Categories
ಕ್ರಿಕೆಟ್

ಟೀಮ್ ಇಂಡಿಯಾ ತೂಫಾನಿ ಪ್ರದರ್ಶನ ಮುಂದೆ ನೆಲಕಚ್ಚುವುದೇ ಆಸೀಸ್?

ಅಹಮದಾಬಾದ್‌ನ ನರೇಂದ್ರ ಮೋದಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್‌ನಲ್ಲಿ ಭಾರತವು ತಮ್ಮ ಮೂರನೇ ಜಾಗತಿಕ ಕಿರೀಟವನ್ನು ಎತ್ತುವ ಗುರಿಯೊಂದಿಗೆ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಎರಡು ಅತ್ಯುತ್ತಮ ತಂಡಗಳ ನಡುವಿನ ಹಣಾಹಣಿ ಇದಾಗಿದೆ.
ವಿಶ್ವಕಪ್‌ನ ಲೀಗ್ ಹಂತದಲ್ಲಿ ಭಾರತ ಅಜೇಯವಾಗಿ ಉಳಿದುಕೊಂಡಿತು ಮತ್ತು ಸೆಮಿಸ್‌ನಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿತು. ಮತ್ತೊಂದೆಡೆ, ಆಸ್ಟ್ರೇಲಿಯಾ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಲೀಗ್ ಹಂತದಲ್ಲಿ ಸೋತಿತು, ಆದರೆ ನಂತರ ಉಳಿದ ಪಂದ್ಯಗಳಲ್ಲಿ ಗೆದ್ದಿತು.
ಅವರು ಇತ್ತೀಚೆಗೆ ಎರಡನೇ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ 8 ನೇ ವಿಶ್ವಕಪ್ ಫೈನಲ್‌ಗೆ ತಮ್ಮ ಹಾದಿಯನ್ನು ಪಡೆದರು.ODI ಮಾದರಿಯಲ್ಲಿ ತಮ್ಮ ಪ್ರಾಬಲ್ಯವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಅವರು ಆರನೇ ವಿಶ್ವಕಪ್ ಪ್ರಶಸ್ತಿಯನ್ನು ಗುರಿಯಾಗಿಸಿಕೊಂಡಿದ್ದಾರೆ.
ಸ್ಪರ್ಧೆಯು ಅದರ ಮುಕ್ತಾಯವನ್ನು ಸಮೀಪಿಸುತ್ತಿದ್ದಂತೆ, ಕುತೂಹಲ ಹೆಚ್ಚು ತೀವ್ರಗೊಳ್ಳುತ್ತಿದೆ ಮತ್ತು ಅಭಿಮಾನಿಗಳ ಒಂದು ಪ್ರಶ್ನೆಯೆಂದರೆ ಫೈನಲ್‌ನಲ್ಲಿ  ಏನಾಗುತ್ತದೆ?
2003ರ ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಆಸ್ಟ್ರೇಲಿಯಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತಾ ಭಾರತ?
 ✍🏼ಸುರೇಶ್ ಭಟ್, ಮೂಲ್ಕಿ
ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಅಂಕಣಕಾರ
Categories
ಕ್ರಿಕೆಟ್

ದಾಖಲೆ ಸರದಾರ ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್..

ಬುಧವಾರ ದೇವರ ನಾಡಿನ ತಿರುವನಂತಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಮತ್ತೆ ಆಬ್ಬರಿಸಿದೆ ಬೌಲಿಂಗ್ ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ತಮ್ಮ ಶ್ರೇಷ್ಠ ಮಟ್ಟದ ಆಟ ಪ್ರದರ್ಶಿಸಿದ ಭಾರತೀಯ ಆಟಗಾರರು ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವನ್ನು ಮೊದಲ ಟಿ20 ಪಂದ್ಯದಲ್ಲಿ ಸದೆಬಡಿದು ಗೆಲುವಿನ ನಗೆ ಬಿರಿದ್ದಾರೆ.
