Categories
ಬ್ಯಾಡ್ಮಿಂಟನ್

ಮೊಗವೀರ ಸಂಘ ಬೆಂಗಳೂರು(ನೋಂ)ಆಶ್ರಯದಲ್ಲಿ ಬ್ಯಾಡ್ಮಿಂಟನ್ ಕಪ್ 2022-23

ಬೆಂಗಳೂರು-ಮೊಗವೀರ ಸಂಘದ ವತಿಯಿಂದ ಸಮುದಾಯದ ಬಾಂಧವರಿಗೆ  ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು  ಆಯೋಜಿಸಲಾಗಿದ್ದು ಈ ಬಾರಿ ಪ್ರಥಮ ಬಾರಿಗೆ ಮಕ್ಕಳ ಮತ್ತು ಹಿರಿಯರ ವಿಭಾಗದಲ್ಲೂ ಸ್ಪರ್ಧೆ ನಡೆಯಲಿದೆ.  ಮೊಗವೀರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಮಕ್ಕಳ ವಿಭಾಗ:
ಸಿಂಗಲ್ಸ್
1) 15 ವರ್ಷದ ಒಳಗಿನ ಮಕ್ಕಳಿಗೆ
ಮಹಿಳೆಯರ ವಿಭಾಗ:
ಸಿಂಗಲ್ಸ್
1) 15 ವರ್ಷ ಮೇಲ್ಪಟ್ಟವರಿಗೆ
ಡಬ್ಬಲ್ಸ್
1) 15 ವರ್ಷ ಮೇಲ್ಪಟ್ಟವರಿಗೆ
ಪುರುಷರ ವಿಭಾಗ:
 ಸಿಂಗಲ್ಸ್
1) 15 ರಿಂದ 35 ವರ್ಷದವರೆಗೆ
2) 35 ವರ್ಷ ಮೆಲ್ಪಟ್ಟವರಿಗೆ
ಡಬಲ್ಸ್
1) 15 ರಿಂದ 35 ವರ್ಷದವರೆಗೆ
2) 35 ವರ್ಷ ಮೆಲ್ಪಟ್ಟವರಿಗೆ
3) 50 ವರ್ಷ ಮೇಲ್ಪಟ್ಟವರಿಗೆ
ಮಿಕ್ಸೆಡ್ ಡಬಲ್ಸ್
1) ವಯಸ್ಸಿನ ಮಿತಿ ಇಲ್ಲ
ಪ್ರವೇಶ ಶುಲ್ಕ:
ಸಿಂಗಲ್ಸ್: ರೂ 400
ಡಬಲ್ಸ್: ರೂ 600
ಮಕ್ಕಳಿಗೆ: ರೂ 250
ಡಿಸೆಂಬರ್ 10 ರ ಒಳಗೆ ಶುಲ್ಕವನ್ನು ಈ ಕೆಳಕಂಡ ಫೋನ್ ನಂಬರ್ ಗೆ ಗೂಗಲ್ ಪೆ/ಫೋನ್ ಪೆ ಮೂಲಕವೂ ಪಾವತಿಸಬಹುದು…
ಮನೋಹರ್ – 99002 84925
ಪ್ರಶಾಂತ್ – 98867 72214
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ವಿಶ್ವನಾಥ್ ಕಾಂಚನ್
99021 76454
ದತ್ತಾತ್ರೇಯ ಕುಂದಾಪುರ
94485 25648
ಜಯಪ್ರಕಾಶ್
99001 14536
ಪಂದ್ಯದ ದಿನಾಂಕ:
11 ಡಿಸೆಂಬರ್ 2022, ಭಾನುವಾರ
ಸ್ಥಳ:
ಆಕೊಲೆಡ್ಸ್ ಬ್ಯಾಡ್ಮಿಂಟನ್ & ಸ್ಪೋರ್ಟ್ಸ್ ಅಕಾಡೆಮಿ
ನಾಗಸಂದ್ರ ಮೆಟ್ರೋ ಸ್ಟೇಷನ್ ಹತ್ತಿರ.
Categories
ಸ್ಪೋರ್ಟ್ಸ್

ಟೊರ್ಪೆಡೋಸ್ ಬ್ಯಾಡ್ಮಿಂಟನ್ ಮಹಾಸಂಗ್ರಾಮ: ಕುಂದಾಪುರ ಫೂಟ್ ವರ್ಕರ್ಸ್ ಪ್ರಥಮ, ಟೊರ್ಪೆಡೋಸ್ ಟೈಟನ್ಸ್ ದ್ವಿತೀಯ

