ಶ್ರೀರಂಗಪಟ್ಟಣದ ಶಾಸಕರು ಶ್ರೀ.ಎ.ಎಸ್.ರವೀಂದ್ರ ಶ್ರೀಕಂಠಯ್ಯ ಇವರ ನೇತೃತ್ವದಲ್ಲಿ ಶ್ರೀರಂಗಪಟ್ಟಣದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಹೊನಲು ಬೆಳಕಿನ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ ASR ಕಪ್-2021 ಪ್ರಶಸ್ತಿಯನ್ನು ಜೈ ಕರ್ನಾಟಕ ಬೆಂಗಳೂರು ತಂಡ ಜಯಿಸಿದೆ.

ಲೀಗ್ ಹಂತದ ರೋಚಕ ಹಣಾಹಣಿಗಳ ಬಳಿಕ ಫೈನಲ್ ನಲ್ಲಿ ಜೈ ಕರ್ನಾಟಕ ತಂಡದ ಆಟಗಾರರ ಸಂಘಟಿತ ಹೋರಾಟದ ಫಲವಾಗಿ ಬಲಿಷ್ಠ ಫ್ರೆಂಡ್ಸ್ ಬೆಂಗಳೂರು ತಂಡಕ್ಕೆ ಸೋಲುಣಿಸಿ 2 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡರು.ಜೈ ಕರ್ನಾಟಕ ಬೆಂಗಳೂರು ತಂಡದ ಮಾರ್ಕ್ ಮಹೇಶ್ ಬೆಸ್ಟ್ ಬ್ಯಾಟ್ಸ್‌ಮನ್ ಮತ್ತು ಫ್ರೆಂಡ್ಸ್ ಬೆಂಗಳೂರಿನ ಧೀರಜ್ ಅಲೆವೂರು ಬೆಸ್ಟ್ ಬೌಲರ್ ಗೌರವಕ್ಕೆ ಪಾತ್ರರಾದರು.


ಯಾಸೀನ್ ನೇತೃತ್ವದಲ್ಲಿ Y.Sports ಪಂದ್ಯಾವಳಿಯ ನೇರ ಪ್ರಸಾರವನ್ನು ಬಿತ್ತರಿಸಿದರು.