Categories
ಕ್ರಿಕೆಟ್

ಭಾರತ ಅಥವಾ ಆಸ್ಟ್ರೇಲಿಯಾ, ಯಾರು ಸೇರಲಿದ್ದಾರೆ ಗೆಲುವಿನ ದಡ?

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ODI ವಿಶ್ವಕಪ್‌ನ ಅಂತಿಮ ಪಂದ್ಯಕ್ಕೆ ಹೆಚ್ಚು ಸಮಯ ಉಳಿದಿಲ್ಲ.ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಾಯಕತ್ವದ ಪ್ರಸ್ತುತ ಭಾರತೀಯ ಪಾಳಯ ಉನ್ನತ ಪ್ರದರ್ಶನದಲ್ಲಿ ಓಡುತ್ತಿದ್ದಾರೆ ಮತ್ತು ಇದುವರೆಗೆ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಅಜೇಯರಾಗಿದ್ದಾರೆ. ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಗ್ರ್ಯಾಂಡ್ ಫೈನಲ್‌ಗೆ ವೇದಿಕೆ ಸಿದ್ಧವಾಗಿದೆ. ವಿಶ್ವ ಚಾಂಪಿಯನ್ ಅನ್ನು ನಿರ್ಧರಿಸುವ ಬ್ಲಾಕ್‌ಬಸ್ಟರ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸಲು ಭಾರತ ಸಿದ್ಧವಾಗಿದೆ. ಅಹಮದಾಬಾದ್‌ನ ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯವು ನಡೆಯಲಿದ್ದು
ಇದು ಸಂಪೂರ್ಣವಾಗಿ ತುಂಬಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಕ್ರೀಡಾಂಗಣದಲ್ಲಿ ಆಟದ ಸಮಯದಲ್ಲಿ 130,000 ಕ್ಕೂ ಹೆಚ್ಚು ಜನರು ಉಪಸ್ಥಿತರಿರುತ್ತಾರೆ.
ಭಾನುವಾರ ನಡೆಯಲಿರುವ ಈ ಹೈ-ವೋಲ್ಟೇಜ್ IND vs AUS ಘರ್ಷಣೆಯಲ್ಲಿ ಕೇವಲ ಅಭಿಮಾನಿಗಳು ಮಾತ್ರವಲ್ಲ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದಂದು ಪಂದ್ಯವನ್ನು   ವೀಕ್ಷಿಸುವುದಕ್ಕಾಗಿ ಪಾಲ್ಗೊಳ್ಳಲು ಸಿದ್ಧರಾಗಿದ್ದಾರೆ.
 *20 ವರ್ಷಗಳ ಹಿಂದಿನ ಸೋಲಿನ ಕಿಚ್ಚಿಗೆ ಬಲಿಯಾಗುವುದೇ ಆಸೀಸ್?* 
ಭಾರತ ಮತ್ತು ಆಸ್ಟ್ರೇಲಿಯಾ ಎರಡಕ್ಕೂ 2023ರ ಏಕದಿನ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಅವಕಾಶ ಇನ್ನೂ ಇದೆ. ಆಸ್ಟ್ರೇಲಿಯ ತಂಡವು ವಿಶ್ವಕಪ್‌ನಲ್ಲಿ ಗರಿಷ್ಠ  ಐದು ಬಾರಿ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದೆ. ಆಸ್ಟ್ರೇಲಿಯಾ ತಂಡ ಆರನೇ ಬಾರಿಗೆ ಈ ಪ್ರಶಸ್ತಿಯನ್ನು ವಶಪಡಿಸಿಕೊಳ್ಳಲು ಬಯಸಿದೆ.
 *ಭಾರತಕ್ಕೆ ಅವಕಾಶ:* ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡಕ್ಕೆ ಮೂರನೇ ಬಾರಿ ಏಕದಿನ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಅವಕಾಶವಿದೆ. 1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 2011 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿಯನ್ನು ವಶಪಡಿಸಿಕೊಂಡಿತ್ತು. ರೋಹಿತ್ ಶರ್ಮಾಗೆ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ಅವಕಾಶವಿದೆ.
 *ಭಾರತದ ಗೆಲುವಿನ ನಿರೀಕ್ಷೆ* : ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್‌ನಲ್ಲಿ ನೆಚ್ಚಿನ ತಂಡ ಯಾವುದು? ಕ್ರಿಕೆಟ್ ತಜ್ಞರ ಪ್ರಕಾರ, ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. ಏಕದಿನ ವಿಶ್ವಕಪ್‌ನಲ್ಲಿ ಸತತ 10 ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ. ಸದ್ಯಕ್ಕೆ ಭಾರತ ತಂಡ ಕ್ರಿಕೆಟ್ ಆಡುತ್ತಿರುವ ರೀತಿ, ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವಲ್ಲಿ ಯಶಸ್ವಿಯಾಗಲಿದೆ ಎಂದು ಹಲವು ಕ್ರಿಕೆಟ್ ಪಂಡಿತರು ನಂಬಿದ್ದಾರೆ.
 *ಕೊಹ್ಲಿ-ಶಮಿ ಮೇಲೆ ಕಣ್ಣು* : ಭಾರತ ತಂಡದ ಒಂದನೇ ಕ್ರಮಾಂಕದ  ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಈ ವಿಶ್ವಕಪ್‌ನಲ್ಲಿ ಗರಿಷ್ಠ 711 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಕೊಹ್ಲಿ ಬ್ಯಾಟ್‌ನಿಂದ ದೊಡ್ಡ ಸ್ಕೋರ್‌ಗಳನ್ನು ನಿರೀಕ್ಷಿಸಬಹುದು. ವಿರಾಟ್ ಕೊಹ್ಲಿ ಈ ವರ್ಷ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಬಹುದು. ಒಂದು ವೇಳೆ ವಿರಾಟ್ ಕೊಹ್ಲಿ ಈ ರೀತಿ ಮಾಡಿದರೆ ಗೋಲ್ಡನ್ ಬ್ಯಾಟ್ ಪ್ರಶಸ್ತಿಗೆ ಭಾಜನರಾಗಲಿದ್ದಾರೆ. ಮೊಹಮ್ಮದ್ ಶಮಿ 6 ಪಂದ್ಯಗಳಲ್ಲಿ 23 ವಿಕೆಟ್ ಪಡೆದು ಸಂಚಲನ ಮೂಡಿಸಿದ್ದಾರೆ. ಅವರು ಗೋಲ್ಡನ್ ಬಾಲ್ ಪಡೆಯಬಹುದು.
ರೋಹಿತ್ ಶರ್ಮಾ ಅಂಡ್ ಬಾಯ್ಸ್ ಭಾನುವಾರ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದ್ದಾರೆ.ಭಾನುವಾರದಂದು ಎರಡು ಅತ್ಯುತ್ತಮ ತಂಡಗಳು ಪರಸ್ಪರ ಮುಖಾಮುಖಿಯಾದಾಗ ಇದು ಕ್ರಿಕೆಟ್‌ನಲ್ಲಿ ದೊಡ್ಡ ದಿನವಾಗಿರುತ್ತದೆ. ಯಾವ ತಂಡ ಹೊಸ ವಿಶ್ವ ಚಾಂಪಿಯನ್ ಆಗಲಿದೆ ಎಂಬುದನ್ನು ಈ ಪಂದ್ಯ ನಿರ್ಧರಿಸಲಿದೆ. ಪಂದ್ಯಾವಳಿಯಲ್ಲಿ ಭಾರತ ಒಂದೇ ಒಂದು ಪಂದ್ಯವನ್ನು ಕಳೆದುಕೊಂಡಿಲ್ಲ, ಮತ್ತು ಆಸ್ಟ್ರೇಲಿಯಾ ಸತತ ಎಂಟು ಜಯಗಳಿಸಿದೆ.