ಕ್ರೀಡಾಕ್ಷೇತ್ರದಲ್ಲಿ ಹೊಸತನದೊಂದಿಗೆ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸುತ್ತಿರುವ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನವೆಂಬರ್ 13 ಹಾಗೂ 14 ರಂದು ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಶಟ್ಲರ್ಸ್ಗಳನ್ನೊಳಗೊಂಡ ಟೊರ್ಪೆಡೋಸ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಮಂಗಳೂರಿನ ಯು.ಎಸ್.ಮಲ್ಯ ಒಳಾಂಗಣ ಸ್ಟೇಡಿಯಂನಲ್ಲಿ ಆಯೋಜಿಸಿತ್ತು.
ಸ್ಪರ್ಧೆಯಲ್ಲಿ  ಒಟ್ಟು 12 ತಂಡಗಳು ಭಾಗವಹಿಸಿ ಪ್ರಸಿದ್ಧ ಉದ್ಯಮಿಗಳು, ಕ್ರೀಡಾ ಪ್ರೋತ್ಸಾಹಕರು ತಂಡದ ಮಾಲಕತ್ವವನ್ನು ವಹಿಸಿಕೊಂಡಿದ್ದರು.ಪ್ರತಿ ತಂಡದಲ್ಲಿ 18 ಜನ ಆಟಗಾರರಿದ್ದು ಅದರಲ್ಲಿ ನಾಲ್ಕು ಮಹಿಳಾ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿತ್ತು.ಈ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಆಟಗಾರರು  ಸೇರಿದಂತೆ ಒಟ್ಟು 250ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ಈ ಕ್ರೀಡಾ ಸಂಗ್ರಾಮ ಹೊಸ  ಸಂಚಲನವನ್ನೇ ಸೃಷ್ಟಿಸಿತು.
ಈ ಬ್ಯಾಡ್ಮಿಂಟನ್ ಸ್ಪರ್ಧೆ ಬೇರೆ ಬೇರೆ ವಿಭಾಗಗಳಲ್ಲಿ ನಡೆದಿದ್ದು 11 ರಿಂದ 19 ವರ್ಷ ವಯೋಮಿತಿಯ ಬಾಲಕರು, 19ರಿಂದ 30 ವರ್ಷದವರ ಪುರುಷರು, 30ರಿಂದ 40 ವರ್ಷ ವಯೋಮಿತಿಯ ಪುರುಷರು ,ನಲವತ್ತರಿಂದ ಐವತ್ತು ವರ್ಷ ವಯೋಮಿತಿಯ ಪುರುಷರು ,50 ವರ್ಷ ಮೇಲ್ಪಟ್ಟ ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿಯೂ ಒಟ್ಟು ನಾಲ್ಕು ಪ್ರತ್ಯೇಕವಾಗಿ ಸ್ಪರ್ಧೆ ಆಯೋಜಿಸಿತ್ತು.13ರಂದು 12 ತಂಡಗಳಲ್ಲಿ 108 ಲೀಗ್ ಪಂದ್ಯಾಟವನ್ನು ನಡೆಸಿ 4 ತಂಡಗಳು ಅಂಕಪಟ್ಟಿಯಿಂದ ಹೊರಗುಳಿಯಿತು.ನವೆಂಬರ್ 14 ರಂದು ಕ್ವಾರ್ಟರ್ ಫೈನಲ್ ಹಣಾಹಣಿಯು 8 ತಂಡಗಳ ನಡುವೆ ನಡೆದು 4 ತಂಡಗಳು ಸೆಮಿ ಫೈನಲ್ ಹಂತವನ್ನು ಪ್ರವೇಶಿಸಿತು.
ಅತ್ಯುತ್ತಮ ಆಟಗಾರರಾಗಿ ವಿನ್ನರ್ಸ್ ಪಟ್ಟ ಹಾಗೂ ಎರಡು ಲಕ್ಷ ನಗದು ಬಹುಮಾನವನ್ನು ಮುಡಿಗೇರಿಸಿಕೊಂಡ ಡಾ. ಸಂದೀಪ್. ಜಿ ಮಾಲಕತ್ವದ ಕುಂದಾಪುರ ಫೂಟ್ ವರ್ಕರ್ಸ್ ತಂಡದ ಆಟಗಾರರಾದ ಗ್ಲ್ಯಾನಿಶ್ ಪಿಂಟೋ,ಗಗನ್ ದೀಪ್, ಯಶಸ್ ಗೌಡ, ಸಾಗರ್ ಜೈನ್, ಮನೋಜ್ ಶೆಣೈ, ಅಜಯ್ ಶೆಟ್ಟಿ, ರಾಯ್ ಪಿ.ಜೆ, ಶಮೀರ್, ರಾಜೇಶ್ ನಾಯರ್, ಪ್ರಕಾಶ್ ರಾವ್, ನೂರ್ ಹುಸೈನ್, ಕ್ಷಿತಿಜ್, ದೀಪಕ್ ,ಆಶ್ರಯ್.ಜಿ,
ಮೇಘನಾ ಅಮೀನ್,ಸ್ಪಂದನ.
ವಿ,ಪ್ರಿಯಾ ನಾಯಕ್,ಅನೀಶ್. ಎಚ್ ದೇವಾಡಿಗ ಮಿಂಚಿದ್ದರು.
ರನ್ನರ್ಸ್ ಟ್ರೋಫಿ ಹಾಗೂ ಒಂದು ಲಕ್ಷ ನಗದು ಬಹುಮಾನವನ್ನು ಪಡೆದುಕೊಂಡ ಗೌತಮ್ ಶೆಟ್ಟಿ ಮಾಲಕತ್ವದ ಟೊರ್ಪೆಡೋಸ್ ಟೈಟನ್ಸ್ ತಂಡದಲ್ಲಿ ಶಮಂತ್ ರಾವ್,ಅನಿರುಧ್ ಭಟ್,ಮಹೇಶ್ ಎಂ, ಆದರ್ಶ್ ಸಂಜೀವ್.ಪಿ,ಧಿರೇಶ್,ಪುನೀತ್,ರೇಣುಕಾ ಪ್ರಸಾದ್,ಅನಂತ್ ರಾಮದಾಸ್ ಪೈ,ಅರುಣ್,ಅಶೋಕ್ ಕುಮಾರ್,ರವಿ ಕುಮಾರ್,ಜೀವನ್,ಶ್ರೇಯಸ್.ವಿ, ಪ್ರಚಿತಾ.ಪಿ,ಆತ್ರೀಯಾ.ಎಸ್.ಪ್ರಭು,ರಶ್ಮಿ ಶೆಟ್,ನಾಗಮಣಿ.ಎಂ.ಜಿ ಸೆಣಸಾಡಿದ್ದರು.
ಫೈನಲ್ ಸುತ್ತಿಗೆ ಪ್ರವೇಶಿಸಲಾಗದಿದ್ದರೂ ತಮ್ಮ ಅತ್ಯುತ್ತಮ ಕ್ರೀಡಾ ಪ್ರದರ್ಶನವನ್ನಿತ್ತು ದೇವೇಂದ್ರ ಶೆಟ್ಟಿ ನಾಯಕತ್ವದ  ಮಂಗಳೂರು ಸ್ಟೋಕರ್ಸ್ ತಂಡದ ಆಟಗಾರರಾದ ಸಚಿನ್ ಜೈಸನ್,ಆರುಷ್ ಪತ್ರಾವೋ,ವರುಣ್ ಗೌಡ,ವಿಶಾಲ್ ನಾಯ್ಕ್,ರಿಯಾಝ್ ಅಹ್ಮದ್,ಅಶ್ರಫ್,ತಸ್ಲೀಮ್,ರವೀಶ್ ಕುಮಾರ್,ದಿನೇಶ್ ಆಚಾರ್ಯ,ಪ್ರವೀಣ್ ಕುಮಾರ್.ಎಂ,ರಫೀಕ್, ಸಹರ್ಷ್.ಎಸ್ ಪ್ರಭು,ಮಹನ್,ನಿಧಿಶ್ರೀ,ಧನಲಕ್ಷ್ಮೀ,ಕವಿತಾ ಕಂಬರ್,ವಿಜೇತ.ಕೆ ಹಾಗೂ ಗಣೇಶ್ ಕಾಮತ್ ನಾಯಕತ್ವದ ಸ್ಪೋರ್ಟ್ಸ್ ಡೆನ್ ಸ್ಮ್ಯಶರ್ಸ್  ತಂಡದ ಆಟಗಾರರಾದ ಅಬಿ ಅಮುದಾನ್,ನೌಶಾದ್ ಅಬ್ದುಲ್ಲ, ಸಾಯಿಕುಮಾರ್,ಒಮರ್,ರಯೀಝ್,ರೋಹಿತ್ ಎಂ.ಕೆ,ಮಹೇಶ್ ಪ್ರಭು,ಪ್ರದೀಪ್ ಭಟ್,ಕುಮಾರ್ ದೇವಾಡಿಗ, ಅಯುಬ್ ಸಿ.ಕೆ,ಹರೀಶ್.ಬಿ.ಎ,ತುಷಾರ್, ತನ್ಮಯ್ ಪ್ರಭು,ಅಂಜಲಿ ದಿಲಿಷ್, ಕಶ್ವಿ,ಅದಿತಿ, ಚಂಚಲಾಕ್ಷಿ ಸೆಮಿ ಫೈನಲ್ ಹಂತದವರೆಗೂ ತಲುಪಿ ತಮ್ಮ ಆತ್ಯದ್ಭುತ ಆಟದಿಂದ ಪ್ರೇಕ್ಷಕರ ಮೆಚ್ಚುಗೆ ಪಡೆದರು.
ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ  ಸವ್ಯಸಾಚಿ ತಂಡದ ಮಾಲಕರಾದ ವಿಜಯ್ ಹೆಗ್ಡೆ,ರೂಪೇಶ್ ಶೆಟ್ಟಿ,ಝರಾ ರಾಯಲ್ಸ್ ತಂಡದ ಹಾಗೂ ಅಲುಮಝೈನ್ ಗ್ರೂಪ್ಸ್ ನ  ಮುಖ್ಯಸ್ಥರಾದ ಜಹೀರ್ ಝಕ್ರೀಯಾ, ಝರಾ ಕನ್ವೆನ್ಷನ್ ಸೆಂಟರ್ ನ ಮುಖ್ಯಸ್ಥರಾದ ಅಬೂಬಕ್ಕರ್,ಜಿ.ಡಿ ಗ್ರೂಪ್ಸ್ ನ ರೋಷನ್,ಸದಾನಂದ ನಾವಡ,ಈ ಪಂದ್ಯಾವಳಿಯ ಸಂಯೋಜಕರಾದ ಗಣೇಶ್. ವಿ ಕಾಮತ್,ತಾಂತ್ರಿಕ ಮುಖ್ಯಸ್ಥರಾದ ರಿಯಾಝ್ ಅಹಮ್ಮದ್,ಕುಳಾಯಿ ಫೌಂಡೇಶನ್ ನ ಮುಖ್ಯಸ್ಥರಾದ ಪ್ರತಿಭಾ ಕುಳಾಯಿ,ಟೊರ್ಪೆಡೋಸ್  ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಗೌತಮ್ ಶೆಟ್ಟಿ ಉಪಸ್ಥಿತಿ ವಹಿಸಿದ್ದರು.
Categories
ಸ್ಪೋರ್ಟ್ಸ್

ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಶಟ್ಲರ್ಸ್ ಗಳ ನಡುವಿನ ಬ್ಯಾಡ್ಮಿಂಟನ್ ಮಹಾ ಸಂಗ್ರಾಮ

ಕ್ರೀಡಾ ಕ್ಷೇತ್ರದಲ್ಲಿ ಯುವ ಕ್ರೀಡಾಪಟುಗಳಿಗೆ ಉತ್ತೇಜನವನ್ನು ನೀಡುತ್ತಾ ಹಲವಾರು ಕ್ರೀಡಾ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸುತ್ತಾ ಹೊಸ ಮೈಲಿಗಲ್ಲನ್ನು ಸೃಷ್ಟಿಸುತ್ತಿರುವ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಇದೀಗ ಅಧ್ಯಕ್ಷರಾಗಿರುವ ಗೌತಮ್ ಶೆಟ್ಟಿ ಸಾರಥ್ಯದಲ್ಲಿ ನಡೆಯಲಿರುವ ಬ್ಯಾಡ್ಮಿಂಟನ್ ಪಂದ್ಯಾಟವನ್ನು 2021 ನೇ ನವೆಂಬರ್ 13 ಹಾಗೂ 14 ರಂದು ಮಂಗಳೂರಿನ ಯು.ಎಸ್.ಮಲ್ಯ ಒಳಾಂಗಣ ಸ್ಟೇಡಿಯಂನಲ್ಲಿ ಆಯೋಜಿಸಿದೆ.
     ಈ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ವಿಜೇತರಿಗೆ 2 ಲಕ್ಷ ನಗದು ಬಹುಮಾನ ಹಾಗೂ ದ್ವಿತೀಯ ಸ್ಥಾನ ವಿಜೇತರಿಗೆ ಒಂದು ಲಕ್ಷ ನಗದು ಬಹುಮಾನ ದೊರೆಯಲಿದೆ.

ಸ್ಪರ್ಧೆಯ ನಿಯಮಗಳು:-

  • ✓. ಲೀಗ್ ಕಮ್ ನಾಕೌಟ್
  • ✓. ಪಂದ್ಯಾಟಕ್ಕೆ ಜೆರ್ಸಿಯನ್ನು ನೀಡಲಾಗುತ್ತದೆ.
  • ✓. ಆಹಾರ ಹಾಗೂ ವಸತಿ ವ್ಯವಸ್ಥೆಯಿದೆ.
  • ✓. ಪ್ರತಿ ಹಂತದಲ್ಲೂ ನಗದು ಬಹುಮಾನವಿದೆ.
  • ✓. ಪ್ರತಿ ಪಂದ್ಯಾಟದ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು.

ಈ ಬ್ಯಾಡ್ಮಿಂಟನ್ ಸ್ಪರ್ಧೆ ಬೇರೆ ಬೇರೆ ವಿಭಾಗಗಳಲ್ಲಿ ನಡೆಯಲಿದ್ದು 11 ರಿಂದ 19 ವರ್ಷ ವಯೋಮಿತಿಯ ಬಾಲಕರು, 19ರಿಂದ 30 ವರ್ಷದವರ ಪುರುಷರು, 30ರಿಂದ 40 ವರ್ಷ ವಯೋಮಿತಿಯ ಪುರುಷರು ,ನಲವತ್ತರಿಂದ ಐವತ್ತು ವರ್ಷ ವಯೋಮಿತಿಯ ಪುರುಷರು ,50 ವರ್ಷ ಮೇಲ್ಪಟ್ಟ ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ಮಿಶ್ರ ಡಬಲ್ಸ್ ಹಾಗೂ 85 ವರ್ಷ ಮೇಲ್ಪಟ್ಟ ಜಂಬಲ್ಡ್ ಡಬಲ್ಸ್ ಹೇಗೆ ಒಟ್ಟು 9 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
        ಸ್ಪರ್ಧೆಯಲ್ಲಿ ಭಾಗವಹಿಸಲು ಒಟ್ಟು 12 ತಂಡಗಳಿದ್ದು ಪ್ರತಿ ತಂಡದಲ್ಲಿ 18 ಜನ ಆಟಗಾರರಿದ್ದು ಅದರಲ್ಲಿ ನಾಲ್ಕು ಮಹಿಳಾ ಆಟಗಾರರಿರುತ್ತಾರೆ‌. ರಾಜ್ಯ,ರಾಷ್ಟ್ರ ಮಟ್ಟದ ಆಟಗಾರರು ಸೇರಿದಂತೆ ಒಟ್ಟು 250 ಕ್ಕಿಂತಲೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುತ್ತಿರುವುದು ಸ್ಪರ್ಧೆಗೆ ಇನ್ನಷ್ಟು ಮೆರುಗು ತಂದುಕೊಡಲಿದೆ.
 ಭಾಗವಹಿಸುವ ತಂಡಗಳು ಹಾಗೂ ತಂಡದ ಮಾಲೀಕರ ಹೆಸರು:-

