ಕೋಲಾರ ಅಟ್ಯಾಕರ್ಸ್ ತಂಡದ ವತಿಯಿಂದ ಕಳೆದ ವಾರ ಕೋಲಾರದ ಸರ್.ಎಮ್.ವಿಶ್ವೇಶ್ವರಯ್ಯ ಸ್ಟೇಡಿಯಂ ನಲ್ಲಿ ನಡೆದ ಹಗಲಿನ 3 ದಿನಗಳ ಎರಡನೇ ಆವೃತ್ತಿಯ “ಕೋಲಾರ ಪ್ರೀಮಿಯರ್ ಲೀಗ್-2020” ಪ್ರಶಸ್ತಿಯನ್ನು ಸೈ ಬಾಯ್ಸ್ ಜಯಿಸಿದೆ.
ಕೋಲಾರ ಪರಿಸರದ 16 ಫ್ರಾಂಚೈಸಿಗಳು ಭಾಗವಹಿಸಿದ್ದ ಈ ಪಂದ್ಯಾವಳಿಯ ಲೀಗ್ ಹಂತದ ಹೋರಾಟದ ಬಳಿಕ,
ಸೆಮಿಫೈನಲ್ ನಲ್ಲಿ ಸೈ ಬಾಯ್ಸ್ ವಿಲಾಶ್ ಕ್ರಿಕೆಟರ್ಸ್ ನ್ನು ಹಾಗೂ ಜೆ.ಬಿ.ಅವೆಂಜರ್ಸ್ ಫ್ರೆಂಡ್ಸ್ ಇಲೆವೆನ್ ತಂಡವನ್ನು ಸೋಲಿಸಿ ಫೈನಲ್ ಗೆ ಭಡ್ತಿ ಪಡೆದಿತ್ತು.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಜೆ.ಬಿ.ಅವೆಂಜರ್ಸ್ 6 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿತ್ತು.ಚೇಸಿಂಗ್ ನಡೆಸಿದ ಸೈ ಬಾಯ್ಸ್ ನ ಅರುಣ್ 26,ಶಂಕರ್ 11 ರನ್ ನೆರವಿನಿಂದ ಕೊನೆಯ ಓವರ್ ನಲ್ಲಿ ಗೆಲುವು ಸಾಧಿಸಿತು.
ಪ್ರಥಮ ಪ್ರಶಸ್ತಿ ವಿಜೇತ ಸೈ ಬಾಯ್ಸ್
1 ಲಕ್ಷ ನಗದು,ರನ್ನರ್ಸ್ ಜೆ.ಬಿ.ಅವೆಂಜರ್ಸ್ 50 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.
ಸೈ ಬಾಯ್ಸ್ ನ ಅರುಣ್ ಕುಮಾರ್ ಫೈನಲ್ ನ ಪಂದ್ಯಶ್ರೇಷ್ಟ,
ಹರಿ ಸರಣಿ ಶ್ರೇಷ್ಟ,ಶ್ರೀನಾಥ್ ಜಾನಿ ಬೆಸ್ಟ್ ಬ್ಯಾಟ್ಸ್‌ಮನ್, ಶಿವು ಜಾನ್ ಬೆಸ್ಟ್ ಫೀಲ್ಡರ್, ವಿನೋದ್ ಬೆಸ್ಟ್ ಬೌಲರ್,ಪಂದ್ಯಾವಳಿಯ ಶಿಸ್ತಿನ ತಂಡ ಪ್ರಶಸ್ತಿಯನ್ನು ವಿಲಾಸ್ ಕ್ರಿಕೆಟರ್ಸ್ ಪಡೆಯಿತು.
ಸಮಾರೋಪ ಸಮಾರೋಪ ಸಮಾರಂಭದಲ್ಲಿ ಜೆ.ಡಿ.ಎಸ್ ನ ಯುವ ಮುಖಂಡ ಸಮೃದ್ಧಿ ಮಂಜುನಾಥ್ ಮಾತನಾಡಿ
“ಕ್ರೀಡಾ ಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಸ್ಪೂರ್ತಿಯನ್ನು ಮೆರೆಯಬೇಕೆಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭ ಅಟ್ಯಾಕರ್ಸ್ ತಂಡದ ನಾಯಕ ಎಲ್.ನಿರಂಜನ್,M.K.S ಗ್ರೂಪ್ ನ ಮಾಲೀಕ ನದೀಮ್ ಅಖ್ತರ್,SAS ಶಾಮೀರ್,
ನಂದೀಶ್,ಮುದುವಾಡಿ ವೇಣು,ಶಿವಕುಮಾರ್,ಜಗನ್ನಾಥ್,ಸಾಗರ್,ಸೂರತ್,ಕಿರಣ್,ಬಾಲನ್,ಅಕಾಲೆ ಮೋನಿಕ್ ದೊರೆ,ಹರಿ,ತಮಟೆ ರಾಮಣ್ಣ ಇನ್ನಿತರ ಕ್ರೀಡಾಪಟುಗಳು ಉಪಸ್ಥಿತರಿದ್ದರು.
ಕೆ.ಪಿ.ಎಲ್ ನ ಆಕ್ಷನ್ ಪ್ರಕ್ರಿಯೆಯನ್ನು ಹಿರಿಯ ವೀಕ್ಷಕ ವಿವರಣೆಕಾರ ಕೋಟ ಶಿವನಾರಾಯಣ ಐತಾಳ್
ಕಳೆದ ತಿಂಗಳು ನಡೆಸಿದ್ದು,
M.Sports ಪಂದ್ಯಾವಳಿಯ ನೇರ ಪ್ರಸಾರವನ್ನು ಬಿತ್ತರಿಸಿದರೆ,ಪ್ರಸಿದ್ಧ ವೀಕ್ಷಕ ವಿವರಣೆಕಾರ ಪ್ರಶಾಂತ್ ಅಂಬಲಪಾಡಿ ಹಾಗೂ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ಪಂದ್ಯಾವಳಿಯ ಮೆರುಗನ್ನು ಹೆಚ್ಚಿಸಿದರು.
ಆರ್.ಕೆ.ಆಚಾರ್ಯ ಕೋಟ.