Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಚಾಲೆಂಜ್ ರಾಷ್ಟ್ರೀಯ ಮಟ್ಟದ ಪಂದ್ಯಾಟದಲ್ಲಿ ಗೌತಮ್ ಶೆಟ್ಟಿಯವರಿಗೆ ಸನ್ಮಾನ

ಕುಂದಾಪುರ-ಇಲ್ಲಿನ ಗಾಂಧಿಮೈದಾನದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಹೊನಲುಬೆಳಕಿನ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಟೊರ್ಪೆಡೋಸ್ ಇವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗೌತಮ್ ಶೆಟ್ಟಿಯವರು “ಕ್ರೀಡಾಪಟುಗಳು ಸೋಲು,ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು,ಚಾಲೆಂಜ್ ಕ್ರಿಕೆಟ್ ಕ್ಲಬ್ ಹಲವಾರು ವರ್ಷಗಳಿಂದ ಕ್ರೀಡೆ ಮಾತ್ರವಲ್ಲದೇ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಾದರಿ ಸಂಸ್ಥೆಯಾಗಿದೆ” ಎಂದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ರಾಜ್ಯ ಬಿ.ಜೆ.ಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಯಶಪಾಲ್ ಸುವರ್ಣ,ನ್ಯೂ ಮೆಡಿಕಲ್ ಸೆಂಟರ್ ಡಾ.ರಂಜನ್, ಜಪ್ತಿ ಪ್ರಥಮ್ ಇನ್ ರೆಸಾರ್ಟ್ ಮರತ್ತೂರು ಸುರೇಶ್ ಶೆಟ್ಟಿ,ಸಿವಿಲ್ ಕಂಟ್ರಾಕ್ಟರ್ ಸಚಿತ್ ಪೈ,ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೃಷ್ಣೇ ಗೌಡ್ರು,ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ) ಸಂಸ್ಥಾಪಕರು ಡಾ.ಗೋವಿಂದ ಬಾಬು ಪೂಜಾರಿ,ಸಹನಾ ಗ್ರೂಪ್ಸ್ ನ‌‌ ಸುರೇಂದ್ರ ಶೆಟ್ಟಿ,ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕುಸುಮಾಕರ್ ಶೆಟ್ಟಿ, ಉಡುಪಿ ಕಾಂಗ್ರೆಸ್ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್,ಚಾಲೆಂಜ್ ಚಂದ್ರ,ಪಂದ್ಯಾಟ ಸಮಿತಿಯ ಪದಾಧಿಕಾರಿಗಳು,ತಂಡದ ಸದಸ್ಯರು ಉಪಸ್ಥಿತರಿದ್ದರು ‌.
Categories
ಕ್ರಿಕೆಟ್

ಉಡುಪಿಯಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಗೌತಮ್ ಶೆಟ್ಟಿಯವರಿಗೆ ಸನ್ಮಾನ

ಉಡುಪಿ-ಕೊಡಂಕೂರು ಕೋಟಿಯಾನ್ ವಾಲಿಬಾಲ್ ಅಕಾಡೆಮಿ ಇವರ ಪ್ರಾಯೋಜಕತ್ವದಲ್ಲಿ ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆ(ರಿ)ಕೊಡಂಕೂರು ಇವರ ಸಹಕಾರದೊಂದಿಗೆ ನಡೆದ ಮುಕ್ತ ಪುರುಷರ ಹಾಗೂ ಮಹಿಳೆಯರ 3 ಜನ ಆಟಗಾರರ ವಾಲಿಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
ಸನ್ಮಾನ‌ ಸ್ವೀಕರಿಸಿ ಮಾತನಾಡಿದ ಗೌತಮ್ ಶೆಟ್ಟಿಯವರು
“ಕ್ರೀಡೆಯಲ್ಲಿ ನಿರಂತರವಾಗಿ ತೊಡಗಿಸಿಗೊಳ್ಳುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ,ಸೋಲು ಗೆಲುವನ್ನು  ಸಮಾನವಾಗಿ ಸ್ವೀಕರಿಸಲು ಬದ್ಧರಾಗುತ್ತೇವೆ ಹಾಗೂ ಜೀವನ ಕೌಶಲ್ಯ ವೃದ್ಧಿಯಾಗುತ್ತದೆ.” ಎಂದರು.
ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಆಡಳಿತ ಮೊಕ್ತೇಸರ ಶ್ರೀ‌.ಕೆ.ದಿವಾಕರ ಶೆಟ್ಟಿ ಪಂದ್ಯಾಟವನ್ನು ಉದ್ಘಾಟಿಸಿದರು.ಕೊಡಂಕೂರು ನಾಗರಿಕ
ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರಘುನಾಥ್ ಮಾಬಿಯಾನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು.ಮುಖ್ಯ ಅತಿಥಿಗಳಾಗಿ ಕಾರ್ಕಳ ಯಂಗ್ ಸ್ಟಾರ್ ವಾಲಿಬಾಲ್ ಕ್ಲಬ್ ಅಧ್ಯಕ್ಷ ಪ್ರವೀಣ್.ಕೆ.ಕೋಟ್ಯಾನ್,ರಾಷ್ಟ್ರ ಮಟ್ಟದ ಆಟಗಾರ ಸುಮನ್ ಕುಮಾರ್,ರಾಜ್ಯ ಮಟ್ಟದ ಆಟಗಾರ ರಾಜೇಶ್ ಹೆಗ್ಡೆ,ಮಲ್ಟಿ ನ್ಯಾಷನಲ್ ಕಂಪೆನಿ ಸೀನಿಯರ್ ಮೆನೇಜರ್ ಮಿನೊಟಿ ಆಗ್ನೇಸ್ ಬ್ಲಾಜೋ,ಕೊಡಂಕೂರು ನಾಗರಿಕ ಹಿತರಕ್ಷಣಾ ವೇದಿಕೆ ಮಾಜಿ ಅಧ್ಯಕ್ಷರಾದ ಅಶೋಕ್ ಪೂಜಾರಿ ಕೊಡಂಕೂರು,ಭಾಸ್ಕರ್.ಸಿ.ಕೋಟ್ಯಾನ್ ಮತ್ತು ಹಳೆ ವಿದ್ಯಾರ್ಥಿಗಳು,ಆಟಗಾರರು ಉಪಸ್ಥಿತರಿದ್ದರು.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

TCA ಉಡುಪಿ-ತಾಲೂಕು ಮಟ್ಟದ ಅಭೂತಪೂರ್ವ ಯಶಸ್ಸಿನ ಬಳಿಕ ಇದೀಗ ನವೆಂಬರ್ 19 ಮತ್ತು 20 ರಂದು ಜಿಲ್ಲಾಮಟ್ಟದ ಪಂದ್ಯಾಟ

