Categories
ಕ್ರಿಕೆಟ್

ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಶಮಿಗಿಲ್ಲ ಅವಕಾಶ…!! ಈತ‌ ಬುಮ್ರಾ ನಷ್ಟೇ ಶ್ರೇಷ್ಠ ಬೌಲರ್ ಶಮಿ ಆಯ್ಕೆಯಾಗದೇ ಇರುವುದು ದುರಂತ: ಮ್ಯಾಥ್ಯೂ ಹೇಡನ್

ಸದ್ಯದ ಭಾರತೀಯ ಶ್ರೇಷ್ಠ ಬೌಲರ್ ಗಳಲ್ಲಿ ಒಬ್ಬರಾದ ಮೊಹಮ್ಮದ್ ಶಮಿಗೆ ಕೈಬಿಟ್ಟು ಯುವಕರಿಗೆ ಮಣೆ ಹಾಕಲು ಕಾರಣವೇನು..?
ಟಿ20 ವಿಶ್ವಕಪ್‌ಗೆ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡದೆ ಭಾರತೀಯ ಕ್ರಿಕೆಟ್ ಮಂಡಳಿಯ ಆಯ್ಕೆದಾರರು ವಿಶ್ವದ ಕ್ರಿಕೆಟ್ ಪಂಡಿತರಿಗೆ ಚರ್ಚೆಯ ವೇದಿಕೆಯನ್ನು ಸೃಷ್ಟಿಮಾಡಿ ಕೊಟ್ಟಿದ್ದಾರೆ.
ಈ ಸಾಲಿನ ವಿಶ್ವಕಪ್‌ ತಂಡಕ್ಕೆ  ಕೆಲವು ಹಿರಿಯ ಆಟಗಾರರನ್ನು ಆಯ್ಕೆಯಾಗದ ಕಾರಣ ಹೊರಗುಳಿಯುವಂತಾಗಿದೆ, ಅವರ ಸ್ಥಾನದಲ್ಲಿ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ. ಈ ಸಾಲಿನಲ್ಲಿ ಭಾರತೀಯ ಕ್ರಿಕೆಟ್ ಮಂಡಳಿಯ ಆಯ್ಕೆಗಾರರ ಸಮಿತಿ ಅರ್ಷದೀಪ್ ಸಿಂಗ್ ಅವರನ್ನು ಆಯ್ಕೆಮಾಡಿ ಮೊಹಮ್ಮದ್ ಶಮಿ ಅವರನ್ನು ಹೊರಗಿಟ್ಟಿದೆ. ಹರ್ಷಲ್ ಪಟೇಲ್ ಕೂಡ ತಂಡದಲ್ಲಿದ್ದು, ವೇಗದ ಬೌಲರ್ ಬುಮ್ರಾ ತಂಡಕ್ಕೆ ವಾಪಸ್ಸಾಗಿದ್ದಾರೆ. ಆದರೆ  ವಿಚಿತ್ರವೆಂದರೆ  ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಶಮಿ ಅವರನ್ನು ಉಳಿಸಿಕೊಳ್ಳಲಾಗಿದೆ.
*ಶಮಿಗೆ ಕೋವಿಡ್ ಪಾಸಿಟಿವ್, ಆಸಿಸ್ ಟಿ20 ಸರಣಿಯಿಂದ ಹೊರಕ್ಕೆ*
ಶಮಿ ಅವರು ಕೋವಿಡ್ -19 ಪಾಸಿಟಿವ್ ಸೋಂಕಿಗೆ ಒಳಗಾದ ಕಾರಣ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿಯುವಂತಾಗಿದೆ.  ಒಟ್ಟಾರೆಯಾಗಿ ಶಮಿ ಅವರ ಅದೃಷ್ಟ ಯಾಕೋ ಕೈಕೊಟ್ಟಂತೆ ಭಾಸವಾಗುತ್ತಿದೆ. ಎಲ್ಲವೂ ಸರಿ ಇದ್ದರು ಅದೃಷ್ಟ ಮಾತ್ರ ಜೋತೆಗಿಲ್ಲ ಶನಿ ಹೆಗಲೇರಿ ಕುಳಿತಿದ್ದಾನೆ.  ಒಂದು ಸಮಾಧಾನದ ವಿಷಯವೆಂದರೆ
 ಶಮಿ ಅವರನ್ನು ಸ್ಟ್ಯಾಂಡ್‌ಬೈ ಆಟಗಾರನಾಗಿ ವಿಶ್ವಕಪ್ ತಂಡದಲ್ಲಿ ಇರಿಸಿಕೊಳ್ಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಶಮಿ ಆಡುವುದರಲ್ಲಿ ವಿಶೇಷ ಅರ್ಥವಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ. ಏಕೆಂದರೆ ನೀವು ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಿದ ಅದೇ ಆಟಗಾರರಿಗೆ ಪಂದ್ಯದ ಅಭ್ಯಾಸವನ್ನು ಪಡೆಯಲು ಅವಕಾಶವನ್ನು ನೀಡಲು ಬಯಸುತ್ತೀರಿ. ಇದು ದೊಡ್ಡ ವಿಪರ್ಯಾಸ ಇದಕ್ಕೆ ಅರ್ಥವೆ ಇಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ಶ್ರೇಷ್ಠ ಆಟಗಾರ ಮ್ಯಾಥ್ಯೂ ಹೇಡನ್ ಲೇವಡಿ ಮಾಡಿದ್ದಾರೆ.