ರೋಹಿತ್ ಶರ್ಮಾ ಅಂಡ್ ಬಾಯ್ಸ್
ಅದ್ಭುತವಾಗಿದ್ದಾರೆ. ಆದರೆ ಆಸ್ಟ್ರೇಲಿಯಾ ಫೈನಲ್‌ನಲ್ಲಿ ಅವರಿಗಾಗಿ ಕಾಯುತ್ತಿದೆ. ಇದು ಎರಡು ಅತ್ಯುತ್ತಮ ತಂಡಗಳ ನಡುವೆ ಕಠಿಣ ಸ್ಪರ್ಧೆಯಾಗಲಿದೆ ಮತ್ತು ಯಾವ ತಂಡವು ಆಟದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯನ್ನು ಎತ್ತುತ್ತದೆ ಎಂಬುದನ್ನು ಸಮಯ ಮಾತ್ರ ಹೇಳುತ್ತದೆ. ಹಳದಿ ಬಣ್ಣದ ಪುರುಷರನ್ನು ಎದುರಿಸಲು ಭಾರತೀಯ ನಾಯಕ ಸಜ್ಜಾಗಿದ್ದಾರೆ.
ನಮ್ಮ ‘ಫೈನಲ್’ ಎದುರಾಳಿ ಆಸ್ಟ್ರೇಲಿಯಾ ವಿರುದ್ಧ ಭಾರತವು ತಮ್ಮ ಮೂರನೇ ಜಾಗತಿಕ ಕಿರೀಟವನ್ನು ಎತ್ತುವ ಗುರಿಯೊಂದಿಗೆ ಆಸ್ಟ್ರೇಲಿಯಾವನ್ನು ಎದುರಿಸಲಿ. 20 ವರ್ಷಗಳ ಹಿಂದಿನ ಫೈನಲ್ ಸೋಲಿಗೆ ಸಡ್ಡು ಹೊಡೆದು, 2003 ವಿಶ್ವಕಪ್ ಫೈನಲ್ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲಿ ಭಾರತ.
✍️ ಸುರೇಶ್ ಭಟ್, ಮೂಲ್ಕಿ
ಕ್ರೀಡಾ ಅಂಕಣಕಾರ
ಸ್ಪೋರ್ಟ್ಸ್ ಕನ್ನಡ. ಕಾಮ್
Categories
ಕ್ರಿಕೆಟ್

ಟೀಮ್ ಇಂಡಿಯಾ ತೂಫಾನಿ ಪ್ರದರ್ಶನ ಮುಂದೆ ನೆಲಕಚ್ಚುವುದೇ ಆಸೀಸ್?

ಅಹಮದಾಬಾದ್‌ನ ನರೇಂದ್ರ ಮೋದಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್‌ನಲ್ಲಿ ಭಾರತವು ತಮ್ಮ ಮೂರನೇ ಜಾಗತಿಕ ಕಿರೀಟವನ್ನು ಎತ್ತುವ ಗುರಿಯೊಂದಿಗೆ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಎರಡು ಅತ್ಯುತ್ತಮ ತಂಡಗಳ ನಡುವಿನ ಹಣಾಹಣಿ ಇದಾಗಿದೆ.
ವಿಶ್ವಕಪ್‌ನ ಲೀಗ್ ಹಂತದಲ್ಲಿ ಭಾರತ ಅಜೇಯವಾಗಿ ಉಳಿದುಕೊಂಡಿತು ಮತ್ತು ಸೆಮಿಸ್‌ನಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿತು. ಮತ್ತೊಂದೆಡೆ, ಆಸ್ಟ್ರೇಲಿಯಾ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಲೀಗ್ ಹಂತದಲ್ಲಿ ಸೋತಿತು, ಆದರೆ ನಂತರ ಉಳಿದ ಪಂದ್ಯಗಳಲ್ಲಿ ಗೆದ್ದಿತು.
ಅವರು ಇತ್ತೀಚೆಗೆ ಎರಡನೇ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ 8 ನೇ ವಿಶ್ವಕಪ್ ಫೈನಲ್‌ಗೆ ತಮ್ಮ ಹಾದಿಯನ್ನು ಪಡೆದರು.ODI ಮಾದರಿಯಲ್ಲಿ ತಮ್ಮ ಪ್ರಾಬಲ್ಯವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಅವರು ಆರನೇ ವಿಶ್ವಕಪ್ ಪ್ರಶಸ್ತಿಯನ್ನು ಗುರಿಯಾಗಿಸಿಕೊಂಡಿದ್ದಾರೆ.
ಸ್ಪರ್ಧೆಯು ಅದರ ಮುಕ್ತಾಯವನ್ನು ಸಮೀಪಿಸುತ್ತಿದ್ದಂತೆ, ಕುತೂಹಲ ಹೆಚ್ಚು ತೀವ್ರಗೊಳ್ಳುತ್ತಿದೆ ಮತ್ತು ಅಭಿಮಾನಿಗಳ ಒಂದು ಪ್ರಶ್ನೆಯೆಂದರೆ ಫೈನಲ್‌ನಲ್ಲಿ  ಏನಾಗುತ್ತದೆ?
2003ರ ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಆಸ್ಟ್ರೇಲಿಯಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತಾ ಭಾರತ?
 ✍🏼ಸುರೇಶ್ ಭಟ್, ಮೂಲ್ಕಿ
ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಅಂಕಣಕಾರ
Categories
ಕ್ರಿಕೆಟ್

2023 ಕ್ರಿಕೆಟ್ ವಿಶ್ವಕಪ್ – ಟೀಮ್ ಭಾರತವೇ ಫೇವರಿಟ್.

ಯಾವ ಕೋನದಲ್ಲಿ ನೋಡಿದರೂ ಭಾರತವೇ ಬಲಿಷ್ಠ.
——————————————–
2023ರ ಕ್ರಿಕೆಟ್ ವಿಶ್ವಕಪ್ ಈಗ ನಿರ್ಣಾಯಕ ಹಂತಕ್ಕೆ ತಲುಪಿದೆ. ಬಲಿಷ್ಠ ಭಾರತ ತಂಡವು ಎಲ್ಲಾ ಪಂದ್ಯಗಳನ್ನೂ ಗೆದ್ದು ಫೈನಲ್ ಪ್ರವೇಶ ಮಾಡಿದೆ. ಸರಾಸರಿ ಕೂಡ ತುಂಬಾ ಅದ್ಭುತ ಇದೆ. ಈ ಬಾರಿಯ ಕ್ರಿಕೆಟ್ ವಿಶ್ವಕಪ್ ಕೂಟದಲ್ಲಿ ಭಾರತವೊಂದೇ ಅಜೇಯ ತಂಡ.
ಹಾಗೆಯೇ ಭಾರತವು ತಾನು ಗೆದ್ದಿರುವ ಎಲ್ಲ ಹತ್ತು ಪಂದ್ಯಗಳನ್ನು ಏಕಪಕ್ಷೀಯವಾಗಿಯೇ ದೊಡ್ಡ ಮಾರ್ಜಿನಿನಲ್ಲಿಯೇ ಗೆದ್ದಿದೆ. ಎಲ್ಲ ಆಟಗಾರರೂ ಅದ್ಭುತ ಫಾರ್ಮನಲ್ಲಿ ಇದ್ದಾರೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಿಯೂ ಕೊರತೆ ಇಲ್ಲ.   ಹಿಂದಿನ ಸರಣಿಗಳಲ್ಲಿ ಭಾರತಕ್ಕೆ ತೊಂದರೆ ಕೊಡುತ್ತಿದ್ದ ಮಿಡಲ್ ಆರ್ಡರ್ ಸಮಸ್ಯೆಯು ಪೂರ್ತಿ ಪರಿಹಾರ ಆಗಿದೆ. ಈ ಬಾರಿಯ ಕೂಟದ ಮೊದಲ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ದ  ಆರಂಭದ ಹಿನ್ನಡೆಯನ್ನು ಮೆಟ್ಟಿ ನಿಂತು ಗೆದ್ದಿದೆ.  ಟೀಮ್ ಸ್ಪಿರಿಟ್ ಅದ್ಭುತವಾಗಿದೆ. ರೋಹಿತ್ ಶರ್ಮಾ ನಾಯಕತ್ವ ಕ್ಲಿಕ್ ಆಗ್ತಾ ಇದೆ. ಗೆಲ್ಲಲು ಇನ್ನೇನು ಬೇಕು?
