ಅಳಿವಿನಂಚಿನಲ್ಲಿರುವ ಟೆನ್ನಿಸ್ಬಾಲ್ ಕ್ರಿಕೆಟ್ ಗೆ ಹೊಸರೂಪ ಕೊಡುವ ನಿಟ್ಟಿನಲ್ಲಿ ಸೌಜನ್ ಪಡುಬಿದ್ರಿ ಹಾಗೂ ಅಪ್ಪು ಬದಿಯಡ್ಕ ಸ್ನೇಹಿತರೀರ್ವರ ಸಾರಥ್ಯದಲ್ಲಿ ಪಡುಬಿದ್ರಿ-ಎರ್ಮಾಳ್-ಹೆಜಮಾಡಿ ಪರಿಸರದ ಆಟಗಾರರಿಗಷ್ಟೇ ಸೀಮಿತವಾದ “ಪಡುಬಿದ್ರಿ ಪ್ರೀಮಿಯರ್ ಲೀಗ್-2021″ಪಂದ್ಯಾವಳಿ ಆಯೋಜಿಸಲಾಗಿದೆ.
ವಿಶೇಷವಾಗಿ 10 ಓವರ್ ಗಳ ಪಂದ್ಯಾಟ ಇದಾಗಿದ್ದು ಅಕ್ಟೋಬರ್ 15,16 ಮತ್ತು 17 ಮೂರು ದಿನಗಳ ಕಾಲ ಪಡುಬಿದ್ರಿಯ ಬೋರ್ಡ್ ಶಾಲಾ ಮೈದಾನದಲ್ಲಿ ನಡೆಯಲಿದೆ.ಪಂದ್ಯಾವಳಿಯ ಪ್ರಥಮ ಪ್ರಶಸ್ತಿ ವಿಜೇತ ತಂಡ 33,333 ರೂ ಹಾಗೂ ದ್ವಿತೀಯ ಪ್ರಶಸ್ತಿ ರೂಪದಲ್ಲಿ 22,222 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತಿದ್ದು,3 ಮತ್ತು 4 ನೇ ಸ್ಥಾನ ಪಡೆದ ತಂಡಗಳು ಹಾಗೂ ಶಿಸ್ತುಬದ್ಧ ತಂಡ ಹೀಗೆ ಇನ್ನಿತರ ವೈಯಕ್ತಿಕ ಆಕರ್ಷಕ ಪ್ರಶಸ್ತಿಗಳನ್ನು
ಪಡೆಯಲಿದ್ದಾರೆ. M9 ಸ್ಪೋರ್ಟ್ಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದೆ.
ಹೆಚ್ಚಿನ ವಿವರಗಳಿಗಾಗಿ 9008437068 ಮತ್ತು 8147 394606 ಈ ನಂಬರ್ ಗಳನ್ನು ಸಂಪರ್ಕಿಸಬಹುದು.