ಕರ್ನಾಟಕ ಸಂಘ ಶಾರ್ಜಾ ಯುಎಇ ಇವರ ಆಶ್ರಯದಲ್ಲಿ ನಡೆದ ಯುಎಇ ಮಟ್ಟದ ಪುರುಷರ ವಾಲಿಬಾಲ್ , ಪುರುಷರ ಮತ್ತು ಮಹಿಳೆಯರ ತ್ರೋಬಾಲ್ ಪಂದ್ಯಾಟ , 27 ಭಾನುವಾರ ಅಜ್ಮನ್ ಅಕಾಡೆಮಿಯಲ್ಲಿ ನಡೆಯಿತು.
ಈ ಸಮಾರಂಭದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರು ಶ್ರೀ ಎಂ.ಇ.ಮೂಳೂರು. ಮುಖ್ಯ ಅತಿಥಿಗಳಾಗಿ ಸಂಘದ ಪ್ರಮುಖ ಸಲಹೆಗಾರರು ಮತ್ತು ಉದಾರ ದಾನಿಗಳು ಸಮಾಜಸೇವಕರು ಆಗಿರುವ ಶ್ರೀ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಫಾರ್ಚುನ್ ಗ್ರೂಪ್ಸ್ ಆಫ್ ಹೋಟೆಲ್ಸ್, ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣ ಸ್ವಾಮಿಗಳು ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಶ್ರೀ ಎಂ.ಎನ್.ಸುರೇಶ್ ಮತ್ತು ಸಂಘದ ಪದಾಧಿಕಾರಿಗಳು , ಕ್ರೀಡಾಪಟುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಕ್ರೀಡಾ ಜೀವನದ ಅವಿಭಾಜ್ಯ ಅಂಗ ಕ್ರೀಡಾ ಚಟುವಟಿಕೆಗಳಿಗೆ ನನ್ನ ಸಹಕಾರ ಮತ್ತು ಬೆಂಬಲ ಇದ್ದೇ ಇರುತ್ತದೆ ಎಂದು ಎಲ್ಲಾ ಕ್ರೀಡಾ ಪಟುಗಳಿಗೂ ಶುಭ ಹಾರೈಸಿದರು.
ಬೆಳಿಗ್ಗೆ ಪ್ರಾರಂಭಗೊಂಡ ಕ್ರೀಡಾ ಚಟುವಟಿಕೆ ಮುಸಂಜೆವರೆಗೆ ನಡೆಯಿತು. ಯುಎಇ 15ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಲೀಗ್ ಮಾದರಿಯ ಪಂದ್ಯಾಟದಲ್ಲಿ ಪುರುಷರ ವಾಲಿಬಾಲ್ ವಿಭಾಗದಲ್ಲಿ ಟೀಮ್ ಡಿ3 ವಿಜಯಶಾಲಿಗಳಾದರೆ ಪುರುಷರ ತ್ರೋಬಾಲ್ ವಿಭಾಗದಲ್ಲಿ ಕೋಸ್ಟಲ್ ಫ್ರೆಂಡ್ಸ್ ಮತ್ತು ಮಹಿಳೆಯರ ತ್ರೋಬಾಲ್ ಪಂದ್ಯಾವಳಿಯಲ್ಲಿ ಬಂಟ್ಸ್ ದುಬೈ ವಿಜಯಿಶಾಲಿ ಆಗುವ ಮೂಲಕ ಮಯೂರ ಕಪ್ ತನ್ನದಾಗಿಸಿಕೊಂಡಿದೆ.
ಪಂದ್ಯಾಟದ ಕಾರ್ಯಕ್ರಮ ನಿರೂಪಣೆಯನ್ನು ಸ್ಪೋರ್ಟ್ಸ್ ಕನ್ನಡ ಗಲ್ಫ್ ಪ್ರತಿನಿಧಿ ವಿಘ್ನೇಶ್ ಕುಂದಾಪುರ ನಡೆಸಿದರು.