Categories
ಕ್ರಿಕೆಟ್

ಕೆಲಸದೊತ್ತಡದ ನಡುವೆ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆ ಅವಶ್ಯಕ-ಕೋಟ ರಾಮಕೃಷ್ಣ ಆಚಾರ್

ಬೆಂಗಳೂರು-ಕರ್ನಾಟಕ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಲ್ಲಿ ಅಂಗ ಸಂಸ್ಥೆಯನ್ನು ಹೊಂದಿರುವ,ಸೇವಾರತ್ನ,ಉದ್ಯಮಿ,ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕರಾದ ಡಾ.ಗೋವಿಂದ ಬಾಬು ಪೂಜಾರಿ ಬೈಂದೂರು ಇವರ ಒಡೆತನದ “ಶೆಫ್ ಟಾಕ್ ಫುಡ್ & ಹಾಸ್ಪಿಟಾಲಿಟಿ ಸರ್ವಿಸ್ ಪ್ರೈ.ಲಿ” ತಮ್ಮ ಕಂಪೆನಿಯ ನೌಕರರಿಗಾಗಿ ಜನವರಿ 7 ಮತ್ತು 8 ರಂದು
2 ದಿನಗಳ ಶೆಫ್ ಟಾಕ್ ಪ್ರೀಮಿಯರ್‌ ಲೀಗ್ ಪಂದ್ಯಾಟ ಎಲೆಕ್ಟ್ರಾನಿಕ್ ಸಿಟಿ ಬಳಿಯ ವೇಲಿಯಂಟ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಜರುಗಿತು.
ಈ ಪಂದ್ಯಾಟದಲ್ಲಿ ಶ್ರೀಯುತ ಗೋವಿಂದ ಬಾಬು ಪೂಜಾರಿಯವರ ಒಡೆತನದ ಉದ್ಯಮ ಸಂಸ್ಥೆಗಳಾದ ಪ್ರಗ್ನ್ಯಾ ಸಾಗರ್,ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್, ಮತ್ಸ್ಯ ಲೋಕ,ಶೆಫ್ ಟಾಕ್ ನ್ಯೂಟ್ರಿಫುಡ್ ಪ್ರೈ.ಲಿ,ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್(ನಿ) ಉಪ್ಪುಂದ ಮತ್ತು ಶ್ರೀಯುತ ನಾರಾಯಣಗುರು ಕೋ‌ ಆಪರೇಟಿವ್ ಸೊಸೈಟಿ(ಲಿ) ಹೀಗೆ ಒಟ್ಟು 12 ತಂಡಗಳು,ಇನ್ನೂರಕ್ಕೂ ಹೆಚ್ಚಿನ ನೌಕರರು ಪಂದ್ಯಾಟದಲ್ಲಿ ಭಾಗವಹಿಸಿದರು.
ಅಂತಿಮವಾಗಿ ಫೈನಲ್ ನಲ್ಲಿ ಟೀಮ್ 18 ಸ್ಟಾರ್ ತಂಡ,ಐ.ಸಿ.ಚಾಂಪಿಯನ್ (ಇಂದಿರಾ ಕ್ಯಾಂಟೀನ್) ತಂಡವನ್ನು ಸೋಲಿಸಿ ಪ್ರಥಮ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಪಂದ್ಯಾಟದ ಬೆಸ್ಟ್ ಬ್ಯಾಟರ್ ಟೀಮ್ 18 ಸ್ಟಾರ್ ನ ಪ್ರಜ್ವಲ್,ಬೆಸ್ಟ್ ಬೌಲರ್ ಐ.ಸಿ ಚಾಂಪಿಯನ್ಸ್ ನ ಪ್ರಮೋದ್,ಬೆಸ್ಟ್ ಫೀಲ್ಡರ್ ಬೆಂಕಿ ನರಸಾಪುರ ತಂಡದ ಬ್ರೂಸ್ ಲೀ,ಶಿಸ್ತಿನ ಆಟಗಾರ ಐ.ಸಿ ಚಾಂಪಿಯನ್ಸ್ ನ ವಿಠಲ್ ಮತ್ತು 18 ಸ್ಟಾರ್ ನ ಚೇತನ್ ಸರಣಿ‌ಶ್ರೇಷ್ಟ ಗೌರವಕ್ಕೆ ಭಾಜನರಾದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ  ಕೋಟ ರಾಮಕೃಷ್ಣ ಆಚಾರ್ ಮಾತನಾಡಿ
*”ಬಿಡುವಿಲ್ಲದ ಸಮಯ,ಕೆಲಸದೊತ್ತಡದ ನಡುವೆ ದೈಹಿಕ ಮತ್ತು ಮಾನಸಿಕ ಕ್ರೀಡೆ ಅವಶ್ಯಕ,ವರ್ಷಕ್ಕೊಮ್ಮೆ ನಡೆಯುವ ಇಂತಹ ಕ್ರೀಡಾಕೂಟದಿಂದ ಪರಸ್ಪರ ಬಾಂಧವ್ಯ ಗಟ್ಟಿಯಾಗುತ್ತದೆ ಎಂದರು.ಸಂಸ್ಥೆಯ ನೌಕರರನ್ನು ಮನೆಯ ಮಕ್ಕಳಂತೆ ನೋಡಿಕೊಳ್ಳುವ ಶ್ರೀಯುತ ಗೋವಿಂದ ಬಾಬು ಪೂಜಾರಿಯವರ ಉದ್ಯಮ‌ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ”ಎಂದು ಶುಭಹಾರೈಸಿದರು.*
ಕಂಪೆನಿಯ ಆಡಳಿತ ನಿರ್ದೇಶಕರಾದ ಶ್ರೀಯುತ ಗೋವಿಂದ ಬಾಬು ಪೂಜಾರಿಯವರ ಅನುಪಸ್ಥಿತಿಯಲ್ಲಿ ಫೋನ್ ಮೂಲಕ ಅಭಿನಂದನೆಗಳನ್ನು ತಿಳಿಸಿದರು.ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಕಂಪೆನಿಯ ಪ್ರಮುಖರಾದ ಸುರೇಶ್ ಪೂಜಾರಿ,ರಮೇಶ್,ರಾಜು ಮೊಗವೀರ,ಸತ್ಯವಾನ್,ಮಜೇಶ್ ವಿಸ್ಟ್ರನ್,ಹರೀಶ್ ಪೂಜಾರಿ,
ಚೇತನ್ ಮತ್ತು ಕಂಪೆನಿಯ ಸಮಸ್ತ ನೌಕರರು ಉಪಸ್ಥಿತರಿದ್ದರು.
ವಿನಯ್ ಕಾರ್ಯಕ್ರಮ ನಿರೂಪಿಸಿದರು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

11 + seven =