ಬೈಂದೂರು-ಇಲ್ಲಿನ ಗಾಂಧಿ ಮೈದಾನದಲ್ಲಿ ಬೈಂದೂರು ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ, ಡಿಸೆಂಬರ್ 24 ಮತ್ತು 25 ರಂದು ಹಗಲಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ “ಬೈಂದೂರು ಟ್ರೋಫಿ-2022” ಆಯೋಜಿಸಲಾಗಿದೆ.
ಡಿಸೆಂಬರ್ 24 ರಂದು ಬೈಂದೂರು ವಿಧಾನಸಭಾ ಕ್ಷೇತ್ರದ 8 ತಂಡಗಳು ಹಾಗೂ ಡಿಸೆಂಬರ್ 25 ರವಿವಾರದಂದು ರಾಜ್ಯದ ಬಲಿಷ್ಠ 8 ತಂಡಗಳ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ.
ಪ್ರಥಮ ಬಹುಮಾನ 1,50,006 ರೂ ನಗದು,ದ್ವಿತೀಯ ಬಹುಮಾನ 75,006 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಡಿಸೆಂಬರ್ 24 ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಉದ್ಘಾಟನಾ ಸಮಾರಂಭ ನಡೆಯಲಿದ್ದು ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.
M ಸ್ಪೋರ್ಟ್ಸ್ ಯೂ ಟ್ಯೂಬ್ ಚಾನೆಲ್ ಮೂಲಕ ಪಂದ್ಯಾಟ ನೇರ ಪ್ರಸಾರ ಬಿತ್ತರಗೊಳ್ಳಲಿದೆ.