Categories
ಸ್ಪೋರ್ಟ್ಸ್

ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅರ್ಪಿಸುವ ಶ್ರೀ ಸಿದ್ಧಿ ವಿನಾಯಕ ಟ್ರೋಫಿ “ಅಂತರ್ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟ

ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ (ರಿ)ಉಡುಪಿ ಇದರ ಸಹಯೋಗದೊಂದಿಗೆ   ಶ್ರೀ ಸಿದ್ಧಿ ವಿನಾಯಕ ಚೆಸ್ ಅಕಾಡೆಮಿ (ರಿ)ಕುಂದಾಪುರ, ಟೊರ್ಪೆಡೋಸ್  ಸ್ಪೋರ್ಟ್ಸ್ ಕ್ಲಬ್ (ರಿ) ಕುಂದಾಪುರ  ಅಂತರ್ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟವನ್ನು ದಿನಾಂಕ 27.02.2022 ರಂದು ಶ್ರೀ ಕೃಷ್ಣ  ಲಲಿತ ಕಲಾ ಮಂದಿರ ನಾಗೂರಿನಲ್ಲಿ  ಆಯೋಜಿಸಿದೆ.
  ಈ ಪಂದ್ಯಾಟದಲ್ಲಿ ಒಟ್ಟು 107 ಪ್ರಶಸ್ತಿಗಳಿದ್ದು ಪಂದ್ಯಾಟದಲ್ಲಿ 4-7 ಸುತ್ತುಗಳಿದ್ದು ಕಾಲಾವಧಿ 15 ನಿಮಿಷ+5 ಸೆಕೆಂಡುಗಳು.
7,9,11,13 ಹಾಗೂ 17 ವರ್ಷ ವಯೋಮಿತಿಯ ಬಾಲಕ &ಬಾಲಕಿಯರು ಈ ಪಂದ್ಯಾಟದಲ್ಲಿ ಭಾಗವಹಿಸಬಹುದಾಗಿದೆ .
ಮುಕ್ತ ಪಂದ್ಯಾಟದಲ್ಲಿ ಮೊದಲನೆಯ ಬಹುಮಾನ – ರೂ.2000
ಎರಡನೆಯ ಬಹುಮಾನ – ರೂ.1500
ಮೂರನೆಯ ಬಹುಮಾನ – ರೂ.1000
ನಾಲ್ಕನೆಯ ಬಹುಮಾನ – ರೂ.700
5 -7 ನೆಯ ಬಹುಮಾನ – ರೂ.600
 ಇದರ ಮುಖ್ಯ ತೀರ್ಪುಗಾರರಾಗಿ ಸಾಕ್ಷಾತ್ ಯು.ಕೆ ಭಾಗಿಯಾಗಲಿದ್ದು ಪಂದ್ಯಾಟದಲ್ಲಿ ಭಾಗವಹಿಸಲಿಚ್ಛಿಸುವವರು 26-02-2022 ರ ಒಳಗಾಗಿ www.udupichessassociation.com ನಲ್ಲಿ ನೋಂದಾಯಿಸತಕ್ಕದ್ದು.ಈ ಪಂದ್ಯಾಟಕ್ಕೆ ಮುಕ್ತ ವಿಭಾಗದಲ್ಲಿ ರೂ 500, ವಯೋಮಿತಿ ವಿಭಾಗಕ್ಕೆ ರೂ.400 ಪ್ರವೇಶ ಶುಲ್ಕವಿರುತ್ತದೆ.ಈ ಪ್ರವೇಶ ಶುಲ್ಕವನ್ನು
A/C-01222200184581
IFSC Code:-CNRB0006422
ಅಕೌಂಟ್ ಹೆಸರು:- ಶ್ರೀ ಸಿದ್ಧಿ ವಿನಾಯಕ್ ಚೆಸ್ ಅಕಾಡೆಮಿ.
ಇದಕ್ಕೆ ವರ್ಗಾಯಿಸಬಹುದು.
ಪಂದ್ಯಾಟದ ಉದ್ಘಾಟನೆ:- ಪೂರ್ವಾಹ್ನ 9:00 ಗಂಟೆಗೆ
ಬಹುಮಾನ ವಿತರಣೆ:- ಅಪರಾಹ್ನ 4:00 ಗಂಟೆಗೆ
ಸಂಪರ್ಕಕ್ಕಾಗಿ:
 ಬಾಬು ಜೆ ಪೂಜಾರಿ -9448547958,6364336158
ಸೌಂದರ್ಯ ಯು.ಕೆ -8088625123
ಸ್ಪರ್ಧಿಗಳಿಗೆ ಮಧ್ಯಾಹ್ನದ  ಭೋಜನದ ವ್ಯವಸ್ಥೆಯಿದ್ದು  ಸ್ಪರ್ಧಿಗಳು ತಮ್ಮದೇ  ಚೆಸ್ ಸೆಟ್ ಹಾಗೂ ಚೆಸ್ ಗಂಟೆಯನ್ನು ಕಡ್ಡಾಯವಾಗಿ ತರುವುದು.
ಪಂದ್ಯಾಟಕ್ಕೆ ಆದರದ ಸ್ವಾಗತ ಬಯಸುವ,
ಬಾಬು.ಜೆ ಪೂಜಾರಿ
ಅಧ್ಯಕ್ಷರು,
ಶ್ರೀ ಸಿದ್ಧಿ ವಿನಾಯಕ ಚೆಸ್ ಅಕಾಡೆಮಿ(ರಿ)ಕುಂದಾಪುರ
ಗೌತಮ್ ಶೆಟ್ಟಿ
ಅಧ್ಯಕ್ಷರು,
ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್(ರಿ)ಕುಂದಾಪುರ
ಅಮಿತ್ ಕುಮಾರ್ ಶೆಟ್ಟಿ
ಅಧ್ಯಕ್ಷರು,
ಉಡುಪಿ ಜಿಲ್ಲಾ  ಚೆಸ್ ಅಸೋಸಿಯೇಷನ್(ರಿ)ಉಡುಪಿ

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

6 + 15 =