ಮತ್ತೆ ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ಭಾರತ ತಂಡದ ಓಪನರ್ ಕೆ ಎಲ್ ರಾಹುಲ್ ಮತ್ತೆ ತನ್ನ ಮನಮೋಹಕ ಆಟವನ್ನು ಪ್ರದರ್ಶಿಸಿ ಅಜೇಯ ಅರ್ಧ ಶತಕವನ್ನು ಸಿಡಿಸಿದರೆ ತಂಡದ ಮತ್ತೊಬ್ಬ ನಂಬಿಕಸ್ಥ ಬಿರುಸಿನ ಆಟಗಾರ  ಸೂರ್ಯ ಕುಮಾರ್ ಯಾದವ್ ಅಬ್ಬರದ ಪ್ರದರ್ಶನ ತೋರಿ  ಅಜೇಯ ಅರ್ಧಶತಕ ಬಾರಿಸಿದ್ದಾರೆ, ಈ ಮೂಲಕ ಅಂತಾರಾಷ್ಟ್ರೀಯ ಟಿ20ಗಳ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ ಸೂರ್ಯಕುಮಾರ್ ಯಾದವ್.
ದೇವರನಾಡಿನ ಅಂಗಳದಲ್ಲಿ ಭಾರತೀಯ ತಂಡ  ಹೊಸ ದಾಖಲೆ ನಿರ್ಮಿಸಿದೆ ಕೆವಲ 15 ಬಾಲ್ ಗಳಲ್ಲಿ ಹರಿಣಿಗಳ 5 ವಿಕೆಟ್ ಬಿಳಿಸುವುದರೊಂದಿಗೆ ಬ್ಯಾಟಿಂಗ್ ಬಲವನ್ನೆ ಅಡಗಿಸಿದ ಭಾರತದ ಆಟಗಾರರು ಕೆವಲ 106 ರನ್ ಗೆ ಆಫ್ರಿಕಾ ತಂಡದ ಮೊತ್ತಕ್ಕೆ ಬ್ರೇಕ್ ಹಾಕಿದರು.
ಭಾರತ ತಂಡ ತನ್ನ ಬ್ಯಾಟಿಂಗ್ ಆರಂಭಿಸಿ ಬೇಗನೆ ನಾಯಕ ರೋಹಿತ್ ಮತ್ತು ಕೊಯ್ಲಿ ವಿಕೆಟ್ ಕಳೆದು ಕೊಂಡು ಸಂಕಷ್ಟದಲ್ಲಿತ್ತು ಕೊಯ್ಲಿ ಔಟಾದ ಬೆನ್ನಿಗೆ ಅಂಗಳಕ್ಕೆ ಇಳಿದ ಸೂರ್ಯಕುಮಾರ್ ಆಫ್ರಿಕದ ಬೌಲರ್ ಗಳ ಬೆವರಿಳಿಸಿದರು ಇವರ ಜೋತೆಗೆ ಕ್ರಿಸ್ ನಲ್ಲಿದ್ದ ರಾಹುಲ್ ಕೂಡ ಬಿರುಸಿನ ಆಟಕ್ಕೆ ಇಳಿದು ಪಂದ್ಯದ ಗತಿಯನ್ನೆ ಬದಲಿಸಿ ಭಾರತ ತಂಡ ನಿರಾಯಸವಾಗಿ ಗೆಲುವಿನ ಗೆರೆ ದಾಟುವಂತೆ ಮಾಡಿದರೂ ಜೋತೆಗೆ  ಕೊನೆಯ ಕ್ಷಣದಲ್ಲಿ  ಇಬ್ಬರೂ ಲೆಕ್ಕಾಚಾರದ ಆಟವಾಡಿ ಅರ್ಧಶತಕ ದಾಲಿಸಿದ್ದು ವಿಷೇಶವಾಗಿತ್ತು.