ಕುಂದಾಪುರ-T.C.A ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ನವೆಂಬರ್  19 ಮತ್ತು 20 ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ಜಿಲ್ಲಾ ಮಟ್ಟದ ಪಂದ್ಯಾಟ ನಡೆಸಲಾಗುವುದೆಂದು ಟಿ.ಸಿ.ಎ ಅಧ್ಯಕ್ಷರಾದ ಗೌತಮ್ ಶೆಟ್ಟಿ ಟೊರ್ಪೆಡೋಸ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ 7 ತಾಲೂಕು ಮಟ್ಟದ ಪಂದ್ಯಾಟ ಯಶಸ್ವಿಯಾಗಿ ಮುಕ್ತಾಯ ಕಂಡಿದ್ದು,ಇದೀಗ 7 ತಾಲೂಕಿನ ಪ್ರಥಮ ಹಾಗೂ ದ್ವಿತೀಯ ಸ್ಥಾನಿ ಒಟ್ಟು 14 ತಂಡಗಳಾದ ಅಂಶು ಕೋಟೇಶ್ವರ, ಚೇತನಾ ಉಡುಪಿ,
ಅಗಸ್ತ್ಯ ಮದಗ,ಟೊರ್ಪೆಡೋಸ್ ಕುಂದಾಪುರ,8 ಸ್ಟಾರ್ ಉಪ್ಪುಂದ,ಆರ್.ಕೆ‌‌.ಕಾರ್ಕಳ,ದಾವೂದ್ ಶಿರ್ವ,ಇಲೆವೆನ್ ಅಪ್ ಕೋಟ,ಕಲಾಕಿರಣ,ಹೊಳೆಬಾಗಿಲು,ಫ್ರೆಂಡ್ಸ್ ಉದ್ಯಾವರ,ಪಾರಂಪಳ್ಳಿ,ಹೆಬ್ರಿ ಹಾಕ್ಸ್,ಇಲೆವೆನ್ ಬೆಳ್ಮಣ್ ತಂಡಗಳು ಜಿಲ್ಲಾಮಟ್ಟದ ಪಂದ್ಯದಲ್ಲಿ ಭಾಗವಹಿಸಲಿದೆ.
ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಹಾಗೂ ಮಾಜಿ ಆಟಗಾರರು ಆಗಮಿಸಲಿದ್ದಾರೆ.
Categories
ಸ್ಪೋರ್ಟ್ಸ್

ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಜೀವನ ಕೌಶಲ್ಯ ವೃದ್ಧಿ”-ಗೌತಮ್ ಶೆಟ್ಟಿ ಟೊರ್ಪೆಡೋಸ್

ಉಡುಪಿ-“ಕ್ರೀಡೆಯಲ್ಲಿ ಭಾಗವಹಿಸುವುದರಿಂದ
ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಸಾಮರ್ಥ್ಯ ಹಾಗೂ ಆತ್ಮಸ್ಥೈರ್ಯ ಹೆಚ್ಚಿ ಜೀವನ ಕೌಶಲ್ಯ ವೃದ್ಧಿಯಾಗುತ್ತದೆ.ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕಡೆಗಳಲ್ಲಿ ಲೀಗ್ ಪ್ರಾರಂಭವಾಗಿದ್ದು,ಕ್ರೀಡಾಪಟುಗಳಿಗೆ ಕ್ರೀಡೆಯ ಮೂಲಕ ವೃತ್ತಿಗೂ ಹೆಚ್ಚಿನ ಸಹಕಾರಿಯಾಗಲಿದೆ”
ಎಂದು ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಛೇರ್ಮನ್ ಗೌತಮ್ ಶೆಟ್ಟಿ ತಿಳಿಸಿದರು.
ಇವರು ಅಕ್ಟೋಬರ್ 21 ಶುಕ್ರವಾರ ಉಡುಪಿಯ ಕನ್ನರ್ಪಾಡಿಯ ಸೈಂಟ್ ಮೇರೀಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ,ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ  ಸಂಚಾಲಕರಾದ ರೆವರೆಂಡ್ ಫಾದರ್ ಚಾರ್ಲ್ಸ್ ಮೆನೇಜಸ್,ಪ್ರಾಂಶುಪಾಲ ರಾದ ರೆವರೆಂಡ್ ಫಾದರ್ ಜಾನ್ಸನ್ ಸೀಕ್ವೇರಾ,
ಉಪಾಧ್ಯಕ್ಷ ಬೋನಿಫಸ್ ಡಿಸೋಜಾ,ಶ್ರೀಮತಿ ಬೆನೆಡಿಕ್ಟಾ ಫೆರ್ನಾಂಡಿಸ್,ಚರ್ಚ್ ಆಡಳಿತ ಮಂಡಳಿ ಕಾರ್ಯದರ್ಶಿ ಮತ್ತು ಉಪ ಪ್ರಾಂಶುಪಾಲರಾದ ಶ್ರೀಮತಿ ರೀಟಾ ಕ್ವಾಡ್ರಸ್ ಉಪಸ್ಥಿತರಿದ್ದರು.ದೈಹಿಕ ನಿರ್ದೇಶಕ ಜೆರಾಲ್ಡ್
ಪಿಂಟೋ ಸ್ವಾಗತಿಸಿದರು.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

