Categories
ಕ್ರಿಕೆಟ್

BCCI U19 ಕ್ರಿಕೆಟ್ ಸಂಭಾವ್ಯರ ಪಟ್ಟಿಯಲ್ಲಿ ಉಡುಪಿಯ ಯುವತಿ ವೈಷ್ಣವಿ ಆಚಾರ್ಯ ಕಡಿಯಾಳಿ ಆಯ್ಕೆ

2023-24ರ ಸಾಲಿನಲ್ಲಿ ನಡೆಯುವ  19 ವರ್ಷದೊಳಗಿನ ಮಹಿಳಾ ಕ್ರಿಕೆಟ್  ಏಕದಿನ ತಂಡದ ಸಂಭವನೀಯರಲ್ಲಿ ಉಡುಪಿಯ ವೈಷ್ಣವಿ ಆಚಾರ್ಯ ಕಡಿಯಾಳಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ 25 ಜನ ಆಟಗಾರರ ಪಟ್ಟಿಯನ್ನು ಇಂದು ಪ್ರಕಟಿಸಿದ್ದು ಉಡುಪಿಯ ವೈಷ್ಣವಿ ಆಚಾರ್ಯ ಕಡಿಯಾಳಿ  ಬೌಲರ್ ಕಂ ಬ್ಯಾಟರ್ ಆಗಿ ಶಿಬಿರದಲ್ಲಿ ಭಾಗವಹಿಸಲು 25 ಸಂಭಾವ್ಯರ ಪೈಕಿ ಆಯ್ಕೆಯಾಗಿದ್ದಾರೆ.
ಅಕ್ಟೋಬರ್ ನಿಂದ ಭಾರತದಲ್ಲಿ ಮಹಿಳಾ ಏಕದಿನ ಕ್ರಿಕೆಟ್ ಟೂರ್ನಿ ನಡೆಯಲಿದ್ದು, ಆ ಟೂರ್ನಿಯಲ್ಲಿ ಇವರು ಭಾಗವಹಿಸುವ ವಿಶ್ವಾಸದಲ್ಲಿದ್ದಾರೆ. 2022ರಲ್ಲಿ ಕೆಎಸ್‌ಸಿಎ ಅಂಡರ್-19 ಸಂಭಾವ್ಯ ತಂಡಕ್ಕೆ ಆಯ್ಕೆಯಾಗಿದ್ದ ವೈಷ್ಣವಿ, 2023-24ರ ಅಂಡರ್-19 ಏಕದಿನ ಸಂಭಾವ್ಯ ತಂಡಕ್ಕೂ ಆಯ್ಕೆಯಾಗಿದ್ದಾರೆ.
ಉಡುಪಿಯವರಾದ ಇವರು ತಮ್ಮ ಪ್ರದೇಶದಲ್ಲಿ ಕ್ರಿಕೆಟ್‌ಗೆ ಪರಿಚಯವಾಗಿ ಆಟದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಆ ಹಂತದಲ್ಲಿ ಆಕೆಗೆ ಕ್ರಿಕೆಟ್ ಅನ್ನು ವೃತ್ತಿಯಾಗಿ ತೆಗೆದುಕೊಳ್ಳುವ ಯಾವುದೇ ಸುಳಿವು ಇರಲಿಲ್ಲ. ಎಲ್ಲಾ ವಿರೋಧಾಭಾಸಗಳನ್ನು ಎದುರಿಸಿ, ಅವರು ತಮ್ಮ ಆಟವನ್ನು ಸುಧಾರಿಸಲು ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಗೆ ಸೇರಿಕೊಂಡರು, ಕ್ರಿಕೆಟ್ ತರಬೇತಿಯನ್ನು ಪಡೆದರು ಮತ್ತು ಅಂಡರ್-19 ತಂಡಕ್ಕೆ ಆಡಲು ಫಿಟ್ ಆಗಲು ತಮ್ಮ ಸರದಿಯನ್ನು ಕಾಯುತ್ತಿದ್ದರು. ತನ್ನ ತಂಡಕ್ಕೆ  ಬೌಲಿಂಗ್ ನಲ್ಲಿ ಅಪಾರ ಕೊಡುಗೆ ನೀಡುವ ಮೂಲಕ ಇಂದು  ಅವರು ಅಂಡರ್-19 ಪಂದ್ಯಾವಳಿಯಲ್ಲಿ ಆಡಲು ಸಮರ್ಥರಾಗಿದ್ದಾರೆ. ಅವರ ಪ್ರದರ್ಶನವನ್ನು ಪರಿಗಣಿಸಿ, ಅವರನ್ನು ಬಿಸಿಸಿಐ ರಾಜ್ಯ ಮಟ್ಟದ ಪಂದ್ಯಗಳಿಗೆ  ಸುಧಾರಿತ ತರಬೇತಿ ಶಿಬಿರಕ್ಕೆ ಅಗ್ರ 25 ಆಟಗಾರರಲ್ಲಿ ಬಲಗೈ ಮಾಧ್ಯಮ  ವೇಗದ  ಬೌಲರ್ ಆಗಿ ಆಯ್ಕೆ ಮಾಡಲಾಗಿದೆ.
ಈ ಯುವ ಪ್ರತಿಭೆಯ ಬಗ್ಗೆ ಸ್ಪೋರ್ಟ್ಸ್ ಕನ್ನಡ ಹೆಮ್ಮೆಪಡುತ್ತದೆ. ಸ್ಪೋರ್ಟ್ಸ್ ಕನ್ನಡದ ಪ್ರವರ್ತಕರು ಕೋಟ ರಾಮಕೃಷ್ಣ ಆಚಾರ್ಯ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ, ಇನ್ನೂ ಹೆಚ್ಚಿನ ಸಾಧನೆ ಮಾಡಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲಿ ಎಂದು ಶುಭ ಹಾರೈಸಿದ್ದಾರೆ.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಬಡ ಕುಟುಂಬಗಳ ಸಹಾಯಾರ್ಥ ಕಡಿಯಾಳಿ ಜವನೆರ್ ಆಶ್ರಯದಲ್ಲಿ ಜವನೆರ್ ಟ್ರೋಫಿ-2022

