16.4 C
London
Tuesday, May 14, 2024
Homeಕ್ರಿಕೆಟ್ಸ್ಟಾರ್ ವರ್ಟೆಕ್ಸ್ ಪ್ರಸ್ತುತ ಪಡಿಸುವ ಸ್ಪೋರ್ಟ್ಸ್ ಕನ್ನಡ ಯೂ ಟ್ಯೂಬ್ ಚಾನೆಲ್

ಸ್ಟಾರ್ ವರ್ಟೆಕ್ಸ್ ಪ್ರಸ್ತುತ ಪಡಿಸುವ ಸ್ಪೋರ್ಟ್ಸ್ ಕನ್ನಡ ಯೂ ಟ್ಯೂಬ್ ಚಾನೆಲ್

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಸ್ಟಾರ್ ವರ್ಟೆಕ್ಸ್ ಪ್ರಸ್ತುತ ಪಡಿಸುವ
ಸ್ಪೋರ್ಟ್ಸ್ ಕನ್ನಡ ಯೂ ಟ್ಯೂಬ್ ಚಾನೆಲ್
ವಿಶಿಷ್ಟ-ವಿಭಿನ್ನ ಪರಿಕಲ್ಪನೆಯೊಂದಿಗೆ ಅತೀ ಶೀಘ್ರದಲ್ಲಿ ಪ್ರಾರಂಭ..
ಕ್ರಿಕೆಟ್ ಒಂದು ರೋಮಾಂಚಕಾರಿ ಆಟ. ಕ್ರಿಕೆಟ್ ಯಶಸ್ವಿಯಾಗಲು ಕೌಶಲ್ಯ, ತಂತ್ರ ಮತ್ತು ಟೀಮ್‌ವರ್ಕ್ ಅಗತ್ಯವಿರುವ ಆಟವಾಗಿದೆ. ಆಟಗಾರರು ಮತ್ತು ಕ್ರಿಕೆಟ್ ಟೂರ್ನಮೆಂಟ್ ಆಯೋಜಕರು ತಮ್ಮ ಗುರಿಗಳನ್ನು ಸಾಧಿಸಲು ಸಮರ್ಥರಾಗಬೇಕಾದರೆ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಆಟವು ಸಾಧ್ಯವಾದಷ್ಟು ಆನಂದದಾಯಕ ಮತ್ತು ಸ್ಪರ್ಧಾತ್ಮಕವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಆಟದ ನಿಯಮಗಳು ಮತ್ತು ನಿಬಂಧನೆಗಳನ್ನು ವಿನ್ಯಾಸಗೊಳಿಸಬೇಕು.
ಟೆನಿಸ್ಬಾಲ್ ಕ್ರಿಕೆಟ್ ಶ್ರೇಯೋಭಿವೃದ್ಧಿಯ ಪರಿಕಲ್ಪನೆಯೊಂದಿಗೆ ರಾಜ್ಯ ಮಟ್ಟದಲ್ಲಿ  ಹಿರಿಯ-ಕಿರಿಯ ಸಮಾನ ಮನಸ್ಕ ಆಟಗಾರರು, ಕ್ರೀಡಾ ಪ್ರೋತ್ಸಾಹಕರು, ಕ್ರೀಡಾ ಪ್ರವರ್ತಕರು ಮತ್ತು ಕ್ರೀಡಾ ಸಂಘಟಕರ ಅಪರೂಪದ ಸಮ್ಮಿಲನದ  ರಾಜ್ಯ ಟೆನಿಸ್ ಕ್ರಿಕೆಟ್ (State Tennis Cricket) ಫೇಸ್ ಬುಕ್ ಪೇಜ್ ಅಕ್ಟೋಬರ್ 24, 2018 ರಲ್ಲಿ ಆರಂಭವಾಯಿತು.  ಇದರ ರೂವಾರಿಗಳು ಕೋಟ ರಾಮಕೃಷ್ಣ ಆಚಾರ್ಯ. ಅದಾದ ಬಳಿಕ ಟೆನಿಸ್ ಬಾಲ್ ಕ್ರಿಕೆಟ್ ಶ್ರೇಯೋಭಿವೃದ್ಧಿಯ ಕನಸು ಕಂಡು ಜುಲೈ 7, 2019 ರಂದು ರಾಜ್ಯದ ಹಿರಿಯ ಆಟಗಾರರ ಸಮಾಗಮದ ವೇದಿಕೆಯಲ್ಲಿ ಸ್ಪೋರ್ಟ್ಸ್ ಕನ್ನಡ ಎಂಬ ವೆಬ್ಸೈಟನ್ನು  ಕೆ ಆರ್ ಕೆ ಆಚಾರ್ಯ ಇವರು ಪ್ರಾರಂಭಿಸಿದರು. ಟೆನಿಸ್ ಬಾಲ್  ಕ್ರಿಕೆಟ್‌ಗಾಗಿ ಆಟಗಾರರ ನಡುವೆ ಬಾಂಧವ್ಯವನ್ನು ಸ್ರಷ್ಟಿಸಿದ ಕನ್ನಡದ ಮೊತ್ತ ಮೊದಲ ಕ್ರೀಡಾ ವೆಬ್ಸೈಟ್ ಎಂಬ ಖ್ಯಾತಿಗೆ ಇದು ಪಾತ್ರವಾಯಿತು. ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಸ್ಥಾಪನೆ ಮಾಡಿ ಹಿರಿಯ-ಕಿರಿಯ ಆಟಗಾರರಿಗೆ ಒಂದೊಳ್ಳೆ ವೇದಿಕೆ ಸೃಷ್ಟಿ ಆಗಿದೆ. ರಾಜ್ಯ ಟೆನಿಸ್ ಕ್ರಿಕೆಟ್ ಮತ್ತು ಸ್ಪೋರ್ಟ್ಸ್ ಕನ್ನಡ  ಸಾಮಾಜಿಕ ಜಾಲತಾಣ ಇದುವರೆಗೆ ಹಲವಾರು ಓದುಗರ ಮನ ಗೆದ್ದಿದೆ.  ಟೆನಿಸ್ಬಾಲ್ ಕ್ರಿಕೆಟ್ ನಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನಿರಂತರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ರಾಜ್ಯದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ​​ಸ್ಥಾಪಿಸುವುದು ಸ್ಪೋರ್ಟ್ಸ್ ಕನ್ನಡದ ಕನಸು.
ಈ ನಾಲ್ಕು ವರ್ಷಗಳಲ್ಲಿ ಕೆ ಆರ್ ಕೆ ಆಚಾರ್ಯ ಇವರು ಕರ್ನಾಟಕದ ಸುತ್ತಗಲಕ್ಕೂ ಸಂಚರಿಸಿ ಹಿರಿಯ ಆಟಗಾರರ ಮನೆ ಮನೆಗೂ ಹೋಗಿ, ಭೇಟಿ ಮಾಡಿ 2 ಬಾರಿ ಲೆಜೆಂಡ್ಸ್ ಕಪ್ ಪಂದ್ಯಾಟ ಹಾಗೂ ಯುಗಾಂತರ ಕಾರ್ಯಕ್ರಮದ ಮೂಲಕ ಹಿರಿಯ ಆಟಗಾರರನ್ನು ಮತ್ತೆ ಅಂಗಣಕ್ಕೆ ಮರಳುವಂತೆ ಮಾಡಿದರು. ಪ್ರಸ್ತುತ ಟೆನಿಸ್ ಬಾಲ್ ಕ್ರಿಕೆಟ್ ವಿದ್ಯಾಮಾನಗಳಿಗೆ ಮಾಧ್ಯಮ ಸೃಷ್ಟಿಸಿ ಬದಲಾವಣೆಯ ಅರಿವು ಮೂಡಿಸಿದರು. ಕರ್ನಾಟಕ ರಾಜ್ಯ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸ್ಥಾಪಿಸಬೇಕೆಂಬ ಹಂಬಲದೊಂದಿಗೆ ನಿರಂತರ ಹಿರಿಯ ಆಟಗಾರರ ಸಂಪರ್ಕದಲ್ಲಿದ್ದುಕೊಂಡು ಇತ್ತೀಚೆಗಷ್ಟೇ ಉಡುಪಿ ಜಿಲ್ಲೆಯ ಕ್ರಿಕೆಟ್ ಅಸೋಸಿಯೇಷನ್ ಸ್ಥಾಪನೆಯಾಗಿದೆ. ಈ ರೀತಿ ನಾಲ್ಕು ವರ್ಷಗಳ ಯಶಸ್ವಿ ಪಯಣದ ಬಳಿಕ ಐದನೇಯ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ  ಸ್ಪೋರ್ಟ್ಸ್ ಕನ್ನಡ.
