Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಕರ್ನಾಟಕ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ ಗೌತಮ್ ಶೆಟ್ಟಿ ಕುಂದಾಪುರ ಆಯ್ಕೆ

ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಟೊರ್ಪೆಡೋಸ್ ಇವರು ಕರ್ನಾಟಕ ಟೇಬಲ್ ಟೆನ್ನಿಸ್ ಸಂಸ್ಥೆಯ ಉಪಾಧ್ಯಕ್ಷರಾಗಿ  ಆಯ್ಕೆಯಾಗಿದ್ದಾರೆ.
ಗೌತಮ್ ಶೆಟ್ಟಿ ಅವರು ಭಾನುವಾರ ಧಾರವಾಡದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು ಮುಂದಿನ ನಾಲ್ಕು ವರ್ಷಗಳ ಕಾಲ ಅವರು ಅಧಿಕಾರದಲ್ಲಿ ಇರಲಿದ್ದಾರೆ.
ಆಯ್ಕೆಯ ಬಳಿಕ ಸ್ಪೋರ್ಟ್ಸ್ ಕನ್ನಡದೊಂದಿಗೆ ಮಾತನಾಡಿದ ಗೌತಮ್ ಶೆಟ್ಟಿ “ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಇದು ಪ್ರಯೋಜನಕಾರಿ,ಏಕಾಗ್ರತೆ ಹೆಚ್ಚಿಸುವ ಆಟಗಳಲ್ಲಿ ಟೇಬಲ್ ಟೆನಿಸ್ ಕೂಡ ಒಂದಾಗಿದ್ದು, ಯುವಕರನ್ನು ಪ್ರೋತ್ಸಾಹಿಸುವ ಮೂಲಕ ಕ್ರೀಡೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸುವುದಾಗಿ ಹೇಳಿದರು.
ನೂತನವಾಗಿ ಆಯ್ಕೆಗೊಂಡ KTTA ತಂಡಕ್ಕೆ  ಸ್ಪೋರ್ಟ್ಸ್ ಕನ್ನಡ ಮತ್ತು ಸ್ಟಾರ್ ವರ್ಟೆಕ್ಸ್-ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ವತಿಯಿಂದ ಶುಭಾಶಯಗಳು.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಜೀವನದ ಯಶಸ್ಸಿನ ಆಧಾರವೇ ಕ್ರೀಡೆ-ಗೌತಮ್ ಶೆಟ್ಟಿ

ಉಡುಪಿ-ಸ್ಪೋರ್ಟ್ಸ್ ಕೌನ್ಸಿಲ್ ಮಾಹೆ ಮಣಿಪಾಲ,
ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ & ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಮತ್ತು ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಜಿಲ್ಲೆ ಸಂಸ್ಥೆಗಳ ಜಂಟಿ ಆಯೋಜನೆಯಲ್ಲಿ, ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಮಾಹೆ ಮಣಿಪಾಲದಲ್ಲಿ  ” ಎ ರಿಫ್ರೆಶರ್ ಕ್ಲಿನಿಕ್ ಆನ್ ಅಥ್ಲೆಟಿಕ್ಸ್ ಮತ್ತು ಕ್ರಿಕೆಟ್ ಅಂಡ್ ಐಕ್ಯೂ ” ಕಾರ್ಯಕ್ರಮ ಆಯೋಜಿಸಲಾಗಿತ್ತು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಟೊರ್ಪೆಡೋಸ್ ಉದ್ಘಾಟನಾ ಸಮಾರಂಭದಲ್ಲಿ ”ಕ್ರೀಡೆಯು ಜೀವನಕ್ಕೆ ಹೇಗೆ ಪ್ರಯೋಜನವನ್ನು ನೀಡುತ್ತದೆ,  ಯಾವ ರೀತಿಯ  ಕೌಶಲ್ಯಗಳನ್ನು ಕಲಿಸುತ್ತದೆ. ಕ್ರೀಡಾ ಕೌಶಲ್ಯಗಳು, ಸ್ಥಿತಿಸ್ಥಾಪಕತ್ವ, ನಾಯಕತ್ವ, ಹೊಣೆಗಾರಿಕೆ, ಗೌರವ ಮತ್ತು ತಾಳ್ಮೆಯಂತಹ ವಿಷಯಗಳನ್ನು ಕಲಿಯಲು ನಮಗೆ ಸಹಾಯ ಮಾಡುತ್ತದೆ ಹಾಗೂ ವೈಯಕ್ತಿಕ ಅಭಿವೃದ್ಧಿ ಮತ್ತು ಒಟ್ಟಾರೆ ಯೋಗಕ್ಷೇಮದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ,ಜೀವನದ ಯಶಸ್ಸಿನ ಆಧಾರವೇ ಕ್ರೀಡೆ ” ಎಂದರು.
ಈ‌ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಹೆಚ್.ವಿದ್ಯಾಕುಮಾರಿ,ಮಾಹೆ ಮಣಿಪಾಲ ಮುಖ್ಯಸ್ಥರಾದ ಹೆಚ್.ಎಸ್.ಬಳ್ಳಾಲ್,ಬಿ.ಸಿ.ಸಿ.ಐ ಕೋಚ್ ಮತ್ತು ಅಂಪಾಯರ್ ಅರುಣ್ ಭಾರದ್ವಾಜ್,ಕೆ.ಎಂ.ಸಿ ಡೀನ್ ಡಾ‌‌.ಪದ್ಮರಾಜ್ ಹೆಗ್ಡೆ,ಕೆ.ಎಂ.ಸಿ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ಉಪಸ್ಥಿತರಿದ್ದರು
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಕ್ರಿಕೆಟ್