ರಿಪೀಟ್ ಆಗ್ತದಾ 1983, 2011?
——————————————–
1983ರಲ್ಲಿ ಭಾರತವು ಮೊದಲ ವಿಶ್ವಕಪ್ ಗೆದ್ದಾಗ ಭಾರತದ ಟೀಮ್ ‘ಅಂಡರ್ ಡಾಗ್’ ಆಗಿತ್ತು. ತಂಡದ ಮೇಲೆ ಯಾರೂ ನಿರೀಕ್ಷೆಯನ್ನು ಇಟ್ಟಿರಲಿಲ್ಲ. ಭಾರತಕ್ಕೆ ಸ್ಫೂರ್ತಿ ಆದದ್ದು ಕಪಿಲ್ ದೇವ್ ಅವರ ಸ್ಫೂರ್ತಿಯ ನಾಯಕತ್ವ. ಅವರು ತಮ್ಮ ಹುಡುಗರಿಗೆ ಹೇಳಿದ ಮುಖ್ಯವಾದ ಮಾತು – ನಮ್ಮ ಮೇಲೆ ಯಾರೂ ನಿರೀಕ್ಷೆ ಇಟ್ಟಿಲ್ಲ. ಆದ್ದರಿಂದ ಒತ್ತಡ ನಮ್ಮ ಮೇಲೆ ಇಲ್ಲ. ವಿಂಡೀಸ್ ತಂಡಕ್ಕೆ ತಮ್ಮ ಟ್ರೋಫಿ ಉಳಿಸಿಕೊಳ್ಳುವ ಒತ್ತಡ ಇದೆ. ಆದ್ದರಿಂದ ಗೆಲ್ಲೋದು ನಾವೇ!
ಹಾಗೆಯೇ ಆಯಿತು. 1983ರ ಜೂನ್ 25ರಂದು ಮಧ್ಯರಾತ್ರಿ ಲಾರ್ಡ್ಸ್ ಮೈದಾನದಲ್ಲಿ  ಕಪಿಲ್ ದೇವ್ ಭಾರತದ ಮೊದಲ ವಿಶ್ವಕಪ್ ಗೆದ್ದಾಗ ಕೋಟಿ ಕೋಟಿ ಭಾರತೀಯರು ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.
2011ರಲ್ಲಿ ಡಿಫರೆಂಟ್ ಆದ ಸನ್ನಿವೇಶ ಇತ್ತು.
—————————————-ಧೋನಿಯ ನಾಯಕತ್ವ, ಸಚಿನ್ ಅವರ ಕೊನೆಯ ವಿಶ್ವಕಪ್ ಎಂಬ ಎಮೋಷನ್, ಎಲ್ಲ ಆಟಗಾರರ ಅದ್ಭುತವಾದ ಫಾರ್ಮ್, ಗೌತಮ್ ಗಂಭೀರ್ ಅವರ ಸ್ಮರಣೀಯ ಇನ್ನಿಂಗ್ಸ್ ಇವುಗಳು ಭಾರತವನ್ನು ಗೆಲ್ಲಿಸಿದ್ದವು.
ಫೈನಲ್ ಪಂದ್ಯದಲ್ಲಿ ನಾಯಕ  ಧೋನಿ ಶ್ರೀಲಂಕಾದ ನುವನ್ ಕುಲಶೇಖರ ಅವರ ವೇಗದ  ಚೆಂಡಿಗೆ ಹೆಲಿಕಾಪ್ಟರ್ ಶಾಟ್ ಮೂಲಕ ಸಿಕ್ಸರ್ ಎತ್ತಿದಾಗ ಭಾರತವು ಗೆದ್ದದ್ದು ಅದ್ಭುತ ಕ್ಷಣ. ಅದು ತಂಡ ಸ್ಫೂರ್ತಿಯ ಗೆಲುವು.
ಈ ಬಾರಿಯ ಟೀಮ್ ಇಂಡಿಯಾ ಧೋನಿ ನಾಯಕತ್ವದ ತಂಡಕ್ಕಿಂತ ಹೆಚ್ಚು ಸ್ಟ್ರಾಂಗ್ ಇದೆ. ಅಹಮದಾಬಾದಿನ ವಿಸ್ತಾರವಾದ  ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ರವಿವಾರ 1.32 ಲಕ್ಷ ಕ್ರಿಕೆಟ್ ಅಭಿಮಾನಿಗಳು ಅಬ್ಬರಿಸಿ,  ಬೊಬ್ಬಿರಿದು ಭಾರತವನ್ನು ಬೆಂಬಲಿಸಲಿದ್ದಾರೆ. ಒತ್ತಡವನ್ನು ಸಹಜವೇ ಅನ್ನುವ ಹಾಗೆ ಭಾರತೀಯ ಆಟಗಾರರು  ಹ್ಯಾಂಡಲ್ ಮಾಡೋದನ್ನು ಈ ಬಾರಿ ಕಲಿತಿದ್ದಾರೆ. ಆದ್ದರಿಂದ ಯಾವ ರೀತಿಯಲ್ಲಿ ನೋಡಿದರೂ ಭಾರತವೇ ಬಲಿಷ್ಠ ಎಂದು ಅನ್ನಿಸುತ್ತದೆ.
ಟೀಮ್ ಆಸ್ಟ್ರೇಲಿಯಾ ಬಗ್ಗೆ…
———————————–
ಐದು ಬಾರಿಯ ಚಾಂಪಿಯನ್ ತಂಡ ಆಗಿದ್ದರೂ ಇತಿಹಾಸದ ಸಾಧನೆಗಳು ಯಾವ ತಂಡವನ್ನು  ಬೆಂಬಲಿಸುವುದಿಲ್ಲ ಅನ್ನೋದೇ ಇತಿಹಾಸದ ಪಾಠ! ಟ್ರಾವಿಸ್ ಹೆಡ್ ಬಂದ ನಂತರ ಅವರ ಬ್ಯಾಟಿಂಗ್ ಸ್ವಲ್ಪ ಸ್ಟ್ರಾಂಗ್ ಆದ ಹಾಗೆ ಅನ್ನಿಸುತ್ತದೆ. ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಲಬುಶಾನೆ ಬ್ಯಾಟಿಂಗ್ ವಿಭಾಗದ ಭರವಸೆಗಳು. ಸ್ಪಿನ್ ಬೌಲಿಂಗ್ ಎದುರಿಸುವ ಸಾಮರ್ಥ್ಯ ಅವರ  ತಂಡದಲ್ಲಿ ಕೊರತೆ ಇದೆ ಎನ್ನುವುದು ಹಲವು ಬಾರಿ ಸಾಬೀತಾಗಿದೆ. ಮ್ಯಾಕ್ಸವೆಲ್ ಅಬ್ಬರಿಸಿದ್ದು ಒಂದೇ ಪಂದ್ಯದಲ್ಲಿ! ಅದೂ ಕೂಡ ದುರ್ಬಲವಾದ ಅಫ್ಘಾನ್ ತಂಡದ ವಿರುದ್ಧ. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಆಸ್ಟ್ರೇಲಿಯಾ ತಂಡದ ಮಿಡಲ್ ಆರ್ಡರ್ ಹೆಚ್ಚಿನ ಪಂದ್ಯಗಳಲ್ಲಿ ಕುಸಿತ ಕಂಡಿದೆ. ಪರಿಣತ ಸ್ಪಿನ್ನರ್ ಆಗಿ ಆಡಮ್ ಜಂಪಾ ಮಾತ್ರ ಇದ್ದಾರೆ. ಮಾರ್ಷ್ ಮತ್ತು ಹ್ಯಾಝಲವುಡ್ ಒಳ್ಳೆಯ ಲಯ ಹೊಂದಿದ್ದಾರೆ. ಪ್ಯಾಟ್ ಕಮಿನ್ಸ್ ಮಿದುವೇಗದ ಬೌಲಿಂಗ್ ಭಾರತೀಯರಿಗೆ ದೊಡ್ಡ ಸಮಸ್ಯೆ ಆಗದು. ದೊಡ್ಡ ದೊಡ್ಡ ಪಂದ್ಯಗಳಲ್ಲಿ ಯಾವಾಗಲೂ ಮಿಂಚುವ ವಾರ್ನರ್ ಮತ್ತು ಕ್ಲಾಸಿಕ್ ಆಟಗಾರ ಸ್ಟೀವ್ ಸ್ಮಿತ್ ಅವರನ್ನು ನಿಯಂತ್ರಣ ಮಾಡಿದರೆ ಭಾರತಕ್ಕೆ ಬೇರೆ ಯಾರೂ ಸಮಸ್ಯೆ ಆಗಲಾರರು. ಈ ವಿಶ್ವಕಪ್ ಕೂಟದ  ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತಕ್ಕೆ ಸೋತಿದೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಕೂಡ ಲೀಗ್ ಹಂತದಲ್ಲಿ ಸೋತಿದೆ. ಹಾಗೆಯೇ ಗೆದ್ದಿರುವ ಪಂದ್ಯಗಳನ್ನು ಕೂಡ ಆಸ್ಟ್ರೇಲಿಯಾ ಭಾರತ ಗೆದ್ದಿರುವ ಹಾಗೆ ಅಧಿಕಾರಯುತವಾಗಿ ಗೆದ್ದಿಲ್ಲ ಅನ್ನೋದು ಭಾರತಕ್ಕೆ ಪ್ಲಸ್. ಸೆಮಿ ಫೈನಲ್ ಪಂದ್ಯದಲ್ಲಿ ಕೂಡ ಅದು ಗೆದ್ದದ್ದು ಭಾರೀ ಕಷ್ಟದಲ್ಲಿ.
ಟೀಮ್ ಭಾರತವು  ಗಮನಿಸಬೇಕಾದದ್ದು…
——————————————–
೧) ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಬೌಲರಗಳು ತುಂಬಾ ಅತಿರಿಕ್ತ ರನ್ ನೀಡಿದ್ದಾರೆ. ಅದನ್ನು ತಡೆಯಬೇಕು.
೨) ಅತಿಯಾದ ಆತ್ಮವಿಶ್ವಾಸದ ಫಲವಾಗಿ ಎರಡು ಸುಲಭದ ಕ್ಯಾಚ್ ಡ್ರಾಪ್ ಆಗಿದೆ. ಅದು ಬೇಡ.
೩) ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ಆರಂಭದಲ್ಲಿ ಆರನೇ ಬೌಲರ್ ಕೊರತೆಯು ಕಾಡಿದೆ. ಏನಾದರೂ ಬದಲಾವಣೆ ಮಾಡಬೇಕು ಅಂತಾದರೆ ಸೂರ್ಯ ಕುಮಾರ್ ಯಾದವ್ ಬದಲಿಗೆ ರವಿಚಂದ್ರನ್ ಅಶ್ವಿನ್ ಅವರಿಗೆ ಒಂದು ಅವಕಾಶ ಕೊಡಬಹುದು ( ನನ್ನ ಪ್ರಕಾರ ಅದು ಅಗತ್ಯ ಇಲ್ಲ)
೪) ಸಿರಾಜ್ ವೇಗಕ್ಕೆ ಸ್ವಲ್ಪ ಕಡಿವಾಣ ಹಾಕಿ ಲೆಂಥ್ ಮತ್ತು ಸ್ವಿಂಗ್ ಎಸೆತಗಳಿಗೆ ಪ್ರಯತ್ನ ಮಾಡುವುದು ಒಳ್ಳೆಯದು. ಆದರೆ ಈ ಹಿಂದಿನ  ಕೂಟಗಳ ಫೈನಲ್  ಪಂದ್ಯಗಳಲ್ಲಿ ಸಿರಾಜ್ ಹೆಚ್ಚು ಬಾರಿ ಕ್ಲಿಕ್ ಆಗಿದ್ದಾರೆ.
೫) ಮೊದಲ ಹತ್ತು ಓವರ್ ಪವರ್ ಪ್ಲೆ ಆಟದಲ್ಲಿ ರೋಹಿತ್ ಶರ್ಮ ನಿಲ್ಲಬೇಕು. ಆಕ್ರಮಣಕಾರಿ ಆಗಿಯೇ ಆಡಬೇಕು. ಐವತ್ತರ ಗಡಿಯಲ್ಲಿ ರೋಹಿತ್ ಶರ್ಮ ತುಸು
ಎಚ್ಚರವಹಿಸಬೇಕು. ರೋಹಿತ್ ಹೆಚ್ಚು ಹೊತ್ತು ನಿಂತಷ್ಟೂ ಭಾರತಕ್ಕೆ ಭಾರೀ ಲಾಭ ಆಗುತ್ತದೆ.
೬) ಶುಭಮನ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್ ತಮ್ಮ ನ್ಯಾಚುರಲ್ ಆಟ ಆಡ್ತಾ ಇದ್ದಾರೆ. ಉತ್ತಮ ಫಾರ್ಮ್ ಎಂಜಾಯ್ ಮಾಡ್ತಾ ಇದ್ದಾರೆ. ಹಾಗೆಯೇ ಆಡಿದರೆ ಸಾಕು.
೭) ಆಡಮ್ ಜಂಪಾ ಮತ್ತು ಹ್ಯಾಜಲ್ವುಡ್ ಅವರು ಬಾಲ್ ಟರ್ನ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅವರ ಬಗ್ಗೆ ಸ್ವಲ್ಪ ಎಚ್ಚರ ಅಗತ್ಯ.
 ಭರತವಾಕ್ಯ
——————
ಯಾವ ಮಗ್ಗುಲಲ್ಲಿ ಅವಲೋಕನ ಮಾಡಿದರೂ ಭಾರತವೇ ಈ ಬಾರಿಯ ಫೇವರಿಟ್ ಆಗಿ ಗೋಚರ ಆಗ್ತಾ ಇದೆ. ಒತ್ತಡವೂ ಆಸ್ಟ್ರೇಲಿಯಾ ಮೇಲೆ ಇದೆ. ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಭಾರತಕ್ಕೆ ಒಳ್ಳೇಯದು. ಚೇಸ್ ಮಾಡುವ ಅವಕಾಶ ದೊರೆತರೆ ಭಾರತಕ್ಕೆ ಯಾವ ಟಾರ್ಗೆಟ್ ಕೂಡ ಸವಾಲಾಗದು.
ಅತಿಯಾದ ಆತ್ಮವಿಶ್ವಾಸ ಮತ್ತು ದುಡುಕುತನ ಇವೆರಡನ್ನು ಭಾರತ ಮೀರಿ ನಿಂತರೆ, ಮಳೆ ಬಂದು  ದರಿದ್ರ ನಿಯಮಗಳು ಅಡ್ಡಬಾರದೆ ಹೋದರೆ, ಪಿಚ್ ದೊಡ್ಡ ಮಟ್ಟದಲ್ಲಿ ಕೈಕೊಡದೆ ಹೋದರೆ…..ನವೆಂಬರ್ 19ರಂದು ರಾತ್ರಿ ರೋಹಿತ್ ಶರ್ಮ ಸಲೀಸಾಗಿ ವಿಶ್ವಕಪ್ ಎತ್ತುವ ಸಂಭ್ರಮದ ದೃಶ್ಯವನ್ನು ನಾವು ಖಂಡಿತವಾಗಿ ಕಣ್ಣು ತುಂಬಿಸಿಕೊಳ್ಳಬಹುದು.
ಗೆದ್ದು ಬಾ ಭಾರತ.
