ಬೆಂಗಳೂರು-ಪೀಣ್ಯ 2 ನೇ ಹಂತದ ಬಳಿ ಫ್ರೆಂಡ್ಸ್ ಬೆಂಗಳೂರು ಹೊಸದಾಗಿ ನಿರ್ಮಿಸಿದ ಮೈದಾನದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ “ಫ್ರೆಂಡ್ಸ್ ಬೆಂಗಳೂರು ಕಪ್-2023” ಪಂದ್ಯಾಟದ 4 ನೇ ಕ್ವಾರ್ಟರ್ ಫೈನಲ್ ನಲ್ಲಿ ಜೈ ಕರ್ನಾಟಕ ಬೆಂಗಳೂರು- ಶ್ರೀಲಂಕಾ ತಂಡವನ್ನು ಅನಾಯಾಸವಾಗಿ ಸೋಲಿಸಿ,ಸೆಮಿಫೈನಲ್ ಪ್ರವೇಶಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ಜೈ ಕರ್ನಾಟಕ ಬೆಂಗಳೂರು ತಂಡದ ಕರಾರುವಾಕ್ಕಾದ ಬೌಲಿಂಗ್ ಎದುರು ರನ್ ಗಳಿಸಲು ಪರದಾಡಿದರು.ನಿಗದಿತ 8 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 49 ರನ್ ಪೇರಿಸಿತ್ತು.
ಮೊನಚಾದ ಬೌಲಿಂಗ್ ಪಡೆಯನ್ನು ಹೊಂದಿದ ಶ್ರೀಲಂಕಾ ಬೌಲರ್ ಗಳ ವಿರುದ್ಧ ಸಿಡಿದೆದ್ದ ಸುಜಿತ್ ಕೇವಲ 13 ಎಸೆತಗಳಲ್ಲಿ ಬಿರುಸಿನ ಸಿಕ್ಸರ್,ಬೌಂಡರಿ ಸಹಿತ 30 ರನ್ ಗಳಿಸಿ ಗೆಲುವಿನ ಸನಿಹ ತಲುಪಿಸಿದರು.ಸುಜಿತ್ ಪೆವಿಲಿಯನ್ ನಿರ್ಗಮನದ ಬಳಿಕ ದಿಲೀಪ್ ಉತ್ತಪ್ಪ ಕೇವಲ 6 ಓವರ್ ನಲ್ಲಿ ಗೆಲುವಿನ ರನ್ ಬಾರಿಸಿದರು.
ಮೊದಲ ಸೆಮಿಫೈನಲ್ ನಲ್ಲಿ ನ್ಯಾಶ್ ಬೆಂಗಳೂರು ಮೈಟಿ ಬೆಂಗಳೂರನ್ನು ಎದುರಿಸಲಿದ್ದು,ದ್ವಿತೀಯ ಸೆಮಿಫೈನಲ್ ನಲ್ಲಿ ಜೈ ಕರ್ನಾಟಕ-ಕಾಮಾಕ್ಷಿ ರಾಹುಲ್ ಇಲೆವೆನ್ ತಂಡವನ್ನು ಎದುರಿಸಲಿದೆ.