್ಬಿಸಿ ಪಟಾಕಿ ತಂದು ರಸ್ತೆಯುದ್ದಕ್ಕೂ ಸಿಡಿಸಿದ ಸಂಭ್ರಮ ಮರೆಯಲು ಸಾಧ್ಯವೇ ಇಲ್ಲ!
ಆ ಘಟನೆ ನಡೆಯದೆ ಹೋಗಿದ್ದರೆ!
———————————–
ಭಾರತ ಲಿಫ್ಟ್ ಮಾಡಿದ ಮೊತ್ತ ಮೊದಲ ಕ್ರಿಕೆಟ್ ವಿಶ್ವಕಪ್ ಟ್ರೋಫಿ ಅದು! ಅದರಿಂದಾಗಿ ಮುಂದೆ ಬಿಸಿಸಿಐ ಜಗತ್ತಿನ ಅತ್ಯಂತ ಶ್ರೀಮಂತ ಸಂಸ್ಥೆ ಆಯಿತು. ಭಾರತದ  ಕ್ರಿಕೆಟಿಗರು ಶ್ರೀಮಂತ ಆದರು! ಸಚಿನ್, ವಿರಾಟ್, ಕುಂಬ್ಳೆ, ಜಾವಗಲ್ ಶ್ರೀನಾಥ್, ಧೋನಿ, ಯುವರಾಜ್, ಸೆಹವಾಗ್, ರೋಹಿತ್ ಶರ್ಮಾ, ದ್ರಾವಿಡ್, ಗಂಗೂಲಿ, ಗಂಭೀರ್…………….. ಮೊದಲಾದ ತಾರಾ ಮೌಲ್ಯದ ನೂರಾರು ಆಟಗಾರರು ಮುಂದೆ ಭಾರತದಲ್ಲಿ ಮೆರೆಯಲು ಆ ಘಟನೆಯು ಕಾರಣ ಆಯಿತು.
ಎಲ್ಲಕ್ಕಿಂತ ಮುಖ್ಯವಾಗಿ ಅಂದು ಕಪಿಲ್ ಹುಡುಗರು ಗೆಲ್ಲದೇ ಹೋಗಿದ್ದರೆ ಐಪಿಎಲ್ ಪಂದ್ಯಾಟವು ಭಾರತದಲ್ಲಿ ಆರಂಭ ಆಗುತ್ತಲೇ ಇರಲಿಲ್ಲ!
ಇನ್ನೂ ಪ್ರಮುಖವಾಗಿ ಹೇಳಬೇಕೆಂದರೆ ಅಂದು ಆ ಘಟನೆ ನಡೆಯದೆ ಹೋದರೆ ಭಾರತದಲ್ಲಿ ಕ್ರಿಕೆಟ್  ‘ಒಂದು ಧರ್ಮ’  ಆಗುತ್ತಲೇ ಇರಲಿಲ್ಲ!
ಆ ಟೂರ್ನಿಯು ಆರಂಭ ಆಗುವ ಮೊದಲು ಭಾರತ ಅಂಡರ್ ಡಾಗ್ ಆಗಿತ್ತು! 
———————————–
1983ರ ವಿಶ್ವಕಪ್ ಆರಂಭ ಆಗುವ ಮೊದಲು ಭಾರತ ತಂಡದ ಮೇಲೆ ಯಾರಿಗೂ ನಿರೀಕ್ಷೆ ಇರಲಿಲ್ಲ. ಕಾರಣ ಹಿಂದಿನ ಎರಡು ವಿಶ್ವಕಪ್ ಪಂದ್ಯಗಳಲ್ಲಿ ನಮ್ಮ ಭಾರತದ ನಿರ್ವಹಣೆಯು ತುಂಬಾನೇ ಕಳಪೆ ಆಗಿತ್ತು. ಭಾರತೀಯ ಆಟಗಾರರು ಟೆಸ್ಟ್ ಮಾದರಿಯ ಡಿಫೆನ್ಸಿವ್ ಆದ ಮೈಂಡ್ ಸೆಟನಿಂದ ಹೊರಬರಲು ಕಷ್ಟ ಪಡುತ್ತಿದ್ದರು!
ಮತ್ತೊಂದು ಕಡೆ ಬಲಿಷ್ಠ ವೆಸ್ಟ್ ಇಂಡೀಸ್ ಹಿಂದಿನ ಎರಡೂ ವಿಶ್ವಕಪ್ ಟ್ರೋಫಿಗಳನ್ನು ಎತ್ತಿ ಹಿಡಿದ ಕೀರ್ತಿ ಪಡೆದಿತ್ತು. ಹೆಚ್ಚು ಕಡಿಮೆ ಅದೇ ಸ್ಟಾರ್ ಆಟಗಾರರು ಆ ತಂಡದಲ್ಲಿ ಇದ್ದರು. ಕ್ಲೈವ್ ಲಾಯ್ಡ್ ಎಂಬ ಬಲಾಢ್ಯ ಕ್ಯಾಪ್ಟನ್ ಕಟ್ಟಿದ ತಂಡ ಅದು. ಜಗತ್ತಿನ ಅತ್ಯಂತ ಶ್ರೇಷ್ಠ ವೇಗದ ಬೌಲರಗಳು ಮತ್ತು ಬ್ಯಾಟಿಂಗ್ ಡೈನಾಸಾರಗಳು ಅವರ ತಂಡದಲ್ಲಿ ಇದ್ದರು!
ಭಾರತ ತಂಡಕ್ಕೆ ಹೊಸ ಕ್ಯಾಪ್ಟನ್ ಕಪಿಲದೇವ್ ಸಾರಥ್ಯ! ಯಾವ ಆಟಗಾರನಿಗೂ ಸ್ಟಾರ್ ವ್ಯಾಲ್ಯೂ ಇರಲಿಲ್ಲ. ಆದರೆ ಹೆಚ್ಚಿನವರು ಆಲರೌಂಡರ್ ಆಟಗಾರರು. ಫೈಟಿಂಗ್ ಸ್ಪಿರಿಟ್ ಇದ್ದವರು. ಆದರೆ…
ಕಪಿಲ್ ನಾಯಕತ್ವವೇ ಅದ್ಭುತ!
——————————
ತನ್ನ ಯುವ ಪಡೆಯನ್ನು ಇಂಗ್ಲಾಂಡಿಗೆ ತಂದು ಇಳಿಸಿದಾಗ ಕಪಿಲ್ ದೇವ್ ಹೇಳಿದ ಮಾತು ತುಂಬಾ ಪ್ರೆರಣಾದಾಯಿ ಆಗಿತ್ತು.
“ನನ್ನ ಹುಡುಗರೇ. ನಮ್ಮ ತಂಡದ ಮೇಲೆ ಯಾರಿಗೆ ಕೂಡ ದೊಡ್ಡ ನಿರೀಕ್ಷೆ ಇಲ್ಲ. ಸೋತರೆ ನಾವು ಕಳೆದುಕೊಳ್ಳುವುದು ಏನೂ ಇಲ್ಲ! ಆದರೆ ವೆಸ್ಟ್ಇಂಡೀಸ್ ಚಾಂಪಿಯನ್ ತಂಡ. ಅವರಿಗೆ ಟ್ರೋಫಿ ಉಳಿಸಿಕೊಳ್ಳುವ ಒತ್ತಡ ಇದೆ. ಅದೇ ನಮಗೆ ಈ ಬಾರಿ ಬಂಡವಾಳ ಆಗಬೇಕು!” ಎಂದಿದ್ದರು.
ಅದೇ ನಮ್ಮ ತಂಡಕ್ಕೆ ಟಾನಿಕ್ ಆಗಿತ್ತು. ಇಡೀ ವಿಶ್ವಕಪ್  ಟೂರ್ನಿಯಲ್ಲಿ ಕಪಿಲದೇವ್ ಅವರ ಸ್ಫೂರ್ತಿಯುತವಾದ  ನಾಯಕತ್ವವೇ ಭಾರತವನ್ನು ಗೆಲ್ಲಿಸಿದ್ದು ಎಂದು ಖಚಿತವಾಗಿ ಹೇಳಬಹುದು.
ಮರೆಯಲಾಗದ ಜಿಂಬಾಬ್ವೆ ಪಂದ್ಯ!
———————————–
ಆ ಟೂರ್ನಿಯಲ್ಲಿ ಇದ್ದ ತಂಡಗಳು ಒಟ್ಟು ಎಂಟು. ಅದರಲ್ಲಿ ದುರ್ಬಲ ತಂಡ ಅಂದರೆ ಜಿಂಬಾಬ್ವೆ. ಆದರೆ ಭಾರತಕ್ಕೆ ಆ ಜಿಂಬಾಬ್ವೆ ವಿರುದ್ಧದ ಪಂದ್ಯವೆ ಬಿಸಿ ತುಪ್ಪ ಆಯಿತು.
ಮೊದಲು ಬ್ಯಾಟ್ ಮಾಡಿದ ಭಾರತ ಒಂದು ಹಂತದಲ್ಲಿ 17 ರನ್ನಿಗೆ ಐದು ವಿಕೆಟಗಳನ್ನು ಕಳೆದುಕೊಂಡಿತ್ತು! ಉಳಿದವರು ಕೇವಲ ಮತ್ತು ಕೇವಲ ಬಾಲಂಗೋಚಿಗಳು. ಆಗ ಬ್ಯಾಟ್ ಹಿಡಿದು ಬಂದ ಕಪಿಲದೇವ್ ಮೈಯ್ಯಲ್ಲಿ ಅಂದು ಆವೇಶ ಬಂದ ಹಾಗಿತ್ತು!
ಮೈದಾನದ ಎಲ್ಲ ಕಡೆ ಚೆಂಡನ್ನು ಡ್ರೈವ್ ಮಾಡುತ್ತಾ ಕಪಿಲ್ ಅಂದು ಗಳಿಸಿದ್ದು ಅಜೇಯ 175 ರನ್! 16 ಬೌಂಡರಿಗಳು ಮತ್ತು 6 ಮನಮೋಹಕ ಸಿಕ್ಸರಗಳು! ಅಂದು ಭಾರತ ಸೋತಿದ್ದರೆ ಭಾರತಕ್ಕೆ ಗಂಟು ಮೂಟೆ ಕಟ್ಟಬೇಕಾಗಿತ್ತು!ಆದರೆ ತನ್ನ ವಿರೋಚಿತ ಇನ್ನಿಂಗ್ಸ್ ಮೂಲಕ ಕಪಿಲದೇವ್ ಭಾರತವನ್ನು ಗೆಲ್ಲಿಸಿದ್ದರು!