Categories
ಕ್ರಿಕೆಟ್

ವಿಶ್ವಕಪ್ 2023: ಆಸ್ಟ್ರೇಲಿಯಾದ ಮೊದಲ ಪಂದ್ಯ ಭಾರತದ ವಿರುದ್ಧ

ODI ವಿಶ್ವಕಪ್ ಅನ್ನು ಅತಿ ಹೆಚ್ಚು ಬಾರಿ ಗೆದ್ದ ಆಸ್ಟ್ರೇಲಿಯಾ ತಂಡವನ್ನು ಈ ವರ್ಷವೂ ನೆಚ್ಚಿನ ತಂಡವೆಂದು ಪರಿಗಣಿಸಲಾಗಿದೆ. ಆಸ್ಟ್ರೇಲಿಯಾ ಇದುವರೆಗೆ ಐದು ಬಾರಿ ಏಕದಿನ ವಿಶ್ವಕಪ್ ಗೆದ್ದಿದೆ. ವಿಶ್ವಕಪ್ ಇತಿಹಾಸದಲ್ಲಿ ಯಾವುದೇ ತಂಡ ಇಷ್ಟು ಬಾರಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿರಲಿಲ್ಲ. ಈ ಬಾರಿಯ ವಿಶ್ವಕಪ್‌ನಲ್ಲೂ ಆಸ್ಟ್ರೇಲಿಯಾ ಅತ್ಯಂತ ಬಲಿಷ್ಠವಾಗಿ ಕಾಣುತ್ತಿದೆ.
ಇತ್ತೀಚೆಗಷ್ಟೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತವನ್ನು ಸೋಲಿಸುವ ಕೆಲಸವನ್ನು ಆಸ್ಟ್ರೇಲಿಯಾ ಮಾಡಿತ್ತು. ಆಸ್ಟ್ರೇಲಿಯ ತಂಡ ಟೆಸ್ಟ್‌ಗಿಂತ ಏಕದಿನ ಪಂದ್ಯಗಳಲ್ಲಿ ಬಲಿಷ್ಠವಾಗಿದೆ. ಮಿಚೆಲ್ ಮಾರ್ಷ್, ಕ್ಯಾಮರೂನ್ ಗ್ರೀನ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತಹ ಆಲ್ ರೌಂಡರ್ ಆಟಗಾರರು ತಂಡವನ್ನು ಅಪಾಯಕಾರಿಯಾಗಿ ಮಾಡಲು ಕೆಲಸ ಮಾಡುತ್ತಾರೆ.
 *ಆಸ್ಟ್ರೇಲಿಯಾ ತಂಡದಲ್ಲಿ ಹಲವು ಮ್ಯಾಚ್ ವಿನ್ನರ್‌ಗಳು*
ಭಾರತದ ವಿರುದ್ಧ ಮೊದಲ ಪಂದ್ಯ ಆಡುತ್ತಿರುವ ಆಸ್ಟ್ರೇಲಿಯಾ ತಂಡದಲ್ಲಿ ಹಲವು ಮ್ಯಾಚ್ ವಿನ್ನರ್ ಆಟಗಾರರಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ಎರಡನ್ನೂ ಅಗ್ರ ನಾಲ್ಕು ತಂಡಗಳಲ್ಲಿ ಎಣಿಕೆ ಮಾಡಲಾಗುತ್ತಿದೆ. ಆಸ್ಟ್ರೇಲಿಯಾ ಮತ್ತು ಭಾರತವನ್ನು ಹೊರತುಪಡಿಸಿ, ಪಾಕಿಸ್ತಾನ-ಇಂಗ್ಲೆಂಡ್ ಕೂಡ ಫೇವರಿಟ್ ಎಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವ ತಂಡಗಳು ಈ ಬಾರಿಯ ವಿಶ್ವಕಪ್‌ನಲ್ಲಿ ಪ್ರಭಾವಿ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗುತ್ತವೆ ಎಂಬುದು ಕುತೂಹಲ ಮೂಡಿಸಿದೆ.
ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ 2023 ರ ವಿಶ್ವಕಪ್‌ನಲ್ಲಿ  ಯಶಸ್ಸನ್ನು ನಿರ್ಮಿಸಲು ಉತ್ಸುಕರಾಗಿದ್ದಾರೆ. ” 2023ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ, ಭಾರತ ತಂಡವನ್ನು ಎದುರಿಸುವ ಅದ್ಭುತ ತಂಡಕ್ಕೆ ಇದು ಬೃಹತ್ ಸಂದರ್ಭವಾಗಿದೆ. ಭಾರತ ಆಸ್ಟ್ರೇಲಿಯವನ್ನು ಆತಿಥ್ಯ ವಹಿಸುತ್ತದೆ. ಇವೆರಡು ತಂಡಗಳು  WTC ಫೈನಲ್‌ಗೆ ಪ್ರವೇಶ ಪಡಕೊಳ್ಳುವ ಸಾಧ್ಯತೆಗಳು ಇವೆ ” ಎಂದು ಮಾಜಿ ಕ್ರಿಕೆಟಿಗ  ಹಾಗೂ ಕ್ರಿಕೆಟ್ ವಿಶ್ಲೇಷಕ  ನಾಸಿರ್ ಹುಸೇನ್  ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
Categories
ಕ್ರಿಕೆಟ್

ಆಸ್ಟ್ರೇಲಿಯಾ ವಿರುದ್ಧ ಮೊಹಾಲಿ ಪಂದ್ಯದಲ್ಲಿ ಭಾರತದ ಸೋಲಿಗೆ ಯಾರು ಹೊಣೆ..? ಭುವನೇಶ್ವರ್ ಮೇಲೆ ಗವಾಸ್ಕರ್ ಗರಂ..!

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿಯೇ ಭಾರತ ತಂಡ ಉತ್ತಮ ಮೊತ್ತ ಕಲೆಹಾಕಿಯು ಮುಗ್ಗರಿಸಿ ಸೋಲಿನ ರುಚಿ ಉಂಡಿದೆ.
ಭಾರತ ತಂಡ ಬೃಹತ್ ಮೊತ್ತದ ಗುರಿ  ನೀಡಿದರೂ ಸಹ ಕಳಪೆ ಬೌಲಿಂಗ್‍ ನಿರ್ವಹಣೆಯಿಂದ ರೋಹಿತ್ ಪಡೆ ಸೋಲು ಎದುರಿಸಬೇಕಾಯಿತು.
ಹಾಗಾದ್ರೆ ಮೊಹಾಲಿ ಪಂದ್ಯದ ಸೋಲಿಗೆ ಯಾರು ಹೊಣೆ ? ಎನ್ನುವ ಪ್ರಶ್ನೆ ಕೆಲವರನ್ನು ಕಾಡಿದೆ ಇದಕ್ಕೆ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸುನಿಲ್ ಗವಾಸ್ಕರ್ ಉತ್ತರಿಸಿದ್ದಾರೆ. ಭಾರತ ತಂಡ ಉತ್ತಮ ಮೊತ್ತ ಕಲೆ ಹಾಕಿಯು ಸೋಲಿಗೆ ಕಾರಣವಾಗಿದ್ದು ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗಳನ್ನು ಕಟ್ಟು ಹಾಕಲಾರದೆ ಅತಿ ಹೆಚ್ಚು ರನ್ ಹೊಡೆಸಿಕೊಂಡ ಅನುಭವಿ ವೇಗಿ ಭುವನೇಶ್ವರ್ ಮೇಲೆ ಅವರು ಗರಂ ಆಗಿದ್ದಾರೆ.