TCA ಉಡುಪಿ-ನವೆಂಬರ್ ತಿಂಗಳಲ್ಲಿ ಜಿಲ್ಲಾಮಟ್ಟದ ಪಂದ್ಯಾಟ-ನೂತನ ಗೌರವಾಧ್ಯಕ್ಷರ ನೇಮಕ

ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್,
ಈಗಾಗಲೇ 7 ತಾಲೂಕುಗಳಲ್ಲಿ ತಾಲ್ಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಿ ನಿರ್ವಹಿಸಿದ್ದು,
ಮುಂಬರುವ ನವೆಂಬರ್ 18,19 ಮತ್ತು 20 ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ಜಿಲ್ಲಾ ಮಟ್ಟದ
ಪಂದ್ಯಾಟ ನಡೆಸಲಾಗುವುದು ಎಂದು ಸೋಮವಾರ ಉಡುಪಿಯಲ್ಲಿ ನಡೆದ ಸಭೆಯಲ್ಲಿ ಟಿ.ಸಿ.ಎ ಅಧ್ಯಕ್ಷರಾದ ಗೌತಮ್ ಶೆಟ್ಟಿ ಟೊರ್ಪೆಡೋಸ್ ತಿಳಿಸಿದರು.
ಪ್ರತೀ ತಾಲೂಕಿನ 2 ತಂಡಗಳು  (ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳು),7 ತಾಲೂಕಿನ ಒಟ್ಟು 14 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಲು ಅವಕಾಶವಿದ್ದು,ತಾಲೂಕು ಮಟ್ಟದ ತಂಡಗಳ ನಾಯಕರಿಗೆ ಈಗಾಗಲೇ ತಿಳಿಸಲಾಗಿದೆ‌.ಮುಂದಿನ ವಾರದಲ್ಲಿ ತಂಡದ ನಾಯಕರ ಸಭೆಯನ್ನು ಆಯೋಜಿಸಲಾಗಿದ್ದು,ಪಂದ್ಯಾಟದ ಬಗ್ಗೆ ಸವಿಸ್ತಾರ ಮಾಹಿತಿ ಲಭ್ಯವಾಗಲಿದೆ ಎಂದರು.
*ಟಿ‌.ಸಿ‌.ಎ ನೂತನ ಗೌರವಾಧ್ಯಕ್ಷರ ಆಯ್ಕೆ*
ಸೋಮವಾರ ಉಡುಪಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪ್ಯಾರಡೈಸ್ ಬನ್ನಂಜೆ ತಂಡದ ಹಿರಿಯ ಆಟಗಾರರಾದ ಯಾದವ್ ನಾಯಕ್ ಕೆಮ್ಮಣ್ಣು,ರಮೇಶ್ ಶೇರಿಗಾರ್ ಮತ್ತು ಬ್ಲೂಸ್ಟಾರ್ ಶಿರ್ವ ತಂಡದ ಸಂಸ್ಥಾಪಕ ನಾಯಕರಾದ ಸದಾನಂದ ಶಿರ್ವ ಇವರನ್ನು ಟಿ.ಸಿ‌.ಎ ಗೌರವಾಧ್ಯಕ್ಷರಾಗಿ ನೇಮಕ ಮಾಡಲಾಯಿತು.ಈ ಸಂದರ್ಭ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಟಿ‌.ಸಿ.ಎ ಮೀಡಿಯಾ ಪಾರ್ಟ್ನರ್ ಎಂದು ಅಧಿಕೃತವಾಗಿ ಘೋಷಿಸಲಾಯಿತು.
ಈ ಸಂದರ್ಭ ಟಿ.ಸಿ‌‌.ಎ ಅಧ್ಯಕ್ಷರಾದ ಗೌತಮ್ ಶೆಟ್ಟಿ ಟೊರ್ಪೆಡೋಸ್,ಗೌರವಾಧ್ಯಕ್ಷರಾದ ಶ್ರೀಧರ್ ಶೆಟ್ಟಿ
ಪ್ಯಾರಡೈಸ್ ಬನ್ನಂಜೆ,ಶರತ್ ಶೆಟ್ಟಿ ಪಡುಬಿದ್ರಿ,ಪ್ರವೀಣ್ ಕುಮಾರ್ ಬೈಲೂರು,ಪ್ರವೀಣ್ ಪಿತ್ರೋಡಿ,ಟಿ.ಸಿ.ಎ ಪದಾಧಿಕಾರಿಗಳು ಉಪಸ್ಥಿತರಿದ್ದರು…
Categories
ಭರವಸೆಯ ಬೆಳಕು

ಅಂಗನವಾಡಿಯ 45 ಮಕ್ಕಳಿಗೆ ಸ್ಪೋರ್ಟ್ಸ್ ಶೂ ವಿತರಿಸಿದ ಟೊರ್ಪೆಡೋಸ್ ಗೌತಮ್ ಶೆಟ್ಟಿ

ಕುಂಭಾಶಿ- ಕುಂದಾಪುರ ರೂರಲ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ,
ಈಗಲ್ಸ್ ಕ್ರಿಕೆಟ್ ಕ್ಲಬ್ ಕುಂಭಾಶಿ ಮತ್ತು ಕುಂಭಾಶಿ ಗ್ರಾಮ ಪಂಚಾಯತ್ ಇವರ ಸಹಯೋಗದಲ್ಲಿ ಅಂಬೇಡ್ಕರ್ ಭವನ ಕುಂಭಾಶಿ ಇಲ್ಲಿ ನಡೆದ ಅಮೃತಪ್ರಾಶನ(ಸ್ವರ್ಣ ಪ್ರಾಶನ)ಕಣ್ಣಿನ ತಪಾಸಣಾ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರು,ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಕುಂದಾಪುರ ಇವರು ಅಂಗನವಾಡಿಯ 45 ಮಕ್ಕಳಿಗೆ ಬೆಲೆಬಾಳುವ BAS ಕಂಪೆನಿಯ ಸ್ಪೋರ್ಟ್ಸ್ ಶೂ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ರೂರಲ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ ಇಲ್ಲಿನ ಪ್ರಾಂಶುಪಾಲರಾದ ಡಾ.ಎಸ್.ಜಿ.ಪ್ರಸನ್ನ ಐತಾಳ್ ವಹಿಸಿದರೆ,ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ಶ್ರೀನಿಧಿ ಉಪಾಧ್ಯಾಯ ಉದ್ಘಾಟನೆ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಬಿ.ಜೆ‌.ಪಿ ಅಧ್ಯಕ್ಷರಾದ ಶಂಕರ ದೇವಾಡಿಗ ಅಂಕದಕಟ್ಟೆ,ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ‌ ಶೆಟ್ಟಿ, ಶ್ರೀ ಮೂಕಾಂಬಿಕಾ ಮಹಿಳಾ ಮಂಡಳಿ(ರಿ) ಕುಂದಾಪುರ ಅಧ್ಯಕ್ಷೆ ಶ್ರೀಮತಿ ರಾಧಾ ದಾಸ್,ಕುಂಭಾಶಿ ಗ್ರಾಮ ಪಂಚಾಯತ್ ಪಿ.ಡಿ.ಓ ಜಯರಾಮ್ ಶೆಟ್ಟಿ, ಕುಂದಾಪುರ ರೂರಲ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಎ.ಓ ಅಭಿನಂದನ್ ಶೆಟ್ಟಿ,ಎಮ್.ಎಸ್ ಡಾ ಸವಿತಾ.ಕೆ.ಭಟ್,ಈಗಲ್ಸ್ ಕ್ರಿಕೆಟ್ ಕ್ಲಬ್ ಕುಂಭಾಶಿಯ ಅಧ್ಯಕ್ಷ ಸುನಿಲ್ ಮತ್ತು ಶಿಬಿರಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಕುಂದಾಪುರ-ಟಿ.ಸಿ.ಎ ಅಭೂತಪೂರ್ವ ಯಶಸ್ಸಿನ ಹಿಂದೆ ಪ್ರತಿಯೊಬ್ಬ ಆಟಗಾರರ ಪಾತ್ರವಿದೆ-ಗೌತಮ್ ಶೆಟ್ಟಿ