ಗೌತಮ್ ಶೆಟ್ಟಿ ಇವರಿಗೆ “ಸಾರ್ಥಕ ಹೆಜ್ಜೆ ಗುರುತು ಅಭಿನಂದನಾ ಪುರಸ್ಕಾರ-2023

ಹೊಸದುರ್ಗ-ರಂಗ ಸುಹಾಸ ಟ್ರಸ್ಟ್ (ರಿ)ಸಾಣೇಹಳ್ಳಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ತರಬೇತಿ 1995-96 ನೆ ಸಾಲಿನ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಅಭಿನಂದನಾ ಪುರಸ್ಕಾರ ಕಾರ್ಯಕ್ರಮ ಹಿರೇಮಗಳೂರಿನ ಎಲ್.ಜೆ.ಎಂ ಸಭಾಂಗಣದಲ್ಲಿ ಜರುಗಿತು.
*ಗೌತಮ್ ಶೆಟ್ಟಿಯವರಿಗೆ ಸಾರ್ಥಕ ಹೆಜ್ಜೆ ಗುರುತು ಅಭಿನಂದನಾ ಪುರಸ್ಕಾರ-2023*
1995-96 ನೇ ಸಾಲಿನ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಶಿಕ್ಷಕರ ತರಬೇತಿ ಪಡೆದು ಪ್ರತಿಷ್ಠಿತ ಎಂ‌.ಆರ್.ಪಿ.ಎಲ್ ಶಾಲೆಯ ಕ್ರೀಡಾ ತರಬೇತುದಾರರಾಗಿ ಸುಮಾರು 20 ವರ್ಷಗಳ ಸೇವೆ ಸಲ್ಲಿಸಿ,1987 ರಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಸ್ಥಾಪಿಸಿ ಹಲವಾರು ಕ್ರೀಡಾಕೂಟಗಳನ್ನು ಸಂಘಟಿಸಿ,ಅನೇಕ ಕ್ರೀಡಾಪಟುಗಳ ಬದುಕನ್ನು ರೂಪಿಸಿ,ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುತ್ತಿರುವ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಮತ್ತು ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಕುಂದಾಪುರ ಇವರಿಗೆ “ಸಾರ್ಥಕ ಹೆಜ್ಜೆ ಗುರುತು ಅಭಿನಂದನಾ ಪುರಸ್ಕಾರ” ನೀಡಿ ಗೌರವಿಸಲಾಯಿತು.
ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ ಗೌತಮ್ ಶೆಟ್ಟಿ “ಕ್ರೀಡೆ ಜೀವನದ ಅಮೂಲ್ಯ ಆಸ್ತಿ.ಕ್ರೀಡೆಯಿಂದ ಜೀವನ ಕೌಶಲ್ಯವನ್ನು ಕಲಿಯುತ್ತೇವೆ.ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುತ್ತೇವೆ ಎಂದರು” ಹಾಗೂ 95-96 ನೇ ಬ್ಯಾಚ್ ನ ತರಬೇತಿಯ ದಿನಗಳನ್ನು ನೆನಪಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ‌‌.ಮಲ್ಲಯ್ಯ ಶ್ರೀಮಠ ರವರು ವಹಿಸಿದ್ದರು.ಜಯಪ್ಪ ಕೃಷಿಕರು ಲಕ್ಷ್ಮೀಪುರ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಶ್ರೀಮತಿ ಪಲ್ಲವಿ ಸಿ.ಟಿ ರವಿ ಚಿಕ್ಕಮಗಳೂರು,ಶ್ರೀಯುತ ಹೆಚ್.ಪಿ ಕುಮಾರಸ್ವಾಮಿ ಕಲಾವಿದರು,ಅಪೇಕ್ಷಾ ಮಂಜುನಾಥ್ ಮುಂತಾದ ಗಣ್ಯರು ಭಾಗವಹಿಸಿದ್ದರು…
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಕ್ರೀಡೆ ಯುವಕರಲ್ಲಿ ಜೀವ ಕಳೆಯನ್ನು ತುಂಬುತ್ತದೆ” -ಗೌತಮ್ ಶೆಟ್ಟಿ