1)ದೀಪಕ್ ಪುಟ್ಟರಾಜ್-ಫೆದರ್ ಫೈಟರ್ಸ್

2)ಸದಾನಂದ ನಾವಡ-ಗ್ಯಾಲಕ್ಸಿ ಸರ್ವರ್ಸ್

3)ಸಂದೀಪ್ ಶೆಟ್ಟಿ-ಸುರತ್ಕಲ್ ವಾರಿಯರ್ಸ್

4)ಅನುರಂಜನ್ ರಾವ್-ಕೋಸ್ಟಲ್ ಪವರ್ ಷಟ್ಲರ್ಸ್

5)ಜಹೀರ್ ಝಕ್ರಿಯ-ಝಾರಾ ರಾಯಲ್ಸ್

6)ವಿಜಯ್ ಹೆಗ್ಡೆ-ಸವ್ಯಸಾಚಿ ಅಟ್ಯಾಕರ್ಸ್

7)ಗಣೇಶ್ ಕಾಮತ್-ಸ್ಪೋರ್ಟ್ಸ್ ಡೆನ್ ಸ್ಮ್ಯಾಶರ್ಸ್

8)ಝಕ್ರಿಯ ಬಜ್ಪೆ-ಝಾರಾ ಚಾಲೆಂಜರ್ಸ್

9)ಪ್ರತಿಭಾ ಕುಳಾಯಿ-ಕುಳಾಯಿ ಸ್ಮ್ಯಾಶರ್ಸ್

10)ಡಾ.ಸಂದೀಪ್-ಕುಂದಾಪುರ ಫೂಟ್ ವರ್ಕರ್ಸ್

11)ದೇವೇಂದ್ರ ಶೆಟ್ಟಿ-ಮಂಗಳೂರು ಸ್ಟ್ರೋಕರ್ಸ್

12)ಗೌತಮ್ ಶೆಟ್ಟಿ-ಟೊರ್ಪೆಡೋಸ್ ಟೈಟನ್ಸ್

  •ರಾಜ್ಯದ ರಾಂಕ್ ಪಟ್ಟಿಯಲ್ಲಿರುವ ದೀಪಕ್ ವೆಟರನ್ಸ್, ಎಸ್ ಕೆ ಬಿ ನಾಯ್ಡುರವರು ಸದಾನಂದ ನಾವಡ ಮಾಲೀಕತ್ವದ ಗ್ಯಾಲಕ್ಸಿ ಸರ್ವರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
•ದರ್ಶನ್. ಎಸ್, ದೀಪಕ್ ಪುಟ್ಟರಾಜ್ ಹಾಗೂ ಶಾಲಿನಿ ಶೆಟ್ಟಿಯವರು ದೀಪಕ್ ಪುಟ್ಟರಾಜ್ ಮಾಲಕತ್ವದ ಫೆದರ್ ಫೈಟರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
•ಕೇರಳದ ರಾಜ್ಯಮಟ್ಟದ ಆಟಗಾರರಾಗಿರುವ ರಾಯಿ ಪಿ.ಜೆಯವರು ಡಾ.ಸಂದೀಪ್ ನಾಯಕತ್ವದ ಫೂಟ್ ವರ್ಕರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
• ರಾಜ್ಯದ ರ್ಯಾಂಕ್ ಪಟ್ಟಿಯಲ್ಲಿರುವ ಸಂಕೇತ್.ಎಸ್ ಹಾಗೂ ವಿಘ್ನೇಶ್ ಭಟ್ ರವರು ಸಂದೀಪ್ ಶೆಟ್ಟಿ ಮಾಲಕತ್ವದ ಸುರತ್ಕಲ್ ವಾರಿಯರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
•ರಾಜ್ಯ ಮಟ್ಟದಲ್ಲಿ ವಿಜೇತರಾಗಿರುವ ಕಿರಣ್ ಕುಮಾರ್ ರವರು ಜಹೀರ್ ಝಕ್ರೀಯಾ ಮಾಲಕತ್ವದ ಝರಾ ರಾಯಲ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
•ರಾಜ್ಯ ಮಟ್ಟದಲ್ಲಿ ವಿಜೇತರಾಗಿರುವ ಶಮಂತ್ ರಾವ್,ಆತ್ರೀಯಾ.ಎಸ್ ಪ್ರಭು.ಎನ್.ರೇಣುಕಾ ಪ್ರಸಾದ್ ರವರು ಟೋರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾಗಿರುವ ಗೌತಮ್ ಶೆಟ್ಟಿ ಮಾಲಕತ್ವದ ಟೋರ್ಪೆಡೋಸ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
• ರಾಜ್ಯ ಮಟ್ಟದಲ್ಲಿ ವಿಜೇತರಾಗಿರುವ  ಉಮೇಶ್ ರಾಜ್ ಹಾಗೂ ಪರಿಮಳ್ ಪ್ರತಿಭಾ ಕುಳಾಯಿ ಮಾಲಕತ್ವದ ಕುಳಾಯಿ ಸ್ಮ್ಯಾಶರ್ಸ್ ತಂಡವನ್ನು ಪ್ರತನಿಧಿಸಲಿದ್ದಾರೆ.
•ರಾಜ್ಯ ಮಟ್ಟದ ಆಟಗಾರರಾಗಿರುವ ಅಭಿಷೇಕ್ ಗೌಡ ಮತ್ತು ಚಿರಾಗ್ ಗೌಡರವರು ವಿಜಯ್ ಹೆಗ್ಡೆ ಮಾಲಕತ್ವದ ಸವ್ಯಸಾಚಿ ಅಟ್ಯಾಕರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
•ರಾಜ್ಯ ರ್ಯಾಂಕಿಂಗ್ ಪಟ್ಟಿಯಲ್ಲಿರುವ ವಿನಯ್.ಡಿ.ಆರ್ ,ಸಂಕೇತ್ ವೈದ್ಯ ಮತ್ತು ಸಂಜಯ್ ಆರ್.ಎಂ ರವರು ಝಕ್ರೀಯಾ ಬಜ್ಪೆ ಮಾಲಕತ್ವದ ಝರಾ ಚಾಲೆಂಜರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
•ರಾಜ್ಯ ಮಟ್ಟದಲ್ಲಿ ವಿಜೇತರಾಗಿರುವ ಸಚಿನ್ ಜೈಸನ್,ರಿಯಾಝ್ ಕೊಪ್ಪರವರು ದೇವೇಂದ್ರ ಶೆಟ್ಟಿ ಮಾಲಕತ್ವದ ಮಂಗಳೂರು ಸ್ಟ್ರೋಕರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
•ಮಿಕ್ಸ್ ಡ್ ಡಬಲ್ಸ್ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ವಿಜೇತರಾಗಿರುವ ಅಬಿ ಅಮುಧಾನ್ ಹಾಗೂ ಅಂಜಲಿ ದಿಲಿಶ್ ಹಾಗೂ ಮಂಗಳೂರಿನ ಅತ್ಯುನ್ನತ ಆಟಗಾರರಾಗಿರುವ ರಾಯೀಝ್.ಪಿ.ಸಿ ಮತ್ತು ಮಹೇಶ್ ಪ್ರಭು ರವರು ಗಣೇಶ್ ಕಾಮತ್ ನಾಯಕತ್ವದ ಸ್ಪೋರ್ಟ್ಸ್ ಡೆನ್ ಸ್ಮ್ಯಾಷರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
Categories
ಸ್ಪೋರ್ಟ್ಸ್

ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್ 2021-ಬ್ಯಾಡ್ಮಿಂಟನ್ ಪಂದ್ಯಾಟ

ಕೋವಿಡ್ ಕಾರಣದಿಂದಾಗಿ ಮುಂದೂಲ್ಪಟ್ಟಿದ್ದ ಟೊರ್ಪೆಡೋಸ್ ಕಾರ್ನಿವಲ್ ನ ಕ್ರೀಡಾ ಸ್ಪರ್ಧೆಗಳು ಇದೀಗ ಮತ್ತೆ ಪ್ರಾರಂಭವಾಗಲಿದೆ.
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ  ಗೌತಮ್ ಶೆಟ್ಟಿ ಇವರ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್(ರಿ)ವತಿಯಿಂದ
13-11-2021&14-11-2021ರಂದು
 ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಲಿದೆ.
ಸ್ಪರ್ಧೆಯ ನಿಯಮಗಳು:-
◆ಲೀಗ್ ಕಮ್ ನಾಕೌಟ್.
◆ಪಂದ್ಯಾಟಕ್ಕೆ ಜೆರ್ಸಿಯನ್ನು  ನೀಡಲಾಗುತ್ತದೆ.
◆ಆಹಾರ ಮತ್ತು ವಸತಿ ವ್ಯವಸ್ಥೆಯಿದೆ.
◆ಪ್ರತಿ ಹಂತದಲ್ಲೂ ನಗದು ಬಹುಮಾನವಿದೆ.
◆ಪ್ರತಿ ಪಂದ್ಯಾಟದ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು.
◆ನೋಂದಣಿ ಮಾಡಿಸಲು ಕೊನೆಯ ದಿನಾಂಕ 15-10-2021
◆ಆಟಗಾರರು ವೈಯುಕ್ತಿಕವಾಗಿಯೇ ನೋಂದಣಿ ಮಾಡಿಸಬೇಕು.
ಪ್ರಥಮ ಬಹುಮಾನ:-2 ಲಕ್ಷ ನಗದು
ದ್ವಿತೀಯ ಬಹುಮಾನ:-1 ಲಕ್ಷ ನಗದು
ನೋಂದಣಿ ಮಾಡಿಸಲು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:
8884409014
9845121498
torpedoesshuttlebad@gmail.com
Categories
ಸ್ಪೋರ್ಟ್ಸ್

ಟೊರ್ಪೆಡೋಸ್ ಗೌತಮ್ ಶೆಟ್ಟಿ ಸಾರಥ್ಯದಲ್ಲಿ-ಕ್ರೀಡಾ ಕ್ಷೇತ್ರದಲ್ಲೇ ಕ್ರಾಂತಿಕಾರಿ ಬೆಳವಣಿಗೆ- ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-ನಗದು ಬಹುಮಾನಗಳ‌ ಸುರಿಮಳೆ