ಸೂರ್ಯಕುಮಾರ್ ಯಾದವ್ 2022 ರಲ್ಲಿ T20 ಪಂದ್ಯಗಳಲ್ಲಿ ತಮ್ಮ ಅದ್ಭುತ ಓಟವನ್ನು ಮುಂದುವರೆಸಿದ್ದಾರೆ 700 ಕ್ಕೂ ಹೆಚ್ಚು ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. 2022 ರಲ್ಲಿ T20 ಪಂದ್ಯಗಳಲ್ಲಿ ಅವರ ರನ್ ಗಳಿಕೆಯು ಭಾರತೀಯ ಬ್ಯಾಟರ್‌ ಒಬ್ಬನ ದಾಖಲೆಯಾಗಿದೆ. ಜೊತೆಗೆ ಸೂರ್ಯಕುಮಾರ್ 2018 ರಲ್ಲಿ ಶಿಖರ್ ಧವನ್ 689 ರನ್‌ಗಳ ಮೂಲಕ ನಿರ್ಮಿಸಿದ್ದ ದಾಖಲೆಯನ್ನು ಮೀರಿಸಿದ್ದಾರೆ.
ಯಾದವ್ 180 ಸ್ಟ್ರೈಕ್ ರೇಟ್‌ನಲ್ಲಿ ಮತ್ತು 40 ಕ್ಕಿಂತ ಹೆಚ್ಚು ಸರಾಸರಿಯಲ್ಲಿ ಈ ರನ್ ಕಲೆಹಾಕಿದ್ದಾರೆ ಎಂಬುದು ಅವರ ದಾಖಲೆಯನ್ನು ಇನ್ನಷ್ಟು ಮುತ್ತಮಗೊಳಿಸಿತ್ತಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ T20 ಪಂದ್ಯದಲ್ಲಿ ಭಾರತವು ಏಳನೇ ಓವರ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 17 ರನ್ ಗಳಿಸಿ ಸಂಕಷ್ಟದಲ್ಲಿತ್ತು ಈ ಸಮಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ  ಕ್ರೀಸ್ ಗೆ ಬಂದ ಸೂರ್ಯಕುಮಾರ್ ಯಾದವ್ ತನ್ನ ಮೊದಲ ಮೂರು ಎಸೆತಗಳಲ್ಲಿ ಎರಡು ಸಿಕ್ಸರ್‌ಗಳನ್ನು ಹೊಡೆದು ತಂಡಕ್ಕೆ  ಬಲ ತುಂಬಿದರು. 33 ಎಸೆತಗಳಲ್ಲಿ 50 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತ ಇನ್ನೂ ಮೂರು ಓವರ್‌ಗಳು ಬಾಕಿ ಇರುವಂತೆಯೇ ಗುರಿಯನ್ನು ಮುಟ್ಟಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.
ಇನ್ನಿಂಗ್ಸ್‌ನ ಆರಂಭದಲ್ಲಿ ಎರಡು ಸಿಕ್ಸರ್‌ ಬಾರಿಸಿದ ಯಾದವ್ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್‌ರವರ ದಾಖಲೆಯನ್ನೂ ಮುರಿದಿದ್ದಾರೆ. T20 ಪಂದ್ಯಗಳಲ್ಲಿ  ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ದಾಖಲಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ರಿಜ್ವಾನ್ 2021 ರಲ್ಲಿ 42 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ದಾಖಲೆಯನ್ನು  ಮಾಡಿದ್ದರು.
ಇದೀಗ ಸೂರ್ಯ ಕುಮಾರ್ 45 ಸಿಕ್ಸರ್ ಗಳನ್ನು ಬಾರಿಸಿದ್ದು, ಇದು ಎಲ್ಲಾ T20 ಪಂದ್ಯಗಳಲ್ಲಿಯು ದಾಖಲೆಯಾಗಿದೆ. ರಿಜ್ವಾನ್ 42 ಸಿಕ್ಸರ್‌ಗಳನ್ನು ಸಿಡಿಸಲು 26 ಇನ್ನಿಂಗ್ಸ್ ತೆಗೆದುಕೊಂಡರೆ, ಸೂರ್ಯಕುಮಾರ್ ಅದರ ಐದು ಪಟ್ಟು ಕಡಿಮೆ ಬ್ಯಾಟಿಂಗ್ ಮೂಲಕ ಈ ದಾಖಲೆಯನ್ನು ಮುರಿದಿದ್ದಾರೆ.
