ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ನಾಲ್ಕು ಬಾಲ್ ಉಳಿದಿರುವಂತೆ ಆರು ವಿಕೆಟ್‌ಗಳಿಂದ ಜಯ ಸಾಧಿಸಿದೆ ರೋಹಿತ್ ಪಡೆ. ಆಸ್ಟ್ರೇಲಿಯಾ ನೀಡಿದ 91 ರನ್‌ಗಳ ಸವಾಲನ್ನು ಭಾರತದ ಆಟಗಾರರು ಇನ್ನೂ ನಾಲ್ಕು ಎಸೆತಗಳು ಮತ್ತು ಆರು ವಿಕೆಟ್‌ಗಳು ಬಾಕಿ ಇರುವಂತೆಯೇ ಸೋಲಿಸಿತು.
ರೋಹಿತ್ ಶರ್ಮಾ ಕೇವಲ 20 ಎಸೆತಗಳಲ್ಲಿ 46* ರನ್ ಸಿಡಿಸಿ ಅಸೀಸ್ ಬೌಲರ್ ಗಳ ಬೆವರಿಳಿಸಿದರು ಮತ್ತು ದಿನೇಶ್ ಕಾರ್ತಿಕ್ ಕೇವಲ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್ ಒಂದು ಬೌಂಡರಿ ಯೊಂದಿಗೆ ಸೂಪರ್ ಫಿನಿಶಿಂಗ್ ನ ಆಟವಾಡಿ ಭಾರತಕ್ಕೆ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯನ್ನು 1-1ರಲ್ಲಿ ಸಮಮಾಡಿಕೊಂಡಿದೆ.
ಮಳೆಯ ಕಾರಣ ಇಪ್ಪತ್ತು ಓವರ್ ಬದಲಿಗೆ ಪಂದ್ಯವನ್ನು ಎಂಟು ಓವರ್ ಗೆ ಕಡಿತ ಗೊಳಿಸಲಾಯಿತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಭರ್ಜರಿಯಾಗಿ ಅಡಿ ಭಾರತಕ್ಕೆ 91ರನ್‌ಗಳ ಗುರಿ ನೀಡಿತು. ಇದನ್ನು ಯಶಸ್ವಿಯಾಗಿ ಬೆನ್ನಟ್ಟಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ನಿಂದ ಗೆಲುವಿನ ನಗೆ ಬಿರುವಂತಾಯಿತು ರೋಹಿತ್ ನಾಯಕನ ಜವಬ್ದಾರಿ ಹೊತ್ತು ಪಂದ್ಯದ ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು.
ರೋಹಿತ್ ಶರ್ಮಾ 20 ಎಸೆತಗಳಲ್ಲಿ 46 ರನ್ ಸಿಡಿಸಿದು ಹಿಟ್‌ಮ್ಯಾನ್ 4 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಸಿಡಿಸಿದರು. ಈ ನಾಲ್ಕು ಸಿಕ್ಸರ್‌ಗಳಲ್ಲಿ ರೋಹಿತ್ ಶರ್ಮಾ ಸಿಗ್ನೇಚರ್ ಶಾಟ್ ಕೂಡ ಒಳಗೊಂಡಿದ್ದು ವಿಷೇಶವಾಗಿತ್ತು
*ಹಿಟ್ ಮ್ಯಾನ್ ರೋಹಿತ್ ಶರ್ಮಾ ಸಿಕ್ಸರ್ ಗಳ ದಾಖಲೆ*
ನಾಗಪುರ್ ನ ವಿಸಿಎ ಗ್ರೌಂಡ್‌ನಲ್ಲಿ ರೋಹಿತ್ ಶರ್ಮಾ ನಾಲ್ಕು ಬಾರಿ ಸೀಮಾ ಗೆರೆಯನ್ನು ದಾಟಿ ಸಿಕ್ಸರ್ ಆಕರ್ಷಕ ಸಿಕ್ಸರ್ ಹೊಡೆಯುವುದರ ಜೊತೆಗೆ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ದಾಖಲಿಸಿಕೊಂಡಿದ್ದಾರೆ. ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದುವರೆಗೂ ನ್ಯೂಜಿಲೆಂಡ್‌ನ ಶ್ರೇಷ್ಠ ಆಟಗಾರ ಮಾರ್ಟಿನ್ ಗಪ್ಟಿಲ್ ಹೆಸರಿನಲ್ಲಿತ್ತು ಈ ದಾಖಲೆಯನ್ನು ರೋಹಿತ್ ಮುರಿದಿದ್ದಾರೆ.
ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಮತ್ತು ಮಾರ್ಟಿನ್ ಗಪ್ಟಿಲ್ ತಲಾ 172 ಸಿಕ್ಸರ್ ದಾಖಲಿಸಿದ್ರು. ಈ ಪಂದ್ಯದಲ್ಲಿ ನಾಲ್ಕು ಬಾರಿ ಚೆಂಡನ್ನ ಗೆರೆ ದಾಟಿಸಿದ ರೋಹಿತ್ ತನ್ನ 138 ಪಂದ್ಯದಲ್ಲಿ 176 ಸಿಕ್ಸರ್ ದಾಖಲಿಸಿದ್ದಾರೆ. ಇನ್ನು ಕಿವೀಸ್ ಓಪನರ್ ಮಾರ್ಟಿನ್ ಗಪ್ಟಿಲ್ 121 ಪಂದ್ಯಗಳಲ್ಲಿ 172 ಸಿಕ್ಸರ್ ಸಿಡಿಸಿದ್ದಾರೆ. ನಂತರದಲ್ಲಿ ಕ್ರಿಸ್‌ಗೇಲ್ 124, ಇಯಾನ್ ಮಾರ್ಗನ್ 120, ಆ್ಯರೋನ್ ಫಿಂಚ್ 119 ಸಿಕ್ಸರ್ ದಾಖಲಿಸಿದ್ದಾರೆ.
ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಟೀಂ ಇಂಡಿಯಾ ಪಂದ್ಯ ಜಯಿಸುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸಿದ್ದು, ಸರಣಿಯನ್ನ ಜೀವಂತವಾಗಿರಿಸಿದೆ. ಅಂತಿಮ ಪಂದ್ಯವು ಭಾನುವಾರ ಹೈದ್ರಾಬಾದ್‌ನಲ್ಲಿ ನಡೆಯಲಿದೆ ಈ ಪಂದ್ಯವು ಉಭಯ ತಂಡಗಳಿಗೆ ಸರಣಿ ಗೆಲುವಿಗೆ ಪ್ರಮುಖ ಪಂದ್ಯವಾಗಲಿದೆ