ಐದನೇಯ ವರ್ಷಕ್ಕೆ ಪಾದರ್ಪಣೆ ಮಾಡಲಿರುವ ಸಂಧರ್ಭದಲ್ಲಿ ಒಂದು ಹೆಜ್ಜೆ ಮುಂದಿಟ್ಟು ವಿಶಿಷ್ಟವಾದ ಮತ್ತು ವಿಭಿನ್ನವಾದ ಪರಿಕಲ್ಪನೆಯೊಂದಿಗೆ ಸ್ಪೋರ್ಟ್ಸ್ ಕನ್ನಡದ ಯೂಟ್ಯೂಬ್ ಚಾನೆಲ್ ಶೀಘ್ರದಲ್ಲೇ ಲಾಂಚ್ ಆಗಲಿದೆ.  ಸ್ಟಾರ್ ವರ್ಟೆಕ್ಸ್ ಪ್ರಾಯೋಜಕತ್ವದಲ್ಲಿ  ಸ್ಪೋರ್ಟ್ಸ್ ಕನ್ನಡ ಕ್ರೀಡಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸುವ ಸರ್ವ ಸಿದ್ಧತೆಯಲ್ಲಿ ತೊಡಗಿದೆ. ಕರ್ನಾಟಕದ ಕ್ರೀಡಾ ಉತ್ಸಾಹಿಗಳನ್ನು ಸಂತೋಷಪಡಿಸಲು ಸ್ಟಾರ್ ವರ್ಟೆಕ್ಸ್ ಪ್ರಸ್ತುತ ಪಡಿಸುವ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲನ್ನು ಆರಂಭಿಸಲಿದೆ.  ತನ್ನ ಅಪಾರ ಅನುಯಾಯಿಗಳ ಬೇಡಿಕೆಗಳಿಗೆ ಸ್ಪಂದಿಸಿರುವ ಸ್ಪೋರ್ಟ್ಸ್ ಕನ್ನಡ ಶೀಘ್ರದಲ್ಲೇ  ಸ್ಟಾರ್ ವರ್ಟೆಕ್ಸ್ ಪ್ರಾಯೋಜಕತ್ವದಲ್ಲಿ ಈ ಯೂಟ್ಯೂಬ್ ಚಾನೆಲ್ಲನ್ನು ಪ್ರಾರಂಭಿಸಲಿದೆ. ಈ ಚಾನಲ್‌ನ ಪ್ರಾರಂಭವು ಕ್ರೀಡೆ ಮತ್ತು ಮನರಂಜನೆಯ ಪ್ರಕಾರಗಳಲ್ಲಿ ಹೆಚ್ಚು ಆಕರ್ಷಕವಾದ ವಿಷಯವನ್ನು ಒದಗಿಸುವ ಮೂಲಕ ಪ್ರೇಕ್ಷಕರನ್ನು ತಲುಪುವ ಪ್ರಯತ್ನವಾಗಿದೆ. ಕೇವಲ ಕೀಡೆ ಮಾತ್ರವಲ್ಲದೆ ಧಾರ್ಮಿಕ, ಸಾಂಸ್ಕ್ರತಿಕ , ಸಾಮಾಜಿಕ ಹೀಗೆ ವಿವಿಧ ಕ್ಷೇತ್ರಗಳ ಬಗ್ಗೆಯೂ ಕೂಡ ಕಾರ್ಯಕ್ರಮಗಳನ್ನು ಸ್ಪೋರ್ಟ್ಸ್ ಕನ್ನಡ ಪ್ರಸಾರ ಮಾಡಲಿದೆ.
ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲ್ ಆಗಿದ್ದು ಇದು ಲೈವ್ ಕ್ರಿಕೆಟ್ ಸ್ಟ್ರೀಮಿಂಗ್, ಕ್ರಿಕೆಟ್ ಸ್ಕೋರ್‌ಕಾರ್ಡ್, ಸುದ್ದಿ, ಲೇಖನಗಳ ವಿಶೇಷ ಬ್ಲಾಗ್‌ಗಳನ್ನು ಒಳಗೊಂಡಿರುತ್ತದೆ. ಇದು ಎಲ್ಲೆಡೆ ನಡೆಯುವ ವಿವಿಧ ಕ್ರೀಡೆಗಳ ಅತ್ಯುತ್ತಮ ಕ್ಷಣಗಳ ಸಂಗ್ರಹವನ್ನು ಒಳಗೊಂಡಿದೆ. ಇನ್ನು ಮುಂದೆ ಯಾವುದೇ ಕ್ರಿಕೆಟ್ ಅಭಿಮಾನಿಗಳು ಸ್ಪೋರ್ಟ್ಸ್ ಕನ್ನಡ  ಯೂಟ್ಯೂಬ್ ಚಾನೆಲನ್ನು ನೇರವಾಗಿ ಪರಿಶೀಲಿಸಬಹುದು ಮತ್ತು ಕುಳಿತ ಸ್ಥಳದಿಂದಲೇ ನೇರವಾಗಿ ಇತಿಹಾಸದ ಹೈಲೈಟ್ಸ್,  ರೀಲ್‌ಗಳು, ಸಂದರ್ಶನಗಳು ಮತ್ತು ತುಣುಕುಗಳನ್ನು ವೀಕ್ಷಿಸಬಹುದು. ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲ್ ನಿಯಮಿತವಾಗಿ ಸ್ಟ್ರೀಮ್ ಸಂದರ್ಶನಗಳು ಮತ್ತು ವೀಡಿಯೊ ಡೈರಿಗಳೊಂದಿಗೆ ಕ್ರಿಕೆಟ್ ಅಭಿಮಾನಿಗಳನ್ನು ತಲುಪುತ್ತದೆ. ಸ್ಪೋರ್ಟ್ಸ್ ಕನ್ನಡದ ಯೂಟ್ಯೂಬ್ ಚಾನೆಲ್  ಉತ್ತಮವಾಗಿ ನಿರ್ಮಿಸಲಾದ ವೀಡಿಯೊಗಳನ್ನು ಒಳಗೊಂಡಿರಲಿದೆ.  ಆರಂಭದಲ್ಲಿ ಟೆನಿಸ್ ಬಾಲ್ ಕ್ರಿಕೆಟ್‌ಗೆ ನಿಮ್ಮನ್ನು ಸುಗಮವಾಗಿ ಕರೆದೊಯ್ಯಲು ನಾವು ಸಾಕಷ್ಟು ಉತ್ತಮ ಕ್ರಿಕೆಟ್ ವಿಷಯವನ್ನು ಪಡೆದುಕೊಂಡಿದ್ದೇವೆ.  ಹಿರಿಯ ಆಟಗಾರನ್ನು ಹಾಗೂ ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸಲು ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್  ಚಾನೆಲ್ ವೇದಿಕೆಯಾಗಲಿದೆ. ರಾಜ್ಯಾದ್ಯಂತ ​​ಆಯೋಜಿಸಿದ ಹೆಚ್ಚಿನ ಸ್ಪೋರ್ಟ್ಸ್ ಈವೆಂಟ್ ವೀಡಿಯೊಗಳನ್ನು ನಮ್ಮ ಚಾನೆಲ್ ಪ್ರದರ್ಶಿಸುತ್ತದೆ. ಇದಲ್ಲದೆ  ವಿವಿಧ ಕ್ರಿಕೆಟ್ ಪಂದ್ಯಾವಳಿಗಳ ನೇರ ಪ್ರಸಾರವನ್ನು ಸಹ ಪ್ರಸಾರ ಮಾಡುತ್ತದೆ. ಈ ಚಾನೆಲ್ ಕ್ರಿಕೆಟ್ ಪ್ರೇಮಿಗಳಿಗಾಗಿ. ಇಲ್ಲಿ ನೀವು ಇತ್ತೀಚಿನ ಸಂದರ್ಶನಗಳು, ಕ್ರೀಡಾ ವೈಶಿಷ್ಟ್ಯಗಳು, ಕ್ಲಿಪ್ಸ್ ಮತ್ತು ಕ್ರೀಡೆಯ ಮುಖ್ಯಾಂಶಗಳನ್ನು ಕಾಣಬಹುದು.
ಸ್ಪೋರ್ಟ್ಸ್ ಕನ್ನಡದ ಈ ಯೂಟ್ಯೂಬ್ ಚಾನೆಲ್ ನ ಪ್ರಾಯೋಜಕರು ಬೆಂಗಳೂರಿನ HSR ಲೇಔಟ್ ನಲ್ಲಿರುವ ಸ್ಟಾರ್ ವರ್ಟೆಕ್ಸ್ ಕಂಪನಿ.  ಸ್ಪೋರ್ಟ್ಸ್ ಕನ್ನಡ ಸಂಪಾದಕರಾದ ಕೆ.ಆರ್‌.ಕೆ ಆಚಾರ್ಯರವರು ನಾಲ್ಕು ವರ್ಷಗಳಿಂದ ಪ್ರತಿಫಲಾಪೇಕ್ಷೆಯಿಲ್ಲದೇ, ಪ್ರಾಮಾಣಿಕವಾಗಿ ರಾಜ್ಯ ಟೆನಿಸ್ ಬಾಲ್ ಕ್ರಿಕೆಟ್ ವಲಯದಲ್ಲಿ ಹಿರಿಯ-ಕಿರಿಯರನ್ನು ಒಗ್ಗೂಡಿಸಿ ಕ್ರಾಂತಿಕಾರಿ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದೆಯೂ ಕೂಡ ಟೆನಿಸ್ಬಾಲ್ ಕ್ರಿಕೆಟ್ ಶ್ರೇಯೋಭಿವೃದ್ಧಿಯ ಉದ್ದೇಶದಿಂದ ಹತ್ತು ಹಲವಾರು ಯೋಜನೆಗಳನ್ನು ಹಾಕಿಕೊಂಡಿರುವ ಸ್ಪೋರ್ಟ್ಸ್ ಕನ್ನಡದೊಂದಿಗೆ ಕೈ ಜೋಡಿಸಲು ಹೆಮ್ಮೆಯೆನಿಸಿದೆ ಮತ್ತು ಸಂಪೂರ್ಣ ಸಹಕಾರ ನೀಡುವುದಾಗಿ ಸ್ಟಾರ್ ವರ್ಟೆಕ್ಸ್ ಕಂಪೆನಿಯ ಸಂಸ್ಥಾಪಕಿ ಕುಮಾರಿ ಗಾಯತ್ರಿ ಮುತ್ತಪ್ಪ ತಿಳಿಸಿದ್ದಾರೆ.  ಈ ಸಂಧರ್ಭದಲ್ಲಿ ಸ್ಟಾರ್ ವರ್ಟೆಕ್ಸ್ ಸಂಸ್ಥೆಗೆ ಸ್ಪೋರ್ಟ್ಸ್ ಕನ್ನಡದ ಸಮಸ್ತ ತಂಡದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.