 *ಮೊದಲ ಪಂದ್ಯದಲ್ಲೇ ಭಾರತೀಯರಿಗೆ ಐತಿಹಾಸಿಕ ಗೆಲುವು*
 ದ.ಆಫ್ರಿಕಾವನ್ನು 106 ರನ್ ಗಳಿಗೆ ಕಟ್ಟಿಹಾಕಿದ ಭಾರತ ತಂಡ ರಾಹುಲ್ ಮತ್ತು ಯಾದವ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಎಂಟು ವಿಕೆಟ್ ಗಳ ಗೆಲುವು ಸಾಧಿಸಿದರೆ ದಕ್ಷಿಣ ಆಫ್ರಿಕಾ ಮೊದಲ ಟಿ20 ಹೀನಾಯ ಸೋಲು ಅನುಭವಿಸಿದೆ.
ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಬಳಿಕ ಯಾದವ್ 801 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಇತ್ತೀಚಿನ MRF ಟೈರ್ಸ್ ICC ಪುರುಷರ T20 ಪಂದ್ಯಗಳ ಆಟಗಾರರ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ ಸೂರ್ಯಕುಮಾರ್ ಯಾದವ್…
Categories
ಕ್ರಿಕೆಟ್

ಟೀಮ್ ಇಂಡಿಯಾದ ಮತ್ತೊಬ್ಬ ದ್ರಾವಿಡ್ ಆಗಲಿದ್ದಾರ “ಪೂಜಾರ”

ಕರ್ನಾಟಕದ ಹೆಮ್ಮೆಯ, ವಿಶ್ವ ಕ್ರಿಕೆಟ್ ನ ಅಗ್ರಮಾನ್ಯ  ಆಟಗಾರನೆಂದೆ ಖ್ಯಾತಿ ಪಡೆದಿರುವ, ಅದರಲ್ಲೂ ಟೆಸ್ಟ್ ಕ್ರಿಕೆಟ್ ನಲ್ಲಿ ತಾಳ್ಮೆಯ ಮತ್ತು ಸಮಯೋಜಿತ ಏಕಾಗ್ರತೆಯ ಆಟದಿಂದ *”ವಾಲ್”* ಎಂದೆ ಕರೆಸಿಕೊಳ್ಳುವ ಟೀಮ್ ಇಂಡಿಯಾದ ಮಾಜಿ ಆಟಗಾರ ವಿಶ್ವದ ಅಗ್ರಮಾನ್ಯ ಆಟಗಾರರ ಸಾಲಿನಲ್ಲಿ ಸೇರಿರುವ ಕರ್ನಾಟಕದ ಹೆಮ್ಮೆಯ ಪುತ್ರ ನಮ್ಮೆಲ್ಲರ ಪ್ರೀತಿಯ ಹಿರಿಯ ಆಟಗಾರ *ರಾಹುಲ್ ದ್ರಾವಿಡ್* ಅವರ ನೆನಪು ಮತ್ತೆ ಮರುಕಳಿಸುವಂತಾಗಿದೆ
ಹಾಲಿ ಟೀಮ್​​ ಇಂಡಿಯಾದ ಟೆಸ್ಟ್​​ಕ್ರಿಕೆಟ್ ನ ಆರಂಭಿಕ ಆಟಗಾರ ಚೇತೇಶ್ವರ್​​​ ಪೂಜಾರ ಟೆಸ್ಟ್ ಪಂದ್ಯದ ಬೆಸ್ಟ್​​​ ಆಟಗಾರ ಟೀಮ್ ಇಂಡಿಯಾದ ಮತ್ತೊಬ್ಬ ದ್ರಾವಿಡ್ ಎಂದು ವಿಶ್ವದ ಹಿರಿಯ ಅಗ್ರಮಾನ್ಯ ಆಟಗಾರರೆ ಹೇಳುವಂತೆ ಚೇತೇಶ್ವರ್ ಪೂಜಾರ ತಮ್ಮ ತಾಳ್ಮೆ ಏಕಾಗ್ರತೆಯ ಆಟದಿಂದ ಟೆಸ್ಟ್ ಪಂದ್ಯಗಳ ಸ್ಫೆಷಲೀಸ್ಟ್ ಎನ್ನುವ ಮಟ್ಟಕ್ಕೆ ಪಂದ್ಯದಿಂದ ಪಂದ್ಯಕ್ಕೆ ಬೆಳೆಯುತ್ತಿದ್ದಾರೆ  ಇದನ್ನು  ಇನ್ನಿಂಗ್ಸ್​ನಿಂದ ಇನ್ನಿಂಗ್ಸ್​ಗೆ ​​ಸೌರಾಷ್ಟ್ರ ಬ್ಯಾಟ್ಸ್​ಮನ್​​ ಸಮಯೋಜಿತ ಆಟದಿಂದ ನಿರೂಪಿಸುತ್ತಲೇ ಇದ್ದಾರೆ.
