ಟೆನಿಸ್ಬಾಲ್ ಕ್ರಿಕೆಟ್ ನ 50 ವರ್ಷಗಳ ಇತಿಹಾಸದ ಹಿರಿಯ ಸಂಸ್ಥೆ ವಿಕ್ರಮ್ ಕ್ರಿಕೆಟ್ ಕ್ಲಬ್ ಬೈಂದೂರು ಇವರ ಆಶ್ರಯದಲ್ಲಿ ಬೈಂದೂರಿನ ಗಾಂಧಿ ಮೈದಾನದಲ್ಲಿ2 ದಿನಗಳ ಕಾಲ T.C.A ಪ್ರಾಯೋಜಿತ ದ್ವಿತೀಯ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಿ ನಡೆಯಿತು.
10 ಓವರ್-90 ಗಜಗಳ ಕ್ರಿಕೆಟ್ ಪಂದ್ಯಾಟದಲ್ಲಿ ಬೈಂದೂರು ತಾಲೂಕಿನ 6 ತಂಡಗಳು ಭಾಗವಹಿಸಿದ್ದವು.
ಅಂತಿಮವಾಗಿ ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಹೊಳೆಬಾಗಿಲು ಬೈಂದೂರು ತಂಡ ನಿಗದಿತ 10 ಓವರ್ ಗಳಲ್ಲಿ 52 ರನ್ ಗಳಿಸಿತ್ತು.ಸವಾಲನ್ನು ಅನಾಯಾಸವಾಗಿ ಬೆಂಬತ್ತಿದ 8 ಸ್ಟಾರ್ ನಾವುಂದ 6.3 ಓವರ್ ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ ಗುರಿಯನ್ನು ತಲುಪಿ ಹೊಳೆಬಾಗಿಲು ಬೈಂದೂರು ತಂಡದ ವಿರುದ್ಧ 7 ವಿಕೆಟ್ ಗಳ ಗೆಲುವು ದಾಖಲಿಸಿದರು.
ಫೈನಲ್ ನ ಪಂದ್ಯಶ್ರೇಷ್ಟ ಪ್ರಶಸ್ತಿ 8 ಸ್ಟಾರ್ ನಾವುಂದ ತಂಡದ ನಾಗರಾಜ್,ಟೂರ್ನಮೆಂಟ್ ಬೆಸ್ಟ್
ಬ್ಯಾಟ್ಸ್‌ಮನ್ 8 ಸ್ಟಾರ್ ನ ಪ್ರದೀಪ್,ಬೆಸ್ಟ್ ಬೌಲರ್
ವಸಂತ ಹೊಳೆಬಾಗಿಲು,ಬೆಸ್ಟ್ ಕೀಪರ್ ಜೆ.ಡಿ.ಸಂತೋಷ ಪೂಜಾರಿ ಮತ್ತು ಸರಣಿಶ್ರೇಷ್ಟ ಪ್ರಶಸ್ತಿ ದೇವರಾಜ್ ಆಚಾರ್ ವಂಡ್ಸೆ ಪಡೆದರು.
