4.1 C
London
Saturday, February 8, 2025
Homeಕ್ರಿಕೆಟ್73ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ 7 ಬಾರಿ ನ್ಯೂ ಫ್ರೆಂಡ್ಸ್ ಕೋಟೇಶ್ವರ ಆಯೋಜಿಸಿದ ಸೂಪರ್ ಸಿಕ್ಸ್...

73ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ 7 ಬಾರಿ ನ್ಯೂ ಫ್ರೆಂಡ್ಸ್ ಕೋಟೇಶ್ವರ ಆಯೋಜಿಸಿದ ಸೂಪರ್ ಸಿಕ್ಸ್ ಪಂದ್ಯಾಟ K.P.L-2019

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img

ದಶಕಗಳಿಂದಲೂ ತನ್ನೂರಿನ ಆಟಗಾರರನ್ನೇ ನೆಚ್ಚಿಕೊಂಡು, ಜಿಲ್ಲಾ ರಾಜ್ಯ ಮಟ್ಟದ ಪಂದ್ಯಾಕೂಟಗಳಲ್ಲಿ ಭಾಗವಹಿಸಿ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿ ಪ್ರಶಸ್ತಿ ಜಯಿಸುತ್ತಿದ್ದ ಕೋಟೇಶ್ವರ ತಂಡಗಳು ಸ್ವರ್ಣ ಇತಿಹಾಸದ ಹೊಸ್ತಿಲಿನಲ್ಲಿರುವ ಚೇತನಾ ಕಲಾ ಹಾಗೂ ಕ್ರೀಡಾರಂಗ,ಕಾಸ್ಮೊಪೊಲಿಟಿನ್, ಮಿತೃವೃಂದ,ಅಂಶು ಹಾಗೂ ವಿಜಯ ಕೋಟೇಶ್ವರ ತಂಡಗಳು.ಈ ತಂಡಗಳದ ಹೊರಹೊಮ್ಮಿದ ಆಟಗಾರರು ಇಂದು ರಾಜ್ಯ,ರಾಷ್ಟ್ರ,ಅಂತರಾಷ್ಟ್ರೀಯ ಮಟ್ಟದಲ್ಲೂ ಮಿಂಚುತ್ತಿದ್ದಾರೆ.

      

ಕಾರ್ಯನಿಮಿತ್ತ ದೂರದೂರಿಗೆ ತೆರಳುವ ಸಂದರ್ಭದಲ್ಲಿ ಹಾಗೂ ನಾನಾ ಕಾರಣಗಳಿಂದ ತಂಡಗಳ ಹೊಳಪು ಕಳೆದುಕೊಂಡರೂ ಕೋಟೇಶ್ವರದ “ನ್ಯೂ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್” ಕಳೆದ 7 ವರ್ಷಗಳಿಂದ ಕೋಟೇಶ್ವರ ಪರಿಸರದ ಯುವ ಪ್ರತಿಭೆಗಳ ಅನ್ವೇಷಣೆಯಲ್ಲಿ ತೊಡಗಿದೆ.ಪ್ರತಿ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಾಮಾಜಿಕ ಸೇವೆ ಹಾಗೂ ಯುವ ಪ್ರತಿಭೆಗಳಿಗಾಗಿ ಮೀಸಲಿಡುವ ಈ ಸಂಸ್ಥೆ ಈ ಬಾರಿ 73ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರದ ಅಂಗಣದಲ್ಲಿ 7ನೇ ಬಾರಿ K.P.L-2019 ಪಂದ್ಯಾಕೂಟವನ್ನು ಆಗಸ್ಟ್ 15 ಗುರುವಾರದಂದು ಆಯೋಜಿಸಿತ್ತು.