‘ಆಸ್ಟ್ರೇಲಿಯಾ ಬೌಲರ್ ಗಳ  ಕೈಯಲ್ಲಿ ಈತನನ್ನು ಔಟ್​​ ಮಾಡೋದೇ ಕಷ್ಟವಾಗಿ ಹೋಗಿತ್ತು ಪೂಜಾರಾರ ತಾಳ್ಮೆ ಮನಮೋಹಕ ಆಟವನ್ನು ನೋಡಿ ಈತ ಇನ್ನೋಬ್ಬ ವಿಶ್ವ ಕ್ರಿಕೆಟ್ ನ *ರಾಹುಲ್​​ ದ್ರಾವಿಡ್​* ಎಂದು  ಹಿರಿಯ ದಿಗ್ಗಜ ಕ್ರಿಕೆಟಿಗರು ಹೇಳಿದ್ದಾರೆ
. ಆಸಿಸ್​ ಮಾಜಿ ನಾಯಕ ಮೈಕಲ್ ಕ್ಲಾರ್ಕ್
‘ಪೂಜಿ, ನೀವೋಬ್ಬ ಯುದ್ಧವೀರನಾಗಿ ಎಂದಿಗೂ ಉಳಿಯಲಿದ್ದೀರಿ‘ ಎಂದು ಹೇಳಿದರೆ.
 ಟೀಮ್ ಇಂಡಿಯಾದ ಹಿರಿಯ ಆಟಗಾರ,
ಹಾಲಿ ಟೀಮ್​ ಇಂಡಿಯಾದ ಹೆಡ್​​ ಕೋಚ್​​ ರವಿ ಶಾಸ್ತ್ರಿ
‘ಪೂಜಾರ ಚಳಿಗಾಲದಂತೆ ನಿಂತುಬಿಟ್ಟರು. 11 ಬಾರಿ ತಲೆ, ಪಕ್ಕೆಲುಬು ಮತ್ತು ಕೈಗಳಿಗೆ ಬಲವಾದ ಪೆಟ್ಟು ಬಿದ್ದರು ಪೂಜಿ  ತಂಡದ ಆಸರೆಯಾಗಿ ಗೊಡೆಯಂತೆ ನಿಂತು ಬಿಟ್ಟರು ಎಂದು ಹೇಳಿದ್ದಾರೆ
 ಅಸ್ಟ್ರೇಲಿಯಾದ ಪ್ರಮುಖ ಪತ್ರಿಕೆಗಳಲ್ಲಿ ಒಂದಾದ *”ಡೈಲಿ ಟೆಲಿಗ್ರಾಫ್ “* ಪೂಜಾರರನ್ನ ಹಾಡಿ ಹೋಗಳಿದೆ
ಹೌದು ಇದಿಷ್ಟೇ ಅಲ್ಲ, ಇಡೀ ವಿಶ್ವದ ದಿಗ್ಗಜ ಕ್ರಿಕೆಟರ್ಸ್​​​, ಏಕ್ಸ್​​ಪರ್ಟ್ಸ್​​​​ ಪೂಜಾರ ಇನ್ನಿಂಗ್ಸ್​ಕಂಡು ನಿಬ್ಬೆರಗಾಗಿದ್ದಾರೆ.
ಈತ ದ್ರಾವಿಡ್ ಹಾದಿಯಲ್ಲೆ ಸಾಗುತಿದ್ದಾರೆ ಈತ ಬ್ರಿಸ್ಬೇನ್​ ಮೈದಾನದಲ್ಲಿ ನ್ಯೂ ವಾಲ್​​ ನಿರ್ಮಿಸಿದ ಇನ್ನಿಂಗ್ಸ್​​ ಹಾಗಿತ್ತು. ಇನಿಂಗ್ಸ್ ನಲ್ಲಿ ಪೂಜಾರಗಳಿಸಿದ್ದು 56 ರನ್​​. ಆದ್ರೆ ಸರಾಸರಿ 140ಕ್ಕಿಂತ ಹೆಚ್ಚು ವೇಗದಲ್ಲಿ ಬೌಲಿಂಗ್​​ ಮಾಡುವ ಅಸಿಸ್​​​ ನ ವೇಗದ ಬೌಲರ್ ಗಳ ಬೆಂಕಿಯ ಉಂಡೆಯಂತಹ  ಎಸೆತಗಳಿಂದ ಪೆಟ್ಟು  ತಿಂದದ್ದು ಬರೋಬ್ಬರಿ 11 ಬಾರಿ.ಪ್ರತಿಬಾರಿ ಹೊಡೆತ ಬಿದ್ದಾಗಲು ಅಂಜದೆ ಆಡಲೆ ಬೇಕೆಂಬ ಕಿಚ್ಚಿನೊಂದಿಗೆ ಸಿಡಿದೆದ್ದ ಪೂಜಾರರ ಕೇವಲ ಇದೊಂದು ಇನ್ನಿಂಗ್ಸ್​ನಿಂದ  ಇಡೀ ವಿಶ್ವ ಇತನನ್ನು ಕೊಂಡಾಡುತ್ತಿಲ್ಲ, ಕಳೆದ 3 ಪ್ರವಾಸದಲ್ಲೂ ಟೆಸ್ಟ್​​ ಪಂದ್ಯದಲ್ಲಿ ಪೂಜಿಯ ಆಟದ ಪ್ರದರ್ಶನ ಶ್ರೇಷ್ಠ ಮಟ್ಟದಾಗಿತ್ತು. ಪ್ರತಿ ಪಂದ್ಯದಲ್ಲೂ ತಾಳ್ಮೆಯ, ಜವಾಬ್ದಾರಿಯುತ ಇನ್ನಿಂಗ್ಸ್​​​ ಕಟ್ಟಲು ವೇಗದ ಬೌಲರ್ ಗಳ ಎಸೆತವನ್ನು ತಾಳ್ಮೆಯಿಂದ ಎದುರಿಸುತ್ತಲೆ ಉತ್ತರ ಕೊಟ್ಟ  ಪೂಜಾರ ಟೆಸ್ಟ್ ಕ್ರಿಕೆಟ್ ನ ಹೆಮ್ಮೆಯ ಆಟಗಾರನಾಗಿ ಬೆಳೆಯುತ್ತಿದ್ದಾರೆ ಉತ್ತಮ ಎಸತಕ್ಕೆ ತನ್ನ
ಬ್ಯಾಟ್ ನಿಂದ ತಾಳ್ಮೆಯ ಉತ್ತರ ಕೊಡುವುದನ್ನು ಕಂಡ ವಿಶ್ವದ ಅಗ್ರಮಾನ್ಯ ಆಟಗಾರರೆ ತಲೆ ದೂಗಿದ್ದಾರೆ ಈತನ ಸಮಯೋಜಿತ ಆಟಕ್ಕೆ ಆಸಿಸ್​​​ ಅಗ್ರಕ್ರಮಾಂಕದ ಬೌಲರ್ ಗಳು ಅಲ್ಲಿಯ ತಣ್ಣನೆಯ ವಾತವರಣದಲ್ಲು ಕೂಡ ಬೇವರಿ ಬೆಂಡಾಗಿ  ಹೋಗಿದ್ದರು
*ಕಳೆದ 3 ಪ್ರವಾಸದಲ್ಲಿ ಪೂಜಾರರ ಆಟ*
ಕಳೆದ *2014-15* ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಸಂದರ್ಭದಲ್ಲ್ಲಿ *4* ಟೆಸ್ಟ್​​ ಪಂದ್ಯಗಳಲ್ಲಿ *472* ಎಸೆತಗಳನ್ನು ಎದುರಿಸಿದ್ದರು ಪೂಜಾರ, *2018-19* ರ ಪ್ರವಾಸದಲ್ಲಿ *1258* ಎಸೆತಗಳನ್ನು ಎದುರಿಸಿದ್ದರು. ಈ ಬಾರಿಯ ಪ್ರವಾಸದಲ್ಲಿ *154.4* ಓವರ್​ಗಳು ಅಂದ್ರೆ ಬರೋಬ್ಬರಿ *928* ಎಸೆತಗಳನ್ನು ಪೂಜಾರ ಎದುರಿಸಿದ್ದಾರೆ. ಕೇವಲ ಬಾಲ್​​ ಎದುರಿಸೋದು ಮಾತ್ರವಲ್ಲ, ಆಸ್ಟ್ರೇಲಿಯಾ ಪ್ರವಾಸದ ಸಕ್ಸಸ್​ಫುಲ್​​ ಬ್ಯಾಟ್ಸ್​​ಮನ್​ ಎಂಬ ಹೆಗ್ಗಳಿಕೆಯೂ ಪೂಜಾರರದ್ದೇ. ಕಳೆದ *3* ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ *2657* ಎಸೆತಗಳನ್ನು ಎದುರಿಸಿರೋ ಪೂಜಾರ *47.28* ರ ಸರಾಸರಿಯಲ್ಲಿ *3* ಶತಕ, *5* ಅರ್ಧಶತಕ ಸಹಿತ *993* ರನ್​ ಸಿಡಿಸಿದ್ದಾರೆ.
*ಪ್ರತಿ ಪಂದ್ಯದಲ್ಲೂ ಅಸೀಸ್ ವೇಗಿಗಳ ಏಸೆತಗಳು ದೇಹದ ಹಲವು ಭಾಗದ ಮೇಲೆ ಬಿದ್ದಾಗಲೇಲ್ಲ ನಗುಮೊಗದಿಂದಲೆ ಸ್ವೀಕರಿಸಿ ತನ್ನ ಬ್ಯಾಟ್ ನಿಂದಲೆ ತಕ್ಕ ಉತ್ತರ ಕೊಟ್ಟ ಶ್ರೇಷ್ಠ ಆಟಗಾರ ಪೂಜಿ
ಹೌದು ಪೂಜಾರ ಎದುರಿಸಿದ *2657* ಎಸೆತಗಳಲ್ಲಿ *47.28* ರ ಸರಾಸರಿಯಲ್ಲಿ ರನ್​​ ಕಲೆ ಹಾಕಿ ತಂಡಕ್ಕೆ ನೆರವಾಗಿದ್ದಾರೆ. ಇದೇ ಸಂದರ್ಭದಲ್ಲಿ ಅಸೀಸ್ ವೇಗಿಗಳ ಬೆಂಕಿ ಉಂಡೆಯಂತಹ ಎಸೆತಗಳ ಪೆಟ್ಟನ್ನೂ ತಿಂದಿದ್ದಾರೆ. ಗಂಟೆಗೆ *145* ಕ್ಕೂ ಹೆಚ್ಚಿನ  ವೇಗದಲ್ಲಿ ಬರುವ ಎಸೆತಗಳಲ್ಲಿ ಕೇಲವು ನೇರವಾಗಿ ಟೆಸ್ಟ್​​​​ ಸ್ಪೆಷಲಿಸ್ಟ್​​ ನ ದೇಹಕ್ಕೆ ಬಡಿದಿವೆ. ಸಿಡ್ನಿ ಟೆಸ್ಟ್​​ನಲ್ಲಿ ಟೀಮ್​​ ಇಂಡಿಯಾ ವಿರೋಚಿತ ಡ್ರಾಗಳಿಸಿದ ಮೇಲೆ ಸೌರವ್​​ ಗಂಗೂಲಿ ಮಾಡಿದ್ದ ಟ್ವೀಟ್​​​ ನಿಮಗೆ ನೆನಪಿರಬಹುದು. ಅಂದು ಟ್ವೀಟ್​​ ಮಾಡಿದ್ದ ಬಿಸಿಸಿಐ ಅಧ್ಯಕ್ಷ ಪೂಜಾರ ಎಷ್ಟು ಪ್ರಮುಖ ಬ್ಯಾಟ್ಸ್​​ಮನ್​ ಅನ್ನೋದು ನಿಮಗೆ ಈಗ ಮನದಟ್ಟಾಗಿರ ಬಹುದು ಎಂದಿದ್ದರು. ಇದೀಗ ಭಾರತ ಅಸೀಸ್ ನೆಲದಲ್ಲಿ ಐತಿಹಾಸಿಕ ದಿಗ್ವಿಜಯ ಸಾಧಿಸಿದೆ, ಇದರಲ್ಲಿ ಸೌರಾಷ್ಟ್ರ ಸೇನಾನಿಯ ಆಟವನ್ನು ಎಲ್ಲರೂ ಕೊಂಡಾಡಿದ್ದಾರೆ
ನಾನು ಟೆಸ್ಟ್​​​ ತಂಡದ ಅವಿಭಾಜ್ಯ ಅಂಗ ಅನ್ನೋದನ್ನು ಸಾಬೀತು ಪಡಿಸುತ್ತಲೆ ಪಂದ್ಯದಿಂದ ಪಂದ್ಯಕ್ಕೆ  ತಮ್ಮ ಸಮಯೋಜಿತ ಆಟದಿಂದ ಪೂಜಾರ ಸಾಬೀತು ಪಡಿಸುತ್ತಲೆ ಬಂದಿದ್ದಾರೆ. ಇತ್ತೀಚಿನ ಆಸ್ಟ್ರೇಲಿಯಾ ಸರಣಿಯಲ್ಲಿನ ಆಟವೆ ಸಾರಿ ಸಾರಿ ಹೇಳುತ್ತಿದೆ ಟೆಸ್ಟ್ ಕ್ರಿಕೆಟ್ ನ ಶ್ರೇಷ್ಠ ಆಟಗಾನೆಂದು,  ತನ್ನ ಟೆಸ್ಟ್ ಕ್ರಿಕೆಟ್ ನ ಪಾದಾರ್ಪಣ ಪಂದ್ಯದಲ್ಲಿ ಆಸಿಸ್​ ವಿರುದ್ಧ ಅದ್ಭುತ ಸೆಂಚುರಿ ಸಿಡಿಸಿದ ಕ್ಷಣದಿಂದ ಇಲ್ಲಿಯ ತನಕ ಹಲವು ಅವಿಸ್ಮರಣೀಯ ಇನ್ನಿಂಗ್ಸ್​ಗಳು ಪೂಜಾರರ ಬ್ಯಾಟ್​ನಿಂದ ಸಿಡಿದಿವೆ. ಈತನ ತಾಳ್ಮೆಯ ಆಟದಿಂದ ವಿಶ್ವ ಕ್ರಿಕೆಟ್ ನಲ್ಲಿ ಶ್ರೇಷ್ಠ ಆಟಗಾರನಾಗಿ ಬೆಳೆದು ನಿಲ್ಲುವುದರಲ್ಲಿ ಯಾವುದೇ ಅನುಮಾನ ವಿಲ್ಲಾ