
ಚಿನ್ನದ ನಾಡು,ಮಾವಿನ ಬೀಡು ಕೋಲಾರ ಜಿಲ್ಲೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅತ್ಯಂತ ಅದ್ಧೂರಿಯ ಪಂದ್ಯಾಕೂಟ “ಶ್ರೀನಿವಾಸಪುರ ಪ್ರಿಮಿಯರ್ ಲೀಗ್ M.K.S CUP-2019” ಇದೇ ಬರುವ ಆಗಸ್ಟ್ 15 ರಿಂದ 18 ರ ತನಕ 4 ದಿನಗಳ ಕಾಲ ಹಗಲಿನಲ್ಲಿ ಕೋಲಾರದ ರಿಜ್ವಾನ್ ಮ್ಯಾಂಗೋ ಯಾರ್ಡ್ ಗ್ರೌಂಡ್ ನಲ್ಲಿ ನಡೆಯಲಿದೆ.

ಈ ವ್ಯವಸ್ಥಿತ ಪಂದ್ಯಾಕೂಟದಲ್ಲಿ ಕೋಲಾರದ 10 ಫ್ರಾಂಚೈಸಿಗಳು ಭಾಗವಹಿಸಲಿದ್ದು.ಕರ್ನಾಟಕ ರಾಜ್ಯದ ಪ್ರತಿಷ್ಟಿತ ತಂಡಗಳಾದ ಜೈ ಕರ್ನಾಟಕ ತಂಡದ ಸಚಿನ್,ಮಾರ್ಕ್ ಮಹೇಶ್,ಮೊಹ್ಸಿನ್, ಫ್ರೆಂಡ್ಸ್ ತಂಡದಿಂದ ಸಾಗರ್ ಭಂಡಾರಿ, ಪ್ರಸಾದ್ ನೇರಳಕಟ್ಟೆ, ಸೀನ, ನವೀನ, ನ್ಯಾಶ್ ನ ಪುರುಷಿ, ಜಾನ್, ಮಹೇಶ್, ಶ್ರೀಕಾಂತ್, ಸಂದೀಪ್ ಕೀನ್ಯಾ ಎಸ್.ಝಡ್,ಸಿ.ಸಿ ತಂಡದಿಂದ ಅಜರ್, ಸುಜಯ್, ಸ್ವಸ್ತಿಕ್ ಹಾಗೂ ಅಶೋಕ್ ಪಿಳ್ಳೆ ಐಕಾನ್ ಆಟಗಾರರ ರೂಪದಲ್ಲಿ ಪ್ರತಿ ಫ್ರಾಂಚೈಸಿಯಲ್ಲೂ 2 ಆಟಗಾರರು ಹಾಗೂ ಕೋಲಾರ ಜಿಲ್ಲೆಯ 3 ಐಕಾನ್ ಆಟಗಾರರು ಹಾಗೂ ಸ್ಥಳೀಯ ಆಟಗಾರರು ಪ್ರತಿಷ್ಟಿತ ಪಂದ್ಯಾಕೂಟದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿದ್ದಾರೆ.


ಪಂದ್ಯಾಕೂಟದ ವಿಜೇತ ತಂಡ 1,55,555 ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ರನ್ನರ್ಸ್ ತಂಡ 77,777 ನಗದು ಹಾಗೂ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು,ಬೆಸ್ಟ್ ಬ್ಯಾಟ್ಸ್‌ಮನ್, ಬೆಸ್ಟ್ ಬೌಲರ್, ಸರಣಿ ಶ್ರೇಷ್ಠ, ಪಂದ್ಯಶ್ರೇಷ್ಟ, ಹ್ಯಾಟ್ರಿಕ್ ಸಿಕ್ಸ್ ಹಾಗೂ ಹ್ಯಾಟ್ರಿಕ್ ಬೌಂಡರಿಗಳಿಗೆ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು.
ಈ ಪ್ರತಿಷ್ಟಿತ ಪಂದ್ಯಾಕೂಟ ಶ್ರೀಯುತ ನದೀಮ್ ಅಖ್ತರ್ ರವರ ದಕ್ಷ ಸಾರಥ್ಯದಲ್ಲಿ,ಚಂದು ಮಾಲೂರು,ನೀಲು, ಕಾರ್ತಿಕ್ (ರಾಕರ್ಸ್) ರವರ ಸಹಕಾರದೊಂದಿಗೆ ನಡೆಯಲಿದ್ದು, ಸಚಿನ್ ಮಹಾದೇವ್ ನೇತೃತ್ವದ M Sports ನೇರ ಪ್ರಸಾರ ಬಿತ್ತರಿಸಲಿದ್ದು,ರಾಜ್ಯದ ಪ್ರಸಿದ್ಧ ವೀಕ್ಷಕ ವಿವರಣೆಕಾರರಾದ ಪ್ರಶಾಂತ್ ಅಂಬಲಪಾಡಿ,ಹಿಂದಿಯ ಪ್ರಸಿದ್ಧ ಹಿರಿಯ ವೀಕ್ಷಕ ವಿವರಣೆಕಾರ ಮಾಧವ ಶ್ಯಾನುಭೋಗ್ ಹಾಗೂ ತೀರ್ಪುಗಾರರಾಗಿ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ಹಾಗೂ ಸಂಗಡಿಗರು ಪಂದ್ಯಾಕೂಟಕ್ಕೆರಂಗೇರಿಸಲಿದ್ದಾರೆ.

ಕಳೆದವಾರ ಆಟಗಾರರ ಆಕ್ಷನ್ ಪ್ರಕ್ರಿಯೆಯನ್ನು ಹಿರಿಯ ಅನುಭವಿ ವೀಕ್ಷಕ ವಿವರಣೆಕಾರ ಶಿವನಾರಾಯಣ್ ಐತಾಳ್ ಕೋಟ ನಡೆಸಿದ್ದರು.
ಭಾಗವಹಿಸುವ ಫ್ರಾಂಚೈಸಿಗಳು ಹಾಗೂ ಆಟಗಾರರ ವಿವರ ಈ ಕೆಳಗಿನಂತಿದೆ.