*ವರ್ಣರಂಜಿತ ಸಮಾರೋಪ ಸಮಾರಂಭ*
ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದ T.C.A ಉಡುಪಿ ಅಧ್ಯಕ್ಷ ಗೌತಮ್ ಶೆಟ್ಟಿ “ಒಂದು ತಂಡದಲ್ಲಿ 11-15 ಆಟಗಾರರ ಪ್ರದರ್ಶನವೂ ಅತ್ಯಮೂಲ್ಯ,ಉಡುಪಿ ತಾಲೂಕು ಮಟ್ಟದಲ್ಲಿ ಮಿಂಚಿದ ಆಟಗಾರರಿಗೆ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಆಡುವ ಅವಕಾಶ ನೀಡಲಾಗುತ್ತದೆ ಎಂದರು ಹಾಗೂ ವಿಕ್ರಮ್ ಬೈಂದೂರು ತಂಡದ ಕಾರ್ಯವೈಖರಿಯನ್ನು ಶ್ಲಾಘಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿಕ್ರಮ್ ಬೈಂದೂರಿನ ಗೌರವಾಧ್ಯಕ್ಷರಾದ ಗಿರೀಶ್ ಬೈಂದೂರು “T.C.A ಯುವ ಪ್ರತಿಭಾನ್ವಿತ ಆಟಗಾರರಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಇದರ ಸದುಪಯೋಗಪಡಿಸಿಕೊಳ್ಳಿ ಹಾಗೂ ವಿಕ್ರಮ್ ಸ್ಪೋರ್ಟ್ಸ್ ಕ್ಲಬ್ ಸದ್ಯದಲ್ಲಿಯೇ ಬೈಂದೂರಿನಲ್ಲಿ ಲೆದರ್ ಬಾಲ್ ಕ್ರಿಕೆಟ್ ಕೋಚಿಂಗ್ ಅಕಾಡೆಮಿಯನ್ನು ಸ್ಥಾಪಿಸಲಿದೆ ಎಂದರು.T.C.A ಬೈಂದೂರು ತಂಡದ ಪರವಾಗಿ ಉಡುಪಿ ಜಿಲ್ಲಾ ಅಸೋಸಿಯೇಷನ್ ಗೆ ಪ್ರಾಥಮಿಕ ನೆರವಿನ ನಿಧಿರೂಪದಲ್ಲಿ 50,000 ರೂಪಾಯಿಯನ್ನು ಗೌತಮ್ ಶೆಟ್ಟಿಯವರಿಗೆ ಹಸ್ತಾಂತರಿಸಿದರು.
ಸಭೆಯಲ್ಲಿ ಉದ್ಯಮಿಗಳಾದ ಮನೀಶ್ ಶೆಟ್ಟಿ, ಬಿ.ಎಸ್.ಸುರೇಶ್ ಶೆಟ್ಟಿ, ಧನುಷ್ ಶೆಟ್ಟಿ,ಪಾಂಡುರಂಗ ಪಡಿಯಾರ್,ಸುಜಯ್ ಶೆಟ್ಟಿ, ನಾಗರಾಜ್ ಗಾಣಿಗ,ಸ್ಪೋರ್ಟ್ಸ್ ಕನ್ನಡ ಕೋಟ ರಾಮಕೃಷ್ಣ ಆಚಾರ್,
ವಿಕ್ರಮ್ ಸಂಸ್ಥೆಯ ಹಿರಿಯ ಆಟಗಾರರಾದ ಸದಾನಂದ ಉಡುಪಿ,ನಾಗರಾಜ್ ಶೆಟ್ಟಿ ನಾಕಟ್ಟೆ,ದಿನೇಶ್ ಗಾಣಿಗ ಬೈಂದೂರು,ನಾರಾಯಣ ಕೆರೆಕಟ್ಟೆ,ಮಹಾಬಲ ದೇವಾಡಿಗ,ಸದಾಶಿವ ಪಡುವರಿ,ರಾಜೇಶ್ ಆಚಾರ್ಯ,ಚರಣ್ ಬೈಂದೂರು ಇನ್ನಿತರರು ಉಪಸ್ಥಿತರಿದ್ದರು.
ಇಬ್ರಾಹಿಂ ಆತ್ರಾಡಿ,ರಾಘು ಬ್ರಹ್ಮಾವರ ಮತ್ತು ವಿನೀತ್ ಬ್ರಹ್ಮಾವರ ತೀರ್ಪುಗಾರರಾಗಿ, ಅರವಿಂದ್
ಮಣಿಪಾಲ್ ಮತ್ತು ಅಜಯ್ ರಾಜ್ ಮಂಗಳೂರು ವೀಕ್ಷಕ ವಿವರಣೆಯಲ್ಲಿ ಸಹಕರಿಸಿದರೆ,ಸೌಜನ್ ಪಡುಬಿದ್ರಿ ನೇತೃತ್ವದಲ್ಲಿ M9 ಸ್ಪೋರ್ಟ್ಸ್ ಪಂದ್ಯಾವಳಿಯ ನೇರಪ್ರಸಾರವನ್ನು ಬಿತ್ತರಿಸಿದರು.