ಹೌದು, ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಸಾಕಷ್ಟು ಪಂದ್ಯಗಳ ‘ಡೆತ್ ಓವರ್‌ಗಳಲ್ಲಿ ಪದೇ ಪದೇ ತಂಡದ ವೈಫಲ್ಯಕ್ಕೆ ಭಾರತದ ವೇಗಿ ಭುವನೇಶ್ವರ್ ಕುಮಾರ್ ಕಾರಣವೆಂದು ಆರೋಪಿಸಿದ್ದಾರೆ. ಮೊಹಾಲಿಯಲ್ಲಿ ಮಂಗಳವಾರ ನಡೆದ 3 ಪಂದ್ಯಗಳ ಸರಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ ಇಪ್ಪತ್ತು ಓವರ್‌ಗಳಲ್ಲಿ  ಆರು ವಿಕೆಟ್ ಕಳೆದುಕೊಂಡು 208 ರನ್‍ಗಳ ಸವಾಲಿನ ಮೊತ್ತ ಕಲೆ ಹಾಕಿತ್ತು ತಂಡದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಹೊರತಾಗಿಯೂ ಭಾರತ ತಂಡ 4 ವಿಕೆಟ್‍ಗಳಿಂದ ಸೋಲು ಕಾಣಬೇಕಾದದ್ದು ಮಾತ್ರ ದುರಂತವೆ ಹೌದು ಇದಕ್ಕೆ ನೇರ ಹೊಣೆ ಭಾರತ ತಂಡದ ವೇಗದ ಬೌಲರ್ ಭುವನೇಶ್ವರ್
*ನಾಲ್ಕು ಓವರ್ ಗಳಲ್ಲಿ 52 ರನ್‌ ಹೊಡಸಿಕೊಂಡ ಭುವಿ..!*  
ಭಾರತ ತಂಡದ ಅನುಭವಿ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಭುವನೇಶ್ವರ್ ಕುಮಾರ್ ಈ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಭುವಿ ಇನಿಂಗ್ಸ್‌ನ ಆರಂಭದಲ್ಲೆ ಒಂದರಮೇಲೊಂದು ವೈಡ್ ಬಾಲ್ ಎಸೆಯುವುದರೊಂದಿಕೆ ರನ್ ಕೂಡ ಹೊಡೆಸಿಕೊಂಡರು ಅದರಲ್ಲೂ ಅತ್ಯಂತ ನಿರ್ಣಾಯಕ 19ನೇ ಓವರ್‌ ಅನ್ನು ಬೌಲ್ ಮಾಡಿ ಭುವಿ 16 ರನ್ ಬಿಟ್ಟುಕೊಟ್ಟರು. ಈ ಓವರ್ ಪಂದ್ಯದ ಗತಿಯನ್ನೆ ಬದಲಿಸಿತ್ತು  ಭುವನೇಶ್ವರ್ ನಾಲ್ಕು ಓವರ್‌ಗಳಲ್ಲಿ 13 ಎಕಾನಮಿ ರೇಟ್‌ನಲ್ಲಿ 52 ರನ್ ಕೊಟ್ಟು ಸೋಲಿಗೆ ಪ್ರಮುಖ ಕಾರಣರಾದರು. ಭಾರತೀಯ ಬೌಲರ್‌ಗಳ ಪೈಕಿ ಭುವಿ ಬೌಲಿಂಗ್ ಪ್ರದರ್ಶನವು ಅತ್ಯಂತ ಕಳಪೆ ಮಟ್ಟದಲ್ಲಿತ್ತು ಆರಂಭದಿಂದಲೆ ಏನು ಕಳೆದುಕೊಂಡವರಂತೆ ಮೈದಾನದಲ್ಲಿ ಕಾಣುತ್ತಿದ್ದರು ಭುವಿ.
ಭಾರತ ತಂಡದ ಕಳಪೆ ಬೌಲಿಂಗ್ ಪ್ರದರ್ಶನದಿಂದ ಸುನಿಲ್ ಗವಾಸ್ಕರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನಾವು ಉತ್ತಮವಾಗಿ ಬೌಲಿಂಗ್ ಮಾಡಲಿಲ್ಲ. ಇದು ನಮಗೆ ದೊಡ್ಡ ಆತಂಕವನ್ನು ತಂದೊಡ್ಡಿದೆ. ಮುಂದಿನ ಪಂದ್ಯಗಳನ್ನು ಯೋಚಿಸುವಂತಾಗಿದೆ. ಅದರಲ್ಲೂ ತಂಡದ ಶ್ರೇಷ್ಠ ಬೌಲರ್ ಗಳಲ್ಲಿ ಒಬ್ಬರಾದ ಭುವನೇಶ್ವರ್ ಕುಮಾರ್ ಅನುಭವಿ ಬೌಲರ್ ಆಗಿದ್ದರು ಪ್ರತಿ ಬಾರಿಯೂ ಹೆಚ್ಚು ರನ್ ಬಿಟ್ಟುಕೊಡುತ್ತಿದ್ದಾರೆ. ಈ ಕಾರಣದಿಂದಲೇ ಭಾರತವನ್ನು ಪಾಕಿಸ್ತಾನ, ಶ್ರೀಲಂಕಾ ಮತ್ತು ಈಗ ಆಸ್ಟ್ರೇಲಿಯಾ ಕೂಡ ಸೋಲಿಸಿವೆ. ಆಸೀಸ್ ವಿರುದ್ಧ ನಾಲ್ಕು ಓವರ್ ಗಳಲ್ಲಿ ಭುವಿ ಹನ್ನೆರಡು ರನ್ ಸರಾಸರಿಯಲ್ಲಿ 52 ರನ್ ನಿಡಿದ್ದಾರೆ. ಪ್ರತಿ ಎಸೆತಕ್ಕೆ ಅವರು 2.16ರಂತೆ ರನ್ ನೀಡಿದ್ದಾರೆ. ಕಳೆದ 3 ಪಂದ್ಯಗಳ ಡೆತ್‍ ಓವರ್‍ ಳಲ್ಲಿ ಅವರು ಹೆಚ್ಚು ರನ್ ಬಿಟ್ಟುಕೊಟ್ಟಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ’ ಅಂತಾ ಗವಾಸ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ.ಇದು ತಂಡದ ಮುಂದಿನ ಪಂದ್ಯಗಳಲ್ಲೂ ಸೋಲಿನ ಭೀತಿ ಎದುರಾಗಿದೆ.
ಭುವನೇಶ್ವರ್ ಹೊರತಾಗಿ ವೇಗಿ ಹರ್ಷಲ್ ಕೂಡ ಈ ಪಂದ್ಯದಲ್ಲಿ ದುಬಾರಿ ಎನಿಸಿದರು. ಗಾಯದಿಂದ ಮರಳಿದ ನಂತರ ಅವರು ತಮ್ಮ ಮೊದಲ ಪಂದ್ಯ ಆಡಿದರು. ಹರ್ಷಲ್ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 49 ರನ್‌ ಬಿಟ್ಟುಕೊಟ್ಟರು. ಆದರೆ ಹರ್ಷಲ್ ವಾಪಸಾದ ನಂತರ ಇದು ಮೊದಲ ಪಂದ್ಯ’ವಾಗಿದೆ. ಹೀಗಾಗಿ ಅವರು ಮುಂದಿನ ಪಂದ್ಯಗಳಿಗೆ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಿದೆ ಎಂದು ಗವಾಸ್ಕರ್ ಖಡಕ್ಕಾಗಿ ಹೇಳಿದ್ದಾರೆ.
ಟಿ-20 ವಿಶ್ವಕಪ್‌ ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ಬೌಲರ್‌ಗಳು ಸಾಕಷ್ಟು ಓವರ್‌ಗಳನ್ನು ಬೌಲ್ ಮಾಡಿ ಅಭ್ಯಾಸ ಮಾಡಬೇಕಿದೆ ಬ್ಯಾಟಿಂಗ್ ನ ಬಲವನ್ನು ನಂಬಿ ಇದೇ ರೀತಿ ಬೌಲಿಂಗ್ ಮಾಡಿದರೆ ಬರಲಿರುವ ವಿಶ್ವಕಪ್ ಪಂದ್ಯದಲ್ಲಿ ಲೀಗ್ ಹಂತದಲ್ಲಿಯೇ ಭಾರತ ತಂಡ ಸೋತು ನಿರ್ಗಮಿಸಬೇಕಾದ ಸ್ಥಿತಿ ಬಂದರೂ ಬರಬಹುದು ಎಂದು ಕ್ರಿಕೆಟ್ ದಿಗ್ಗಜರ ಜೋತೆಗೆ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.
Categories
ಕ್ರಿಕೆಟ್

ಭಾರತ ತಂಡದ ಹೊಸ ಜೆರ್ಸಿ ಅನಾವರಣ: ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಹೊಸ ಜೆರ್ಸಿಯಲ್ಲಿ ಕಣಕ್ಕೆ ಇಳಿಯಲಿದೆ ಟೀಮ್ ಇಂಡಿಯಾ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂಬರುವ 2022 ರ ಟಿ 20 ವಿಶ್ವಕಪ್‌ಗಾಗಿ ಟೀಮ್ ಇಂಡಿಯಾದ ಹೊಸ ಅನಾವರಣಗೊಳಿಸಲಾಗುವುದಾಗಿ ಹೇಳಿತ್ತು. ಹೊಸ ಜೆರ್ಸಿಯ ಬಿಡುಗಡೆಗಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು ಎನ್ನುವುದು ಸತ್ಯ. ಈಗ ಅಭಿಮಾನಿಗಳ ಕಾಯುವಿಕೆಯು ಅಂತ್ಯ ವಾಗಿದೆ. ಅದರಂತೆ ಸೆಪ್ಟೆಂಬರ್ 18ರಂದು ಹೊಸ ವಿನ್ಯಾಸದ ಜೆರ್ಸಿಯನ್ನು ಅನಾವರಣಗೊಳಿಸಲಾಗಿದೆ.