ಆಗ ವಿಶ್ವಕಪ್ ಟೂರ್ನಿಯ ಎಲ್ಲಾ ಪಂದ್ಯಗಳು ಟಿವಿಯಲ್ಲಿ ನೇರಪ್ರಸಾರ ಆಗುತ್ತಿದ್ದವು. ಆದರೆ ಜಿಂಬಾಬ್ವೆ ಪಂದ್ಯದ ದಿನ ಬಿಬಿಸಿಯ ಸ್ಟಾಫ್ ಮುಷ್ಕರ ಹೂಡಿದ್ದ ಕಾರಣ ಆ ಪಂದ್ಯದ ವೈಭವ ಮತ್ತು ಕಪಿಲ್ ದೇವ್ ಅವರ ಸಾಹಸವನ್ನು ಕ್ರಿಕೆಟ್ ಜಗತ್ತು ನೋಡಲು ಸಾಧ್ಯ ಆಗಲಿಲ್ಲ!
ಸೆಮಿಫೈನಲ್ ಪಂದ್ಯಗಳು! 
—————————-
ಒಂದು ಕಡೆ ವಿಂಡೀಸ್ ನಿರೀಕ್ಷೆ ಮಾಡಿದ ಹಾಗೆ ಪಾಕ್ ತಂಡವನ್ನು ಸೋಲಿಸಿ ಫೈನಲ್ ಟಿಕೆಟ್ ಪಡೆಯಿತು. ಮತ್ತೊಂದು ಕಡೆ ಭಾರತ ತಂಡವು ಕ್ರಿಕೆಟ್ ಜನಕರಾದ  ಇಂಗ್ಲಾಂಡ ತಂಡವನ್ನು ಅವರದೇ ನೆಲದಲ್ಲಿ ಆರು ವಿಕೆಟಗಳ ಅಂತರದಲ್ಲಿ ಬಗ್ಗು ಬಡಿದು ಫೈನಲ್ ಪ್ರವೇಶ ಪಡೆಯಿತು.
ವಿಂಡೀಸ್ ತಂಡಕ್ಕೆ ಅದು ಮೂರನೇ ಫೈನಲ್. ಭಾರತಕ್ಕೆ ಅದು ಚೊಚ್ಚಲ ಫೈನಲ್!
1983ರ ಜೂನ್ 25ರಂದು ಏನಾಯಿತು?
———————————–
ಅದು “ಕ್ರಿಕೆಟ್ ಸ್ವರ್ಗ”ಎಂದು ಕರೆಸಿಕೊಂಡಿದ್ದ ಲಾರ್ಡ್ಸ್ ಮೈದಾನ! ಅಂದು ಇಡೀ ಮೈದಾನದ ತುಂಬಾ ವಿಂಡೀಸ್ ಬೆಂಬಲಿಗರು ತುಂಬಿದ್ದರು. ಭಾರತದ ಬೆಂಬಲಿಗರು 10% ಕೂಡ ಇರಲಿಲ್ಲ. ಭಾರತ ಟ್ರೋಫಿ ಗೆಲ್ಲುವ ಭರವಸೆಯು ಭಾರತೀಯರಿಗೇ ಇರಲಿಲ್ಲ!
ಆ ಟೂರ್ನಿಯಲ್ಲಿ ನಡೆದ ಪ್ರತೀ ಪಂದ್ಯವೂ 60 ಓವರ್ ಪಂದ್ಯ ಆಗಿತ್ತು. ಟಾಸ್ ಗೆದ್ದ ವಿಂಡೀಸ್ ಭಾರತವನ್ನು ಮೊದಲು ಬ್ಯಾಟ್ ಮಾಡಲು ಆಹ್ವಾನ ಮಾಡಿತು. ಭಾರತ ಕುಂಟುತ್ತ ಕುಂಟುತ್ತ 183 ರನ್ ಮಾಡಿತು. ಶ್ರೀಕಾಂತ್ 38 ಮಾಡಿದ್ದೆ ಗರಿಷ್ಟ ಸ್ಕೋರ್. ಸಂದೀಪ್ ಪಾಟೀಲ್ ಮತ್ತು ಮೋಹಿಂದರ್ ಅಮರನಾಥ್ ತಕ್ಕಮಟ್ಟಿಗೆ ಆಡಿದರು.
ಅದಕ್ಕೆ ಕಾರಣ ವಿಂಡೀಸ್ ತಂಡದ ವೇಗದ ಬೌಲಿಂಗ್ ಬ್ಯಾಟರಿ. ಆಂಡಿ ರಾಬರ್ಟ್ಸ್, ಮಾಲ್ಕಮ್ ಮಾರ್ಷಲ್, ದೈತ್ಯ ಜಾಯಲ್ ಗಾರ್ನರ್, ಲಾರಿ ಗೊಮ್ಸ್ ಇವರೆಲ್ಲರೂ ಅಂದು ಭಾರತೀಯ ತಂಡವನ್ನು ಕಟ್ಟಿ ಹಾಕಿದ್ದರು!
ವಿಂಡೀಸ್ ತಂಡದ ಅತಿಯಾದ ಆತ್ಮವಿಶ್ವಾಸವು ಲಂಚ್ ನಂತರದ ಆಟದಲ್ಲಿ ಅವರಿಗೆ ಮುಳು ಆಯಿತು ಎಂದೇ ಹೇಳಬಹುದು.
ದೈತ್ಯ ಆರಂಭಿಕ ಆಟಗಾರರಾದ ಗಾರ್ಡನ್ ಗ್ರಿನೀಜ್ ಮತ್ತು ಡೆಸ್ಮಂಡ್ ಹೈನ್ಸ್ ಆ ಕಾಲಕ್ಕೆ ವಿಶ್ವದಾಖಲೆ ಹೊಂದಿದ್ದವರು. ಗ್ರೀನೀಜ್ ಕ್ರೀಸಿಗೆ ಹೋಗುವಾಗ ತನ್ನ ತಂಡದ ಇತರ ಸಹ ಆಟಗಾರರಿಗೆ ‘ನೀವು ಪ್ಯಾಡ್ ಕಟ್ಟುವ ಅಗತ್ಯವೇ ಇಲ್ಲ.  ನಾವಿಬ್ಬರೇ ಮ್ಯಾಚನ್ನು ಗೆಲ್ಲಿಸಿ ಬರುತ್ತೇವೆ’ ಎಂದು ಹೇಳಿ ಕ್ರೀಸಿಗೆ ಬಂದಿದ್ದ!
ಆದರೆ ಭಾರತದ ಯುವ ಬೌಲರಗಳು ಅಂದು ಅದ್ಭುತವನ್ನೇ ಮಾಡಿದರು. ಮೊದಲ ವಿಕೆಟ್ ಅಗ್ಗದಲ್ಲಿ ಉರುಳಿದಾಗ ಭಾರವಾದ ಬ್ಯಾಟ್ ಹಿಡಿದು ಕ್ರೀಸಿಗೆ ಬಂದವನು ವಿಂಡೀಸ್ ಬ್ಯಾಟಿಂಗ್ ಲೆಜೆಂಡ್ ವಿವ್ ರಿಚರ್ಡ್ಸ್!
ನಿರಂತರ ಬೌಂಡರಿಗಳು ಸದ್ದು ಮಾಡಿದಾಗ ವಿಂಡೀಸ್ ಮೂರನೇ ಟ್ರೋಫಿ ಎತ್ತಿ ಬಿಟ್ಟಿತ್ತು ಅನ್ನಿಸಲು ತೊಡಗಿತ್ತು! ಆದರೆ ಕಪಿಲ್ ದೇವ್ ಸುಮಾರು 30 ಹೆಜ್ಜೆ ಹಿಂದಕ್ಕೆ ಓಡಿ ಹಿಡಿದ ಒಂದು ಕ್ಯಾಚ್ ವಿವ್ ರಿಚರ್ಡ್ಸ್ ಕತೆ ಮುಗಿಸಿತು!
ಅಲ್ಲಿಂದ ಮುಂದೆ ನಡೆದದ್ದು ಭಾರತದ್ದೇ ಕಾರುಬಾರು! 
—————————————————– ಚಾಂಪಿಯನ್ ವಿಂಡೀಸ್ ತಂಡ 140ಕ್ಕೆ ಆಲೌಟ್! ಭಾರತ ತಂಡಕ್ಕೆ 43 ರನ್ ವಿಜಯ! ಅಂದು ಮದನಲಾಲ್ ಮತ್ತು  ಮೋಹಿಂದರ ಅಮರನಾಥ್ ತಲಾ ಮೂರು ವಿಕೆಟ್ ಪಡೆದಿದ್ದರು.
ಟೂರ್ನಿ ಆರಂಭ ಆಗುವ ಮೊದಲು ಅಂಡರ್ ಡಾಗ್ ಎಂದು ಕರೆಸಿಕೊಂಡಿದ್ದ  ಭಾರತೀಯ ಯುವ ತಂಡವು ಕ್ರಿಕೆಟ್ ದೈತ್ಯರಾದ ವಿಂಡೀಸ್ ತಂಡವನ್ನು ಲಾರ್ಡ್ಸ್ ಮೈದಾನದಲ್ಲಿ ಹೆಡೆಮುರಿ ಕಟ್ಟಿಬಿಟ್ಟಿತ್ತು! ಇದು ಯಾರೂ ಊಹೆ ಕೂಡ ಮಾಡದ ಗೆಲುವು ಎಂದೇ ಹೇಳಬಹುದು.
ಲಾರ್ಡ್ಸ್ ಮೈದಾನದ ಗ್ಯಾಲರಿಯಲ್ಲಿ ಕಪಿಲದೇವ್ ನೀಲಿ ಬಣ್ಣದ ಬ್ಲೇಜರ್ ಧರಿಸಿ ಪ್ರುಡೆನ್ಶಿಯಲ್ ಕಪ್ ಎತ್ತಿಹಿಡಿದ  ಫೋಟೋ ಇಡೀ ಭಾರತೀಯ ಕ್ರಿಕೆಟ್ ರಂಗದ ವೈಭವದ ಮುನ್ಸೂಚನೆ ಆಗಿತ್ತು!
ಭಾರತಕ್ಕದು ನಿಜವಾಗಿ ಸ್ಫೂರ್ತಿಯ ಸೆಲೆ! 
———————————–
ಭಾರತೀಯ ಹಾಕ್ಕಿ ತಂಡವು ಅದರ ಮೊದಲೇ ಎಂಟು ಬಾರಿ ಒಲಿಂಪಿಕ್ಸ್ ಚಿನ್ನವನ್ನು ಗೆದ್ದ ಸಾಧನೆ ಮಾಡಿ ಆಗಿತ್ತು! ಹಾಕ್ಕಿ ಮಾಂತ್ರಿಕ ಧ್ಯಾನ ಚಂದ್ ಅವರು ಆಗಲೇ ಭಾರತದ ಐಕಾನ್ ಆಗಿದ್ದರು.
ಹಾಗೆಯೇ ಮುಂದೆ ಭಾರತದ ಕ್ರಿಕೆಟ್ ತಂಡವು ಹಲವು ವಿಶ್ವಮಟ್ಟದ ಟ್ರೋಫಿಗಳನ್ನು ಗೆದ್ದಿತು! ಭಾರತೀಯ ಕ್ರಿಕೆಟ್  ತಂಡದಲ್ಲಿ ಮಹಾ ಮಹಾ ಆಟಗಾರರು ಬಂದರು. ಆದರೆ ಆ ಚೊಚ್ಚಲ ವಿಶ್ವಕಪ್ ವಿಜಯವು ಭಾರತಕ್ಕೆ ಒಂದು ಚಿನ್ನದ ಪ್ರಭಾವಳಿ! ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅದು ನಮಗೆಲ್ಲ ಸ್ಮರಣೀಯ!
ಅದರ ಪೂರ್ತಿ ಶ್ರೇಯಸ್ಸು ಕಪಿಲ್ ದೇವ್ ಮತ್ತು ಅವರ ಹುಡುಗರಿಗೆ ಸಲ್ಲಬೇಕು.
Categories
ಕ್ರಿಕೆಟ್

ಮೆಲ್ಬೋರ್ನ್: ಭಾರತ Vs ಪಾಕಿಸ್ತಾನ T20 ವಿಶ್ವಕಪ್ ಪಂದ್ಯದಲ್ಲಿ ಘರ್ಜಿಸಿದ ಕೊಹ್ಲಿ ಪತುರುಗುಟ್ಟಿದ ಪಾಕ್….

*ಆರಂಭಿಕ ಕುಸಿತ ಕಂಡ ಭಾರತ ತಂಡ*
ಪಾಕಿಸ್ತಾನ ನೀಡಿದ 160 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು.  ನಸೀಂ ಶಾ ಬೌಲಿಂಗ್ ನಲ್ಲಿ ಕೆಎಲ್‌ ರಾಹುಲ್‌ ಹೊರ ಹೊಗುತ್ತಿದ್ದ ಚೆಂಡನ್ನು ಹೊಡೆಯಲು ಹೋಗಿ ಬಾಲ್ ಬ್ಯಾಟಿನ ಅಂಚಿಗೆ ತಗುಲಿ ಬೌಲ್ಡ್  ಆಗಿ ಹೊರನೆಡೆದರು.
ಇನ್ನೂ ಹ್ಯಾರಿಸ್ ರೌಫ್ ಬೌಲಿಂಗ್ ನಲ್ಲಿ ರೋಹಿತ್ ಶರ್ಮಾ ಕಳಪೆ ಹೊಡೆತ ಬಾರಿಸಲು ಹೋಗಿ  ವಿಕೆಟ್ ಒಪ್ಪಿಸಿದರು ಇತ್ತೀಚಿನ ಭಾರತ ತಂಡದ ಭರವಸೆಯ ಯುವ ಆಟಗಾರ ಅತ್ಯುತ್ತಮ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್ ಕೂಡ 10 ಎಸೆತಗಳಲ್ಲಿ 15 ರನ್ ಗಳಿಸಿ ಹ್ಯಾರಿಸ್ ರೌಫ್ ಬೌಲಿಂಗ್‌ನಲ್ಲಿ ವಿಕೆಟ್ ಹಿಂಭಾಗದಲ್ಲಿ ಹೊಡೆಯಲು ಹೋಗಿ ವಿಕೆಟ್ ಕಳೆದುಕೊಂಡರು. ಅದರೆ ಫಸ್ಟ್‌ ಡೌನ್ ಆಟಗಾರನಾಗಿ ಅಂಗಳಕ್ಕೆ ಇಳಿದ ಕೊಹ್ಲಿ ಪಾಕ್ ಬೌಲರ್ ಗಳ ಆರ್ಭಟವನ್ನು ಗಮನಿಸುತ್ತಲೆ ಗೆಲುವಿನ ಲೆಕ್ಕಚಾರ ಹಾಕುತ್ತಿದ್ದರು.
ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ಅಕ್ಷರ್ ಪಟೇಲ್ 2 ರನ್ ಗಳಿಸಿದ್ದಾಗ ರನೌಟ್‌ಗೆ ಬಲಿಯಾಗಿ ಬಂದಷ್ಟೆ ಬೇಗನೆ ಪೆವಿಲಿಯನ್ ಗೆ ತೆರಳಿದರು
*ಶ್ರೇಷ್ಠ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ*
ವಿಕೆಟ್ ಬೀಳುತ್ತಿದ್ದಂತೆ ವಿರಾಟ್ ಕೊಹ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಲು ಮುಂದಾದರು ಎದುರಿಸಿದ ಪ್ರತಿ ಬಾಲಿಗೂ ಸರಿಯಾದ ಉತ್ತರವನ್ನೆ ನೀಡಿ ರನ್ ಕಲೆಹಾಕುವಲ್ಲಿ ಮದಾದರು. ಈ ಹಂತದಲ್ಲಿ ಕೊಹ್ಲಿ ಜೋತೆ ಸೇರಿದ ಮತ್ತೊಬ್ಬ ಭರವಸೆಯ ಆಟಗಾರ ಹಾರ್ದಿಕ್ ಪಾಂಡ್ಯ ಕೂಡ ವಿರಾಟ್ ಕೊಹ್ಲಿಗೆ ಅತ್ಯುತ್ತಮವಾಗಿ ಆಡುವುದರ ಜೋತೆಗೆ ಸಾತ್ ನೀಡಿದರು. ಆದರೂ ಪಾಕಿಸ್ತಾನ ಉತ್ತಮ ಬೌಲಿಂಗ್ ಮೂಲಕ ರನ್‌ ಗಳಿಸದಂತೆ ಕಡಿವಾಣ ಹಾಕಲು ಮುಂದಾಗಿದ್ದರು.
ಹಾರ್ದಿಕ್ ಪಾಂಡ್ಯ ಕೂಡ ರನ್ ಗಳಿಸಲು ಪರದಾಡುತ್ತಿದ್ದರು. ಕೊಹ್ಲಿ ನಿಧಾನಗತಿಯಲ್ಲೇ 43 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಗಳಿಸಿದರು. 43 ಎಸೆತಗಳಲ್ಲಿ 50 ರನ್ ಗಳಿಸಿದ ಕೊಹ್ಲಿ ನಂತರದ 10 ಎಸೆತಗಳಲ್ಲಿ 32 ರನ್ ಗಳಿಸಿದರು, 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ ಮಿಂಚಿದರು. ಅವರ ಈ ಅಮೋಘ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಇದ್ದವು.
*ಅಂತಿಮ ಘಟ್ಟದಲ್ಲಿ ಹ್ಯಾರಿಸ್‌ ರೌಫ್‌ಗೆ ಎರಡು ಸಿಕ್ಸರ್ ಬಾರಿಸಿದ ಕಿಂಗ್ ಕೊಹ್ಲಿ* 
ಭಾರತಕ್ಕೆ ಕೊನೆಯ 4 ಓವರ್ ಗಳಲ್ಲಿ ಗೆಲುವಿಗೆ 54 ರನ್ ಗಳ ಅಗತ್ಯವಿತ್ತು. ಆದರೆ, 17ನೇ ಓವರ್ ನಲ್ಲಿ ಕೇವಲ 6 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ನಂತರ, 3 ಓವರ್ ಗಳಲ್ಲಿ 48 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತು. ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರರು ಮಂದಿ ಅಭಿಮಾನಿಗಳ ಮುಖದಲ್ಲಿ ಹತಾಶೆಯ ಛಾಯೆ ಮೂಡಿತ್ತು ಹೇಗೆ ಲೆಕ್ಕಾಚಾರ ಮಾಡಿದರು ಗೆಲುವು ಕಷ್ಟವಾಗಿಯೆ ಗೋಚರಿಸುತ್ತಿತ್ತು. ಅ ಹಂತದಲ್ಲಿ  ಪಾಕ್ ವೇಗಿ ಶಾಹೀನ್ ಅಫ್ರಿದಿಯ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು ಶಾಹೀನ್ ಓವರ್ ನಲ್ಲಿ 3 ಬೌಂಡರಿ ಸಿಡಿಸುವ ಮೂಲಕ ಭಾರತಕ್ಕೆ ಗೆಲುವಿನ ಆಸೆ ಮೂಡಿಸಿದರು ಪ್ರತಿಯೊಂದು ಬೌಂಡರಿಕೂಡ ಮನಮೋಹಕ ಹೊಡೆತವಾಗಿತ್ತು.
18ನೇ ಓವರ್ ನಲ್ಲಿ ಹ್ಯಾರಿಸ್ ರೌಫ್ ಮೊದಲ ನಾಲ್ಕು ಎಸೆತಗಳಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದರು  ಹಾರ್ದಿಕ್ ಪಾಂಡ್ಯ ರನ್ ಗಳಿಸಲು ಪರದಾಡುತ್ತಿದ್ದಾಗ ಅದೆ ಓವರ್  ನ ಕೊನೆಯ ಎರಡು ಎಸೆತಗಳಲ್ಲಿ ಕಿಂಗ್ ಕೊಹ್ಲಿ ಅದ್ಭುತವಾಗಿ ಆಡಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಮತ್ತೆ ಭಾರತದ ಗೆಲುವನ್ನು  ಜೀವಂತವಾಗಿರಿಸಿದರು
*ಕೊನೆಯ ಓವರ್ ನಲ್ಲಿ ನಡೆದದ್ದು..?*
ಕೊನೆಯ ಓವರ್ ನಲ್ಲಿ ಭಾರತಕ್ಕೆ ಗೆಲುವಿಗಾಗಿ 16 ರನ್ ಬೇಕಿತ್ತು, ಮೊದಲನೇ ಎಸೆತದಲ್ಲೇ ಪಾಂಡ್ಯ ಔಟಾದಾಗ ಭಾರತೀಯ ಅಭಿಮಾನಿಗಳಲ್ಲಿ ಆತಂಕ ಮನೆಮಾಡಿತ್ತು   ನಂತರ ಬಂದ ದಿನೇಶ್ ಕಾರ್ತಿಕ್ ಒಂದು ರನ್ ಓಡುವ ಮೂಲಕ ಕೊಹ್ಲಿಗೆ ಸ್ಟ್ರೈಕ್‌ ನೀಡಿದರು. ನಂತರ ಎರಡು ರನ್ ಗಳಿಸಿದ ಕೊಹ್ಲಿ, 19.4ನೇ ಓವರ್‍ ನಲ್ಲಿ ಸಿಕ್ಸರ್ ಬಾರಿಸಿದರು. ಆ ಬಾಲ್  ನೋಬಾಲ್ ಆಗಿತ್ತು ಬೌಲರ್ ನಂತರದ ಎಸೆತವನ್ನು ವೈಡ್ ಹಾಕಿದರು ನಂತರದ ಎಸೆತ ಕೂಡ ಫ್ರೀಹಿಟ್‌ ಆಗಿತ್ತು, ಕೊಹ್ಲಿ ಬ್ಯಾಟ್ ಮಿಸ್ ಆದ ಬಾಲ್ ವಿಕೆಟ್‌ಗೆ ಬಡಿದು ಬೌಂಡರಿ ಗೆರೆಯ ಸಮೀಪಕ್ಕೆ ತಲುಪಿತು  ಆಷ್ಟೋತ್ತಿಗೆ ಕೊಹ್ಲಿ ಮತ್ತು ಕಾರ್ತಿಕ್ ಮೂರು ರನ್ ಗಳಿಸಿದರು. 19.5ನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಸ್ಟಂಪ್ ಔಟ್ ಆದರು.
