ಯಶೋಗಾಥೆಅಂಗವೈಕಲ್ಯವೆಂಬ ಅಡೆತಡೆಯ ನಡುವೆ ಅರಳಿದ ಪ್ರತಿಭೆ ಸುಮಾ ಪಂಜಿಮಾರ್

ಅಂಗವೈಕಲ್ಯವೆಂಬ ಅಡೆತಡೆಯ ನಡುವೆ ಅರಳಿದ ಪ್ರತಿಭೆ ಸುಮಾ ಪಂಜಿಮಾರ್

-

- Advertisment -spot_img
ಅಂಗವೈಕಲ್ಯ ಭವಿಷ್ಯದ ಸಾಧನೆಗೆ ಅಡ್ಡಿಯಲ್ಲ. ವೈಕಲ್ಯತೆಗಳೆನೇ ಇರಲಿ, ನಮ್ಮ ಬದುಕಿನ ಬೀಳುಗಳಲ್ಲಿ ಮನೋಬಲವನ್ನು ಕಳೆದುಕೊಳ್ಳದೆ ಬದಲಾವಣೆಗೆ ಹರಿಕಾರರು ನಾವಾದಲ್ಲಿ ಸಾಧನೆಯನ್ನು ಶಿಖರವನ್ನೇರಬಹುದೆಂಬ ಮಾತಿಗೆ ಮಾದರಿಯಾಗಿ ವೈಕಲ್ಯತೆಯನ್ನು ಮೀರಿ ಕಲಾ ಸಾಧನೆಯ ಬೆನ್ನೇರಿ ಸಾಧನೆಯ ಹಾದಿಯಲ್ಲಿ ಬೆಳಗುತ್ತಿರುವ ವಿಶೇಷ ಪ್ರತಿಭೆ ಸುಮಾ ಪಂಜಿಮಾರ್.
        ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ರಾಮ ಮೂಲ್ಯ ಹಾಗೂ ನಾಗಮಣಿ ದಂಪತಿಗಳ ಪುತ್ರಿಯಾಗಿರುವ ಸುಮಾ ಹುಟ್ಟಿನಿಂದಲೇ ವಿಕಲಾಂಗರು.ಮೂರಡಿ ಎತ್ತರ,ಇಪ್ಪತ್ತು ಕೆ. ಜಿ ತೂಕ ಹೊಂದಿರುವ ಇವರು ಪ್ರೌಢವಸ್ಥೆಯನ್ನು ದಾಟಿ ನಿಂತವರು. ಅಂಗವಿಕಲತೆ ಬದುಕಿನ ಕನಸುಗಳಿಗೆ ವಿರುದ್ಧವಾಗಿ ಅಬ್ಬರಿಸಿದರೂ ಆತ್ಮಸ್ಥೈರ್ಯವನ್ನೆಂದಿಗೂ ಕಳೆದುಕೊಳ್ಳದೆ ಜಟಿಲ ಸಮಸ್ಯೆಗಳ ನಡುವೆಯೇ ಬೆಳೆದುನಿಂತ ಪ್ರೇರಣಗಾಥೆಯಿವರು. ತನ್ನ ಕಲಿಕಾ ಉತ್ಸುಕತೆ, ತುಡಿತಕ್ಕೆ ಅಮ್ಮನ ತೋಳು ಆಸರೆಯಾಗಿ ನಿಂತಾಗ ಕೋಡು ಶ್ರೀ ದುರ್ಗಾಂಬಿಕಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೇ ತರಗತಿಯವರಿಗೆ ವಿದ್ಯಾಭ್ಯಾಸ ಪಡೆದರು.ಆ ಸಂದರ್ಭದಲ್ಲಿ ತನ್ನೊಂದಿಗೆ ಜೀವನಾಡಿಯಂತೆ ನಿಂತ ಶಿಕ್ಷಕವರ್ಗ, ಕುಟುಂಬ ತುಂಬಿದ ಧೈರ್ಯ ಹಾಗೂ ಪ್ರೀತಿಯನ್ನು ಈ ಸಂದರ್ಭದಲ್ಲಿ ಮನಸಾರೆ ಸ್ಮರಿಸಿಕೊಳ್ಳುತ್ತಾರೆ. ಮುಂದೆ ಕಲಿಕೆಯ ಹುಮ್ಮಸ್ಸು ತನ್ನಲ್ಲಿ ದೃಢವಾಗಿದ್ದರೂ ದೇಹದ ಸ್ವಾಧೀನತೆ  ತನ್ನ ಕನಸಿಗೆ ಸಾಥ್ ನೀಡಲಿಲ್ಲ. ಸ್ವತಂತ್ರವಾಗಿ ನಡೆಯುವುದೂ ಕಷ್ಟವೆನಿಸಿ ಹಾಸಿಗೆಯಲ್ಲೇ ಜೀವನ ಸವೆಸಬೇಕಾದ ಪರಿಸ್ಥಿತಿಯನ್ನೂ ಎದುರಿಸಿದರು.
         ಬದುಕುವ ಛಲ ನಮ್ಮಲ್ಲಿ ಬಲವಾಗಿದ್ದರೆ ನ್ಯೂನತೆಗಳೆಲ್ಲವೂ ಸೋತು ಶರಣಾಗುತ್ತದೆ ಎನ್ನುವ ಮಾತು ಇವರ ಜೀವನದಲ್ಲಿ ಸತ್ಯವಾಗಿ ತೋರಿತು. ತನ್ನ ಅಣ್ಣ ಗಣೇಶ್ ಪಂಜಿಮಾರ್ ತನ್ನಂತೆಯೇ ವಿಕಲಾಂಗರಾಗಿದ್ದರೂ ಚಿತ್ರಕಲಾವಿದನಾಗಿ ರೂಪುಗೊಂಡು ಸದಾ ಕ್ರಿಯಾತ್ಮಕತೆ,ಕಾರ್ಯಕ್ಷಮತೆಯಿಂದ ತೊಡಗುವ ಪರಿ ಇವರಿಗೂ ಸ್ಫೂರ್ತಿಯಾಯಿತು. ತನ್ನೆಲ್ಲಾ ನ್ಯೂನತೆಗಳನ್ನು ಮರೆತು ಸಾಧನೆಗೆ ಟೊಂಕ ಕಟ್ಟಿ ನಿಂತರು. ಸ್ಪೂರ್ತಿ,ಉತ್ಸಾಹ ಹುರುಪಿನೊಂದಿಗೆ ಕಲಾ ಪ್ರಯತ್ನಕ್ಕೆ ಕಾಲಿಟ್ಟು ಚಿತ್ರಕಲೆ, ಕರಕುಶಲತೆಯಲ್ಲಿ ತೊಡಗಿಸಿಕೊಂಡರು.