ಇಲೆವೆನ್ ಅಪ್ ಕೋಟ ಮತ್ತು ಅಂಶು ಕೋಟೇಶ್ವರ ಚಾಂಪಿಯನ್ಸ್
ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಪ್ರಾಯೋಜಿತ ಬ್ರಹ್ಮಾವರ ಹಾಗೂ ಕುಂದಾಪುರ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಇಲೆವೆನ್ ಅಪ್ ಕೋಟ ಮತ್ತು ಅಂಶು ಕೋಟೇಶ್ವರ ತಂಡ ಪ್ರಶಸ್ತಿ ಜಯಿಸಿದರು.
ಬ್ರಹ್ಮಾವರ ತಾಲೂಕಿನ ಪಂದ್ಯಾಟದ ಫೈನಲ್ ನಲ್ಲಿ ಅಭಿ ಕೋಟ ಸರ್ವಾಂಗೀಣ ಆಟದ ಫಲವಾಗಿ,ಪಾರಂಪಳ್ಳಿ ಕ್ರಿಕೆಟರ್ಸ್ ತಂಡವನ್ನು ಸೋಲಿಸಿ ಪ್ರಥಮ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಫೈನಲ್ ನ ಪಂದ್ಯಶ್ರೇಷ್ಟ ಮತ್ತು ಸರಣಿ ಶ್ರೇಷ್ಠ ಅಭಿ ಕೋಟ,ಬೆಸ್ಟ್ ಬ್ಯಾಟ್ಸ್‌ಮನ್ ಪುಂಡಲೀಕ ಸಾಸ್ತಾನ ಮತ್ತು ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಯೋಗೀಶ್ ಕೋಟ ತನ್ನದಾಗಿಸಿಕೊಂಡರು.
ಕುಂದಾಪುರ ತಾಲೂಕಿನ ಫೈನಲ್ ಪಂದ್ಯದಲ್ಲಿ ಅಂಶು ಕೋಟೇಶ್ವರ ತಂಡದ ಸಚಿನ್ ಕೋಟೇಶ್ವರ ಅದ್ಭುತ ಬ್ಯಾಟಿಂಗ್ ನಿಂದ  ಟೊರ್ಪೆಡೋಸ್ ಕುಂದಾಪುರವನ್ನು ಮಣಿಸಿ ಪ್ರಥಮ ಪ್ರಶಸ್ತಿ ತನ್ನದಾಗಿಸಿಕೊಂಡರು.
ಫೈನಲ್ ನ ಪಂದ್ಯಶ್ರೇಷ್ಟ ಪ್ರಶಸ್ತಿ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಸಚಿನ್ ಕೋಟೇಶ್ವರ, ಬೆಸ್ಟ್ ಬ್ಯಾಟ್ಸ್‌ಮನ್‌ ಗಣೇಶ್(ಬೀಜಾಡಿ) ಟೊರ್ಪೆಡೋಸ್,ಬೆಸ್ಟ್ ಬೌಲರ್ ಸಚಿನ್ ಶೆಟ್ಟಿ ಪಡೆದುಕೊಂಡರು.
*ಸಮಾರೋಪ ಸಮಾರಂಭ*
ಹಿರಿಯ ಆಟಗಾರರು,ಟಿ‌.ಸಿ.ಎ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಟಿ.ಸಿ.ಅಧ್ಯಕ್ಷರಾದ ಗೌತಮ್ ಶೆಟ್ಟಿ “ಯುವ ಆಟಗಾರರ ಭಾಗವಹಿಸುವಿಕೆಯಿಂದ ಟಿ.ಸಿ.ಎ 7 ತಾಲೂಕುಗಳಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.10 ಓವರ್ ಗಳಲ್ಲಿ ಆಟಗಾರರ ಪರಿಪೂರ್ಣ ಪ್ರದರ್ಶನ ಹೊರಹೊಮ್ಮಿದೆ.ಉಡುಪಿ ಜಿಲ್ಲೆ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಯೋಜನೆಗಳು  ರಾಜ್ಯದ ಹೆಚ್ಚಿನ‌ ಜಿಲ್ಲೆಗಳ ಗಮನ ಸೆಳೆದಿದ್ದು,ಮೇ 7 ಮತ್ತು 8 ರಂದು ಟಿ.ಸಿ.ಎ ಜಿಲ್ಲಾ ಮತ್ತು ರಾಜ್ಯಮಟ್ಟದ ಪಂದ್ಯಾಟಗಳನ್ನು ಹಮ್ಮಿಕೊಳ್ಳಲಾಗಿದೆ” ಎಂದರು.
ಟಿ.ಸಿ.ಎ ಗೌರವಾಧ್ಯಕ್ಷರಾದ ಶ್ರೀಧರ್ ಶೆಟ್ಟಿ ಪ್ಯಾರಡೈಸ್ ಬನ್ನಂಜೆ ಮಾತನಾಡಿ “ಇತ್ತೀಚಿನ ದಿನಗಳಲ್ಲಿ ಓವರ್ ಗಳ ಕಡಿತದಿಂದಾಗಿ ಆಟಗಾರರಿಗೆ ಪ್ರತಿಭೆ ತೋರ್ಪಡಿಸುವ ಅವಕಾಶ ಸಿಗುತ್ತಿಲ್ಲ ಆದ್ದರಿಂದ ಟಿ.ಸಿ.ಎ 10 ಓವರ್ ಗಳ ಪಂದ್ಯಾಟ ಆಯೋಜಿಸಿದೆ.ಈ ಯೋಜನೆ ಯಶಸ್ವಿಯಾಗಲು ಆಟಗಾರರ ಒಗ್ಗಟ್ಟು ಅಗತ್ಯ” ಎಂದರು.
ಹಿರಿಯರಾದ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು ಮಾತನಾಡಿ “ಆಟಗಾರರು ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ಟಿ.ಸಿ.ಎ ಯುವಕರಿಗೆ ಒಳ್ಳೆಯ ಅವಕಾಶ ಕಲ್ಪಿಸಿದೆ ಹಾಗೂ ಆಟಗಾರರ ಪರಿಪೂರ್ಣ ಪ್ರದರ್ಶನ ಹೊರಹೊಮ್ಮಿದೆ” ಎಂದರು.
ಟಿ.ಸಿ.ಎ ಗೌರವಾಧ್ಯಕ್ಷರಾದ ಶರತ್ ಶೆಟ್ಟಿ ಪಡುಬಿದ್ರಿ ಮಾತನಾಡಿ “T.C.A ಯುವ ಆಟಗಾರರ ಪ್ರತಿಭಾ ಪ್ರದರ್ಶನಕ್ಕೆ ಅತ್ಯುತ್ತಮ ವೇದಿಕೆ ಸೃಷ್ಟಿಸಿದ್ದು, ಆಟಗಾರರು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ.
30,40  ಗಜಗಳ ಪಂದ್ಯಾಟಗಳನ್ನು ನಿಯಂತ್ರಿಸುವ ಕೆಲಸ ಆಗಬೇಕಿದೆ” ಎಂದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಟಿ‌.ಸಿ.ಎ ಗೌರವಾಧ್ಯಕ್ಷರಾದ ಶ್ರೀಪಾದ ಉಪಾಧ್ಯಾಯ,
ರಾಘವೇಂದ್ರ ಹೊಳ್ಳ,ಸತೀಶ್ ಕುಂದರ್,ನಾಗೇಶ್ ರಾವ್ ಶ್ರೀಲತಾ ಕುಂದಾಪುರ,ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು,ಯಾದವ್ ನಾಯಕ್ ಕೆಮ್ಮಣ್ಣು, ಪ್ರವೀಣ್ ಪಿತ್ರೋಡಿ, ಸತೀಶ್ ಕೋಟ್ಯಾನ್,ನಾರಾಯಣ ಶೆಟ್ಟಿ ಕೋಟೇಶ್ವರ,ಕೋಟ ರಾಮಕೃಷ್ಣ ಆಚಾರ್,ಅರ್ಮಾನ್ ಮತ್ತಿತರರು ಉಪಸ್ಥಿತರಿದ್ದರು.
ಕೆ.ಪಿ.ಸತೀಶ್,ಮನೋಜ್ ನಾಯರ್ ಸಮಾರೋಪ ಸಮಾರಂಭದ ನಿರೂಪಣೆ ನಡೆಸಿದರು.
M9 ಸ್ಪೋರ್ಟ್ಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರ ಬಿತ್ತರಗೊಂಡರೆ,ವೀಕ್ಷಕ ವಿವರಣೆಯಲ್ಲಿ ಅಜಯ್ ರಾಜ್ ಮಂಗಳೂರು,ನಾಸೀರ್ ಕೋಟೇಶ್ವರ,ನಿತೇಶ್ ಗೋಲ್ಡನ್ ಮಿಲ್ಲರ್,ರಾಘವೇಂದ್ರ ಚರಣ್ ನಾವಡ ಮತ್ತು ರಂಜಿತ್ ಶೆಟ್ಟಿ ಸಹಕರಿಸಿದರು…
Categories
ಭರವಸೆಯ ಬೆಳಕು