ನಂತರ ಭಾರತದ ಗೆಲುವಿಗೆ 1 ಎಸೆತದಲ್ಲಿ 2 ರನ್ ಬೇಕಿತ್ತು  ಬ್ಯಾಟಿಂಗ್ ತುದಿಯಲ್ಲಿ ಅಶ್ವಿನ್ ಇದ್ದರು ಬೌಲರ್ ಮೊಹಮ್ಮದ್ ನವಾಜ್ ಕೊನೆಯ ಎಸೆತವನ್ನು ವೈಡ್ ಎಸೆಯುವ ಮೂಲಕ ಸ್ಕೋರ್ ಸಮವಾಯಿತು. ನಂತರ 1 ಎಸೆತದಲ್ಲಿ ಒಂದು ರನ್ ಬೇಕಿದ್ದಾಗ, ಅಶ್ವಿನ್ ಯಾವುದೇ ತಪ್ಪು ಮಾಡದೆ ಸುಂದರವಾದ ಹೊಡೆತ ಹೊಡೆದು ಒಂದು ರನ್ ಗಳಿಸುವ ಮೂಲಕ ಭಾರತಕ್ಕೆ ವಿಜಯದ ರನ್ ತಂದುಕೊಟ್ಟರು. ತಮ್ಮ ಅದ್ಭುತವಾದ ಬ್ಯಾಟಿಂಗ್‌ಗೆ ಸಹಜವಾಗಿಯೇ ವಿರಾಟ್ ಕೊಹ್ಲಿ ಪಂದ್ಯದ ಆಟಗಾರ ಪ್ರಶಸ್ತಿ ಪಡೆದರೆ ವಿಶ್ವದೆಲ್ಲೆಡೆ ಭಾರತೀಯರು ಪಾಕಿಸ್ತಾನದ ವಿರುದ್ಧದ ಪಂದ್ಯದ ಗೆಲುವಿನ ನಂತರದಲ್ಲಿ ಒಂದು ದಿನ ಮುಂಚಿತವಾಗಿ ದೀಪಾವಳಿ ಆಚರಿಸಿದರು ಎಲ್ಲೆಡೆ ವಿಜಯೋತ್ಸವದ ಕಹಳೆ ಮೊಳಗಿದರೆ ಕಿಂಗ್ ಕೊಹ್ಲಿ ಇತಿಹಾಸ ಬರೆದ ಕಥಾನಾಯಕನಾಗಿ ಮಿಂಚಿದರು…..
Categories
ಕ್ರಿಕೆಟ್

ಆಸ್ಟ್ರೇಲಿಯಾ ವಿರುದ್ಧ ಮೊಹಾಲಿ ಪಂದ್ಯದಲ್ಲಿ ಭಾರತದ ಸೋಲಿಗೆ ಯಾರು ಹೊಣೆ..? ಭುವನೇಶ್ವರ್ ಮೇಲೆ ಗವಾಸ್ಕರ್ ಗರಂ..!

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿಯೇ ಭಾರತ ತಂಡ ಉತ್ತಮ ಮೊತ್ತ ಕಲೆಹಾಕಿಯು ಮುಗ್ಗರಿಸಿ ಸೋಲಿನ ರುಚಿ ಉಂಡಿದೆ.
ಭಾರತ ತಂಡ ಬೃಹತ್ ಮೊತ್ತದ ಗುರಿ  ನೀಡಿದರೂ ಸಹ ಕಳಪೆ ಬೌಲಿಂಗ್‍ ನಿರ್ವಹಣೆಯಿಂದ ರೋಹಿತ್ ಪಡೆ ಸೋಲು ಎದುರಿಸಬೇಕಾಯಿತು.
ಹಾಗಾದ್ರೆ ಮೊಹಾಲಿ ಪಂದ್ಯದ ಸೋಲಿಗೆ ಯಾರು ಹೊಣೆ ? ಎನ್ನುವ ಪ್ರಶ್ನೆ ಕೆಲವರನ್ನು ಕಾಡಿದೆ ಇದಕ್ಕೆ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸುನಿಲ್ ಗವಾಸ್ಕರ್ ಉತ್ತರಿಸಿದ್ದಾರೆ. ಭಾರತ ತಂಡ ಉತ್ತಮ ಮೊತ್ತ ಕಲೆ ಹಾಕಿಯು ಸೋಲಿಗೆ ಕಾರಣವಾಗಿದ್ದು ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗಳನ್ನು ಕಟ್ಟು ಹಾಕಲಾರದೆ ಅತಿ ಹೆಚ್ಚು ರನ್ ಹೊಡೆಸಿಕೊಂಡ ಅನುಭವಿ ವೇಗಿ ಭುವನೇಶ್ವರ್ ಮೇಲೆ ಅವರು ಗರಂ ಆಗಿದ್ದಾರೆ.
ಹೌದು, ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಸಾಕಷ್ಟು ಪಂದ್ಯಗಳ ‘ಡೆತ್ ಓವರ್‌ಗಳಲ್ಲಿ ಪದೇ ಪದೇ ತಂಡದ ವೈಫಲ್ಯಕ್ಕೆ ಭಾರತದ ವೇಗಿ ಭುವನೇಶ್ವರ್ ಕುಮಾರ್ ಕಾರಣವೆಂದು ಆರೋಪಿಸಿದ್ದಾರೆ. ಮೊಹಾಲಿಯಲ್ಲಿ ಮಂಗಳವಾರ ನಡೆದ 3 ಪಂದ್ಯಗಳ ಸರಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ ಇಪ್ಪತ್ತು ಓವರ್‌ಗಳಲ್ಲಿ  ಆರು ವಿಕೆಟ್ ಕಳೆದುಕೊಂಡು 208 ರನ್‍ಗಳ ಸವಾಲಿನ ಮೊತ್ತ ಕಲೆ ಹಾಕಿತ್ತು ತಂಡದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಹೊರತಾಗಿಯೂ ಭಾರತ ತಂಡ 4 ವಿಕೆಟ್‍ಗಳಿಂದ ಸೋಲು ಕಾಣಬೇಕಾದದ್ದು ಮಾತ್ರ ದುರಂತವೆ ಹೌದು ಇದಕ್ಕೆ ನೇರ ಹೊಣೆ ಭಾರತ ತಂಡದ ವೇಗದ ಬೌಲರ್ ಭುವನೇಶ್ವರ್
*ನಾಲ್ಕು ಓವರ್ ಗಳಲ್ಲಿ 52 ರನ್‌ ಹೊಡಸಿಕೊಂಡ ಭುವಿ..!*  
ಭಾರತ ತಂಡದ ಅನುಭವಿ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಭುವನೇಶ್ವರ್ ಕುಮಾರ್ ಈ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಭುವಿ ಇನಿಂಗ್ಸ್‌ನ ಆರಂಭದಲ್ಲೆ ಒಂದರಮೇಲೊಂದು ವೈಡ್ ಬಾಲ್ ಎಸೆಯುವುದರೊಂದಿಕೆ ರನ್ ಕೂಡ ಹೊಡೆಸಿಕೊಂಡರು ಅದರಲ್ಲೂ ಅತ್ಯಂತ ನಿರ್ಣಾಯಕ 19ನೇ ಓವರ್‌ ಅನ್ನು ಬೌಲ್ ಮಾಡಿ ಭುವಿ 16 ರನ್ ಬಿಟ್ಟುಕೊಟ್ಟರು. ಈ ಓವರ್ ಪಂದ್ಯದ ಗತಿಯನ್ನೆ ಬದಲಿಸಿತ್ತು  ಭುವನೇಶ್ವರ್ ನಾಲ್ಕು ಓವರ್‌ಗಳಲ್ಲಿ 13 ಎಕಾನಮಿ ರೇಟ್‌ನಲ್ಲಿ 52 ರನ್ ಕೊಟ್ಟು ಸೋಲಿಗೆ ಪ್ರಮುಖ ಕಾರಣರಾದರು. ಭಾರತೀಯ ಬೌಲರ್‌ಗಳ ಪೈಕಿ ಭುವಿ ಬೌಲಿಂಗ್ ಪ್ರದರ್ಶನವು ಅತ್ಯಂತ ಕಳಪೆ ಮಟ್ಟದಲ್ಲಿತ್ತು ಆರಂಭದಿಂದಲೆ ಏನು ಕಳೆದುಕೊಂಡವರಂತೆ ಮೈದಾನದಲ್ಲಿ ಕಾಣುತ್ತಿದ್ದರು ಭುವಿ.
ಭಾರತ ತಂಡದ ಕಳಪೆ ಬೌಲಿಂಗ್ ಪ್ರದರ್ಶನದಿಂದ ಸುನಿಲ್ ಗವಾಸ್ಕರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನಾವು ಉತ್ತಮವಾಗಿ ಬೌಲಿಂಗ್ ಮಾಡಲಿಲ್ಲ. ಇದು ನಮಗೆ ದೊಡ್ಡ ಆತಂಕವನ್ನು ತಂದೊಡ್ಡಿದೆ. ಮುಂದಿನ ಪಂದ್ಯಗಳನ್ನು ಯೋಚಿಸುವಂತಾಗಿದೆ. ಅದರಲ್ಲೂ ತಂಡದ ಶ್ರೇಷ್ಠ ಬೌಲರ್ ಗಳಲ್ಲಿ ಒಬ್ಬರಾದ ಭುವನೇಶ್ವರ್ ಕುಮಾರ್ ಅನುಭವಿ ಬೌಲರ್ ಆಗಿದ್ದರು ಪ್ರತಿ ಬಾರಿಯೂ ಹೆಚ್ಚು ರನ್ ಬಿಟ್ಟುಕೊಡುತ್ತಿದ್ದಾರೆ. ಈ ಕಾರಣದಿಂದಲೇ ಭಾರತವನ್ನು ಪಾಕಿಸ್ತಾನ, ಶ್ರೀಲಂಕಾ ಮತ್ತು ಈಗ ಆಸ್ಟ್ರೇಲಿಯಾ ಕೂಡ ಸೋಲಿಸಿವೆ. ಆಸೀಸ್ ವಿರುದ್ಧ ನಾಲ್ಕು ಓವರ್ ಗಳಲ್ಲಿ ಭುವಿ ಹನ್ನೆರಡು ರನ್ ಸರಾಸರಿಯಲ್ಲಿ 52 ರನ್ ನಿಡಿದ್ದಾರೆ. ಪ್ರತಿ ಎಸೆತಕ್ಕೆ ಅವರು 2.16ರಂತೆ ರನ್ ನೀಡಿದ್ದಾರೆ. ಕಳೆದ 3 ಪಂದ್ಯಗಳ ಡೆತ್‍ ಓವರ್‍ ಳಲ್ಲಿ ಅವರು ಹೆಚ್ಚು ರನ್ ಬಿಟ್ಟುಕೊಟ್ಟಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ’ ಅಂತಾ ಗವಾಸ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ.ಇದು ತಂಡದ ಮುಂದಿನ ಪಂದ್ಯಗಳಲ್ಲೂ ಸೋಲಿನ ಭೀತಿ ಎದುರಾಗಿದೆ.