ಬೈಂದೂರು-“ಕ್ರೀಡೆ ಯುವ ಜನತೆಯನ್ನು ಒಗ್ಗೂಡಿಸಿ ಉತ್ಸಾಹ ಮೂಡಿಸಿ ಜೀವಕಳೆಯನ್ನು ತುಂಬುತ್ತದೆ.
ಕ್ರೀಡಾಪಟುಗಳು ಸೋತಾಗ ಕುಗ್ಗದೆ,ಗೆದ್ದಾಗ ಹಿಗ್ಗದೆ ಸಮಭಾವದಿಂದ ಬದುಕನ್ನು ರೂಪಿಸಿಕೊಂಡರೆ ಯಶಸ್ಸು ಖಂಡಿತ” ಎಂದು ಬೈಂದೂರು ಸೇನೇಶ್ವರ ಕಲಾ ಮತ್ತು ಕ್ರೀಡಾ ಸಂಘ ಇವರು ಆಯೋಜಿಸಿದ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಟೊರ್ಪೆಡೋಸ್ ಹೇಳಿದರು.
ಎರಡು ದಿನಗಳ‌ ಕಾಲ ಬೈಂದೂರಿನ ಗಾಂಧಿ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದ ಫೈನಲ್ ನಲ್ಲಿ ಗೌರೀಶ್ ಹಾಗೂ ಅರುಣ್ ನೇತೃತ್ವದ ಅನ್ವಿ ಪ್ರಯಾಣ್ 11 ತಂಡ ಶಂಕರನಾರಾಯಣ ತಂಡವನ್ನು ಸೋಲಿಸಿ ಪ್ರಥಮ‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಎಂ.ಸುಕುಮಾರ್ ಶೆಟ್ಟಿ ಬೈಂದೂರು,ಬೈಂದೂರು ಬಿ.ಜೆ.ಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಸಮಾಜಸೇವಕರು ಉದ್ಯಮಿಗಳಾದ ಡಾ.ಗೋವಿಂದ ಬಾಬು ಪೂಜಾರಿ,ಮಾಜಿ ಶಾಸಕರಾದ ಗೋಪಾಲ್ ಪೂಜಾರಿ ಬೈಂದೂರು,ಜಿಲ್ಲಾ ಪಂಚಾಯತ್ ಸದಸ್ಯರಾದ ರಾಜು ಪೂಜಾರಿ,ಅಂತರಾಷ್ಟ್ರೀಯ ಕ್ರಿಕೆಟ್ ಪಟು ಪ್ರಥ್ವೀರಾಜ್ ಶೆಟ್ಟಿ ಹುಂಚನಿ,ದಿನೇಶ್ ಗಾಣಿಗ ವಿಕ್ರಮ್ ಬೈಂದೂರು,ಸೇನೇಶ್ವರ ಕಲಾ ಮತ್ತು ಕ್ರೀಡಾರಂಗದ ಅಧ್ಯಕ್ಷ ರಾಮಕೃಷ್ಣ ದೇವಾಡಿಗ ಮತ್ತು ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
Categories
ಭರವಸೆಯ ಬೆಳಕು

ಕಂಡ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶೂ ವಿತರಿಸಿದ ಟೊರ್ಪೆಡೋಸ್ ಗೌತಮ್ ಶೆಟ್ಟಿ