80 ರ ದಶಕದಲ್ಲಿ ಸಮಾನ ಮನಸ್ಕ ಹಿರಿಯ ಕ್ರೀಡಾಪಟುಗಳ ಒಗ್ಗೂಡುವಿಕೆಯಿಂದ ಕುಂದಾಪುರದಲ್ಲಿ‌ ಮೊದಲಾಗಿ ಟೆನ್ನಿಸ್ಬಾಲ್ ಕ್ರಿಕೆಟ್ ತಂಡವಾಗಿ ಸ್ಥಾಪನೆಯಾದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಕುಂದಾಪುರ.
ಕರಾವಳಿ ಭಾಗದಲ್ಲಿ ಮೊತ್ತಮೊದಲ ಬಾರಿಗೆ ರಾಜ್ಯಮಟ್ಟದ ಪ್ರಶಸ್ತಿ ಜಯಿಸಿದ ತಂಡ ಟೊರ್ಪೆಡೋಸ್. ಬ್ಲೂ ಸ್ಟಾರ್  ಶಿರ್ವ ತಂಡ ಆಯೋಜಿಸಿದ್ದ ಮೊತ್ತಮೊದಲ ರಾಜ್ಯಮಟ್ಟದ ಪಂದ್ಯಾವಳಿಯ ಫೈನಲ್ ನಲ್ಲಿ ಆ ದಿನಗಳಲ್ಲಿ ಎದುರಾಳಿಗಳ ಪಾಲಿನ ಸಿಂಹಸ್ವಪ್ನ ಪ್ಯಾರಡೈಸ್ ಬನ್ನಂಜೆ ತಂಡದೆದುರು ಹಿರಿಯ ಆಟಗಾರ ರಮೇಶ್ ಶೇರಿಗಾರ್ ಇವರ ಎಸೆತದಲ್ಲಿ ನಾರಾಯಣ ಶೆಟ್ಟಿ ಸಿಕ್ಸರ್ ಸಿಡಿಸಿ ಮೊದಲ ರಾಜ್ಯ ಮಟ್ಟದ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತ್ತು.ಹಿರಿಯ ಆಟಗಾರರು ನೇಪಥ್ಯಕ್ಕೆ ಸರಿದ ಬಳಿ ನಾಯಕನ ಜವಾಬ್ದಾರಿಯನ್ನು ಹೊತ್ತ ಗೌತಮ್ ಶೆಟ್ಟಿ ಸಾರಥ್ಯದಲ್ಲಿ ಕರ್ನಾಟಕದ ಹಲವಾರು ಜಿಲ್ಲೆಯಾದ್ಯಂತ ಟೊರ್ಪೆಡೋಸ್ ತಂಡವನ್ನು ಕೊಂಡೊಯ್ದ ಹಲವಾರು ಪ್ರಶಸ್ತಿಗಳನ್ನು ಜಯಿಸಿದ್ದರು.
ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿ
ಕಾಲ ಕ್ರಮೇಣ ಉದ್ಯೋಗ ನಿಮಿತ್ತ ಮಂಗಳೂರಿನಲ್ಲಿ ನೆಲೆನಿಂತ ಗೌತಮ್ ಶೆಟ್ಟಿ,ಹಳೆಯಂಗಡಿಯಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್(ರಿ)ಸಂಸ್ಥೆಯನ್ನು ಸ್ಥಾಪಿಸಿ,ಹಲವಾರು ಕ್ರೀಡಾಕೂಟಗಳನ್ನು‌ ಸಂಘಟಿಸಿ,ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುತ್ತಾರೆ.ಈ ಎಲ್ಲಾ ಸಾಧನೆಗಳಿಗಾಗಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,ಸಮಾಜರತ್ನ ಗೌರವ,ಬಂಟರತ್ನ ಪ್ರಶಸ್ತಿ ಹೀಗೆ ನೂರಾರು ಗೌರವ ಸನ್ಮಾನಗಳು ಗೌತಮ್ ಶೆಟ್ಟಿಯನ್ನು ಅರಸಿಕೊಂಡು ಬಂದಿರುತ್ತದೆ.ಕ್ರೀಡಾಕ್ಷೇತ್ರದಲ್ಲಿ ಹೊಸತನವನ್ನು ತರುವ ನಿಟ್ಟಿನಲ್ಲಿ ಹಲವಾರು ವಿನೂತನ ಪ್ರಯೋಗಗಳ ಬಗ್ಗೆ ಚಿಂತನೆ ನಡೆಸುವ ಗೌತಮ್ ಶೆಟ್ಟಿ ಈ ಬಾರಿ ದಾಖಲೆಯ ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-2021 ಕ್ರೀಡಾ ಹಬ್ಬವನ್ನು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಅದ್ಧೂರಿಯಾಗಿ ಸಂಘಟಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ.
ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-2021 ಕ್ರೀಡಾಕೂಟದಲ್ಲಿ ಟೆನ್ನಿಸ್ಬಾಲ್ ಕ್ರಿಕೆಟ್, ಲೆದರ್ ಬಾಲ್ ಕ್ರಿಕೆಟ್, ಬಾಕ್ಸ್ ಕ್ರಿಕೆಟ್, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್, ಚೆಸ್,ಫುಟ್ಬಾಲ್ ಈ ಎಲ್ಲಾ ಪಂದ್ಯಾಟಗಳು ನಡೆಯಲಿದೆ.
ಟೆನ್ನಿಸ್ಬಾಲ್ ಕ್ರಿಕೆಟ್ ನಲ್ಲಿ ಕ್ರಾಂತಿಕಾರಿ ಬೆಳವಣಿಗೆ ನಾಂದಿ ಹಾಡಲಿರುವ ವಿನೂತನ ಪ್ರಯೋಗ.
ನೊಂದಣಿ ನಿಯಮಗಳು
ಈ ಟೂರ್ನಮೆಂಟ್ ನಲ್ಲಿ ಪ್ರತಿಯೊಬ್ಬ ಆಟಗಾರನಿಗೆ ಹೆಚ್ಚಿನ ಮಹತ್ವನೀಡಲಾಗುತ್ತಿದ್ದು.
ಪ್ರತಿಯೊಬ್ಬ ಆಟಗಾರನೇ 1000 ರೂ ಪಾವತಿಸಿ ಇಲ್ಲಿ ನೊಂದಣಿ ಮಾಡಿಕೊಳ್ಳಬೇಕಿದೆ.ಅರ್ಜಿಯಲ್ಲಿ