ಭುವನೇಶ್ವರ್ ಹೊರತಾಗಿ ವೇಗಿ ಹರ್ಷಲ್ ಕೂಡ ಈ ಪಂದ್ಯದಲ್ಲಿ ದುಬಾರಿ ಎನಿಸಿದರು. ಗಾಯದಿಂದ ಮರಳಿದ ನಂತರ ಅವರು ತಮ್ಮ ಮೊದಲ ಪಂದ್ಯ ಆಡಿದರು. ಹರ್ಷಲ್ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 49 ರನ್‌ ಬಿಟ್ಟುಕೊಟ್ಟರು. ಆದರೆ ಹರ್ಷಲ್ ವಾಪಸಾದ ನಂತರ ಇದು ಮೊದಲ ಪಂದ್ಯ’ವಾಗಿದೆ. ಹೀಗಾಗಿ ಅವರು ಮುಂದಿನ ಪಂದ್ಯಗಳಿಗೆ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಿದೆ ಎಂದು ಗವಾಸ್ಕರ್ ಖಡಕ್ಕಾಗಿ ಹೇಳಿದ್ದಾರೆ.
ಟಿ-20 ವಿಶ್ವಕಪ್‌ ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ಬೌಲರ್‌ಗಳು ಸಾಕಷ್ಟು ಓವರ್‌ಗಳನ್ನು ಬೌಲ್ ಮಾಡಿ ಅಭ್ಯಾಸ ಮಾಡಬೇಕಿದೆ ಬ್ಯಾಟಿಂಗ್ ನ ಬಲವನ್ನು ನಂಬಿ ಇದೇ ರೀತಿ ಬೌಲಿಂಗ್ ಮಾಡಿದರೆ ಬರಲಿರುವ ವಿಶ್ವಕಪ್ ಪಂದ್ಯದಲ್ಲಿ ಲೀಗ್ ಹಂತದಲ್ಲಿಯೇ ಭಾರತ ತಂಡ ಸೋತು ನಿರ್ಗಮಿಸಬೇಕಾದ ಸ್ಥಿತಿ ಬಂದರೂ ಬರಬಹುದು ಎಂದು ಕ್ರಿಕೆಟ್ ದಿಗ್ಗಜರ ಜೋತೆಗೆ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.
Categories
ಕ್ರಿಕೆಟ್

ಭಾರತ ತಂಡದ ಹೊಸ ಜೆರ್ಸಿ ಅನಾವರಣ: ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಹೊಸ ಜೆರ್ಸಿಯಲ್ಲಿ ಕಣಕ್ಕೆ ಇಳಿಯಲಿದೆ ಟೀಮ್ ಇಂಡಿಯಾ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂಬರುವ 2022 ರ ಟಿ 20 ವಿಶ್ವಕಪ್‌ಗಾಗಿ ಟೀಮ್ ಇಂಡಿಯಾದ ಹೊಸ ಅನಾವರಣಗೊಳಿಸಲಾಗುವುದಾಗಿ ಹೇಳಿತ್ತು. ಹೊಸ ಜೆರ್ಸಿಯ ಬಿಡುಗಡೆಗಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು ಎನ್ನುವುದು ಸತ್ಯ. ಈಗ ಅಭಿಮಾನಿಗಳ ಕಾಯುವಿಕೆಯು ಅಂತ್ಯ ವಾಗಿದೆ. ಅದರಂತೆ ಸೆಪ್ಟೆಂಬರ್ 18ರಂದು ಹೊಸ ವಿನ್ಯಾಸದ ಜೆರ್ಸಿಯನ್ನು ಅನಾವರಣಗೊಳಿಸಲಾಗಿದೆ.
ಈ ಬಾರಿಯ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಹೊಸ ಡ್ರರ್ಸ್ ನೊಂದಿಗೆ ಕಣಕ್ಕಿಳಿಯಲಿದೆ. ಟೀಮ್ ಇಂಡಿಯಾದ ಅಧಿಕೃತ ಜೆರ್ಸಿ ಪ್ರಾಯೋಜಕ ಎಂಪಿಎಲ್ (MPL) ಸ್ಪೋರ್ಟ್ಸ್ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯಗಳಲ್ಲಿ ಭಾರತ ತಂಡದ ಆಟಗಾರರು ಇದೇ ಜೆರ್ಸಿಯನ್ನು ಧರಿಸಿ ಕಣಕ್ಕಿಳಿಯಲಿದ್ದಾರೆ.
ಈ ಜೆರ್ಸಿಯು ಮೊದಲಿನಂತೆಯೇ ತಿಳಿ ಆಕಾಶ ನೀಲಿ ಛಾಯೆಗಳನ್ನು ಹೊಂದಿದೆ. 2007ರಲ್ಲಿ ಟಿ20 ವಿಶ್ವಕಪ್‌ನ ಉದ್ಘಾಟನಾ ಆವೃತ್ತಿಯ ಸಂದರ್ಭದಲ್ಲಿ ಭಾರತ ಇದೇ ರೀತಿಯ ಹೊಸ ಜೆರ್ಸಿಯನ್ನು ಹೊಂದಿತ್ತು. ಪುರುಷರ ತಂಡವನ್ನು ಹೊರತುಪಡಿಸಿ, ಹರ್ಮನ್‌ಪ್ರೀತ್ ಕೌರ್ ಮತ್ತು ತಂಡ ಕೂಡ ತಮ್ಮ ಮುಂಬರುವ ಪಂದ್ಯಗಳಿಗೆ ಇದೇ ಜರ್ಸಿಯನ್ನು ಧರಿಸಲಿದ್ದಾರೆ.
ಸೆಪ್ಟೆಂಬರ್ 20ರಿಂದ ಟಿ20 ಸರಣಿ ಆರಂಭವಾಗಲಿದೆ
ಏಷ್ಯಾ ಕಪ್ 2022 ರ ಸಮಯದಲ್ಲಿ ಟೀಮ್ ಇಂಡಿಯಾದ ಜರ್ಸಿಗೆ ಹೋಲಿಸಿದರೆ, ಹೊಸ  ನೀಲಿ ಬಣ್ಣದ ಹಗುರವಾದ ಆಛಾಯೆಯನ್ನು ಹೊಂದಿದೆ, ಅವರು 2007 ರ ಟಿ20 ವಿಶ್ವಕಪ್‌ನಲ್ಲಿ ಹೊಂದಿದ್ದರು. ಎಂಪಿಎಲ್ (MPL) 2020 ರಲ್ಲಿ ಕಿಟ್ ಪ್ರಾಯೋಜಕರಾಗಿ ಅಧಿಕಾರ ವಹಿಸಿಕೊಂಡ ನಂತರದ ವರ್ಷಗಳಲ್ಲಿ ಇದು ಮೂರನೇ ಭಾರತೀಯ ಜೆರ್ಸಿಯಾಗಿದೆ.
ಮೇಲೆ ಹೇಳಿದಂತೆ, ಸೆಪ್ಟೆಂಬರ್ 20 ರಂದು (ಮಂಗಳವಾರ) ಮೊಹಾಲಿಯಲ್ಲಿ ಪ್ರಾರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. 2022 ರ ಟಿ20 ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ನಿರಾಸೆ ಅನುಭವಿಸಿರುವ ಟೀಂ ಇಂಡಿಯಾ, ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್‌ಗೆ ಹೋಗುವ ಮೊದಲು ಸರಣಿ ಗೆಲ್ಲುವ ಮೂಲಕ ಆತ್ಮವಿಶ್ವಾಸ ಪಡೆಯಲು ಯತ್ನಿಸಲಿದೆ.
ಮೊಹಮ್ಮದ್ ಶಮಿ ಬದಲಿಗೆ ಉಮೇಶ್ ಯಾದವ್
ಆದಾಗ್ಯೂ, ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆಯ ನಂತರ ಹಿರಿಯ ವೇಗಿ ಮೊಹಮ್ಮದ್ ಶಮಿ ಹೊರಗುಳಿಯುವುದರೊಂದಿಗೆ ಭಾರತ ತಂಡಕ್ಕೆ ಆಘಾತ ಎದುರಾಗಿದೆ ಇದು ದುರಂತ ಕೂಡ ಹೌದು
ಮುಂಬರುವ ಪಂದ್ಯಗಳಿಗೆ ಅವರ ಬದಲಿ ಆಟಗಾರನಾಗಿ ವೇಗಿ ಉಮೇಶ್ ಯಾದವ್ ಅವರನ್ನು ಆಯ್ಕೆ ಸಮಿತಿ ಹೆಸರಿಸಿದೆ. ಏತನ್ಮಧ್ಯೆ, ಹಿರಿಯ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ತಂಡಕ್ಕೆ ಮರಳಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸಿ ತಂಡವು ಪ್ರತಿಭಾವಂತ ಬ್ಯಾಟರ್ ಟಿಮ್ ಡೇವಿಡ್ ಅವರನ್ನು ತಮ್ಮ ತಂಡದಲ್ಲಿ ಹೆಸರಿಸಿದೆ ಈತ ಬಲಗೈ ಬ್ಯಾಟರ್ ಡೆತ್ ಓವರ್‌ಗಳಲ್ಲಿ ಬ್ಯಾಟ್‌ನೊಂದಿಗೆ ನಿರ್ಣಾಯಕ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ.
Categories
ಕ್ರಿಕೆಟ್

ಏಷ್ಯಾ ಕಪ್‌ನಲ್ಲಿ ಭಾರತದ ಸೋಲಿಗೆ ನಾಯಕ ರೋಹಿತ್ ಶರ್ಮಾ ತಲೆಕೆಡಿಸಿಕೊಂಡಿಲ್ಲ ಬದಲಾಗಿ ಸೋತರೂ ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ ಎಂದು ಹೇಳಿದ್ದಾರೆ

‘ಇಂದಿನ ಸೋಲು ನಾಳಿನ ಗೆಲುವಿಗೆ ಮೆಟ್ಟಿಲು’ ಎನ್ನುವ ರೀತಿಯಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ದೃಷ್ಟಿಯಿಂದ ಅನೇಕ ಪ್ರಯೋಗಗಳನ್ನ ಮಾಡಿ ಏಷ್ಯಾಕಪ್‌ನಲ್ಲಿ ಕೈ ಸುಟ್ಟುಕೊಂಡಿದೆ. ಸೂಪರ್ 4 ಹಂತದಲ್ಲಿ ಸತತ ಎರಡು ಪಂದ್ಯವನ್ನು ಸೋಲುವ ಮೂಲಕ ಏಷ್ಯಾಕಪ್ ಗೆಲ್ಲುವ ಕನಸು ಭಗ್ನ ಗೊಂಡಿದೆ.