ಕುಂದಾಪುರ-ಇಲ್ಲಿನ ಕಂಡ್ಲೂರು ಸರಕಾರಿ(ಕನ್ನಡ) ಹಿರಿಯ ಪ್ರಾಥಮಿಕ‌ ಶಾಲಾ ಮಕ್ಕಳಿಗೆ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಗೌತಮ್ ಶೆಟ್ಟಿ ಇವರು BAS ಕಂಪೆನಿಯ ಶೂ ವಿತರಿಸಿದರು.
ಈ ಸಂದರ್ಭ ಶ್ರೀ ಕನ್ನಿಕಾ ಎಜ್ಯುಕೇಶನ್ ಟ್ರಸ್ಟ್ (ರಿ) ಅಧ್ಯಕ್ಷ ಗೌರಿ ಶ್ರೀಯಾನ್,ಅಂಪಾರು ವಲಯದ ಸಿ.ಆರ್.ಪಿ ರಾಘವೇಂದ್ರ,ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಭಾಸ್ಕರ ಮೊಗವೀರ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರತ್ನಾ ಶೆಟ್ಟಿ,ಶಿಕ್ಷಕ ವರ್ಗದ ರೇಖಾ,ವೀಣಾ,ಜ್ಯೋತಿ,ಜ್ಯೋತಿ ಗ್ಲಾಡಿಸ್,ರವಿ,ನಾಗರಾಜ್,ಸುನೀತಾ,ಲಲಿತಾ,ಚಂದ್ರ,ಬಸವ ನಾಯಕ್,ಹರ್ಷ ಕೋಟೇಶ್ವರ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
Categories
ಕ್ರಿಕೆಟ್

ಗೌತಮ್ ಶೆಟ್ಟಿ ಯವರಿಗೆ ಫ್ರೆಂಡ್ಸ್ ಬೆಂಗಳೂರು ಅಂತರಾಷ್ಟ್ರೀಯ ಪಂದ್ಯಾಟದಲ್ಲಿ ಸನ್ಮಾನ

ಬೆಂಗಳೂರು-ಫ್ರೆಂಡ್ಸ್ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ,ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರು,ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಗೌತಮ್ ಶೆಟ್ಟಿ ಕುಂದಾಪುರ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಟೂರ್ನಮೆಂಟ್ ನ ಪ್ರಮುಖ ರೂವಾರಿ,ಫ್ರೆಂಡ್ಸ್ ಬೆಂಗಳೂರು ತಂಡದ ಮಾಲೀಕರಾದ ರೇಣು ಗೌಡ,
ಸವ್ಯಸಾಚಿ ಗ್ರೂಪ್ಸ್ ನ ವಿಜಯ್ ಹೆಗ್ಡೆ,ಗಿರೀಶ್ ಗೌಡ, ಕಿರಣ್ ಗೌಡ,ಕೆ.ಪಿ.ಸತೀಶ್ ಚಕ್ರವರ್ತಿ ಕುಂದಾಪುರ,ಸ್ಪೋರ್ಟ್ಸ್ ಕನ್ನಡ ಕೋಟ ರಾಮಕೃಷ್ಣ ಆಚಾರ್,ಶಿವನಾರಾಯಣ ಐತಾಳ್ ಕೋಟ,ಸಾಗರ್ ಭಂಡಾರಿ,ಅಭಿ ಫ್ರೆಂಡ್ಸ್,ರಾಕರ್ಸ್ ನವೀನ್
 ಮತ್ತು ಫ್ರೆಂಡ್ಸ್ ಬೆಂಗಳೂರು ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು…
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಕ್ರೀಡೆಯಿಂದ ಮನುಷ್ಯನ ಸರ್ವತೋಮುಖ ಅಭಿವೃದ್ಧಿ ಸಾಧ್ಯ-ಗೌತಮ್ ಶೆಟ್ಟಿ ಟೊರ್ಪೆಡೋಸ್

ಕಾರ್ಕಳ-ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ ಬ್ರಹ್ಮಾವರ ಮತ್ತು ಕೆ.ಆರ್.ಎಸ್ ಕ್ರಿಕೆಟ್ ಅಕಾಡೆಮಿ ಕಟಪಾಡಿ ಇವರ ಜಂಟಿ ಆಯೋಜನೆಯಲ್ಲಿ,ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಬಿ.ಸಿ.ಆಳ್ವ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿಟ್ಟೆಯಲ್ಲಿ ಲೆಜೆಂಡ್ಸ್  ಕ್ರಿಕೆಟ್ ಪಂದ್ಯಾಟ ಜರುಗಿತು.
ರಾಯಲ್ ಇಂಡಿಯನ್ಸ್ ಪ್ರಥಮ ಹಾಗೂ ಕೆ.ಆರ್.ಎಸ್-ಬಿ.ಎ.ಸಿ.ಎ ರನ್ನರ್ ಅಪ್ ತಂಡವಾಗಿ ಮೂಡಿ ಬಂದಿತು.
ಸಮಾರೋಪ ಸಮಾರಂಭದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಟೊರ್ಪೆಡೋಸ್ ಗೌತಮ್ ಶೆಟ್ಟಿ ಮಾತನಾಡಿ *”ಕ್ರೀಡೆಯಿಂದ ಮನುಷ್ಯನ ಸರ್ವತೋಮುಖ ಅಭಿವೃದ್ಧಿ ಸಾಧ್ಯ.ಬಿಡುವಿಲ್ಲದ ಜೀವನ ಕೆಲಸದೊತ್ತಡದ ನಡುವೆ ಕ್ರೀಡೆ ದೈಹಿಕ ಹಾಗೂ ಮಾನಸಿಕ‌ ಸದೃಢತೆಯನ್ನು ಕಾಪಾಡುವಲ್ಲಿ ಸಹಕಾರಿಯಾಗುತ್ತದೆ.
ಕೆ.ಆರ್.ಎಸ್ ಮತ್ತು ಬಿ.ಎ.ಸಿ.ಎ ಕ್ರಿಕೆಟ್ ಕ್ಲಬ್ ಗಳು ಯುವ ಕ್ರಿಕೆಟಿಗರ ಕ್ರೀಡಾ ಬದುಕು ರೂಪಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದು ಹಿರಿಯ ಆಟಗಾರರ ಸಮರ್ಪಣಾ ಭಾವ ಅತ್ಯಂತ ಶ್ಲಾಘನೀಯ.ಮಕ್ಕಳ ಕ್ರೀಡಾ ಬದುಕು ರೂಪಿಸಲು ಬಿ.ಸಿ.ಆಳ್ವ ಸುಸಜ್ಜಿತ ಹುಲ್ಲುಹಾಸಿನ ಅಂಗಣದ ವ್ಯವಸ್ಥೆಯನ್ನು ನಿಟ್ಟೆ ವಿದ್ಯಾಸಂಸ್ಥೆ ಮಾಡಿದ್ದು,ಇದರ ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಕ್ರೀಡಾಪಟುಗಳು ಇಂತಹ ಕ್ರೀಡಾಸಂಸ್ಥೆಗಳಿಗೆ ಋಣಿಯಾಗಿರಬೇಕು” ಎಂದರು.*
ಈ ಸಂದರ್ಭ ಮುಖ್ಯ ಅತಿಥಿಗಳಾಗಿ
ನಿಟ್ಟೆ ವಿಶ್ವವಿದ್ಯಾಲಯದ ಚಾನ್ಸಲರ್ ಶ್ರೀಯುತ ಎನ್.ವಿನಯ್ ಹೆಗ್ಡೆ,ನಿಟ್ಟೆ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಶ್ರೀ.ನಿರಂಜನ್.ಎನ್‌.ಚಿಪ್ಳೂಣ್ಕರ್,
ಸಿ.ಎ.ಬ್ಯಾಂಕ್ ಪಡುಬಿದ್ರಿ ಅಧ್ಯಕ್ಷರಾದ ಶ್ರೀ.ವೈ.ಸುಧೀರ್ ಕುಮಾರ್,ಕೆ.ಆರ್.ಎಸ್ ಅಕಾಡೆಮಿಯ ಉದಯ್ ಕುಮಾರ್ ಕಟಪಾಡಿ,ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿಯ ವಿಜಯ್ ಆಳ್ವ ಮತ್ತು ಹಿರಿಯ ಆಟಗಾರರು ಉಪಸ್ಥಿತರಿದ್ದರು.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಹಿರಿಯ ಆಟಗಾರರ ಒಗ್ಗಟ್ಟು ಯುವಕರಿಗೆ ಮಾದರಿಯಾಗಲಿ-ಗೌತಮ್ ಶೆಟ್ಟಿ

