ಬೈಂದೂರು-ಸನ್ ರೈಸ್ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ) ಹಳಗೇರಿ ಇವರ ಆಶ್ರಯದಲ್ಲಿ 7 ನೇ ಬಾರಿಗೆ 60 ಗಜಗಳ “ಸನ್ ರೈಸ್ ಟ್ರೋಫಿ-2024” ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಫೆಬ್ರವರಿ 17 ಮತ್ತು 18 ರಂದು ಹಳಗೇರಿ ಶಾಲೆಯ ಬಳಿ ನಡೆಯಲಿರುವ ಈ ಪಂದ್ಯಾಟದ ಪ್ರಥಮ ಪ್ರಶಸ್ತಿ ವಿಜೇತ ತಂಡ 55,555,ದ್ವಿತೀಯ 33,333 ರೂ ನಗದು ಸಹಿತ ಶಾಶ್ವತ ಫಲಕಗಳನ್ನು ಪಡೆಯಲಿದ್ದಾರೆ.
ವಿಶೇಷವಾಗಿ ಐ.ಪಿ.ಎಲ್ ಬಿಡ್ಡಿಂಗ್ ಮಾದರಿಯಲ್ಲಿ ಸ್ಥಳೀಯ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದ್ದು,ಸಭಾ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ,ವಿದ್ಯಾರ್ಥಿ ವೇತನ ಮತ್ತು ಅಶಕ್ತರಿಗೆ ನೆರವಿನ ಹಸ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪಂದ್ಯಾಟದ ನೇರ ಪ್ರಸಾರ ಸ್ಟಾರ್ ವರ್ಟೆಕ್ಸ್- Sportskannadatv ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.