ಭಾರತ ಏಷ್ಯಾಕಪ್ ಫೈನಲ್ ತಲುಪಲು ಬುಧವಾರ ನಡೆದ  ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆಲ್ಲುವ ಸನಿಹಕ್ಕೆ ಬಂದು ಸೋಲಿನ ಕಹಿ ಉಂಡಿದೆ. ಅಫ್ಘಾನಿಸ್ತಾನ ತನ್ನ ತಂಡದ ಬ್ಯಾಟಿಂಗ್ ವೈಫಲ್ಯದಿಂದಾಗಿ ಕಡಿಮೆ ಮೊತ್ತ ಕಲೆಹಾಕಿತು ಆದರೂ ಅಫ್ಘಾನಿಸ್ತಾನ ಕೊನೆಯ ಓವರ್‌ವರೆಗೆ ವಿರೋಚಿತ ಹೋರಾಟ ಪ್ರದರ್ಶಿಸಿತು. ಪ್ರತಿ ಹಂತದಲ್ಲು ಗೆಲುವಿಗಾಗಿ ಹೋರಾಟ ಮಾಡುತ್ತಲೇ ಸಾಗಿತ್ತು ಗೆಲುವು ಕೂಡ ಕೈಯಲ್ಲೆ ಇತ್ತು ಆದರೆ ಕೊನೆಯ ಆಟಗಾರನಾಗಿ ಮೈದಾನಕ್ಕೆ ಇಳಿದ ಪಾಕಿಸ್ತಾನ ಆಟಗಾರ ಎರಡು ಬಾಲ್ ಗಳಲ್ಲಿ ಸತತ ಎರಡು ಸಿಕ್ಸರ್ ಬಾರಿಸುವುದರ ಮೂಲಕ ಪಾಕಿಸ್ತಾನ ತಂಡವನ್ನು ಒಂದು ವಿಕೆಟ್‌ಗಳ ರೋಚಕ ಗೆಲುವು ಪಡೆಯುವಂತೆ ಮಾಡಿದರು ಈ ಮೂಲಕ ಪಾಕ್ ತಂಡ ಭಾನುವಾರ ನಡೆಯುವ ಏಷ್ಯಾಕಪ್‌ ಫೈನಲ್ ಗೆ ಪ್ರವೇಶಿಸಿದೆ. ಫೈನಲ್‌ನಲ್ಲಿ ದ್ವೀಪ ರಾಷ್ಟ್ರ ಶ್ರೀಲಂಕಾವನ್ನು ಎದುರಿಸಲಿದೆ
ಇಲ್ಲಿ ಗಮನಿಸಬೇಕಾಗಿದ್ದು ಟೀಂ ಇಂಡಿಯಾ ಆಟಗಾರರ ನೈಜ ಸಾಮರ್ಥ್ಯವು ಈ ಸರಣಿಯಲ್ಲಿ ಬಹಿರಂಗಪಟ್ಟಿದೆ. ಈ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗದಿದ್ದರೂ, ನಮಗಿಂತ ದುರ್ಬಲ ತಂಡಗಳ ಕೈಯಲ್ಲಿ ಸೋತ ನೋವು ಭಾರತ ತಂಡವನ್ನು ಕಾಡುತ್ತಿರುವುದಂತು ಸತ್ಯ.. ಈ ಬಾರಿ ಏಷ್ಯಾ ಕಪ್ ಗೆಲ್ಲುವ ಫೇವರಿಟ್ ತಂಡವಾಗಿ  ಕಣಕ್ಕಿಳಿದು ಬರಿಗೈನಲ್ಲಿ ಮನೆಗೆ ತೆರಳಲಿರುವ ಭಾರತಕ್ಕೆ ದೊಡ್ಡ ಪಾಠ ಕಲಿತಂತಾಗಿದೆ.ಸತತ ಗೆಲುವಿನಿಂದ ತೇಲಾಡುತ್ತಿದ್ದ ಭಾರತ ತಂಡದ ಆಟಗಾರರ ಹುಂಬತನ ಈ ಸೋಲಿನಿಂದ ತಲೆ ತಗ್ಗಿಸುವಂತೆ ಮಾಡಿದೆ.
ಐಪಿಎಲ್ ಸೀಸನ್  ಬಹು ಯಶಸ್ವಿ ನಾಯಕ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಎಷ್ಟು ಹುಷಾರಾಗಿ ಇರಬೇಕು ಎಂಬುದರ ಸತ್ಯವನ್ನು ಅರಿಯುವಂತೆ ಮಾಡಿದೆ ಏಷ್ಯಾ ಕಪ್ ಟೂರ್ನಿ.
ಈ ಪಂದ್ಯಾವಳಿಯಿಂದ ತಂಡದ ಆಯ್ಕೆ ಮತ್ತು ಆಟಗಾರರ ಜತೆಗೆ ಟೀಮ್ ಮ್ಯಾನೇಜ್ ಮೆಂಟ್ ಮತ್ತು ಬಿಸಿಸಿಐ ಎಷ್ಟು ಸುಧಾರಿಸಿಕೊಳ್ಳಬೇಕಿದೆ ಎನ್ನುವುದು ತಿಳಿದು ಬಂದಿದೆ. ಯಾವ ಯಾವ ವಿಭಾಗದಲ್ಲಿ ತನ್ನ ತಪ್ಪನ್ನು ತಿದ್ದಕೊಳ್ಳಬೇಕು ಎನ್ನುವುದನ್ನು  ಅರಿತಿದೆ ಒಟ್ಟಿನಲ್ಲಿ ಈ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡ ಸೋಲುಂಡು ಸಾಕಷ್ಟು ಪಾಠ ಕಲಿತಿದೆ,
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಈ ಅನಿರೀಕ್ಷಿತ ಸೋಲು  ನನ್ನ ಮುಂದಿನ ನಾಯಕತ್ವಕ್ಕೂ ನನ್ನ ಜವಬ್ದಾರಿಯುತ ಆಟಕ್ಕೂ  ಪಾಠ ಎಂದಿದ್ದಾರೆ.
ತಂಡದ ಸಂಯೋಜನೆಯಲ್ಲಿ ಮಾಡಬೇಕಾದ ಬದಲಾವಣೆಗಳ ಬಗ್ಗೆ ಸ್ವಲ್ಪ ಸ್ಪಷ್ಟತೆ ಇದೆ ಎಂದು ಹೇಳಿದರು. ಯೋಜನೆಗಳ ಬದಲಾವಣೆಗಳು ಮತ್ತು ಆಟಗಾರರ ಸಾಮರ್ಥ್ಯದ ಬಗ್ಗೆ ಅವರಿಗೆ ಈಗ ಒಂದು ಅರ್ಥಪೂರ್ಣ ಚೌಕಟ್ಟು ತಿಳಿದಿದೆ.
ಈಗಾಗಲೇ ಭಾರತದ ಮೂವರು ಸ್ಪಿನ್ನರ್‌ಗಳು ಮತ್ತು ಮೂವರು ವೇಗಿಗಳ ಪ್ರಯೋಗ ವಿಫಲವಾಯಿತು. ಸಂಪ್ರದಾಯಕ್ಕಿಂತ ಭಿನ್ನವಾಗಿ, ಇಬ್ಬರು ಸ್ಪೆಷಲಿಸ್ಟ್ ಸ್ಪಿನ್ನರ್‌ಗಳು, ವೇಗಿಗಳು, ಒಬ್ಬ ಪೇಸ್ ಆಲ್‌ರೌಂಡರ್ ಮತ್ತು ಸ್ಪಿನ್ ಆಲ್‌ರೌಂಡರ್ ಉತ್ತಮ ಆಲೋಚನೆಯಲ್ಲ. ಅದಕ್ಕೂ ಮಿಗಿಲಾಗಿ ನಂಬಿಕಸ್ಥ ವೇಗಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಯಾವಾಗ ಬೇಕಾದರು ಕೈ ಕೊಡಬಹುದು ಎಂದು ತಿಳಿದು ಬಂದಿದೆ. ಆಲ್ ರೌಂಡ್ ಪ್ರದರ್ಶನದೊಂದಿಗೆ ಪಾಕಿಸ್ತಾನದ ವಿರುದ್ಧ ಗೆದ್ದ ಹಾರ್ದಿಕ್ ನಂತರದ ಎರಡು ಪಂದ್ಯಗಳಲ್ಲಿ ದಯನೀಯವಾಗಿ ವಿಫಲರಾದರು. ಅವರನ್ನು ಮೂರನೇ ವೇಗಿ ಎಂದು ಪರಿಗಣಿಸುವುದು ಸರಿಯಲ್ಲ ಎಂಬುದು ಸತ್ಯ.ರೋಹಿತ್ ತಂಡದಲ್ಲಿ ಫಿನಿಶರ್ ಪಾತ್ರ ಯಾರದ್ದು ಎಂಬ ಬಗ್ಗೆಯೂ ಸ್ಪಷ್ಟನೆ ಸಿಕ್ಕಿದೆ. ಲೆಫ್ಟ್ ರೈಟ್ ಕಾಂಬಿನೇಷನ್ ಗೆ ದಿನೇಶ್ ಕಾರ್ತಿಕ್ ಅಲ್ಲ ರಿಷಬ್ ಪಂತ್ ತೆಗೆದುಕೊಂಡಿದ್ದು ಎಷ್ಟುತಪ್ಪು ಎಂದು ತಿಳಿಯಿತು. ನಮ್ಮ ತಂಡದ ಬೌಲಿಂಗ್ ಸಾಮರ್ಥ್ಯವು ಎಷ್ಟು ವೀಕ್ ಎನ್ನುವುದು ಕೂಡ ಗೊತ್ತಾಗಿದೆ. ಅದರಲ್ಲೂ ಕೊನೆಯ ಓವರ್‌ಗಳಲ್ಲಿ ಯಾರ ಸಾಮರ್ಥ್ಯ ಏನು ಎಂಬ ಬಗ್ಗೆ ಸ್ಪಷ್ಟತೆ ಇತ್ತು.ನಾಲ್ವರು ವೇಗಿಗಳನ್ನು ತಂಡದಲ್ಲಿ ಇಟ್ಟುಕೊಂಡು ಬ್ಯಾಟಿಂಗ್ ಸಾಮರ್ಥ್ಯ ಹೊಂದಿರುವ ವೇಗಿಗಳ ಮೌಲ್ಯವನ್ನು ನಮಗೆ ಕಲಿಸಿದೆ. ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಯಂತಹ ಬೌಲರ್‌ಗಳ ಅನುಪಸ್ಥಿತಿಯು ದೊಡ್ಡದಾಗಿ ಹೊಡೆತ ನೀಡಬಲ್ಲದು ಎಂದು ತಿಳಿದುಬಂದಿದೆ. ಹಾಗಾಗಿ ಈ ಸೋಲು ಭಾರತದ ಆಟಗಾರರಿಗೆ ಪಾಠವಾಗಿದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಸೋಲಿನ ಕಹಿ ಉಂಡು ಸಾಕಷ್ಟು ಪಾಠ ಕಲಿತಿರುವುದಂತು ಸತ್ಯ. ಇನ್ನಾದರು ಭಾರತೀಯ ಆಟಗಾರರು ತಮ್ಮ ಆಹಃ ಅನ್ನು ಬದಿಗಿಟ್ಟು ತಂಡಕ್ಕಾಗಿ ನಮ್ಮ ದೇಶಕ್ಕಾಗಿ ಆಡಲಿ ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಒಕ್ಕೊರಲಿನ ಧ್ವನಿಯಾಗಿದೆ..ಭಾರತ ತಂಡ ತಮ್ಮ ಮುಂದಿನ ಪಂದ್ಯಗಳಲ್ಲಿ ತಮ್ಮ ಶಕ್ತಿ ಏನೆಂಬುದನ್ನು ತೋರಿಸಲಿ ಎನ್ನುವುದು ನಮ್ಮ ಆಶಯವಾಗಿದೆ.