ಟೊರ್ಪೆಡೋಸ್ ಗೌತಮ್ ಶೆಟ್ಟಿ ಅಧ್ಯಕ್ಷತೆಯಲ್ಲಿ-ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಯಶಸ್ಸಿನ ಹಾದಿಯಲ್ಲಿ

ಉಡುಪಿ ಜಿಲ್ಲೆಯಲ್ಲಿ ನಡೆಯುವ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾಟಗಳಲ್ಲಿ ಶಿಸ್ತು,ವೃತ್ತಿಪರತೆ,ಆಟಗಾರರಿಗೆ ಅಗತ್ಯವಿರುವ ಸೌಲಭ್ಯ ಹೀಗೆ ಹತ್ತು,ಹಲವಾರು  ಸದುದ್ದೇಶಗಳನ್ನಿಟ್ಟುಕೊಂಡು ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ TCA ಸ್ಥಾಪಿಸಲಾಗಿದೆ.
 
80,90 ರ ದಶಕದ ಹಿರಿಯ ಆಟಗಾರರ ಸಮಾಗಮದಲ್ಲಿ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಆಯ್ಕೆಯಾದ ಗೌತಮ್ ಶೆಟ್ಟಿ ನೇತೃತ್ವದಲ್ಲಿ ಮೊದಲ‌ ಪ್ರಯತ್ನದ ರೂಪದಲ್ಲಿ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದೆ.ಗತಕಾಲದಲ್ಲಿ ವೈಭವ ಮೆರೆದ ಹಿರಿಯ ತಂಡಗಳ ಹೆಸರಿನಲ್ಲಿ,ಹಿರಿಯ ಆಟಗಾರರ ಉಪಸ್ಥಿತಿಯಲ್ಲಿ,10 ಓವರ್ ಗಳ ಕ್ರಿಕೆಟ್ ಪಂದ್ಯಾಟ 5 ತಾಲ್ಲೂಕುಗಳಲ್ಲಿ ಅತ್ಯಂತ ಯಶಸ್ವಿಯಾಗಿ ಮುಕ್ತಾಯ ಕಂಡಿದ್ದು ಯುವ ಆಟಗಾರರು ಕೂಡ ಅತ್ಯಂತ ಶಿಸ್ತಿನಿಂದ ಆಸಕ್ತಿಯಿಂದ ಭಾಗವಹಿಸಿ ಅಸೋಸಿಯೇಷನ್ ಯೋಜನೆಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ‌.ಗೌತಮ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಶಿಸ್ತುಬದ್ಧವಾದ ಕಾರ್ಯವೈಖರಿಯಿಂದ ಟೆನಿಸ್ಬಾಲ್ ಕ್ರಿಕೆಟ್ ವಲಯದಲ್ಲೇ ಸಂಚಲನ ಮೂಡಿಸಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸ್ಥಾಪನೆಯ ದಿನಗಳು ದೂರವಿಲ್ಲ.
 
*ಗೌತಮ್ ಶೆಟ್ಟಿಯವರ ಸಾಧನೆಯ ಹಾದಿ*
80 ರ ದಶಕದಲ್ಲಿ ಕುಂದಾಪುರ ಪರಿಸರದ  ಸಮಾನ ಮನಸ್ಕ ಹಿರಿಯ ಕ್ರೀಡಾಪಟುಗಳ ಒಗ್ಗೂಡುವಿಕೆಯಿಂದ ಕುಂದಾಪುರದಲ್ಲಿ‌ ಮೊದಲಿಗೆ ಟೆನ್ನಿಸ್ಬಾಲ್ ಕ್ರಿಕೆಟ್ ತಂಡವಾಗಿ ಸ್ಥಾಪನೆಯಾದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಕುಂದಾಪುರ.ಬ್ಲೂ ಸ್ಟಾರ್  ಶಿರ್ವ ತಂಡ ಆಯೋಜಿಸಿದ್ದ ಮೊತ್ತಮೊದಲ ರಾಜ್ಯಮಟ್ಟದ ಪಂದ್ಯಾವಳಿಯ ಫೈನಲ್ ನಲ್ಲಿ ಆ ದಿನಗಳಲ್ಲಿ ಎದುರಾಳಿಗಳ ಪಾಲಿನ ಸಿಂಹಸ್ವಪ್ನ ಪ್ಯಾರಡೈಸ್ ಬನ್ನಂಜೆ ತಂಡದೆದುರು,ಕೊನೆಯ ಎಸೆತದಲ್ಲಿ 6 ರನ್ ಗಳ‌ ಅಗತ್ಯತೆಯ ಸಂದರ್ಭ,ಹಿರಿಯ ಆಟಗಾರ ನಾರಾಯಣ ಶೆಟ್ಟಿ ಸಿಡಿಸುವ ಅಮೋಘ ಸಿಕ್ಸರ್ ಮೂಲಕ ಟೊರ್ಪೆಡೋಸ್  ಮೊದಲ ರಾಜ್ಯ ಮಟ್ಟದ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತ್ತು.
 
