ಕುಂದಾಪುರ-ಆಜ್ರಿ ದೊಡ್ಮನೆ ದಿ.ಸುಧಾಕರ ಶೆಟ್ಟಿ ಯವರ ಧರ್ಮಪತ್ನಿ,ಸೌಕೂರು ಶೇರ್ವೆಗಾರ್ ಮನೆ ಕುಸುಮಾ.ಎಸ್.ಶೆಟ್ಟಿ(76 ವರ್ಷ) ಇವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು.

ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಛೇರ್ಮನ್ ಗೌತಮ್ ಶೆಟ್ಟಿ ಇವರ ತಾಯಿ,
ಕುಸುಮಾ.ಎಸ್.ಶೆಟ್ಟಿ ಇವರು ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿ ಪಾತ್ರರಾಗಿದ್ದರು.
ಮೃತರು ಓರ್ವ ಪುತ್ರ,ಪುತ್ರಿ,ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.