ಜಡಿ ಮಳೆಯನ್ನು ಲೆಕ್ಕಿಸದೆ ಕೋಟೇಶ್ವರ ಪರಿಸರ 10 ತಂಡಗಳು ಈ ಪಂದ್ಯಾಕೂಟದಲ್ಲಿ ಭಾಗವಹಿಸಿದ್ದು,ಲೀಗ್ ಹಂತದ ಸೆಣಸಾಟಗಳ ಬಳಿಕ‌ ಅಂತಿಮವಾಗಿ ಮುದ್ದೇರಕಟ್ಟೆ ಲಯನ್ಸ್ ಹಾಗೂ ಕೊಂಕಣ್ ಎಕ್ಸ್‌ಪ್ರೆಸ್‌ ತಂಡ ಫೈನಲ್ ಪ್ರವೇಶಿಸಿದ್ದವು.

ಮೊದಲು ಬ್ಯಾಟಿಂಗ್ ನಡೆಸಿದ ಮುದ್ದೇರಕಟ್ಟೆ ತಂಡ 5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 36 ರನ್ ನ ಪೈಪೋಟಿಯ ಗುರಿಯನ್ನು ನೀಡಿತ್ತು. ಎದುರಾಳಿ ತಂಡ ಮುದ್ದೇರಕಟ್ಟೆ ಲಯನ್ಸ್ ಬಿಗು ಬೌಲಿಂಗ್ ದಾಳಿ ಎದುರಿಸಲಸಲಾಗದೆ 5 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 27 ರನ್ ಗಳಿಸಲಷ್ಟೇ ಶಕ್ತವಾಯಿತು.

ಫೈನಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ನಿರ್ವಹಿಸಿದ ರಂಜನ್ ಉಡುಪ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರೆ,ವೈಯಕ್ತಿಕ ಪ್ರಶಸ್ತಿಗಳನ್ನು ಕ್ರಮವಾಗಿ ಸರಣಿ ಶ್ರೇಷ್ಠ ಶರತ್,ಬೆಸ್ಟ್ ಬ್ಯಾಟ್ಸ್‌ಮನ್ M.ವಿಘ್ನೇಶ್,ಬೆಸ್ಟ್ ಬೌಲರ್ ಸಂದೀಪ್,ಗರಿಷ್ಯ ಸಿಕ್ಸರ್ ಶರತ್ ಉತ್ತಪ್ಪ ಹಾಗೂ ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಲಕ್ಷ್ಮೇಶ್ ಮಂಜ ಪಡೆದುಕೊಂಡರು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಪ್ರೆಸಿಡೆಂಟ್ ಗ್ರೂಪ್ ನ ಬಹ್ರೈನ್ ಉದ್ಯಮಿ ಅಬ್ದುಲ್ ಸತ್ತಾರ್ ವಿಜೇತರನ್ನು ಅಭಿನಂದಿಸಿ,ಪ್ರಶಸ್ತಿ ನೀಡಿ ಪುರಸ್ಕರಿಸಿದರು.

ಸ್ಥಳೀಯರಾದ ಶಶಿ ನಂಬಿಯಾರ್, ಶೇಖರ್,ಯೂಸುಫ್ ಸಾಹೇಬ್, ಬ್ರಿಜೇಶ್ ಶೆಟ್ಟಿ, ಮಾಜಿ ಆಟಗಾರ ಇರ್ಫಾನ್, ಶ್ರೀಧರ್ ನಾಯಕ್, ನಿತೇಶ್ ದೊಡ್ಡೋಣಿ, ವಿಜೇತ್ ಆಚಾರ್ಯ, ಕೋಟೇಶ್ವರದ ಕ್ರೀಡಾ ಪ್ರತಿನಿಧಿ ಪುರುಷೋತ್ತಮ ಕಾಮತ್,ವೇಗಿ ರಾಘು ಶೆಟ್ಟಿ,ಜೀವನ್ ಮಿತ್ಯಂತಾಯ, ರಾಜೇಶ್ ಪ್ರಭು ಉಪಸ್ಥಿತರಿದ್ದರು.

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಿದ್ದರು.

ಆರ್.ಕೆ.ಆಚಾರ್ಯ ಕೋಟ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

four × four =