ಉಡುಪಿ-ಕಡಿಯಾಳಿ ಜವನೆರ್ ಕಡಿಯಾಳಿ ಇವರ ಆಶ್ರಯದಲ್ಲಿ ಬಡ ಕುಟುಂಬಗಳ ಸಹಾಯಾರ್ಥವಾಗಿ 90 ಗಜಗಳ ಕ್ರಿಕೆಟ್ ಪಂದ್ಯಾಕೂಟ ಜವನೆರ್ ಟ್ರೋಫಿ-2022 ಆಯೋಜಿಸಲಾಗಿದೆ.
ಆಗಸ್ಟ್ 27 ಮತ್ತು 28 ರಂದು ಉಡುಪಿ ಗುಂಡಿಬೈಲ್ ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಶಾಲಾ ಮೈದಾನದಲ್ಲಿ ಆಯೋಜಿಸಲಾದ ಈ ಪಂದ್ಯಾಟದಲ್ಲಿ 27 ರಂದು 23 ವರ್ಷ ವಯಸ್ಸಿನ ಒಳಗಿನ ಆಟಗಾರರಿಗೆ ಮತ್ತು 28 ರಂದು ಮುಕ್ತ ಆವಕಾಶ ನೀಡಿದೆ.
ಪ್ರಥಮ ಬಹುಮಾನ 20 ಸಾವಿರ ಮತ್ತು ದ್ವಿತೀಯ ಬಹುಮಾನ 10 ಸಾವಿರ ನಗದು ಬಹುಮಾನದ ಸಹಿತ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತಿದೆ.ಹೆಚ್ಚಿನ ವಿವರಗಳಿಗಾಗಿ 6362086692,8310624727,
9535949295 ಮತ್ತು 8147215418 ಈ ಮೊಬೈಲ್ ನಂಬರ್ ಗಳನ್ನು‌ ಸಂಪರ್ಕಿಸಬಹುದು….