ಸ್ಥಳೀಯ ಗ್ರಾಮೀಣ ಮಟ್ಟದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಲಭಿಸದೆ ಕ್ಷೀಣಾವಸ್ಥೆಯಲ್ಲಿರುವ ಟೆನ್ನಿಸ್ ಬಾಲ್ ಕ್ರಿಕೆಟ್ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿಉಡುಪಿಯ ಸೈಮಂಡ್ಸ್ ಕಡಿಯಾಳಿ ತಂಡ ವಿಶಿಷ್ಟ ವಿನೂತನ ಪ್ರಯೋಗ“ಸೈಮಂಡ್ಸ್ ಚಾಂಪಿಯನ್ಸ್ ಲೀಗ್-2021″ಪಂದ್ಯಾಕೂಟ ಆಯೋಜಿಸಿದ್ದಾರೆ.
ಜನವರಿ 22,23 ಮತ್ತು 24 ರಂದು ಉಡುಪಿಯ ಎ.ಎಲ್.ಎನ್.ರಾವ್ (ಎಮ್.ಜಿ.ಎಮ್) ಕ್ರೀಡಾಂಗಣದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಈ ಪಂದ್ಯಾಟ ನಡೆಯಲಿದೆ.
ಬೀಡಿನಗುಡ್ಡೆ,ದೊಡ್ಡಣಗುಡ್ಡೆ,ಕುಂದಾ ಪುರ,ಕೋಟ,ಮಲ್ಪೆ,ಉದ್ಯಾವರ,ಮುಕ್ಕ, ಅಲೆವೂರು,ಕೊರಂಗ್ರಪಾಡಿ,ಕಾಪುವಿನಲ್ ಲಿ ನಡೆದ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ವಿಜೇತ ತಂಡಗಳು ಸೈಮಂಡ್ಸ್ ಚಾಂಪಿಯನ್ಸ್ ಲೀಗ್-2021 ಪ್ರಶಸ್ತಿಗಾಗಿ ಸೆಣಸಾಡಲಿದೆ.
ಎಲ್ಲಾ ತಂಡಗಳಿಗೂ ಉಚಿತ ಪ್ರವೇಶಾತಿ ಕಲ್ಪಿಸಲಾಗಿದ್ದು,ಪ್ರಥಮ ಪ್ರಶಸ್ತಿ ವಿಜೇತ ತಂಡಕ್ಕೆ 30 ಸಾವಿರ ನಗದು,ದ್ವಿತೀಯ ಸ್ಥಾನಿ 20 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳು ಹಾಗೂ ವೈಯಕ್ತಿಕ ಪ್ರಶಸ್ತಿ ರೂಪದಲ್ಲಿ ಅಪರೂಪದ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತಿದೆ.
ಪಂದ್ಯಾಕೂಟದ ನೇರ ಪ್ರಸಾರ ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.ಹೆಚ್ಚಿನ ಮಾಹಿತಿಗಾಗಿ ಡಾ.ವಿನೋದ್-9845240393,
ಚೇತನ್ ಕುಮಾರ್ ದೇವಾಡಿಗ-9901850385 ಇವರನ್ನು ಸಂಪರ್ಕಿಸಬಹುದಾಗಿದೆ.