ಹಿರಿಯ ಆಟಗಾರರು ನೇಪಥ್ಯಕ್ಕೆ ಸರಿದ ಬಳಿ ನಾಯಕನ ಜವಾಬ್ದಾರಿಯನ್ನು ಹೊತ್ತ ಗೌತಮ್ ಶೆಟ್ಟಿ ಸಾರಥ್ಯದಲ್ಲಿ ಕರ್ನಾಟಕದ ಹಲವಾರು ಜಿಲ್ಲೆಯಾದ್ಯಂತ ಟೊರ್ಪೆಡೋಸ್ ತಂಡವನ್ನು ಕೊಂಡೊಯ್ದ ಹಲವಾರು ಪ್ರಶಸ್ತಿಗಳನ್ನು ಜಯಿಸಿದ್ದರು.ಕಾಲ ಕ್ರಮೇಣ ಉದ್ಯೋಗ ನಿಮಿತ್ತ ಮಂಗಳೂರಿನಲ್ಲಿ ನೆಲೆನಿಂತ ಗೌತಮ್ ಶೆಟ್ಟಿ,
ಹಳೆಯಂಗಡಿಯಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್(ರಿ)ಸಂಸ್ಥೆಯನ್ನು ಸ್ಥಾಪಿಸಿ,ಹಲವಾರು ಕ್ರೀಡಾಕೂಟಗಳನ್ನು‌ ಸಂಘಟಿಸಿ,ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ,ಬಡ ಅಶಕ್ತ ಕುಟುಂಬದ ವಿದ್ಯಾರ್ಥಿಗಳಿಗೆ ನೆರವಿನ ಹಸ್ತವನ್ನು ನೀಡುತ್ತಾ ಬಂದಿರುತ್ತಾರೆ.ಈ ಎಲ್ಲಾ ಸಾಧನೆಗಳಿಗಾಗಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,ಸಮಾಜರತ್ನ ಗೌರವ,ಬಂಟರತ್ನ ಪ್ರಶಸ್ತಿ ಹೀಗೆ ನೂರಾರು ಗೌರವ ಸನ್ಮಾನಗಳು ಗೌತಮ್ ಶೆಟ್ಟಿಯನ್ನು ಅರಸಿಕೊಂಡು ಬಂದಿರುತ್ತದೆ.ಕ್ರೀಡಾಕ್ಷೇತ್ರದಲ್ಲಿ ಹೊಸತನವನ್ನು ತರುವ ನಿಟ್ಟಿನಲ್ಲಿ ಹಲವಾರು ವಿನೂತನ ಪ್ರಯೋಗಗಳ ಬಗ್ಗೆ ಚಿಂತನೆ ನಡೆಸುವ ಇವರು ಟೊರ್ಪೆಡೋಸ್ ಸ್ಪೋರ್ಟ್ಸ್ ಕಾರ್ನಿವಲ್-2021 ಸಂಘಟಿಸಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ ದಾಖಲೆ ನಿರ್ಮಿಸಿದ್ದಾರೆ.
 
ಕ್ರೀಡೆಯ ನಾನಾ ಪ್ರಾಕಾರಗಳಲ್ಲೂ ಸೈ ಎನಿಸಿಕೊಂಡ ಗೌತಮ್ ಶೆಟ್ಟಿಯವರು ಸುರತ್ಕಲ್ ಡೆಲ್ಲಿ ಪಬ್ಲಿಕ್ ಸ್ಕೂಲ್(M.R.P.L)ನ ದೈಹಿಕ ನಿರ್ದೇಶಕರಾಗಿ ಹಲವಾರು ವರ್ಷಗಳ ಸೇವೆ ಸಲ್ಲಿಸಿ,ಕಳೆದ ವರ್ಷದಿಂದ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಟೊರ್ಪೆಡೋಸ್ ಗೌತಮ್ ಶೆಟ್ಟಿಯವರಿಗೆ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಹೆಬ್ರಿ- ಕ್ರಿಕೆಟ್ ಶಿಸ್ತಿನಿಂದ ಆಡಿ,ಹಿರಿಯ ಆಟಗಾರರನ್ನು ಗೌರವಿಸಿ-ಗೌತಮ್ ಶೆಟ್ಟಿ(ಜಿಲ್ಲಾಧ್ಯಕ್ಷರುT.C.A)

ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಪ್ರಾಯೋಜಿತ,
ಸವ್ಯಸಾಚಿ ಹೆಬ್ರಿ ತಂಡದ ಮಾಜಿ ಆಟಗಾರರು,ಕ್ರೀಡಾ ಸಂಘಟಕರು ಸುಕೇಶ್ ಶೆಟ್ಟಿ ಹೆಬ್ರಿ ಮತ್ತು ಅಶೋಕ್ ಹೆಗ್ಡೆ ಹೆಬ್ರಿ ಇವರ ಸಾರಥ್ಯದಲ್ಲಿ ನಡೆದ ಹೆಬ್ರಿ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಅಗಸ್ತ್ಯ ಮದಗ ತಂಡ 61 ರನ್ ಗಳ ಭರ್ಜರಿ ಗೆಲುವನ್ನು ಸಾಧಿಸಿದೆ.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಗಸ್ತ್ಯ ಮದಗ ತಂಡ,ಪ್ರಮೋದ್ ಸ್ಪೋಟಕ 40 ರನ್ ಹಾಗೂ ದಿಲೀಪ್ 22 ರನ್ ಗಳ‌ ಸಹಾಯದಿಂದ 10 ಓವರ್ ಗಳಲ್ಲಿ 95 ರನ್ ಕಲೆಹಾಕಿತ್ತು.ಸವಾಲಿನ ಗುರಿಯನ್ನು ಚೇಸ್ ಮಾಡುವ ವೇಳೆ ಪ್ರಮೋದ್ 3 ವಿಕೆಟ್, ಅಕ್ಷಯ್ 3 ವಿಕೆಟ್‌ ಉರಿ ಬೌಲಿಂಗ್ ದಾಳಿಗೆ  ಹೆಬ್ರಿ ಹಾಕ್ಸ್ ತಂಡ 7.3 ಓವರ್ ಗಳಲ್ಲಿ 34 ರನ್ ಗಳಿಗೆ ಸರ್ವಪತನ ಕಂಡಿತು.
ಫೈನಲ್ ನ  ಪಂದ್ಯಶ್ರೇಷ್ಟ ಪ್ರಶಸ್ತಿ ಪ್ರಮೋದ್,ಪಂದ್ಯಾಟದ ಬೆಸ್ಟ್ ಬ್ಯಾಟ್ಸ್‌ಮನ್‌ ಪ್ರಜ್ವಲ್ ಶೆಣೈ, ಬೆಸ್ಟ್ ಬೌಲರ್ ಧನಿಕ್,ಸರಣಿಶ್ರೇಷ್ಟ ಅಗಸ್ತ್ಯ ಮದಗ ತಂಡದ ಪ್ರಮೋದ್ ಪಾಲಾಯಿತು.
*ಸಮಾರೋಪ ಸಮಾರಂಭ*
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ “ಕ್ರೀಡೆ ನಮಗೆ ಸಮಾಜದಲ್ಲಿ ಗುರುತನ್ನು ಮೂಡಿಸುತ್ತದೆ,ಜೀವನ ಕೌಶಲ್ಯವನ್ನು ಕಲಿಸುತ್ತದೆ,ಕ್ರಿಕೆಟ್ ಶಿಸ್ತಿನಿಂದ ಆಡಿ,ಹಿರಿಯ ಆಟಗಾರರನ್ನು ಗೌರವಿಸಿ”ಎಂದು ಹೇಳಿದರು.
ಗೌರವಾಧ್ಯಕ್ಷರಾದ ಶ್ರೀಧರ್ ಶೆಟ್ಟಿ ಪ್ಯಾರಡೈಸ್ ಬನ್ನಂಜೆ ಮಾತನಾಡಿ ಈಗಿನ ಆಟಗಾರರು ಕಡಿಮೆ ಓವರ್ ಗಳ ಪಂದ್ಯಗಳನ್ನಾಡಿ ಪರಿಪೂರ್ಣ ಆಟಗಾರರಾಗಿ ಹೊರಹೊಮ್ಮುವಲ್ಲಿ ವಿಫಲರಾಗುತ್ತಿದ್ದಾರೆ ಆದ್ದರಿಂದ
ಫಿಟ್ನೆಸ್ ಬಗ್ಗೆ ಗಮನ ಹರಿಸಬೇಕಿದೆ ಎಂದರು.ಹಿರಿಯ ಆಟಗಾರರಾದ ರಮೇಶ್ ಶೇರಿಗಾರ್ ಮಾತನಾಡಿ ಕ್ರೀಡೆಯ ಧ್ಯೇಯ ಸಂಸ್ಕಾರ,ಸಂಘಟನೆ,ಸೇವೆಯನ್ನು ಕ್ರೀಡಾಪಟುಗಳು
ಪಾಲಿಸಬೇಕೆಂದರು.ಗೌರವಾಧ್ಯಕ್ಷರಾದ ಶರತ್ ಶೆಟ್ಟಿ ಪಡುಬಿದ್ರಿ ಇವರು ಉಡುಪಿ ಜಿಲ್ಲೆಯ ಆಟಗಾರರೆಲ್ಲರಿಗೂ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಸೋಸಿಯೇಷನ್ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ವಿಫುಲ ಅವಕಾಶವನ್ನು ಸೃಷ್ಟಿಸಿದೆ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಅನಂತ ಪದ್ಮನಾಭ ಮೋಟಾರ್ಸ್ ನ ಮಾಲೀಕರಾದ ಶ್ರೀಯುತ ಪ್ರವೀಣ್ (ಅಪ್ಪಿ) ಬಲ್ಲಾಳ್,ಸ್ಪೋರ್ಟ್ಸ್ ಕನ್ನಡ ಪ್ರವರ್ತಕರಾದ ಕೋಟ ರಾಮಕೃಷ್ಣ ಆಚಾರ್,ಟೂರ್ನಮೆಂಟ್ ನ ಪ್ರಮುಖ ಸಂಘಟಕರಾದ ಸುಕೇಶ್ ಶೆಟ್ಟಿ ಹೆಬ್ರಿ ಮತ್ತು ಅಶೋಕ್ ಹೆಗ್ಡೆ ಹೆಬ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭ T.C.A ವತಿಯಿಂದ ಸುಕೇಶ್ ಶೆಟ್ಟಿ ಹೆಬ್ರಿ ಇವರನ್ನು ಸನ್ಮಾನಿಸಲಾಯಿತು.
 ಕೆ.ಎಸ್.ಸಿ‌.ಎ ಅಂಗೀಕೃತ ಅಂಪಾಯರ್ ಗಳಾದ ಇಬ್ರಾಹಿಂ ಆತ್ರಾಡಿ ಮತ್ತು ರಾಘು ಬ್ರಹ್ಮಾವರ ತೀರ್ಪುಗಾರರಾಗಿ ಮತ್ತು ಹಿರಿಯ ವೀಕ್ಷಕ ವಿವರಣೆಕಾರರಾದ ವಿನಯ್ ಉದ್ಯಾವರ ವೀಕ್ಷಕ ವಿವರಣೆಯನ್ನು ನಡೆಸಿದರು.M9 ಸ್ಪೋರ್ಟ್ಸ್ ಯೂ ಟ್ಯೂಬ್ ಚಾನೆಲ್ ಪಂದ್ಯಾವಳಿಯ ನೇರ ಪ್ರಸಾರ ಬಿತ್ತರಿಸಿದರು.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಬೈಂದೂರು-ತಾಲೂಕು ಮಟ್ಟದಲ್ಲಿ ಮಿಂಚಿದ ಆಟಗಾರರಿಗೆ ರಾಜ್ಯ ಮಟ್ಟದಲ್ಲಿ ಉಡುಪಿ ಜಿಲ್ಲಾ ತಂಡದಲ್ಲಿ ಅವಕಾಶ-ಗೌತಮ್ ಶೆಟ್ಟಿ

