10 C
London
Tuesday, April 23, 2024
Homeಕ್ರಿಕೆಟ್ಅಡೆತಡೆಗಳ ಎಲ್ಲೆಗಳ ಮೀರಿ ಮತ್ತೆ ಬೆಳೆದು ನಿಂತ ಶ್ರೀಲಂಕಾ ಕ್ರಿಕೆಟ್‌ ತಂಡ....

ಅಡೆತಡೆಗಳ ಎಲ್ಲೆಗಳ ಮೀರಿ ಮತ್ತೆ ಬೆಳೆದು ನಿಂತ ಶ್ರೀಲಂಕಾ ಕ್ರಿಕೆಟ್‌ ತಂಡ….

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಏಷ್ಯಾ ಖಂಡದ ಪಾಲಿಗೆ ಕ್ರಿಕೆಟ್ ಮಿನಿ ವಿಶ್ವಕಪ್‌ ಎಂಬ ಖ್ಯಾತಿಯಲ್ಲೇ ಪ್ರತಿಷ್ಠಿತ ಕ್ರಿಕೆಟ್‌ ಪಂದ್ಯಾಟವಾಗಿ ಸಾಗುವ ಏಷ್ಯಾ ಕಪ್ ಈ ಬಾರಿಯಂತು ಕ್ರಿಕೆಟ್ ಪಂಡಿತರ ಲೆಕ್ಕಾಚಾರವನ್ನೇ ತಲೆಕೆಳಗಾಗಿಸುವಂತೆ ಅಚ್ಚರಿಯ ಫಲಿತಾಂಶವನ್ನು ನೀಡಿದೆ. ಅನುಭವಿ ಕ್ರಿಕೇಟಿಗರಿಂದ ತುಂಬಿ ತುಳುಕುತ್ತಿದ್ದ ಟೀಮ್ ಇಂಡಿಯಾ ಪ್ರಶಸ್ತಿಯ ಫೇವರಿಟ್ ಆಗಿದ್ದರು, ತನ್ನ ಪರಿಪೂರ್ಣ ಸಂಘಟಿತ ಹೋರಾಟವನ್ನು ತೋರ್ಪಡಿಸದೇ ಸೂಪರ್ 4 ಹಂತದಲ್ಲಿ ನಂಬಲಸಾಧ್ಯ ಸೋಲಿನೊಂದಿಗೆ  ಬರಿಗೈಯಲ್ಲಿ ಹಿಂತಿರುಗಿದೆ.
ಆರ್ಥಿಕ ದಿವಾಳಿತನ, ರಾಜಕೀಯ ಅಸ್ಥಿರತೆ ಸಾರ್ವಜನಿಕ ದಂಗೆಯಿಂದಾಗಿ  ವಿಶ್ವದ ಮುಂದೆ ತಲೆಬಾಗಿದ್ದ ಶ್ರೀಲಂಕಾ ತನ್ನ ನೆಲದಲ್ಲಿ ಆತಿಥ್ಯ ಕಾಣಬೇಕಿದ್ದ ಏಷ್ಯಾ ಕಪ್ ಪಂದ್ಯಾಟವನ್ನು ಅರಬ್ ನಾಡಿಗೆ ಸ್ಥಳಾಂತರಿಸಿತು.
 ಆರಂಭಿಕ ಪಂದ್ಯಾಟದಲ್ಲಿ ಅಫಘನ್ನರ ವಿರುದ್ದ ಹೀನಾಯ ಸೋಲು ಕಂಡ ಧನುಸು ಶನಕ ಸಾರಥ್ಯದ ಶ್ರೀಲಂಕಾ ಕ್ರಿಕೆಟ್‌ ಪಡೆ ಮತ್ತೆ ಪುಟಿದೆದ್ದು ನಿಂತು ಪ್ರಶಸ್ತಿ ಗೆಲ್ಲುತ್ತದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ, ಆರಂಭಿಕ ಸೋಲಿಗೆ ಆಘಾತಗೊಳ್ಳದೇ ಸತತ 5 ಪಂದ್ಯಾಟಗಳ ಗೆಲುವಿನೊಂದಿಗೆ ತನ್ನ ಪಾರುಪತ್ಯವನ್ನು ತೋರಿದ ರೀತಿ ನಿಜಕ್ಕೂ ಕ್ರಿಕೆಟ್‌ ಜಗತ್ತು ಹುಬ್ಬೇರಿಸಿ ನೋಡುವಂತದ್ದು.