ಈ ಬಾರಿಯ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಹೊಸ ಡ್ರರ್ಸ್ ನೊಂದಿಗೆ ಕಣಕ್ಕಿಳಿಯಲಿದೆ. ಟೀಮ್ ಇಂಡಿಯಾದ ಅಧಿಕೃತ ಜೆರ್ಸಿ ಪ್ರಾಯೋಜಕ ಎಂಪಿಎಲ್ (MPL) ಸ್ಪೋರ್ಟ್ಸ್ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯಗಳಲ್ಲಿ ಭಾರತ ತಂಡದ ಆಟಗಾರರು ಇದೇ ಜೆರ್ಸಿಯನ್ನು ಧರಿಸಿ ಕಣಕ್ಕಿಳಿಯಲಿದ್ದಾರೆ.
ಈ ಜೆರ್ಸಿಯು ಮೊದಲಿನಂತೆಯೇ ತಿಳಿ ಆಕಾಶ ನೀಲಿ ಛಾಯೆಗಳನ್ನು ಹೊಂದಿದೆ. 2007ರಲ್ಲಿ ಟಿ20 ವಿಶ್ವಕಪ್‌ನ ಉದ್ಘಾಟನಾ ಆವೃತ್ತಿಯ ಸಂದರ್ಭದಲ್ಲಿ ಭಾರತ ಇದೇ ರೀತಿಯ ಹೊಸ ಜೆರ್ಸಿಯನ್ನು ಹೊಂದಿತ್ತು. ಪುರುಷರ ತಂಡವನ್ನು ಹೊರತುಪಡಿಸಿ, ಹರ್ಮನ್‌ಪ್ರೀತ್ ಕೌರ್ ಮತ್ತು ತಂಡ ಕೂಡ ತಮ್ಮ ಮುಂಬರುವ ಪಂದ್ಯಗಳಿಗೆ ಇದೇ ಜರ್ಸಿಯನ್ನು ಧರಿಸಲಿದ್ದಾರೆ.
ಸೆಪ್ಟೆಂಬರ್ 20ರಿಂದ ಟಿ20 ಸರಣಿ ಆರಂಭವಾಗಲಿದೆ
ಏಷ್ಯಾ ಕಪ್ 2022 ರ ಸಮಯದಲ್ಲಿ ಟೀಮ್ ಇಂಡಿಯಾದ ಜರ್ಸಿಗೆ ಹೋಲಿಸಿದರೆ, ಹೊಸ  ನೀಲಿ ಬಣ್ಣದ ಹಗುರವಾದ ಆಛಾಯೆಯನ್ನು ಹೊಂದಿದೆ, ಅವರು 2007 ರ ಟಿ20 ವಿಶ್ವಕಪ್‌ನಲ್ಲಿ ಹೊಂದಿದ್ದರು. ಎಂಪಿಎಲ್ (MPL) 2020 ರಲ್ಲಿ ಕಿಟ್ ಪ್ರಾಯೋಜಕರಾಗಿ ಅಧಿಕಾರ ವಹಿಸಿಕೊಂಡ ನಂತರದ ವರ್ಷಗಳಲ್ಲಿ ಇದು ಮೂರನೇ ಭಾರತೀಯ ಜೆರ್ಸಿಯಾಗಿದೆ.
ಮೇಲೆ ಹೇಳಿದಂತೆ, ಸೆಪ್ಟೆಂಬರ್ 20 ರಂದು (ಮಂಗಳವಾರ) ಮೊಹಾಲಿಯಲ್ಲಿ ಪ್ರಾರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. 2022 ರ ಟಿ20 ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ನಿರಾಸೆ ಅನುಭವಿಸಿರುವ ಟೀಂ ಇಂಡಿಯಾ, ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್‌ಗೆ ಹೋಗುವ ಮೊದಲು ಸರಣಿ ಗೆಲ್ಲುವ ಮೂಲಕ ಆತ್ಮವಿಶ್ವಾಸ ಪಡೆಯಲು ಯತ್ನಿಸಲಿದೆ.
ಮೊಹಮ್ಮದ್ ಶಮಿ ಬದಲಿಗೆ ಉಮೇಶ್ ಯಾದವ್
ಆದಾಗ್ಯೂ, ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆಯ ನಂತರ ಹಿರಿಯ ವೇಗಿ ಮೊಹಮ್ಮದ್ ಶಮಿ ಹೊರಗುಳಿಯುವುದರೊಂದಿಗೆ ಭಾರತ ತಂಡಕ್ಕೆ ಆಘಾತ ಎದುರಾಗಿದೆ ಇದು ದುರಂತ ಕೂಡ ಹೌದು
ಮುಂಬರುವ ಪಂದ್ಯಗಳಿಗೆ ಅವರ ಬದಲಿ ಆಟಗಾರನಾಗಿ ವೇಗಿ ಉಮೇಶ್ ಯಾದವ್ ಅವರನ್ನು ಆಯ್ಕೆ ಸಮಿತಿ ಹೆಸರಿಸಿದೆ. ಏತನ್ಮಧ್ಯೆ, ಹಿರಿಯ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ತಂಡಕ್ಕೆ ಮರಳಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸಿ ತಂಡವು ಪ್ರತಿಭಾವಂತ ಬ್ಯಾಟರ್ ಟಿಮ್ ಡೇವಿಡ್ ಅವರನ್ನು ತಮ್ಮ ತಂಡದಲ್ಲಿ ಹೆಸರಿಸಿದೆ ಈತ ಬಲಗೈ ಬ್ಯಾಟರ್ ಡೆತ್ ಓವರ್‌ಗಳಲ್ಲಿ ಬ್ಯಾಟ್‌ನೊಂದಿಗೆ ನಿರ್ಣಾಯಕ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ.
Categories
ಕ್ರಿಕೆಟ್

ಇಂದು ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪಂದ್ಯ ಭಾರತ vs ಆಸ್ಟ್ರೇಲಿಯಾ

ಅಂಡರ್ 19 ವಿಶ್ವಕಪ್  ರೋಚಕ ಘಟ್ಟವನ್ನು ತಲುಪಿದೆ. ಭಾರತ ಸೆಮಿಫೈನಲ್‌ಗೆ ಪ್ರವೇಶಿಸಿದ್ದು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಕಿರಿಯರ ತಂಡ ಸವಾಲೊಡ್ಡಲಿದೆ. ಈ ಪಂದ್ಯ ಬುಧವಾರ ನಡೆಯಲಿದ್ದು ಗೆದ್ದ ತಂಡ ಫೈನಲ್‌ಗೆ ಪ್ರವೇಶ ಪಡೆಯಲಿದೆ. ಭಾರತ ತಂಡ ಮತ್ತೊಂದು ಬಾರಿ ಫೈನಲ್ ಪ್ರವೇಶಕ್ಕೆ ಎದುರು ನೋಡುತ್ತಿದ್ದು ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸವಾಲನ್ನು ಹೇಗೆ ಎದುರಿಸಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಅಂಡರ್ 19 ವಿಶ್ವಕಪ್‌ನಲ್ಲಿ ನಾಲ್ಕು ಬಾರಿಯ ಚಾಂಪಿಯನ್ ತಂಡವಾಗಿರುವ ಭಾರತ ಐದನೇ ಬಾರಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವ ಉತ್ಸಾಹದಲ್ಲಿದೆ. ಕಳೆದ ಅಂಡರ್ 19 ವಿಶ್ವಕಪ್‌ನಲ್ಲಿ ಫೈನಲ್‌ನಲ್ಲಿ ಎಡವಿದ್ದರಿಂದ ಟ್ರೋಫಿ ಯಿಂದ ವಂಚಿತವಾಗಿತ್ತು. ಆದರೆ ಈ ಬಾರಿ ಈ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ಇನ್ನೂ ಸೆಮಿಫೈನಲ್ ಹಂತಕ್ಕೇರಲು ಭಾರತ ಹಾಗೂ ಆಸ್ಟ್ರೇಲಿಯಾ ಕಿರಿಯರ ತಂಡಗಳು ಪ್ರತಿ ಪಂದ್ಯದಲ್ಲೂ ಅದ್ಭುತ ಆಟವನ್ನು ಪ್ರದರ್ಶಿಸುತ್ತಾ ಬಂದಿದೆ. ಎರಡು ತಂಡಗಳು ಕೂಡ ಎಲ್ಲಾ ವಿಭಾಗಗಳಲ್ಲಿಯೂ ಅತ್ಯುತ್ತಮ ಆಟವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದೆ.