ತನ್ನ ಆಸಕ್ತಿಯಲ್ಲಿ ಹೆಚ್ಚು ಹೊತ್ತು ತೊಡಗಿಸಿಕೊಳ್ಳಲು ಮೊದಮೊದಲು ಸಾಧ್ಯವಾಗದಿದ್ದರೂ ಪ್ರಯತ್ನ ಪಟ್ಟಂತೆಯೇ ಅಸಾಧ್ಯಗಳೆಲ್ಲವೂ ಸಾಧ್ಯವಾಗಿ ನಿಂತಿತು.
          ಕಾಲು ಹಾಗೂ ಕೈಗಳು ಇದುವರೆಗೂ ಎಂಟು ಬಾರಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರೂ ಎಂದಿಗೂ ಮರುಕ ಪಟ್ಟುಕೊಳ್ಳದೆ ಋಣಾತ್ಮಕತೆಗೆ ಸವಾಲೆಸೆದು ಬೆಳೆದು ನಿಂತ ಇವರ ಯಶೋಗಾಥೆ ಶೂನ್ಯ ಭಾವನೆಯ ಮನಗಳಲ್ಲಿ ಬದಲಾವಣೆಯ ಬೆಳಕನ್ನು ತರಬಲ್ಲದು.
     ಸುಮಾ ಪಂಜಿಮಾರ್ ಆರ್ಟ್ಸ್ ಮತ್ತು ಕ್ರಾಫ್ಟ್ಸ್ ಎಂಬ ಯೂಟ್ಯೂಬ್,ಇನ್ಸ್ಟಾಗ್ರಾಂ,ಹಾಗೂ ಫೇಸ್ಬುಕ್ ನಲ್ಲಿ ಪೇಜ್ ಪರಿಚಯಿಸಿ  ತಮ್ಮ ಕಲಾಪ್ರದರ್ಶನಕ್ಕೆ ವೇದಿಕೆಯನ್ನಾಗಿ ವಿನಿಯೋಗಿಸಿಕೊಂಡಿದ್ದಾರೆ .ಇದುವರೆಗೂ 70 ಕ್ಕೂ ಹೆಚ್ಚು ಆಕರ್ಷಕ ಕರಕುಶಲತೆಯನ್ನು ರಚಿಸಿ ಶ್ಲಾಘನೆಗೆ ಪಾತ್ರರಾಗಿರುತ್ತಾರೆ. ಇದುವರೆಗೆ ಹಲವಾರು ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ.
      “ಅಂಗವೈಕಲ್ಯತೆಯ ಬಗ್ಗೆ ನನಗೆಂದಿಗೂ  ಕೀಳರಿಮೆ ಕಾಡಿಲ್ಲ. ಆತ್ಮಸ್ಥೈರ್ಯವೆಂಬ ಶಕ್ತಿ ನಮ್ಮಲಿದ್ದರೆ ಜೀವನ ಎಂದಿಗೂ ಅಪೂರ್ಣವೆನಿಸುವುದಿಲ್ಲ.ನನ್ನ ಕನಸುಗಳಿಗೆ ಪೂರಕವಾದ ಬೆಂಬಲ ಕುಟುಂಬ ಹಾಗೂ ಸಮಾಜದಿಂದ ದೊರೆತಿದೆ.ಪುಟ್ಟ ಪ್ರಯತ್ನಗಳಿಗೂ  ಸಿಕ್ಕ ಪ್ರೋತ್ಸಾಹದಿಂದ ದಿಟ್ಟ ಹೆಜ್ಜೆಯನ್ನಿಡಲು ಸಾಧ್ಯವಾಗಿದೆ. ವಿಕಲತೆಯೆಂದಿಗೂ ಶಾಪವಲ್ಲ.ದೇವರು ಕೊಟ್ಟ ವರ” ಎನ್ನುತ್ತಾರೆ ಸುಮಾ.
        ಸವಾಲುಗಳು ಜೀವನವನ್ನು ಆಸಕ್ತಿದಾಯಕವಾಗಿಸುತ್ತವೆ .ಆ ಸವಾಲುಗಳನ್ನು ಮೆಟ್ಟಿ ನಿಂತಾಗ ಜೀವನ ಪರಿಪೂರ್ಣವಾಗುತ್ತದೆ.ತನ್ನೆದುರಿಗೆ  ಸಾವಿರಾರು ಸವಾಲುಗಳಿದ್ದರೂ ಅದನ್ನೆಲ್ಲವನ್ನೂ ಮೀರಿ ಕಲೆಯಲ್ಲಿ ಭವಿಷ್ಯದ ಬೆಳಕು ಕಂಡ ಇವರ ಜೀವನಗಾಥೆ ಅಂಧಕಾರ ತುಂಬಿದ ಮನಗಳಲ್ಲಿ ಹೊಸ ಚೈತನ್ಯವನ್ನು ತುಂಬುತ್ತದೆ.ಈ ವಿಶೇಷ ಪ್ರತಿಭೆಯ  ಸಾಧನೆಯ ಹಾದಿಗೆ ಇನ್ನಷ್ಟು ಗೌರವಗಳು ಅರಸಿ ಬರಲಿ.ಸಕಲ ದೈವ ದೇವರುಗಳ ಆಶೀರ್ವಾದ ಇವರ ಮೇಲಿರಲೆಂದು ನಾವೆಲ್ಲರೂ ಆಶಿಸೋಣ.