ಟೆನಿಸ್ಬಾಲ್ ಕ್ರಿಕೆಟ್ ನ 50 ವರ್ಷಗಳ ಇತಿಹಾಸದ ಹಿರಿಯ ಸಂಸ್ಥೆ ವಿಕ್ರಮ್ ಕ್ರಿಕೆಟ್ ಕ್ಲಬ್ ಬೈಂದೂರು ಇವರ ಆಶ್ರಯದಲ್ಲಿ ಬೈಂದೂರಿನ ಗಾಂಧಿ ಮೈದಾನದಲ್ಲಿ
2 ದಿನಗಳ ಕಾಲ T.C.A ಪ್ರಾಯೋಜಿತ ದ್ವಿತೀಯ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಿ ನಡೆಯಿತು.
10 ಓವರ್-90 ಗಜಗಳ ಕ್ರಿಕೆಟ್ ಪಂದ್ಯಾಟದಲ್ಲಿ ಬೈಂದೂರು ತಾಲೂಕಿನ 6 ತಂಡಗಳು ಭಾಗವಹಿಸಿದ್ದವು.
ಅಂತಿಮವಾಗಿ ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಹೊಳೆಬಾಗಿಲು ಬೈಂದೂರು ತಂಡ ನಿಗದಿತ 10 ಓವರ್ ಗಳಲ್ಲಿ 52 ರನ್ ಗಳಿಸಿತ್ತು.ಸವಾಲನ್ನು ಅನಾಯಾಸವಾಗಿ ಬೆಂಬತ್ತಿದ 8 ಸ್ಟಾರ್ ನಾವುಂದ 6.3 ಓವರ್ ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ ಗುರಿಯನ್ನು ತಲುಪಿ ಹೊಳೆಬಾಗಿಲು ಬೈಂದೂರು ತಂಡದ ವಿರುದ್ಧ 7 ವಿಕೆಟ್ ಗಳ ಗೆಲುವು ದಾಖಲಿಸಿದರು.
ಫೈನಲ್ ನ ಪಂದ್ಯಶ್ರೇಷ್ಟ ಪ್ರಶಸ್ತಿ 8 ಸ್ಟಾರ್ ನಾವುಂದ ತಂಡದ ನಾಗರಾಜ್,ಟೂರ್ನಮೆಂಟ್ ಬೆಸ್ಟ್
ಬ್ಯಾಟ್ಸ್‌ಮನ್‌ 8 ಸ್ಟಾರ್ ನ ಪ್ರದೀಪ್,ಬೆಸ್ಟ್ ಬೌಲರ್
ವಸಂತ ಹೊಳೆಬಾಗಿಲು,ಬೆಸ್ಟ್ ಕೀಪರ್ ಜೆ.ಡಿ.ಸಂತೋಷ ಪೂಜಾರಿ ಮತ್ತು ಸರಣಿಶ್ರೇಷ್ಟ ಪ್ರಶಸ್ತಿ ದೇವರಾಜ್ ಆಚಾರ್ ವಂಡ್ಸೆ ಪಡೆದರು.
*ವರ್ಣರಂಜಿತ ಸಮಾರೋಪ ಸಮಾರಂಭ*
ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದ T.C.A ಉಡುಪಿ ಅಧ್ಯಕ್ಷ ಗೌತಮ್ ಶೆಟ್ಟಿ “ಒಂದು ತಂಡದಲ್ಲಿ 11-15 ಆಟಗಾರರ ಪ್ರದರ್ಶನವೂ ಅತ್ಯಮೂಲ್ಯ,ಉಡುಪಿ ತಾಲೂಕು ಮಟ್ಟದಲ್ಲಿ ಮಿಂಚಿದ ಆಟಗಾರರಿಗೆ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಆಡುವ ಅವಕಾಶ ನೀಡಲಾಗುತ್ತದೆ ಎಂದರು ಹಾಗೂ ವಿಕ್ರಮ್ ಬೈಂದೂರು ತಂಡದ ಕಾರ್ಯವೈಖರಿಯನ್ನು ಶ್ಲಾಘಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿಕ್ರಮ್ ಬೈಂದೂರಿನ ಗೌರವಾಧ್ಯಕ್ಷರಾದ ಗಿರೀಶ್ ಬೈಂದೂರು “T.C.A ಯುವ ಪ್ರತಿಭಾನ್ವಿತ ಆಟಗಾರರಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಇದರ ಸದುಪಯೋಗಪಡಿಸಿಕೊಳ್ಳಿ ಹಾಗೂ ವಿಕ್ರಮ್ ಸ್ಪೋರ್ಟ್ಸ್ ಕ್ಲಬ್ ಸದ್ಯದಲ್ಲಿಯೇ ಬೈಂದೂರಿನಲ್ಲಿ ಲೆದರ್ ಬಾಲ್ ಕ್ರಿಕೆಟ್ ಕೋಚಿಂಗ್ ಅಕಾಡೆಮಿಯನ್ನು ಸ್ಥಾಪಿಸಲಿದೆ ಎಂದರು.T.C.A ಬೈಂದೂರು ತಂಡದ ಪರವಾಗಿ ಉಡುಪಿ ಜಿಲ್ಲಾ ಅಸೋಸಿಯೇಷನ್ ಗೆ ಪ್ರಾಥಮಿಕ ನೆರವಿನ ನಿಧಿರೂಪದಲ್ಲಿ 50,000 ರೂಪಾಯಿಯನ್ನು ಗೌತಮ್ ಶೆಟ್ಟಿಯವರಿಗೆ ಹಸ್ತಾಂತರಿಸಿದರು.
ಸಭೆಯಲ್ಲಿ ಉದ್ಯಮಿಗಳಾದ ಮನೀಶ್ ಶೆಟ್ಟಿ, ಬಿ.ಎಸ್.ಸುರೇಶ್ ಶೆಟ್ಟಿ, ಧನುಷ್ ಶೆಟ್ಟಿ,ಪಾಂಡುರಂಗ ಪಡಿಯಾರ್,ಸುಜಯ್ ಶೆಟ್ಟಿ, ನಾಗರಾಜ್ ಗಾಣಿಗ,ಸ್ಪೋರ್ಟ್ಸ್ ಕನ್ನಡ ಕೋಟ ರಾಮಕೃಷ್ಣ ಆಚಾರ್,
ವಿಕ್ರಮ್ ಸಂಸ್ಥೆಯ ಹಿರಿಯ ಆಟಗಾರರಾದ ಸದಾನಂದ ಉಡುಪಿ,ನಾಗರಾಜ್ ಶೆಟ್ಟಿ ನಾಕಟ್ಟೆ,ದಿನೇಶ್ ಗಾಣಿಗ ಬೈಂದೂರು,ನಾರಾಯಣ ಕೆರೆಕಟ್ಟೆ,ಮಹಾಬಲ ದೇವಾಡಿಗ,ಸದಾಶಿವ ಪಡುವರಿ,ರಾಜೇಶ್ ಆಚಾರ್ಯ,ಚರಣ್ ಬೈಂದೂರು ಇನ್ನಿತರರು ಉಪಸ್ಥಿತರಿದ್ದರು.
ಇಬ್ರಾಹಿಂ ಆತ್ರಾಡಿ,ರಾಘು ಬ್ರಹ್ಮಾವರ ಮತ್ತು ವಿನೀತ್ ಬ್ರಹ್ಮಾವರ ತೀರ್ಪುಗಾರರಾಗಿ, ಅರವಿಂದ್
ಮಣಿಪಾಲ್ ಮತ್ತು ಅಜಯ್ ರಾಜ್ ಮಂಗಳೂರು ವೀಕ್ಷಕ ವಿವರಣೆಯಲ್ಲಿ ಸಹಕರಿಸಿದರೆ,ಸೌಜನ್ ಪಡುಬಿದ್ರಿ ನೇತೃತ್ವದಲ್ಲಿ M9 ಸ್ಪೋರ್ಟ್ಸ್ ಪಂದ್ಯಾವಳಿಯ ನೇರಪ್ರಸಾರವನ್ನು ಬಿತ್ತರಿಸಿದರು.