ದುಬೈ ನೆಲದಲ್ಲಿ ಈ ಬಾರಿಯ ಏಷ್ಯಾಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ತನ್ನ ಅಸಾಧಾರಣ ಪ್ರದರ್ಶನದೊಂದಿಗೆ ಪಾರುಪತ್ಯ ಮೆರೆದದಿದ್ದರೆ ಅದು ಶ್ರೀಲಂಕಾ ಕ್ರಿಕೆಟ್‌ ತಂಡ. ಮಹೇಲಾ ಜಯವರ್ಧನ, ಕುಮಾರ ಸಂಗಕ್ಕಾರ, ತಿಲಕರತ್ನೇ ದಿಲ್ಶಾನ್, ಲಸಿತ್ ಮಾಲಿಂಗ ರಂತಹ ಕ್ರಿಕೆಟ್ ದೈತ್ಯರ ನಿರ್ಗಮನದ ಬಳಿಕ ಒಂದು ಪ್ರಬಲ ಪೈಪೋಟಿಯ ತಂಡವನ್ನು ತನ್ನದಾಗಿಸಿಕೊಳ್ಳುವಲ್ಲಿ ಶ್ರೀಲಂಕಾ ಪದೇ ಪದೇ ಎಡವುತ್ತಿತ್ತು. ಆದರೆ ಈ ಬಾರಿ 2022ರ ಏಷ್ಯಾ ಕಪ್ ಗೆ ಆಯ್ಕೆಗೊಂಡ ದಸುನು ಶನಕ ಸಾರಥ್ಯದ ತಂಡ ಹಲವು ವರ್ಷಗಳ ತರುವಾಯ ಶ್ರೀಲಂಕಾ ಮುಡಿಗೆ ಪ್ರತಿಷ್ಠಿತ ಪಂದ್ಯಾಟದ ಪ್ರಶಸ್ತಿಯ ಗರಿಯನ್ನು ದೊರಕಿಸಿ ಕೊಡುವಲ್ಲಿ ಯಶಸ್ವಿಯಾಯಿತು.
ಪ್ರತಿಷ್ಠಿತ ಏಷ್ಯಾಕಪ್ ನ ಪ್ರಶಸ್ತಿ ಸುತ್ತಿನ ಅಂತಿಮ ಹಣಾಹಣಿಯಲ್ಲಿ  ಪಾಕ್ ಸೂಪರ್ 4 ಹಂತದಲ್ಲಿ ಶ್ರೀಲಂಕಾದ ವಿರುದ್ದ ಸೋಲು ಕಂಡಿದ್ದರೂ , ಪ್ರಶಸ್ತಿಯ ಫೇವರಿಟ್ ಪಾಕಿಸ್ಥಾನವೇ ಆಗಿತ್ತೂ, ಅದಕ್ಕೆ ಪೂರಕ ಎಂಬಂತೆ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ  ಲಂಕಾ 58 ರನ್ ಗಳಿಸುವುದರಲ್ಲಿ ತನ್ನ 5 ಅಗ್ರ ಪಂಕ್ತಿಯ ಆಟಗಾರರನ್ನು ಕಳೆದುಕೊಂಡಿತ್ತು,  ತದನಂತರದಲ್ಲಿ ಜೊತೆಯಾದ ರಾಜಪಕ್ಸ ಹಾಗೂ ಹಸರಂಗ ಜೋಡಿ ಪಾಕ್ ಬೌಲಿಂಗ್ ದಾಳಿಗೆ ದಿಟ್ಟ ಉತ್ತರವನ್ನು ನೀಡಿ 170 ರ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕುವುದರಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು.