LEAVE A REPLY

Please enter your comment!
Please enter your name here

12 + three =

Latest news

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ?

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ? ಐಪಿಎಲ್‌ನ ಅತ್ಯಂತ ಜನಪ್ರಿಯ ಮತ್ತು ವ್ಯಾಪಾರಿಕವಾಗಿ ಯಶಸ್ವಿಯಾದ ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹೊಸ...

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..!

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..! ಪಶ್ಚಿಮ ಬಂಗಾಳದಲ್ಲಿ ಕ್ರಿಕೆಟ್ ಎಂದಾಕ್ಷಣ ಕಿವಿಗಪ್ಪಳಿಸುವ ಮೊದಲ ಹೆಸರು ‘ದಾದಾ’.. ಬಂಗಾಳದ ಮನೆ...

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ ಇತ್ತೀಚೆಗೆ ನಡೆದ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪ್ರತಿಭಾವಂತ ಕ್ರಿಕೆಟರ್ ಜೆಮೀಮಾ...

ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು

  ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು ಇತ್ತೀಚೆಗೆ ನಡೆದ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾರತದ ಪ್ರತಿಭಾವಂತ ಬ್ಯಾಟ್ಸ್‌ವುಮನ್ ಜೆಮೀಮಾ ರೊಡ್ರಿಗಸ್ ಮಿಂಚಿ...
- Advertisement -spot_imgspot_img

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್ “ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್ –2” ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್ 27 ಮತ್ತು 28ರಂದು ಬಂಟ್ವಾಳ ಮೈದಾನದಲ್ಲಿ ಜರುಗಲಿದೆ. ‘ಟೀಮ್ ಬ್ರದರ್ಸ್ ವತಿಯಿಂದ ಆಯೋಜಿಸಲಾದ...

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ!

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ! ಹೊಳೆನರಸೀಪುರದಲ್ಲಿ ನಡೆದ ಜೈ ಭೀಮ್ ಟ್ರೋಫಿ 2025 ಕ್ರಿಕೆಟ್ ಟೂರ್ನಿಯಲ್ಲಿ,...

Must read

- Advertisement -spot_imgspot_img

You might also likeRELATED
Recommended to you