ಬೈಂದೂರು : ಶ್ರೀ ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ ಬಂಕೇಶ್ವರ ಇವರ ಆಶ್ರಯದಲ್ಲಿ ದ್ವಿತೀಯ ವರ್ಷದ ಬೈಂದೂರು ತಾಲೂಕು ಮಟ್ಟದ ಹೊನಲು ಬೆಳಕಿನ “ಪುರುಷರ ಡಬಲ್ಸ್ ಶಟಲ್ ಪಂದ್ಯಾಟ ಎಸ್.ಎಮ್.ಬಿ.ಸಿ ಟ್ರೋಫಿ – 2020” ಶನಿವಾರ ಸಂಜೆ ಬಂಕೇಶ್ವರ ಮಹಾಕಾಳಿ ದೇವಸ್ಥಾನ ವಠಾರದಲ್ಲಿ ನಡೆಯಿತು.
ಬೈಂದೂರು ಆರಕ್ಷಕ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಜಿ ನಾಯಕ್ ಸಭಾ ಕಾರ್ಯಕ್ರಮ ಹಾಗೂ ಪಂದ್ಯಾಟದ ಕ್ರೀಡಾಂಗಣವನ್ನು ಉದ್ಘಾಟಿಸಿ, ಮಾತನಾಡಿ ಪ್ರತಿಯೊಬ್ಬ ಕ್ರೀಡಾಪಟುಗಳು ಕ್ರೀಡಾ ಸ್ಪೂರ್ತಿಯಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಕ್ರೀಡಾಕೂಟಗಳ ಯಶಸ್ಸಿಗೆ ಸಹಕರಿಸಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಕೂಡಾ ಒಂದು ಒಂದು ಕಲೆ ಅಡಗಿರುತ್ತದೆ. ಸಾಕಷ್ಟು ಜನ ಕ್ರೀಡಾಯಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಜೀವನದಲ್ಲಿ ಮಾನಸಿಕವಾಗಿ ಸಧೃಡರಾಗಲು ಕ್ರೀಡೆ ಅಗತ್ಯ. ಎಲ್ಲಾ ವಯೋಮಾನದವರಿಗೂ ಕ್ರೀಡೆ ದೈಹಿಕ ಕ್ಷಮತೆಯನ್ನು ಕೊಡುತ್ತದೆ ಎಂದರು.
ಕ್ಲಬ್ ನ ಗೌರವಾಧ್ಯಕ್ಷ ಉದಯ್ ಎಸ್. ಕೆ.ಆರ್.ಸಿ.ಎಲ್ ಅವರು ಮಾತನಾಡಿ, ಕಳೆದ ವರ್ಷ ಸ್ಥಾಪಿಸಿದ ಹೆಮ್ಮೆಯಿದೆ. ಕಳೆದ ವರ್ಷ ಯಾವುದೇ ದೇಣಿಗೆಯನ್ನು ಪಡೆಯದೆ ನಮ್ಮೆಲ್ಲರ ಯುವಕ ಕೈಗೊಡಿಸಿಕೊಂಡು ಶಟಲ್ ಪಂದ್ಯಾಟ ನಡೆಸಿದ್ದೇವೆ. ಆ ಕಾರ್ಯಕ್ರಮವೂ ಕೂಡಾ ಬಹಳ ಯಶ್ವಸಿಯಾಗಿದೆ. ಅದಕ್ಕೆಲ್ಲಾ ನಮ್ಮ ಶ್ರೀ ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ ನ ಪ್ರತಿಯೊಬ್ಬ ಸದಸ್ಯರು ಸಾಕಷ್ಟು ಶ್ರಮ ವಹಿಸಿದ ಕಾರಣದಿಂದ ಇಂದು ಎರಡನೇ ವರ್ಷದ ಕಾರ್ಯಕ್ರಮ ಮಾಡಲು ಸಾಧ್ಯವಾಗಿದೆ ಎಂದರು.
ಶ್ರೀ ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ ಬಂಕೇಶ್ವರ ಇದರ ಅಧ್ಯಕ್ಷ ಸುಬ್ರಹ್ಮಣ್ಯ ಎಚ್ ಸಮಾರಂಭದ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸ್ಥಳೀಯ 5 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಾಗೂ ಆಕಾಶವಾಣಿ ಮತ್ತು ದೂರದರ್ಶನ ಗಾಯಕಿ ಗೀತಾ ಬಂಕೇಶ್ವರ ಸನ್ಮಾನಿಸಲಾಯಿತು.
ಮುಖ್ಯಅತಿಥಿಗಳಾಗಿ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಕ ಪ್ರಭಾಕರ ಎಸ್, ಬಂಕೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪಕ ಚಿತ್ರಾ, ಸ್ಥಳದಾನಿ ನಿವೃತ್ತ ಶಿಕ್ಷಕ ನಾಗೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ಲಬ್ ನ ಸದಸ್ಯ ಸುರೇಂದ್ರ ಪೂಜಾರಿ ಸ್ವಾಗತಿಸಿ/ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು. ಯೋಗೀಶ್ ವಂದಿಸಿದರು.