ಅಸಹಾಯಕ ಮನಗಳಿಗೆ ಆತ್ಮವಿಶ್ವಾಸ ತುಂಬುವ ಸಮಾಜರತ್ನ ಡಾ.ಗೋವಿಂದ ಬಾಬು ಪೂಜಾರಿ ಇವರಿಂದ 9 ನೇ ಮನೆಯ ಹಸ್ತಾಂತರ
ಸಮಾಜದ ಬಡ,ಅಶಕ್ತ ಕುಟುಂಬಗಳಿಗೆ ಸೂರು ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ,ಸೇವಾರತ್ನ ಡಾ.ಗೋವಿಂದ ಬಾಬು ಪೂಜಾರಿ ಇವರ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ) ತೀರಾ ಅಗತ್ಯವುಳ್ಳವರಿಗೆ ಶಾಶ್ವತ ಸೂರು ನಿರ್ಮಿಸಿಕೊಡುವ ಕೈಂಕರ್ಯವನ್ನು ನಡೆಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಬೈಂದೂರು ಗಂಗನಾಡು ನೀರೋಡಿ ಸೌಂತ್ ಮನೆ ರಾಮ ಮರಾಠಿ ಇವರ ಶಿಥಿಲಗೊಂಡ ಮನೆಯವರ ಸಂಕಷ್ಟವನ್ನು ಅರಿತು ನೀಡಿದ ಭರವಸೆಯಂತೆ ಟ್ರಸ್ಟ್ ಮೂಲಕ 9 ನೇ ಸುಸಜ್ಜಿತ ಮನೆ ನಿರ್ಮಿಸಲಾಗಿದ್ದು ಪ್ರವೇಶೋತ್ಸವಕ್ಕೆ ಸಜ್ಜಾಗಿದೆ.
ಸೆಪ್ಟೆಂಬರ್ 26 ಸೋಮವಾರ ಬೆಳಿಗ್ಗೆ 10 ಗಂಟೆಗೆ ,ಬೈಂದೂರು ಗಂಗನಾಡು ನೀರೋಡಿ ಯಲ್ಲಿ ನಡೆಯಲಿರುವ 9 ನೇ ಸುಸಜ್ಜಿತ ಮನೆಯ ಹಸ್ತಾಂತರ ಕಾರ್ಯಕ್ರಮ ಬೆಳಗಾಂ ನಿಪ್ಪಾಣಿ ಮಹಾಕಾಳಿ ಸಂಸ್ಥಾನಂ ಸಧರ್ಮ ಓಂಶಕ್ತಿ ಮಠದ ರಸಾಯಿ ಶೇಂಡಾರು ಕ್ಷೇತ್ರದ ಪೀಠಾಧಿಪತಿಗಳಾದ ಶ್ರೀಶ್ರೀಶ್ರೀ ಅರುಣಾನಂದ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಶ್ರೀಯುತ ಅಚ್ಯುತ್ ಕಲ್ಯಾಣ್ ರವರ ಅಮೃತ ಹಸ್ತದಿಂದ ಉದ್ಘಾಟನೆಗೊಳ್ಳಲಿದೆ.
*”ಬಡವರಿಗೊಂದು ಸೂರು” ನನ್ನ ಕನಸಿನ ಯೋಜನೆ ಪ್ರಗತಿ ಯಲ್ಲಿದ್ದು,ಮುಂದಿನ ದಿನಗಳಲ್ಲಿ ಪ್ರತೀ ತಿಂಗಳು ಒಂದೊಂದು ಮನೆಯ ಉದ್ಘಾಟನೆ ನಡೆಸುವ ಯೋಜನೆ ಹಾಕಿಕೊಂಡಿದ್ದು ಸಾಕಷ್ಟು ಮನೆ ನಿರ್ಮಾಣ ಹಂತದಲ್ಲಿದೆ”ಎಂದು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ) ನ ಸಂಸ್ಥಾಪಕರು,ಸಮಾಜರತ್ನ ಡಾ.ಗೋವಿಂದ ಬಾಬು ಪೂಜಾರಿಯವರು ತಿಳಿಸಿದ್ದಾರೆ.*