Categories
ಕ್ರಿಕೆಟ್

ಅಂಡರ್ 19 ವಿಶ್ವಕಪ್ ಫೈನಲ್‌:ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯಸಾಧಿಸಿ ಐದನೇ ಬಾರಿಗೆ ವಿಶ್ವಕಪ್ ಗೆದ್ದ ಭಾರತ ತಂಡ

ಅಂಡರ್ 19 ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸೆಣೆಸಾಟದಲ್ಲಿ ಭಾರತ ತಂಡ ಅಮೋಘ ಗೆಲುವು ಸಾಧಿಸಿದ್ದು ಚಾಂಪಿಯನ್ ಪಟ್ಟಕ್ಕೇರಿದೆ.
ಈ ಮೂಲಕ ಅಂಡರ್ 19 ವಿಶ್ವಕಪ್ ಇತಿಹಾಸದಲ್ಲಿ ಭಾರತ 5ನೇ ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ಇಂಗ್ಲಂಡ್ ಕಿರಿಯರ ವಿರುದ್ಧ ಭಾರತದ ಕಿರಿಯರ ಸೆಣೆಸಾಟ ಸಾಕಷ್ಟು ರೋಚಕತೆಯಿಂದ ಕೂಡಿದ್ದು ಅಂತಿಮವಾಗಿ ಭಾರತ 4 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.
ಭಾರತ ಈ ಪಂದ್ಯದಲ್ಲಿ ಎಲ್ಲಾ ವಿಭಾಗದಲ್ಲಿಯೂ ಇಂಗ್ಲೆಂಡ್‌ಗಿಂತ ಸಂಪೂರ್ಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೊದಲಿಗೆ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ಇಂಗ್ಲೆಂಡ್ ತಂಡವನ್ನು 189 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಅದಾದ ಬಳಿಕ ಬ್ಯಾಟಿಂಗ್‌ನಲ್ಲಿಯೂ ಭಾರತ ಉತ್ತಮ ಪ್ರದರ್ಶನ ನೀಡಿತು. ಇಂಗ್ಲೆಂಡ್ ಬೌಲಿಂಗ್‌ ದಾಳಿಯನ್ನು ಉತ್ತಮ ರೀತಿಯಲ್ಲಿ ಎದುರಿಸಿದ ಭಾರತ ತಂಡ 14 ಎಸೆತಗಳು ಬಾಕಿಯಿರುವಂತೆ ಗೆಲುವು ಸಾಧಿಸಿದೆ. ಈ ಮೂಲಕ ಅರ್ಹವಾಗಿಯೇ ಚಾಂಪಿಯನ್ ಪಟ್ಟಕ್ಕೇರಿದೆ.
ಇನ್ನು ಭಾರತ ಅಂಡರ್ 19 ತಂಡದ ಪರವಾಗಿ ರಾಜ್ ಬಾವಾ ಐದು ವಿಕೆಟ್ ಗೊಂಚಲು ಪಡೆಯುವ ಮೂಲಕ ಎದುರಾಳಿಗೆ ಆಘಾರ ನೀಡಿದರೆ ರವಿ ಕುಮಾರ್ ಕೂಡ ನಾಲ್ಕು ವಿಕೆಟ್ ಪಡೆದು ಅದ್ಭುತ ಕೊಡುಗೆ ನೀಡಿದರು. ಇನ್ನು ಬ್ಯಾಟಿಂಗ್‌ನಲ್ಲಿ ಶೇಕ್ ರಶೀದ್ ಈ ಪಂದ್ಯದಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದು ಅರ್ಧ ಶತಕದ ಕೊಡುಗೆ ನೀಡಿ ಮಿಂಚಿದ್ದಾರೆ. ಇನ್ನು ನಿಶಾಂತ್ ಸಿಂಧು ಕೂಡ ಅಜೇಯ 50 ರನ್‌ಗಳ ಕೊಡುಗೆ ನೀಡಿದ್ದಾರೆ. ಈ ಮೂಲಕ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.
ಈ ಬಾರಿಯ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವು  ವೆಸ್ಟ್ ಇಂಡೀಸ್‌ನ ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್‌ ಆಯ್ದುಕೊಂಡು 44.5 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡ 189ರನ್ ಗಳಿಸಿ ಆಲೌಟ್ ಆಯಿತು,
 ಇಂಗ್ಲೆಂಡ್ ಎಲ್ಲಾ ಆಟಗಾರರು ಅಡಲು ಮೈದಾನಕ್ಕೆ ಇಳಿದವರೆಲ್ಲ ಫೇವಿಲಿಯನ್ ಕಡೆ ಮುಖಮಾಡಿ ಹೊರಟರೆ ಜವಾಬ್ದಾರಿಯುತ ಪ್ರದರ್ಶನ ನೀಡಿದ ತಂಡದ ಜೇಮ್ಸ್‌ ರ‍್ಯೂ  116 ಎಸೆತಗಳಲ್ಲಿ 95 ರನ್ ಗಳಿಸಿ ತಂಡ ಗೌರವ ಮೊತ್ತ ತಲುಪಲು ಹೋರಾಡಿದರು,
ಈ ಬಾರಿ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ  ಮತ್ತು ಇಂಗ್ಲೆಂಡ್  ತಂಡಗಳು ಕಣಕ್ಕಿಳಿದಿದ್ದವು. ವೆಸ್ಟ್ ಇಂಡೀಸ್‌ನ ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್‌ ಆಯ್ದುಕೊಂಡು 44.5 ಓವರ್‌ಗಳಲ್ಲಿ ಆಲ್ ಔಟ್ ಆಗಿ 189 ರನ್ ಗಳಿಸಿತು. ಇಂಗ್ಲೆಂಡ್ ಇಡೀ ತಂಡ ಜವಾಬ್ದಾರಿಯುತ ಪ್ರದರ್ಶನ ನೀಡದೇ ಇದ್ದರೂ ತಂಡದ ಜೇಮ್ಸ್‌ ರ‍್ಯೂ 116 ಎಸೆತಗಳಲ್ಲಿ 95 ರನ್ ಗಳಿಸಿ ಆಪದ್ಭಾಂದವನಾದರು.
ಇನ್ನುಳಿದಂತೆ ಜಾರ್ಜ್ ಥಾಮಸ್ 27, ಜೇಕಬ್ ಬೆಥೆಲ್ 2, ನಾಯಕ ಟಾಮ್ ಪ್ರೆಸ್ಟ್ ಡಕ್ ಔಟ್, ವಿಲ್ ಲಂಕ್ಷ್ಟನ್ 4, ಜಾರ್ಜ್ ಬೆಲ್ ಡಕ್ ಔಟ್, ರೆಹಾನ್ ಅಹ್ಮೆದ್ 10, ಅಲೆಕ್ಸ್ ಹಾರ್ಟನ್ 10, ಜೇಮ್ಸ್ ಸೇಲ್ಸ್ ಅಜೇಯ 34, ಥಾಮಸ್ ಆಪ್ಸಿನ್‌ವಲ್ ಡಕ್ ಔಟ್ ಮತ್ತು ಜೋಶ್ವಾ ಬೊಯ್ಡನ್ 1 ರನ್ ಗಳಿಸಿದರು. ಹೀಗೆ ಜೇಮ್ಸ್‌ ರ‍್ಯೂ ಅಮೋಘ ಆಟದ ನೆರವಿನಿಂದ ಇಂಗ್ಲೆಂಡ್ ಹೀನಾಯ ಮೊತ್ತಕ್ಕೆ ಆಲ್ ಔಟ್ ಆಗುವುದರಿಂದ ತಪ್ಪಿಸಿಕೊಂಡಿತು
ಭಾರತ ಅಂಡರ್ 19 ತಂಡಕ್ಕೆ ಗೆಲ್ಲಲು 190 ರನ್‌ಗಳ ಸಾಧಾರಣ ಗುರಿಯನ್ನು ನೀಡಿತು.
ಹೀಗೆ ಇಂಗ್ಲೆಂಡ್ ತಂಡ ನೀಡಿದ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಉತ್ತಮ ಆರಂಭ ದೊರೆಯಲಿಲ್ಲ. ಭಾರತ ತಂಡದ ಆರಂಭಿಕ ಆಟಗಾರನಾದ  ರಘುವಂಶಿ ಶೂನ್ಯಕ್ಕೆ ಔಟ್ ಆದರೆ ಮತ್ತೋರ್ವ ಆರಂಭಿಕ ಆಟಗಾರ ಹರ್ನೂರ್ ಸಿಂಗ್ 21 ರನ್ ಗಳಿಸಿದರು. ಹೀಗೆ ಬಹು ಬೇಗನೆ ಆರಂಭಿಕ ಆಟಗಾರರನ್ನು ಕಳೆದುಕೊಂಡ ಟೀಮ್ ಇಂಡಿಯಾಗೆ ಆಸರೆಯಾದದ್ದು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶೈಖ್ ರಷೀದ್ ಹೌದು ಕಠಿಣ ಸಂದರ್ಭದಲ್ಲಿ ಟೀಮ್ ಇಂಡಿಯಾಗೆ ಆಸರೆಯಾದ ಶೇಖ್ ರಶೀದ್ 84 ಎಸೆತಗಳಲ್ಲಿ 50 ರನ್ ಗಳಿಸಿ ಜವಾಬ್ದಾರಿಯುತ ಆಟವನ್ನಾಡಿದರು. ಇನ್ನುಳಿದಂತೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಯಶ್ ಧುಲ್ 17 ರನ್, ರಾಜ್ ಬವಾ 35 ರನ್, ಕೌಶಲ್ ತಾಂಬೆ 1 ರನ್, ನಿಶಾಂತಂ ಸಿಂಧು ಅಜೇಯ 50 ರನ್ ಮತ್ತು ವಿಕೆಟ್ ಕೀಪರ್ ದಿನೇಶ್ ಬನ 5 ಎಸೆತಗಳಲ್ಲಿ ಅಜೇಯ 13 ರನ್ ಗಳಿಸಿದರು.
