ಸ್ವಸ್ತಿ ಇಲೆವೆನ್ ಅಂಬಲಪಾಡಿ ಇವರ ಆಶ್ರಯದಲ್ಲಿ ಅಗಲಿದ ಗೆಳೆಯ ಸ್ವಸ್ತಿಕ್ ಸವಿ ನೆನಪಿಗಾಗಿ ಫೆಬ್ರವರಿ 7 ಮತ್ತು 8 ರಂದು ಅಂಬಲಪಾಡಿಯ ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ 30 ಗಜಗಳ ಕ್ರಿಕೆಟ್ ಪಂದ್ಯಾಕೂಟ ಸ್ವಸ್ತಿಕ್ ಟ್ರೋಫಿ-2021 ಆಯೋಜಿಸಲಾಗಿದೆ.
ಸದಾ ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡ ಈ ಸಂಸ್ಥೆ 2016 ರ ಮೇ ತಿಂಗಳಲ್ಲಿ ನಡೆದ ಪ್ರಥಮ ಪಂದ್ಯಾಕೂಟದಲ್ಲಿ 2 ಅಂಧ ಮಕ್ಕಳಿಗೆ 35,000 ಸಹಾಯಧನ ಹಾಗೂ ಸಂಪಿಗೆ ನಗರದ ರಿಶಾನಿ ಎಂಬ ಮಗುವಿಗೆ 23-11-2017 ರಂದು ಹೃದಯ ಚಿಕಿತ್ಸೆಗಾಗಿ 10,000 ರೂ ನಗದನ್ನು ನೀಡಿರುತ್ತಾರೆ.ಈ ಸಂಸ್ಥೆಯ ಸದಸ್ಯರಾದ ಅಜಿತ್ ಕಪ್ಪೆಟ್ಟು ಒಂದು ಮಗುವಿನ ಚಿಕಿತ್ಸೆಗೆ 1 ಲಕ್ಷ ಆರ್ಥಿಕ ಸಹಾಯ ನೀಡಿದ್ದಾರೆ.
ಪಂದ್ಯಾಕೂಟದ ಅಗ್ರಸ್ಥಾನಿ ತಂಡ 15 ಸಹಸ್ರ,ದ್ವಿತೀಯ ಸ್ಥಾನಿ 7 ಸಹಸ್ರ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಕ್ರೀಡಾರತ್ನ ಬಿರುದಾಂಕಿತ ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ವಾಯ್ಸ್ ಆಫ್ ಕರ್ನಾಟಕ ಖ್ಯಾತಿಯ ವೀಕ್ಷಕ ವಿವರಣೆಕಾರ ಪ್ರಶಾಂತ್ ಅಂಬಲಪಾಡಿ ಹಾಗೂ
V Dan Black belt K.B.I ಚೀಫ್ ಇನ್ಸ್ಟ್ರಕ್ಟರ್ B.K.S.A Examiner
ಶಿಹಾನ್ ವಾಮನ್ ಪಾಲನ್ ಪಂದ್ಯಾಕೂಟಕ್ಕೆ ಶುಭಕೋರಿದ್ದಾರೆ.
ವಿ.ಸೂ- ಆಸಕ್ತ ತಂಡಗಳು ಸುಜಿತ್-9036560472
ಕಾರ್ತಿಕ್-8660643651
ಮನೋಜ್-6361632810
ನಿಶು-9535241699
ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದಾಗಿದೆ.