ಹಿರಿಯ -ಕಿರಿಯ ತಂಡಗಳು,ಕ್ರೀಡಾ ಪ್ರಾಯೋಜಕರು,ಕ್ರೀಡಾಪಟುಗಳು,ಕ್ರೀಡಾಭಿಮಾನಿಗಳಲ್ಲಿ ಸ್ಪೋರ್ಟ್ಸ್ ಕನ್ನಡದ ವಿನಮ್ರ ವಿಜ್ಞಾಪನೆ-ಬನ್ನಿ ಕ್ರೀಡಾಪಟುಗಳೇ ಸಹೃದಯಿ ಹಿರಿಯ-ಕಿರಿಯ ಮಿತ್ರರೇ ಈ ಪುಣ್ಯಕಾರ್ಯದಲ್ಲಿ ನೀವು ಕೈ ಜೋಡಿಸಿ.
ಅನಾಥ,ಅಪಘಾತಕ್ಕೀಡಾದ ಮತ್ತು ಕಟುಕರ ಕೈಗಳಿಂದ ರಕ್ಷಿಸಲ್ಪಡುವ ಗೋವುಗಳಿಗಾಗಿ ಒಂದು ಸುಸಜ್ಜಿತ ಆಧುನಿಕ ಪಶುಚಿಕಿತ್ಸಾಲಯ ಮತ್ತು ಅವುಗಳ ರಕ್ಷಣೆಗೆ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ನಂಚಾರು ಗ್ರಾಮದಲ್ಲಿ “ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ (ರಿ)” ನಿರ್ಮಾಣವಾಗಲಿದೆ.
ಈ ಗೋಶಾಲೆಯ ನಿರ್ಮಾಣಕ್ಕೆ ದಾನಿಗಳ ಆರ್ಥಿಕ ಸಹಾಯದ ಅಗತ್ಯವಿದ್ದು, ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಸಂಪೂರ್ಣವಾಗಿ ಈ ಯೋಜನೆಯಲ್ಲಿ ಕೈ ಜೋಡಿಸಿದೆ.
ರಾಜ್ಯದ ಯಾವುದೇ ನಾನಾ ಭಾಗಗಳಲ್ಲಿ ನಡೆಯುವ ಟೆನ್ನಿಸ್ಬಾಲ್ ಕ್ರಿಕೆಟ್ ಇನ್ನಿತರ ಕ್ರೀಡಾಕೂಟಗಳಲ್ಲಿ ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯನಿರ್ವಹಿಸಲು ಆಯೋಜಕರು “ಗೋವಿಗಾಗಿ ನಾವು” ಈ ಯೋಜನೆಯಲ್ಲಿ ಕೈಜೋಡಿಸಿ ಕಾಮಧೇನು ಗೋಶಾಲೆ ನಿರ್ಮಾಣಕ್ಕೆ ಸಹಾಯ ಮಾಡಬಹುದು.
ಕ್ರೀಡಾಕೂಟಗಳ ಆಯೋಜಕರು ಮಾಡಬೇಕಾದ್ದು ಇಷ್ಟೇ
ಕಾಮಧೇನು ಗೋ “ಆಶ್ರಯ ತಾಣ” ನಿರ್ಮಾಣದ ನಿಧಿ ಸಂಗ್ರಹಕ್ಕಾಗಿ “ಗೋವಿಗಾಗಿ ನಾವು”-100 ರೂಪಾಯಿಗಳ ದೇಣಿಗೆ ಚೀಟಿ ಮೂಲಕ ಗೋ ಪ್ರೇಮಿಗಳಿಂದ ಧನಸಂಗ್ರಹ ಮಾಡಲು ಉದ್ದೇಶಿಸಿದ್ದಾರೆ.
ಆಯೋಜಕರು ಈ ಅಭಿಯಾನದ 100 ರೂ ದೇಣಿಗೆ ಚೀಟಿಯನ್ನು ಪಂದ್ಯಾಕೂಟಕ್ಕೆ ಆಗಮಿಸಿದ ಪ್ರಾಯೋಜಕರು,ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳಿಗೆ ವಿತರಿಸಿ ಧನಸಂಗ್ರಹ ಮಾಡಿ ಕಾಮಧೇನು ಗೋಶಾಲೆಗೆ ನೀಡಬಹುದಾಗಿದೆ ಹಾಗೂ ಪೋಸ್ಟರ್ ನಲ್ಲಿ ಕಾಣಿಸಿದ ಕಾಮಧೇನು ಗೋಶಾಲೆ ಖಾತೆಗೆ ಹಣ ವರ್ಗಾಯಿಸಬಹುದು ಅಥವಾ QR ಕೋಡ್ ಸ್ಕ್ಯಾನ್ ಮಾಡಬಹುದು.
ಈಗಾಗಲೇ ಹಲವಾರು ತಂಡಗಳು, ಸಂಘ ಸಂಸ್ಥೆಗಳು ಈ ಯೋಜನೆಯಲ್ಲಿ ಕೈ ಜೋಡಿಸಲು ಮುಂದೆ ಬಂದಿದ್ದು
ಪುಣ್ಯಕಾರ್ಯದಲ್ಲಿ ಕೈ ಜೋಡಿಸುವ ಎಲ್ಲಾ ಕ್ರೀಡಾಭಿಮಾನಿಗಳಿಗೆ ಗೋ ಮಾತೆಯ ರಕ್ಷಣೆಯ ಸಂತಸ-ನಮ್ಮತಾಯಿ ಮತ್ತು ತಾಯ್ನಾಡನ್ನು ರಕ್ಷಿಸಿದಷ್ಟೇ ಪುಣ್ಯ ಪ್ರಾಪ್ತಿಯಾಗಲಿದ್ದು,ಅನಾಥ ಹಸುಗಳ ಆಲಯಕ್ಕಾಗಿ ನಿಮ್ಮ ಸಂಪೂರ್ಣ ಸಹಕಾರ ಮತ್ತು ಸಹಾಯಹಸ್ತದ ನಿರೀಕ್ಷೆಯಲ್ಲಿದೆ ಕಾಮಧೇನು ಗೋಶಾಲೆ
ಮಹಾಸಂಘ ಟ್ರಸ್ಟ್ (ರಿ)ನಂಚಾರು
ಬ್ರಹ್ಮಾವರ ತಾಲೂಕು (ಉಡುಪಿ ಜಿಲ್ಲೆ).