ಉಡುಪಿ-ಟೀಮ್ ಕೆಮ್ಮಣ್ಣೈಟ್ಸ್ ಇವರ ಆಶ್ರಯದಲ್ಲಿ,ಕೀನ್ಯಾದಲ್ಲಿ ನೆಲೆಸಿರುವ ಉಡುಪಿ ಮೂಲದ ಕ್ರೀಡಾ ಪ್ರೋತ್ಸಾಹಕರಾದ ಶ್ರೀ ಆಲ್ಫ್ರೆಡ್ ಕ್ರಾಸ್ಟೋ ಇವರ ಸಾರಥ್ಯದಲ್ಲಿ ಹಿರಿಯ ಆಟಗಾರರ ಸಮಾಗಮದ ಸದುದ್ದೇಶದಿಂದ,ಡಿಸೆಂಬರ್ 21 ರಂದು ಕೆಮ್ಮಣ್ಣು ಲಿಟ್ಲ್ ಫ್ಲವರ್ ಚರ್ಚ್ ಮೈದಾನದಲ್ಲಿ ಕೆ.ಪಿ.ಎಲ್ ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿತ್ತು.

ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಮಾತನಾಡಿ “ಹಿರಿಯ ಆಟಗಾರರ ಒಗ್ಗಟ್ಟಿನಿಂದ ಕ್ರೀಡೆಯಲ್ಲಿ ಸುಧಾರಣೆಯ ಅಲೆಯನ್ನು ಸೃಷ್ಟಿಸಬಹುದು ಇದಕ್ಕೆ ಸ್ಪಷ್ಟ ಉದಾಹರಣೆ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್
ಅಸೋಸಿಯೇಷನ್.ಇದರ ಮೂಲಕ ಉಡುಪಿ ಜಿಲ್ಲೆಯ ಗ್ರಾಮೀಣ ಮಟ್ಟದಿಂದ ಜಿಲ್ಲಾಮಟ್ಟದ ಆಟಗಾರರಿಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಸೃಷ್ಟಿಯಾಗಿದೆ.ಹಿರಿಯ ಆಟಗಾರರ ಒಗ್ಗೂಡುವಿಕೆ ಯುವಕರಿಗೂ ಮಾದರಿಯಾಗಲಿ” ಎಂದರು.
ಪಂದ್ಯಾಟದ ಪ್ರಥಮ‌ ಸ್ಥಾನಿ ಆಸಿಫ್‌.ಜಿ.ಡಿ ನಾಯಕತ್ವದ ಕುದ್ರು ಟೈಗರ್ಸ್,
ದ್ವಿತೀಯ ಸ್ಥಾನಿ ಯಾದವ್ ನಾಯ್ಕ್ ಕೆಮ್ಮಣ್ಣು ಸಾರಥ್ಯದ ಕೆಮ್ಮಣ್ಣು ವಾರಿಯರ್ಸ್ ತಂಡಗಳಿಗೆ ಪ್ರಶಸ್ತಿ ವಿತರಿಸಿದರು.ಪ್ರದರ್ಶನ ಪಂದ್ಯದಲ್ಲಿ ಕೀನ್ಯಾ,
ಇಂಗ್ಲೆಂಡ್,ದುಬೈ,ಅಬುಧಾಬಿ,ಸೌದಿ ಅರೇಬಿಯಾ,ಕುವೈಟ್,ಕತಾರ್,ಬಹ್ರೇನ್ ಇನ್ನಿತರ ರಾಷ್ಟ್ರದ ಮಹಿಳಾ ಆಟಗಾರರನ್ನೊಳ ಗೊಂಡ 2 ತಂಡಗಳು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಕೆಮ್ಮಣ್ಣು ಸೈಂಟ್ ಥೆರೇಸಾ ಚರ್ಚ್ ರೆವ್ ಫಾದರ್ ವಿಕ್ಟರ್ ಡಿಸೋಜಾ,ಕೆ.ಪಿ.ಸಿ.ಸಿ ಪ್ಯಾನೆಲಿಸ್ಟ್ ಶ್ರೀಮತಿ ವೆರೋನಿಕಾ ಕರ್ನೇಲಿಯೋ,ಟೂರ್ನಮೆಂಟ್ ನ‌ ಪ್ರಮುಖ ಆಯೋಜಕರಾದ ಶ್ರೀಯುತ ಆಲ್ಫ್ರೆಡ್ ಕ್ರಾಸ್ಟೋ ಉಪಸ್ಥಿತರಿದ್ದರು..
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಓರ್ವ ಕ್ರೀಡಾಪಟು ಸೋಲು,ಗೆಲುವಿನ ಹಾದಿಯನ್ನು ಸುಲಭವಾಗಿ ನಿಭಾಯಿಸುತ್ತಾನೆ.ಕ್ರೀಡೆ ಬದುಕು ರೂಪಿಸುತ್ತದೆ”-ಗೌತಮ್ ಶೆಟ್ಟಿ