170 ರ ಜಯದ ಗುರಿಯನ್ನು ಬೆನ್ನತ್ತಲು ಹೊರಟ ಪಾಕ್ ಗೆ ಲಂಕಾ ಬೌಲರ್ ಒಂದು ಎಸೆತ ಎಸೆಯುವ ಮುನ್ನವೇ 9 ರನ್ ಗಳ ದಾನ ರೂಪದ ಕೊಡುಗೆಯನ್ನು ನೀಡಿದರೂ ನಂತರದಲ್ಲಿ ಬೌಲಿಂಗ್‌ ನಲ್ಲಿ ಹಿಡಿತ ಸಾಧಿಸಿ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್‌ ಕಬಳಿಸುವ ಮೂಲಕ  ಪಾಕ್ ಆರಂಭಿಕ ಆಘಾತವನ್ನು  ಎದುರಿಸುವಂತೆ ಮಾಡಿ ಮತ್ತೆ ರನ್ ಗಳಿಕೆಯಲ್ಲಿ ಚೇತರಿಕೆ ಕಾಣದಂತೆ ಒತ್ತಡ ಹೇರುವಲ್ಲಿ ಬಿಗು ಬೌಲಿಂಗ್ ದಾಳಿಯನ್ನು ಸಂಘಟಿಸಿತು. ರಿಜ್ವಾನ್ ಹಾಗೂ ಇಪ್ತಿಕಾರ್ ಗೆಲುವಿನ ಹೋರಾಟಕ್ಕೆ  ಪ್ರಯತ್ನಿಸಿದರು, ಲಂಕಾದ ಯುವ ಪಡೆಯ ಪ್ರಬಲ ಬೌಲಿಂಗ್ ಹಾಗೂ ಸಂಘಟಿತ  ಫೀಲ್ಡಿಂಗ್ ಎದುರು ಪ್ರತಿಸ್ಪರ್ಧೆಯೊಡ್ಡುವಲ್ಲಿ  ಸಶಕ್ತರಾಗದಂತಾದರು. ಲಂಕಾ ತನ್ನ ಪ್ರಬಲ ಹೋರಾಟದ ಬಲದಿಂದ ಪಾಕ್ ಹೋರಾಟವನ್ನು 147  ರನ್ ಗಳಿಗೆ ಅಂತ್ಯಗೊಳಿಸಿ 2022ರ ಏಷ್ಯಾ ಕಪ್ ಫೈನಲ್ ನಲ್ಲಿ ಅಧಿಕಾರಯುತ ಗೆಲುವನ್ನು ದಾಖಲಿಸಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.
ಏಷ್ಯಾ ಕಪ್ ನಂತಹ ಪ್ರತಿಷ್ಠಿತ ಪಂದ್ಯಾಟದಲ್ಲಿ ತಮ್ಮ ಮೇಲಿನ ಹಂಬಲ ಬೆಂಬಲದ ಆಯ್ಕೆಯನ್ನು ಸಮರ್ಥಿಸಿಕೊಂಡು,  ಪರಿಪೂರ್ಣ  ಸಾಮರ್ಥ್ಯದೊಂದಿಗೆ ಸರ್ವಾಂಗೀಣ  ಪ್ರದರ್ಶನವನ್ನು ತೋರಿದ ಯಾವುದೇ ಸ್ಟಾರ್ ಕ್ರಿಕೆಟಿಗರಿಲ್ಲದಿದ್ದರೂ ತಮ್ಮ ಕೆಚ್ಚೆದೆಯ ಹೋರಟ , ಗೆಲುವಿನ ಹುಮ್ಮಸ್ಸಿನಿಂದ ಅರ್ಹವಾಗಿ ಏಷ್ಯಾ ಕಪ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡ  ಶ್ರೀಲಂಕಾದ ಹೊಸ ಹುಡುಗರ ತಂಡ 2022 ರ ಏಷ್ಯಾದ ಕ್ರಿಕೆಟ್‌ ಚಾಂಪಿಯನ್ ಆಗುವುದರೊಂದಿಗೆ ಮುಂದೆ  ವಿಶ್ವಮಟ್ಟದಲ್ಲಿ ಪ್ರಬಲ ಪೈಪೋಟಿ ನೀಡುವುದರೊಂದಿಗೆ ಹೊಸ  ಸಂಚಲನ ಮೂಡಿಸುವ ನಿರೀಕ್ಷೆಯನ್ನು ಶ್ರೀಲಂಕಾ ಕ್ರಿಕೆಟ್ ತಂಡ ಮತ್ತೆ ಹುಟ್ಟುಹಾಕಿದೆ.

Latest stories

LEAVE A REPLY

Please enter your comment!
Please enter your name here

one + 15 =