*ವಿಶ್ವಕಪ್‌ ಆರಂಭಕ್ಕೂ ಮುನ್ನವೇ ಶಮಿ ಆಯ್ಕೆ ಅಂತಿಮವಾಗಬೇಕು..!*
ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ವಿಶ್ವಕಪ್‌ಗೆ ಮುನ್ನ ಶಮಿಯನ್ನು ಆಡಿಸುವ ತಪ್ಪನ್ನು ತಂಡ ಮಾಡಲು ಬಯಸುವುದಿಲ್ಲ ಎಂದು ಭಾವಿಸಿದ್ದಾರೆ. ಏಕೆಂದರೆ ಅದು ತಂಡದ ನಿರ್ವಹಣೆಗೆ ನಷ್ಟವಾಗಬಹುದು ಮತ್ತು ವಿಶ್ವಕಪ್‌ಗೂ ಮುನ್ನ ಶಮಿ ಉತ್ತಮ ಪ್ರದರ್ಶನ ತೋರಿದರೆ ಟೀಕಾಕಾರರ ಟೀಕೆಗಳು ಹೆಚ್ಚಾಗಲಿವೆ. ವಿಶ್ವಕಪ್‌ಗೆ ಹೋದ ವೇಗಿಗಳಿಗೆ ತವರಿನ ಸರಣಿಯಲ್ಲಿ ಕೆಟ್ಟ ಪ್ರದರ್ಶನ ನೀಡಿದ್ರೆ, ಶಮಿಯನ್ನು ಏಕೆ ತೆಗೆದುಕೊಳ್ಳಲಿಲ್ಲ ಎಂದು ಆಯ್ಕೆಗಾರರು ಇನ್ನೂ ಹೆಚ್ಚಿನ ಟೀಕೆಗೆ ಒಳಗಾಗುತ್ತಾರೆ. ಅಷ್ಟೇ ಏಕೆ ವಿಶ್ವಕಪ್‌ಗೆ ತೆರಳುವ ಬೌಲರ್ ಗಾಯಗೊಂಡಾಗ ಮಾತ್ರ ಶಮಿಗೆ ಸ್ಥಾನ ನೀಡಬೇಕೆಂದು ಗಂಭೀರ್ ಬಯಸಿದ್ದಾರೆ.
*ಬುಮ್ರಾ ಆಯ್ಕೆಯಂತೆಯೇ ಅರ್ಹತೆ ಇರುವ ಶಮಿಯನ್ನು ಆಯ್ಕೆ ಮಾಡಬೇಕಿತ್ತು!*
ಏತನ್ಮಧ್ಯೆ, ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್ ಅವರನ್ನು ಜಸ್ಪ್ರೀತ್ ಬುಮ್ರಾ ಅವರಂತೆಯೇ ಶಮಿಯನ್ನು ಆಯ್ಕೆ ಮಾಡಬಹುದೇ ಎಂದು ಕೇಳಿದಾಗ, ಅವರ  ಉತ್ತರ ಹೀಗಿತ್ತು.
”ವಿಶ್ವಕಪ್‌ಗೆ ಶಮಿ ಆಯ್ಕೆಯಾಗದೇ ನಿಜಕ್ಕೂ ಆಶ್ಚರ್ಯ ಮೂಡಿಸಿದ್ದು, ಅವರೊಬ್ಬ ಅದ್ಭುತ ಕ್ರಿಕೆಟಿಗ ಮತ್ತು  ವಿಕೆಟ್ ಪಡೆಯುವ ಸಾಮರ್ಥ್ಯ ಶಮಿ ಹೊಂದಿದ್ದಾರೆ. ಆದರೆ ಅವರು ಜಸ್ಪ್ರೀತ್ ಬುಮ್ರಾ ಅವರಂತೆ ನಾನು ಉತ್ತಮ ಬೌಲರ್ ಎಂದು ಸಾಬೀತು ಪಡಿಸಲಿದ್ದಾರಾ? ಎನ್ನುತ್ತಾ, ನಾವು ಆಶಾವಾದಿ ದೃಷ್ಟಿಕೋನದಿಂದ ಇದೆಲ್ಲವನ್ನೂ ಯೋಚಿಸಬಹುದು ಎಂದು ನಾನು ಭಾವಿಸುತ್ತೇನೆ . ಆದರೆ ನೀವು ಮತ್ತೊಮ್ಮೆ ಆತನನ್ನ ಆಯ್ಕೆ ಮಾಡದೇ ಇರುವುದು ಎಷ್ಟು ಸರಿ ಎಂದು ಸಾಬೀತುಪಡಿಸಬೇಕು” ಎಂದು ಕಟುವಾಗಿ ಟೀಕಿಸಿದ್ದಾರೆ.

By ಸುಧೀರ್ ವಿಧಾತ

*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Leave a Reply

Your email address will not be published.

1 × one =