ಬೈಂದೂರು ಸ್ಪೋರ್ಟ್ಸ್ ಕ್ಲಬ್ ಇವರ ಆಶ್ರಯದಲ್ಲಿ ಇಲ್ಲಿನ ಗಾಂಧಿ ಮೈದಾನದಲ್ಲಿ ಆಯೋಜಿಸಲಾದ ಎರಡು ದಿನಗಳ ಹಗಲಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಬೈಂದೂರು ಟ್ರೋಫಿ-2022 ಉದ್ಘಾಟನಾ ಸಮಾರಂಭ ಇಂದು ಬೆಳಿಗ್ಗೆ ನಡೆಯಿತು.
ಉದ್ಘಾಟನೆಗೈದು ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡಿದ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಟೊರ್ಪೆಡೋಸ್ “
ದೈಹಿಕ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಅತ್ಯಗತ್ಯ.ಓರ್ವ ಕ್ರೀಡಾಪಟು ಸೋಲು,ಗೆಲುವಿನ ಹಾದಿಯನ್ನು ಸುಲಭವಾಗಿ ಕ್ರಮಿಸಬಲ್ಲ ಮತ್ತು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳುತ್ತಾನೆ. ಕ್ರೀಡೆಯಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ದೇವಾಡಿಗ ನವೋದಯ ಸಂಘ(ರಿ) ಇದರ ಅಧ್ಯಕ್ಷರಾದ ಬಿ.ಆರ್.ದೇವಾಡಿಗ “ಹಲವಾರು ವರ್ಷಗಳ ಇತಿಹಾಸವಿರುವ ಬೈಂದೂರು ಮೈದಾನ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಸ್ಟೇಡಿಯಂ ನಿರ್ಮಾಣ ಅಗತ್ಯ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೈಂದೂರು ಆರಕ್ಷಕ ಠಾಣೆ ವೃತ್ತ ನಿರೀಕ್ಷಕರಾದ ಸಂತೋಷ್ ಆನಂದ್ ಕಾಯ್ಕಿಣಿ ” ಕ್ರೀಡೆಯಲ್ಲಿ ಸೋಲು,ಗೆಲುವು ಸಾಮಾನ್ಯ.ಕ್ರೀಡಾ ಸ್ಪೂರ್ತಿ
ಯಿಂದ ಆಡಿ” ಎಂದು ಕರೆ ನೀಡಿದರು.ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ನಾಗರಾಜ್ ಶೆಟ್ಟಿ ನಾಕಟ್ಟೆ “ಬೈಂದೂರು ಗಾಂಧಿ ಮೈದಾನ ಉಳಿಸಿ” ಪ್ರತಿಭಟನೆಯಲ್ಲಿ ಭಾಗವಹಿಸಿದವರೆಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಗೌರವಾಧ್ಯಕ್ಷ ದಿನೇಶ್ ಗಾಣಿಗ ಬೈಂದೂರು,ಸ್ಪೋರ್ಟ್ಸ್ ಕನ್ನಡ ಕೋಟ ರಾಮಕೃಷ್ಣ ಆಚಾರ್,ಯೂನಿಯನ್ ಬ್ಯಾಂಕ್ ಇಂಡಿಯಾ ವಡೇರಹೋಬಳಿ ಶಾಖಾ ವ್ಯವಸ್ಥಾಪಕ ರಾಮಕೃಷ್ಣ ದೇವಾಡಿಗ,ಟೂರ್ನಮೆಂಟ್ ಪ್ರಮುಖ ಆಯೋಜಕರಾದ ಕಿರಣ್ ಬೈಂದೂರು,ರಾಜೇಶ್ ಆಚಾರ್ಯ ಬೈಂದೂರು,
ನೀತರಾಜ್,ನಿತಿನ್,ಮಹೇಶ್ ಬೈಂದೂರು,ಗುಂಡು ಬೈಂದೂರು ಮತ್ತು ಬೈಂದೂರು ಸ್ಪೋರ್ಟ್ಸ್ ಕ್ಲಬ್ ನ‌ ಸದಸ್ಯರು ಉಪಸ್ಥಿತರಿದ್ದರು.
ಶಿವನಾರಾಯಣ ಐತಾಳ್ ಕೋಟ ಕಾರ್ಯಕ್ರಮ ನಿರೂಪಿಸಿದರು.
Categories
ಭರವಸೆಯ ಬೆಳಕು

