ಕೊಲ್ಲಿ ರಾಷ್ಟ್ರದಲ್ಲಿ ಕಲುಷಿತ ನೀರನ್ನು ಶುದ್ಧ ನೀರನ್ನಾಗಿ ಪರಿವರ್ತಿಸಿದ ಸಂಶೋಧಕ,ಜಗತ್ತಿಗೆ ಕೊರೋನಾ ಅಪ್ಪಳಿಸಿದ ಸಂದರ್ಭದಲ್ಲಿ ವಿಶ್ವದಾದ್ಯಂತ ಜನಜಾಗೃತಿಯ ಅಲೆಯನ್ನೇ ಸೃಷ್ಟಿಸಿದ,ಸಾಮಾಜಿಕ ಕಳಕಳಿಯ ಕುಂದಾಪುರ ಮೂಲದ ವಿಜ್ಞಾನಿ ಡಾ.ದಿನೇಶ್ ಶೆಟ್ಟಿ ಕರ್ಕಿ ಇವರ ಸಂಕೀರ್ಣ ಕ್ಷೇತ್ರದ ಅನುಪಮ ಸೇವೆಯನ್ನು ಪರಿಗಣಿಸಿ ಇಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತರಾದರು.

ಈ ಸಂದರ್ಭದಲ್ಲಿ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಹಾಗೂ ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ (ರಿ) ವತಿಯಿಂದ ಉಡುಪಿಯ ಪ್ರಸಿದ್ಧ ಓಷನ್ ಪರ್ಲ್ ಹೋಟೆಲ್ ನಲ್ಲಿ ಭಾರತೀಯ ಸಂಸ್ಕೃತಿಯಂತೆ ಆರತಿ ಬೆಳಗಿಸಿ ಸ್ವಾಗತಿಸಿ ಸನ್ಮಾನಿಸಲಾಯಿತು.


ಈ ಸಂದರ್ಭ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ ಸಂಪಾದಕರಾದ ಕೋಟ ರಾಮಕೃಷ್ಣ ಆಚಾರ್,ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ನ ಗೌರವ ಸಲಹೆಗಾರರಾದ ಅರುಣ್ ಡೊನಾಲ್ಡ್ ಸಲ್ದಾನ ಹಾಗೂ ಹೋಟೇಲ್ ನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