ಹಾಗೆ ನೋಡಿದರೆ ಭಾರತದ ಈ ವಿಶ್ವಕಪ್ ಹಾದಿ ಸುಗಮವಾಗಿರಲಿಲ್ಲ. ಗಾಯದ ಸಮಸ್ಯೆ ಹಾಗೂ ಕೊರೊನಾವೈರಸ್ ತಂಡಕ್ಕೆ ಭಾರೀ ಆಘಾತವನ್ನು ನೀಡಿದ್ದು. ಕೆಲ ಪಂದ್ಯಗಳಲ್ಲಿ ಮೀಸಲು ಆಟಗಾರರನ್ನು ಕೂಡ ಬಳಸಿಕೊಳ್ಳಬೇಕಾದ ಅನಿವಾರ್ಯತೆಗೆ ಭಾರತ ಸಿಲುಕಿತ್ತು. ಆದರೆ ಈ ಎಲ್ಲಾ ಸವಾಲುಗಳನ್ನು ಭಾರತದ ಕಿರಿಯರ ತಂಡ ದಿಟ್ಟವಾಗಿ ಎದುರಿಸಿದ್ದು ಈಗ ಸೆಮಿಫೈನಲ್ ಹಂತಕ್ಕೆ ತಲುಪುವಲ್ಲಿ ಯಶಸ್ವಿಯಾಗಿದೆ. ಆದರೆ ಸೆಮಿಫೈನಲ್ ಹಂತದ ವೇಳೆಗೆ ಭಾರತದ ಕಿರಿಯರ ತಂಡದ ಎಲ್ಲಾ ಆಟಗಾರರು ಕೂಡ ಆಡಲು ಸಮರ್ಥರಾಗಿದ್ದಾರೆ.
ಕೊವಿಡ್ 19ಗೆ ತುತ್ತಾಗಿದ್ದ ನಿಶಾಂತ್ ಸಿಂಧು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಸೆಮಿಫೈನಲ್ ಪಂದ್ಯದ ಆಯ್ಕೆಗೆ ಲಭ್ಯವಾಗಲಿದ್ದಾರೆ ಎಂದು ಮ್ಯಾನೇಜ್‌ಮೆಂಟ್ ಮಾಹಿತಿ ನೀಡಿದೆ. ಉಳಿದ ಆಟಗಾರರು ಈಗಾಗಲೇ ತಂಡವನ್ನು ಕೂಡಿಕೊಂಡಿದ್ದರು. ಇನ್ನೂ ತಂಡದ ನಾಯಕ ಯಶ್ ಧುಲ್ ಸಹಿತ ಐವರು ಆಟಗಾರರು ಲೀಗ್‌ ಹಂತದ ಪಂದ್ಯಗಳ ಸಂದರ್ಭದಲ್ಲಿ ಕೊರೊನಾವೈರಸ್‌ಗೆ ತುತ್ತಾಗಿದ್ದಾಗ ನಿಶಾಂತ್ ಸಿಂಧು ಎರಡು ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಆದರೆ ಉಗಾಂಡ ವಿರುದ್ಧ ಅಂತಿಮ ಲೀಗ್ ಪಂದ್ಯವನ್ನು ಆಡಿದ ಬಳಿಕ ನಿಶಾಂತ್ ಕೂಡ ಕೋವಿಡ್‌ಗೆ ತುತ್ತಾದರು. ಈಗ ಆಸ್ಟ್ರೇಲಿಯಾ ವಿರುದ್ಧಧ ನಿರ್ಣಾಯಕ ಸೆಮಿ ಫೈನಲ್ ಪಂದ್ಯಕ್ಕೆ ಮುನ್ನ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ನಿಶಾಂತ್ ಕೋವಿಡ್ ವರದಿ ನೆಗೆಟಿವ್ ಬಂದಿದೆ.
*ಪಂದ್ಯದ ಆರಂಭ ಹಾಗೂ ನೇರಪ್ರಸಾರ:* ಆಸ್ಟ್ರೇಲಿಯಾ ಹಾಗೂ ಭಾರತ ಕಿರಿಯರ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯ ಭಾರತೀಯ ಕಾಲಮಾನ ಆರಂಭವಾಗಲಿದೆ. ಈ ಪಂದ್ಯದ ನೇರಪ್ರಸಾರ ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲಭ್ಯವಿರಲಿದೆ. ಇನ್ನೂ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿಯೂ ಈ ಪಂದ್ಯದ ನೇರಪ್ರಸಾರವಿರಲಿದೆ.
*ಭಾರತ ಅಂಡರ್ 19 ಸ್ಕ್ವಾಡ್:* ಯಶ್ ಧುಲ್ (ನಾಯಕ), ದಿನೇಶ್ ಬಾನಾ (ವಿಕೆಟ್ ಕೀಪರ್), ಆಂಗ್ಕ್ರಿಶ್ ರಘುವಂಶಿ, ಹರ್ನೂರ್ ಸಿಂಗ್, ಶೇಕ್ ರಶೀದ್, ಸಿದ್ದಾರ್ಥ್ ಯಾದವ್, ರಾಜ್ ಬಾವಾ, ಕೌಶಲ್ ತಾಂಬೆ, ರಾಜವರ್ಧನ್ ಹಂಗರ್ಗೇಕರ್, ವಿಕ್ಕಿ ಓಸ್ತ್ವಾಲ್, ರವಿಕುಮಾರ್, ಮಾನವ್ ಪರಾಖ್, ನಿಶಾಂತ್ ಸಿಂಧು, ಅನೀಶ್ವರ್ ಗೌತಮ್, ಆರಾಧ್ಯ ಯಾದವ್, ಗರ್ವ್ ಸಾಂಗ್ವಾನ್
*ಆಸ್ಟ್ರೇಲಿಯಾ ಅಂಡರ್ 19 ಸ್ಕ್ವಾಡ್:* ಕೂಪರ್ ಕೊನೊಲಿ (ನಾಯಕ), ಟೋಬಿಯಾಸ್ ಸ್ನೆಲ್ (ವಿಕೆಟ್ ಕೀಪರ್), ಕ್ಯಾಂಪ್‌ಬೆಲ್ ಕೆಲ್ಲವೇ, ಟೀಗ್ ವೈಲ್ಲಿ, ಕೋರೆ ಮಿಲ್ಲರ್, ಲಾಚ್ಲಾನ್ ಶಾ, ಏಡನ್ ಕಾಹಿಲ್, ವಿಲಿಯಂ ಸಾಲ್ಜ್‌ಮನ್, ಟಾಮ್ ವಿಟ್ನಿ, ಜ್ಯಾಕ್ ಸಿನ್‌ಫೀಲ್ಡ್, ಜ್ಯಾಕ್ ನಿಸ್ಬೆಟ್, ಹರ್ಕಿರತ್ ಬಾಜ್ವಾ, ಜೋಶ್ವಾಕ್ ಗಾರ್ವಾ ಹಿಗ್ಗಿನ್ಸ್, ನಿವೇತನ್ ರಾಧಾಕೃಷ್ಣನ್