ಪ್ರಪಂಚದಾದ್ಯಂತ ಇರುವ ಕನ್ನಡ ಕ್ರಿಕೆಟ್ ಪ್ರೇಮಿಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವುದು ಸ್ಪೋರ್ಟ್ಸ್ ಕನ್ನಡದ ಮುಖ್ಯ ಉದ್ದೇಶವಾಗಿದೆ. ಸ್ಪೋರ್ಟ್ಸ್ ಕನ್ನಡ ವಾಹಿನಿಯು ಕರ್ನಾಟಕದ ಕ್ರೀಡಾಭಿಮಾನಿಗಳ ಜೀವನದಲ್ಲಿ ಕ್ರೀಡಾ ಸುದ್ದಿಗಳು ಮತ್ತು ವಿಶಿಷ್ಟ ಕಾರ್ಯಕ್ರಮಗಳಿಗೆ ಪ್ರಧಾನವಾಗಿರಲು ಸಿದ್ಧವಾಗಿದೆ.
ಸ್ಟಾರ್ ವರ್ಟೆಕ್ಸ್  ಸಾದರ ಪಡಿಸುವ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಚಾನೆಲ್ ನಿಮ್ಮ ಮುಂದೆ ಬರುತ್ತಿದೆ;  ಶೀಘ್ರದಲ್ಲೇ ಪ್ರಾರಂಭವಾಗುವ ನಮ್ಮ ಚಾನಲ್‌ಗೆ ಟ್ಯೂನ್ ಮಾಡಿ. ಈ ಮಾಧ್ಯಮದಲ್ಲಿ ಬರುವ ಕಾರ್ಯಕ್ರಮಗಳನ್ನು ನೀವು ವೀಕ್ಷಿಸಿ ಆನಂದಿಸುವಿರಿ ಎಂದು ನಾವು ಭಾವಿಸುತ್ತೇವೆ. ಈ ಚಾನಲ್ ಅನ್ನು ತರಲು ನಾವು ನಿಜವಾಗಿಯೂ ಶ್ರಮಿಸಿದ್ದೇವೆ. ನಮಗೆ ಸ್ಫೂರ್ತಿ ನೀಡುವ ವೀಕ್ಷಕರು ಖಂಡಿತವಾಗಿಯೂ ಈ ಚಾನೆಲ್ ಶೋಗಳನ್ನು ಆನಂದಿಸುತ್ತಾರೆ ಎಂದು ನಮಗೆ ಖಾತ್ರಿಯಿದೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಸದಾ ಹೀಗೆ ಇರಲಿ. ಹೊಸ ವಿಷಯ ಮತ್ತು ಕ್ರಿಕೆಟ್‌ನ ಎಲ್ಲಾ ವಿಷಯಗಳಿಗಾಗಿ ಟ್ಯೂನ್ ಮಾಡಿ! ಎಲ್ಲಾ ರೀತಿಯ ಕ್ರೀಡಾ  ಅಭಿಮಾನಿಗಳು, ಕ್ರೀಡಾ ವ್ಯಾಪ್ತಿಯ ಕ್ರಾಂತಿಗೆ ಸಿದ್ಧರಾಗಿ.
ಕ್ರಿಕೆಟ್ ಏಕತೆ ಮತ್ತು ಉತ್ಸಾಹದ ಸಂಕೇತವಾಗಿದೆ ಆದ್ದರಿಂದ ಅದನ್ನು ನನಸಾಗಿಸಲು ನಮ್ಮೊಂದಿಗೆ ಕೈ ಜೋಡಿಸಿ.
ನೇರ ಪ್ರಸಾರಕ್ಕಾಗಿ ಸಂಪರ್ಕಿಸಿ
K.R.K Acharya-6363022576
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

thirteen − 3 =