ಈ ಮೂಲಕ ಭಾರತ ಅಂಡರ್ 19 ತಂಡ 47.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿ 4 ವಿಕೆಟ್‍ಗಳ ಜಯವನ್ನು ಸಾಧಿಸಿ ಐದನೇ ಬಾರಿಗೆ ಅಂಡರ್ 19 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡು ಐದನೆ ಬಾರಿಗೆ ವಿಶ್ವಕಪ್ ಗೆಲುವಿಗೆ ಕಾರಣವಾಯ್ತು
Categories
ಕ್ರಿಕೆಟ್

ಇಂದು ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪಂದ್ಯ ಭಾರತ vs ಆಸ್ಟ್ರೇಲಿಯಾ

ಅಂಡರ್ 19 ವಿಶ್ವಕಪ್  ರೋಚಕ ಘಟ್ಟವನ್ನು ತಲುಪಿದೆ. ಭಾರತ ಸೆಮಿಫೈನಲ್‌ಗೆ ಪ್ರವೇಶಿಸಿದ್ದು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಕಿರಿಯರ ತಂಡ ಸವಾಲೊಡ್ಡಲಿದೆ. ಈ ಪಂದ್ಯ ಬುಧವಾರ ನಡೆಯಲಿದ್ದು ಗೆದ್ದ ತಂಡ ಫೈನಲ್‌ಗೆ ಪ್ರವೇಶ ಪಡೆಯಲಿದೆ. ಭಾರತ ತಂಡ ಮತ್ತೊಂದು ಬಾರಿ ಫೈನಲ್ ಪ್ರವೇಶಕ್ಕೆ ಎದುರು ನೋಡುತ್ತಿದ್ದು ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸವಾಲನ್ನು ಹೇಗೆ ಎದುರಿಸಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಅಂಡರ್ 19 ವಿಶ್ವಕಪ್‌ನಲ್ಲಿ ನಾಲ್ಕು ಬಾರಿಯ ಚಾಂಪಿಯನ್ ತಂಡವಾಗಿರುವ ಭಾರತ ಐದನೇ ಬಾರಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವ ಉತ್ಸಾಹದಲ್ಲಿದೆ. ಕಳೆದ ಅಂಡರ್ 19 ವಿಶ್ವಕಪ್‌ನಲ್ಲಿ ಫೈನಲ್‌ನಲ್ಲಿ ಎಡವಿದ್ದರಿಂದ ಟ್ರೋಫಿ ಯಿಂದ ವಂಚಿತವಾಗಿತ್ತು. ಆದರೆ ಈ ಬಾರಿ ಈ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ಇನ್ನೂ ಸೆಮಿಫೈನಲ್ ಹಂತಕ್ಕೇರಲು ಭಾರತ ಹಾಗೂ ಆಸ್ಟ್ರೇಲಿಯಾ ಕಿರಿಯರ ತಂಡಗಳು ಪ್ರತಿ ಪಂದ್ಯದಲ್ಲೂ ಅದ್ಭುತ ಆಟವನ್ನು ಪ್ರದರ್ಶಿಸುತ್ತಾ ಬಂದಿದೆ. ಎರಡು ತಂಡಗಳು ಕೂಡ ಎಲ್ಲಾ ವಿಭಾಗಗಳಲ್ಲಿಯೂ ಅತ್ಯುತ್ತಮ ಆಟವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದೆ.
ಹಾಗೆ ನೋಡಿದರೆ ಭಾರತದ ಈ ವಿಶ್ವಕಪ್ ಹಾದಿ ಸುಗಮವಾಗಿರಲಿಲ್ಲ. ಗಾಯದ ಸಮಸ್ಯೆ ಹಾಗೂ ಕೊರೊನಾವೈರಸ್ ತಂಡಕ್ಕೆ ಭಾರೀ ಆಘಾತವನ್ನು ನೀಡಿದ್ದು. ಕೆಲ ಪಂದ್ಯಗಳಲ್ಲಿ ಮೀಸಲು ಆಟಗಾರರನ್ನು ಕೂಡ ಬಳಸಿಕೊಳ್ಳಬೇಕಾದ ಅನಿವಾರ್ಯತೆಗೆ ಭಾರತ ಸಿಲುಕಿತ್ತು. ಆದರೆ ಈ ಎಲ್ಲಾ ಸವಾಲುಗಳನ್ನು ಭಾರತದ ಕಿರಿಯರ ತಂಡ ದಿಟ್ಟವಾಗಿ ಎದುರಿಸಿದ್ದು ಈಗ ಸೆಮಿಫೈನಲ್ ಹಂತಕ್ಕೆ ತಲುಪುವಲ್ಲಿ ಯಶಸ್ವಿಯಾಗಿದೆ. ಆದರೆ ಸೆಮಿಫೈನಲ್ ಹಂತದ ವೇಳೆಗೆ ಭಾರತದ ಕಿರಿಯರ ತಂಡದ ಎಲ್ಲಾ ಆಟಗಾರರು ಕೂಡ ಆಡಲು ಸಮರ್ಥರಾಗಿದ್ದಾರೆ.
ಕೊವಿಡ್ 19ಗೆ ತುತ್ತಾಗಿದ್ದ ನಿಶಾಂತ್ ಸಿಂಧು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಸೆಮಿಫೈನಲ್ ಪಂದ್ಯದ ಆಯ್ಕೆಗೆ ಲಭ್ಯವಾಗಲಿದ್ದಾರೆ ಎಂದು ಮ್ಯಾನೇಜ್‌ಮೆಂಟ್ ಮಾಹಿತಿ ನೀಡಿದೆ. ಉಳಿದ ಆಟಗಾರರು ಈಗಾಗಲೇ ತಂಡವನ್ನು ಕೂಡಿಕೊಂಡಿದ್ದರು. ಇನ್ನೂ ತಂಡದ ನಾಯಕ ಯಶ್ ಧುಲ್ ಸಹಿತ ಐವರು ಆಟಗಾರರು ಲೀಗ್‌ ಹಂತದ ಪಂದ್ಯಗಳ ಸಂದರ್ಭದಲ್ಲಿ ಕೊರೊನಾವೈರಸ್‌ಗೆ ತುತ್ತಾಗಿದ್ದಾಗ ನಿಶಾಂತ್ ಸಿಂಧು ಎರಡು ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಆದರೆ ಉಗಾಂಡ ವಿರುದ್ಧ ಅಂತಿಮ ಲೀಗ್ ಪಂದ್ಯವನ್ನು ಆಡಿದ ಬಳಿಕ ನಿಶಾಂತ್ ಕೂಡ ಕೋವಿಡ್‌ಗೆ ತುತ್ತಾದರು. ಈಗ ಆಸ್ಟ್ರೇಲಿಯಾ ವಿರುದ್ಧಧ ನಿರ್ಣಾಯಕ ಸೆಮಿ ಫೈನಲ್ ಪಂದ್ಯಕ್ಕೆ ಮುನ್ನ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ನಿಶಾಂತ್ ಕೋವಿಡ್ ವರದಿ ನೆಗೆಟಿವ್ ಬಂದಿದೆ.
*ಪಂದ್ಯದ ಆರಂಭ ಹಾಗೂ ನೇರಪ್ರಸಾರ:* ಆಸ್ಟ್ರೇಲಿಯಾ ಹಾಗೂ ಭಾರತ ಕಿರಿಯರ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯ ಭಾರತೀಯ ಕಾಲಮಾನ ಆರಂಭವಾಗಲಿದೆ. ಈ ಪಂದ್ಯದ ನೇರಪ್ರಸಾರ ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲಭ್ಯವಿರಲಿದೆ. ಇನ್ನೂ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿಯೂ ಈ ಪಂದ್ಯದ ನೇರಪ್ರಸಾರವಿರಲಿದೆ.
*ಭಾರತ ಅಂಡರ್ 19 ಸ್ಕ್ವಾಡ್:* ಯಶ್ ಧುಲ್ (ನಾಯಕ), ದಿನೇಶ್ ಬಾನಾ (ವಿಕೆಟ್ ಕೀಪರ್), ಆಂಗ್ಕ್ರಿಶ್ ರಘುವಂಶಿ, ಹರ್ನೂರ್ ಸಿಂಗ್, ಶೇಕ್ ರಶೀದ್, ಸಿದ್ದಾರ್ಥ್ ಯಾದವ್, ರಾಜ್ ಬಾವಾ, ಕೌಶಲ್ ತಾಂಬೆ, ರಾಜವರ್ಧನ್ ಹಂಗರ್ಗೇಕರ್, ವಿಕ್ಕಿ ಓಸ್ತ್ವಾಲ್, ರವಿಕುಮಾರ್, ಮಾನವ್ ಪರಾಖ್, ನಿಶಾಂತ್ ಸಿಂಧು, ಅನೀಶ್ವರ್ ಗೌತಮ್, ಆರಾಧ್ಯ ಯಾದವ್, ಗರ್ವ್ ಸಾಂಗ್ವಾನ್
*ಆಸ್ಟ್ರೇಲಿಯಾ ಅಂಡರ್ 19 ಸ್ಕ್ವಾಡ್:* ಕೂಪರ್ ಕೊನೊಲಿ (ನಾಯಕ), ಟೋಬಿಯಾಸ್ ಸ್ನೆಲ್ (ವಿಕೆಟ್ ಕೀಪರ್), ಕ್ಯಾಂಪ್‌ಬೆಲ್ ಕೆಲ್ಲವೇ, ಟೀಗ್ ವೈಲ್ಲಿ, ಕೋರೆ ಮಿಲ್ಲರ್, ಲಾಚ್ಲಾನ್ ಶಾ, ಏಡನ್ ಕಾಹಿಲ್, ವಿಲಿಯಂ ಸಾಲ್ಜ್‌ಮನ್, ಟಾಮ್ ವಿಟ್ನಿ, ಜ್ಯಾಕ್ ಸಿನ್‌ಫೀಲ್ಡ್, ಜ್ಯಾಕ್ ನಿಸ್ಬೆಟ್, ಹರ್ಕಿರತ್ ಬಾಜ್ವಾ, ಜೋಶ್ವಾಕ್ ಗಾರ್ವಾ ಹಿಗ್ಗಿನ್ಸ್, ನಿವೇತನ್ ರಾಧಾಕೃಷ್ಣನ್