ಹೆಸರು,ವಯಸ್ಸು,ಸ್ಥಳ,ಆತ ಪ್ರತಿನಿಧಿಸಿರುವ ತಂಡ ಹಾಗೂ ಈ ವರೆಗೆ ಆಡಿರುವ ಟೂರ್ನಮೆಂಟ್ ಗಳ ವಿವರ,ಒಂದು ವೇಳೆ ಆತ ಬ್ಯಾಟ್ಸ್‌ಮನ್‌ ಆದಲ್ಲಿ ಬಲಗೈ ಅಥವಾ ಎಡಗೈ,ಯಾವ ಕ್ರಮಾಂಕದ ಆಟಗಾರ,ಒಂದು ವೇಳೆ ಬೌಲರ್ ಆದಲ್ಲಿ ವೇಗ ಅಥವಾ ಸ್ಪಿನ್,ಎಡಗೈ ಅಥವಾ ಬಲಗೈ, ಆಫ್ ಸ್ಪಿನ್ ಅಥವಾ ಲೆಗ್ ಸ್ಪಿನ್ ಈ ಎಲ್ಲಾ ವಿವರಗಳನ್ನು ಅರ್ಜಿಯಲ್ಲಿ ನಮೂದಿಸಬೇಕಿದೆ.ಅರ್ಜಿಯಲ್ಲಿ ನಮೂದಿಸಿರುವ ಆಟಗಾರರನ್ನು ಸಂಘಟಕರ ವಿಭಾಗಗಳನ್ನಾಗಿ ಮಾಡಲಾಗುತ್ತಿದೆ.ಈ ಅರ್ಜಿಯಲ್ಲಿ ಟಾಪ್ ಲಿಸ್ಟ್ ನಲ್ಲಿ ಬರುವ ಆಟಗಾರನನ್ನು ತಂಡದ ನಾಯಕನನ್ನಾಗಿ ಮಾಡಲಾಗುತ್ತದೆ.
ಸಂಘಟಕರು ರಚಿಸಿದ ತಂಡವನ್ನು ಕೊಂಡುಕೊಳ್ಳಲು 90 ರ ದಶಕದ ಹಿರಿಯ ತಂಡಗಳಿಗೆ ಮೊದಲ ಆದ್ಯತೆ ಕಲ್ಪಿಸಲಾಗುತ್ತದೆ.
ಒಂದು ತಂಡದಲ್ಲಿ 15 ಆಟಗಾರರು ಭಾಗವಹಿಸಬೇಕಾಗಿದೆ.
ಪಂದ್ಯಾಟದ ನಿಯಮ
ಎಲ್ಲಾ ಪಂದ್ಯಗಳು 10 ಓವರ್ ಗಳಲ್ಲಿ ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ನಡೆಯಲಿದ್ದು 15 ಆಟಗಾರರಲ್ಲಿ 10 ಜನ ಬೌಲಿಂಗ್ ಮಾಡಬೇಕಾಗಿದೆ.
2 ಓವರ್ ಆರಂಭಿಕ‌ ಆಟಗಾರರು ಆಡಬೇಕಾಗಿದ್ದು,ಮಧ್ಯೆ ಔಟ್ ಆದರೂ ಕೂಡ 2 ಓವರ್ ಪೂರ್ಣಗೊಳಿಸಬೇಕಿದೆ.
ಹೀಗೆ 8 ಓವರ್ ಗಳಲ್ಲಿ  ನಡೆಯಲಿದ್ದು,9 ನೇ ಓವರ್ ನಲ್ಲಿ ಒಬ್ಬ ಆಟಗಾರ ಪೆವಿಲಿಯನ್ ಮರಳಿ 11 ನೇ ಆಟಗಾರ ಬ್ಯಾಟಿಂಗ್ ಮಾಡಬೇಕಿದೆ.ಉದಾಹರಣೆಗೆ 10 ಓವರ್ ಗಳಲ್ಲಿ 10 ಬಾರಿ ಔಟ್ ಆಗಿ 100 ರನ್ ಗಳಿಸಿದ್ದರೆ 100ರನ್×10ಔಟ್=10 ರನ್ ಗಳ ಗುರಿ ನೀಡಲಾಗುತ್ತದೆ.ಚೇಸಿಂಗ್ ಮಾಡುವ ತಂಡಕ್ಕೂ ಇದೇ ನಿಯಮಗಳನ್ನು ಪಾಲಿಸಬೇಕಾಗುತ್ತದೆ‌.
ಇಲ್ಲಿ 11 ಜನರೂ ತಮ್ಮ ನಿರ್ವಹಣೆ ನೀಡಲೇಬೇಕಾದ ಅನಿವಾರ್ಯತೆಯ ಕಾರಣ ಪ್ರತಿಯೊಬ್ಬ ಆಟಗಾರರಿಗೂ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶವಿದ್ದು,ಪ್ರತಿಯೊಂದು ರನ್,ಪಡೆಯುವ ಪ್ರತಿ ವಿಕೆಟ್ ಗಳಿಗೆ ನಗದು ಬಹುಮಾನ ಗಳಿಸುವ ಸುವರ್ಣಾವಕಾಶ ಆಟಗಾರರ ಪಾಲಿಗೊದಗಿದೆ.
ಸತತ 2 ತಿಂಗಳುಗಳ ಕಾಲ ದೀರ್ಘ ಅಧ್ಯಯನ ನಡೆಸಿ,ಈ ವಿಶೇಷ ಪ್ಲ್ಯಾನ್ ಖುದ್ದು ಗೌತಮ್ ಶೆಟ್ಟಿಯವರು ಸಿದ್ಧಪಡಿಸಿದ್ದಾರೆ‌.
ಯಾವ ತಂಡದ ಮಾಲೀಕರಿಗೂ ತಂಡ ಕಟ್ಟುವ ಬಗ್ಗೆ ತಲೆನೋವಿನ ವಿಚಾರ ಇಲ್ಲ,ಪ್ರತಿಯೊಬ್ಬ ಆಟಗಾರ ಎರ್ರಾಬಿರ್ರಿ ಹೊಡೆತಗಳಿಗೆ ಮನ ಮಾಡದೇ ಸಿಂಗಲ್ಸ್,ಡಬಲ್ಸ್ ರನ್ ಗಳ ಅಗತ್ಯತೆಯನ್ನು ಅರಿಯಬಲ್ಲ, ಪಂದ್ಯ ಕೂಡ ಕೊನೆಯ ಹಂತದವರೆಗೂ ರೋಚಕವಾಗಿ ಪಂದ್ಯ ಮೂಡಿಬರಲಿದೆ ಎಂಬ ಅಭಿಪ್ರಾಯವನ್ನು ಗೌತಮ್ ಶೆಟ್ಟಿ ಸ್ಪೋರ್ಟ್ಸ್ ಕನ್ನಡ ದೊಂದಿಗೆ ಹಂಚಿಕೊಂಡಿದ್ದಾರೆ.
ಟೊರ್ಪೆಡೋಸ್ ಟ್ರೋಫಿ-2021 ವಿಜೇತ ತಂಡ 5 ಲಕ್ಷ ನಗದು,ದ್ವಿತೀಯ ಸ್ಥಾನಿ 3 ಲಕ್ಷ ನಗದು ಬಹುಮಾನಗಳನ್ನು ಜಯಿಸಲಿದೆ.
ಸಂಪರ್ಕ ಹಾಗೂ ಮಾಹಿತಿ
ಗೌತಮ್ ಶೆಟ್ಟಿ-9845121498,ಕಿಶೋರ್-9886019595 ಸಂಪರ್ಕಿಸಬಹುದು ಹಾಗೂ torpedoescrickettennisball@gmail.com ವೆಬ್ಸೈಟ್ ನಲ್ಲಿ ಹೆಚ್ಚಿನ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಲೆದರ್ ಬಾಲ್ ಕ್ರಿಕೆಟ್
ಲೆದರ್ ಬಾಲ್ ಕ್ರಿಕೆಟ್  ಪಂದ್ಯಾವಳಿ ಮಂಗಳೂರಿನಲ್ಲಿ ನಡೆಯಲಿದ್ದು ಪ್ರಶಸ್ತಿ ವಿಜೇತ ತಂಡ 5 ಲಕ್ಷ ನಗದು,ದ್ವಿತೀಯ ಸ್ಥಾನಿ 3 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೂ ಕೂಡ ವೈಯಕ್ತಿಕ ನೋಂದಣಿಗೆ ಆದ್ಯತೆ ನೀಡಲಾಗಿದ್ದು,ಆಟಗಾರ ಪ್ರತಿ ರನ್ ಹಾಗೂ ಪಡೆಯುವ ಪ್ರತಿ ವಿಕೆಟ್ ಗೂ ನಗದು ಬಹುಮಾನವನ್ನು ಪಡೆಯಲಿದ್ದಾರೆ.
ಸಂಪರ್ಕ ಹಾಗೂ ಮಾಹಿತಿ
ಗೌತಮ್ ಶೆಟ್ಟಿ-9845121498,ಕಿಶೋರ್-9886019595,torpedoescricket@gmail.com
ಬ್ಯಾಡ್ಮಿಂಟನ್
ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಬ್ಯಾಡ್ಮಿಂಟನ್ ಪಂದ್ಯಾಟ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿಯಲ್ಲಿ ನಡೆಯಲಿದ್ದು,ಟೀಮ್ ಚಾಂಪಿಯನ್ಶಿಪ್ ಇದಾಗಿದ್ದು,ಆಟಗಾರ ಪಡೆಯುವ ಪ್ರತಿಯೊಂದು ಅಂಕಕ್ಕೂ ನಗದು ಬಹುಮಾನ ಪಡೆಯಲಿದ್ದಾರೆ.
ಪ್ರಥಮ ಬಹುಮಾನ 2 ಲಕ್ಷ,ದ್ವಿತೀಯ ಬಹುಮಾನ 1 ಲಕ್ಷ ನಗದು ನೀಡಲಾಗುತ್ತಿದೆ.
ಸಂಪರ್ಕ ಹಾಗೂ ಮಾಹಿತಿ
ಗೌತಮ್ ಶೆಟ್ಟಿ-9845121498,torpedoesshuttlebad@gmail.com
ಟೇಬಲ್ ಟೆನ್ನಿಸ್
ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿಯಲ್ಲಿ ನಡೆಯಲಿರುವ ಟೇಬಲ್ ಟೆನ್ನಿಸ್ ಪಂದ್ಯಾಟ ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಸಾಗಲಿದೆ.ಆಟಗಾರ ಪ್ರತಿಯೊಂದು ಅಂಕಕ್ಕೂ ನಗದು ಬಹುಮಾನ ಪಡೆಯಲಿದ್ದಾರೆ.ಪ್ರಥಮ ಪ್ರಶಸ್ತಿ ವಿಜೇತರು 2 ಲಕ್ಷ ನಗದು,ದ್ವಿತೀಯ ಸ್ಥಾನಿ 1 ಲಕ್ಷ ನಗದು ಬಹುಮಾನ ಪಡೆಯಲಿದ್ದಾರೆ.
ಸಂಪರ್ಕ ಹಾಗೂ ಮಾಹಿತಿ
ಗೌತಮ್ ಶೆಟ್ಟಿ-9845121498,
ಅಶ್ವಿನ್ ಕುಮಾರ್-9110846932
torpedoes table tennis I gmail.com
ಟೊರ್ಪೆಡೋಸ್ ಫುಟ್ಬಾಲ್ ಟೂರ್ನಮೆಂಟ್
ಫುಟ್ಬಾಲ್ ಟೂರ್ನಮೆಂಟ್ ಕೋಟೇಶ್ವರದ ಯುವ ಮೆರಿಡಿಯನ್ ನ ಹುಲ್ಲುಹಾಸಿನ ಅಂಗಣದಲ್ಲಿ ನಡೆಯಲಿದ್ದು,ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಸಾಗಲಿದೆ‌.ಆಟಗಾರ ಹೊಡೆಯುವ ಪ್ರತಿಯೊಂದು ಗೋಲ್ ನಗದು ಬಹುಮಾನ‌ ಪಡೆಯಲಿದ್ದಾರೆ.
ಪ್ರಥಮ ಪ್ರಶಸ್ತಿ 2 ಲಕ್ಷ ನಗದು,ದ್ವಿತೀಯ 1 ಲಕ್ಷ ನಗದು ಬಹುಮಾನ ಪಡೆಯಲಿದ್ದಾರೆ.
ಸಂಪರ್ಕ,ಮಾಹಿತಿ
 ಗೌತಮ್ ಶೆಟ್ಟಿ-9845121498,
ಕಾರ್ತಿಕ್-9591596816
torpedoesfootball@gmail.com
ಚೆಸ್
 ಚೆಸ್ ಪಂದ್ಯಾವಳಿ ಬೀಚ್ ರೆಸಾರ್ಟ್ ಕೊರವಡಿಯಲ್ಲಿ ನಡೆಯಲಿದೆ.
2 ಲಕ್ಷ ನಗದು ಬಹುಮಾನ ವಿಜೇತರಿಗೆ ಘೋಷಿಸಲಾಗಿದೆ.
ಸಂಪರ್ಕ ಮಾಹಿತಿ
ಗೌತಮ್ ಶೆಟ್ಟಿ-9845121498,ಬಾಬು ಪೂಜಾರಿ-9448547958,6364336158
ಟೊರ್ಪೆಡೋಸ್ ಲೆಜೆಂಡ್ಸ್ ಕಪ್ ಕ್ರಿಕೆಟ್
ಕರ್ನಾಟಕ ರಾಜ್ಯದ ಹಿರಿಯ ಆಟಗಾರರಿಗಾಗಿ 40 ರ ವಯೋಮಿತಿಯ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ವೈಯಕ್ತಿಕ ನೋಂದಣಿ ಪ್ರಕ್ರಿಯೆ ಮೂಲಕ ತಂಡಗಳನ್ನು ರಚಿಸಲಾಗುತ್ತದೆ.
ವಿಜೇತ ತಂಡ 2 ಲಕ್ಷ ನಗದು,ದ್ವಿತೀಯ ಸ್ಥಾನಿ-1ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಸಂಪರ್ಕ ಮಾಹಿತಿ
ಗೌತಮ್ ಶೆಟ್ಟಿ-9845121498
ಕೋಟ ರಾಮಕೃಷ್ಣ ಆಚಾರ್-6363022576
ಬಾಕ್ಸ್ ಕ್ರಿಕೆಟ್
ಕೋಟೇಶ್ವರದ ಯುವ ಮೆರಿಡಿಯನ್ ಅಂಕಣದಲ್ಲಿ ಬಾಕ್ಸ್ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು,ಆಕರ್ಷಕ ನಗದು ಬಹುಮಾನಗಳನ್ನು ಆಟಗಾರರು ಪಡೆಯಲಿದ್ದಾರೆ‌.ಇಲ್ಲಿಯೂ ಕೂಡ ವೈಯಕ್ತಿಕ ನೋಂದಣಿ ಅತ್ಯಗತ್ಯ.
ಸಂಪರ್ಕ ಮಾಹಿತಿ
ಗೌತಮ್ ಶೆಟ್ಟಿ-9845121498
ಕಿಶೋರ್-9886019595.
ಯಾವುದೇ ಕ್ರೀಡೆಯಾಗಲಿ, ತಂಡದಲ್ಲಿ ಪ್ರತಿಯೊಬ್ಬ ಆಟಗಾರರ ವೈಯಕ್ತಿಕ ಜವಾಬ್ದಾರಿಯ ಮಹತ್ವದ ಅರಿವನ್ನು ಟೊರ್ಪೆಡೋಸ್ ಕಾರ್ನಿವಲ್ ಮೂಡಿಸಲಿದ್ದು,ಆಟಗಾರರಿಗೆ ನಗದು ಬಹುಮಾನಗಳ ಹೊಳೆಯನ್ನೇ ಹರಿಸಲಾಗುತ್ತಿದೆ.
ಹತ್ತು ದಿನಗಳ ಕಾಲ ನಡೆಯುವ ಹೊನಲು ಬೆಳಕಿನ ಈ ಕ್ರೀಡಾಕೂಟದ ನೇರ ಪ್ರಸಾರವನ್ನು ಪ್ರಸ್ತುತ ದಿನಗಳ ಪ್ರಸಿದ್ಧ M9 ಸ್ಪೋರ್ಟ್ಸ್ ಯೂ ಟ್ಯೂಬ್ ಚಾನೆಲ್ ಬಿತ್ತರಿಸಲಿದೆ.