ಮಕ್ಕಳ ಭವಿಷ್ಯಕ್ಕೆ ಮೈದಾನ ಅತ್ಯಗತ್ಯ-ಪುರಭವನವನ್ನು ಬೇರೆಡೆಗೆ ಸ್ಥಳಾಂತರಿಸಿ-ಗೌತಮ್ ಶೆಟ್ಟಿ

ಬೈಂದೂರು-“ಪ್ರೀತಿ,ಸಹಬಾಳ್ವೆಯ ಪ್ರತೀಕ ಕ್ರೀಡೆ.ಇದರಿಂದ ಹಲವಾರು ಯುವಕರು ಬದುಕನ್ನು ಕಟ್ಟಿಕೊಂಡಿದ್ದಾರೆ.ಬೈಂದೂರಿನ ಗಾಂಧಿ ಮೈದಾನಕ್ಕೆ ಹಲವಾರು ವರ್ಷಗಳ ಇತಿಹಾಸವಿದ್ದು ಹಲವಾರು ಕ್ರೀಡಾಪಟುಗಳನ್ನು ರಾಷ್ಟ್ರ,ಅಂತರರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದೆ.ಈ ಭಾಗದಲ್ಲಿ ಯಥೇಚ್ಛ ಸರಕಾರಿ ಜಾಗಗಳಿದ್ದು,ಪುರಭವನವನ್ನು ಬೇರೆಡೆಗೆ ಸ್ಥಳಾಂತರಿಸಿ,ಗಾಂಧಿ ಮೈದಾನದಲ್ಲಿ ಸುಸಜ್ಜಿತ ಸ್ಟೇಡಿಯಂ ನಿರ್ಮಿಸಿ” ಎಂದು ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಕರೆ ನೀಡಿದರು.
ಇವರು ಗಿರೀಶ್ ಬೈಂದೂರು ನೇತೃತ್ವದಲ್ಲಿ ನಡೆಯುತ್ತಿರುವ “ಗಾಂಧಿ ಮೈದಾನ ಉಳಿಸಿ” ಬೃಹತ್ ಧರಣಿ ಮತ್ತು ಪ್ರತಿಭಟನಾ ಸಭೆಯಲ್ಲಿ ಗೌತಮ್ ಶೆಟ್ಟಿ ಟೊರ್ಪೆಡೋಸ್ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭ ಮಾತನಾಡಿದ ಹೋರಾಟ ಸಮಿತಿಯ ಪ್ರಮುಖರಾದ ಗಿರೀಶ್ ಬೈಂದೂರು “ಮೊಗೇರಿ ಗೋಪಾಲಕೃಷ್ಣ ಅಡಿಗರ ಸ್ಮಾರಕ ಪುರಭವನಕ್ಕೆ ಯಾರ ವಿರೋಧವೂ ಇಲ್ಲ.ಅಡಿಗರ ಪುರಭವನ ನಿರ್ಮಾಣವಾಗುತ್ತಿರುವುದು ಸಂತೋಷದ ವಿಚಾರ,ಆದರೆ ಅದನ್ನು ಆಟದ ಮೈದಾನದಲ್ಲಿ ನಿರ್ಮಾಣ ಮಾಡುವುದು ಸೂಕ್ತವಲ್ಲ‌.ಇದಕ್ಕೂ ಮೀರಿ ಗಾಂಧಿ ಮೈದಾನದ ಜಾಗದಲ್ಲಿ ಪುರಭವನ ನಿರ್ಮಾಣಕ್ಕೆ ಮುಂದಾದರೆ ನಮ್ಮ ಬಳಿ ದಾಖಲೆಗಳಿದ್ದು ಕೋರ್ಟಿನ‌ ಮೊರೆಹೋಗುತ್ತೇವೆ” ಎಂದರು.
ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ ಕೋಟ ರಾಮಕೃಷ್ಣ ಆಚಾರ್ “ಗಾಂಧಿ ಮೈದಾನದಲ್ಲಿ ಉಡುಪಿ ಜಿಲ್ಲೆಯಲ್ಲದೇ ರಾಜ್ಯದ ಬೇರೆ ಬೇರೆ ಜಿಲ್ಲೆಯ ಆಟಗಾರರು ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದು,ಅವರೆಲ್ಲರನ್ನೂ ಈ ಹೋರಾಟದಲ್ಲಿ ಭಾಗವಹಿಸುವಂತೆ ಕರೆ ನೀಡುವುದಾಗಿ ತಿಳಿಸಿದರು.