ಅಲೆವೂರು ಮೈತ್ರಿ ಇವರ ಆಶ್ರಯದಲ್ಲಿ, ಅಲೆವೂರಿನ ಪ್ರಸಿದ್ಧ ಕ್ರೀಡಾ ಪ್ರೋತ್ಸಾಹಕರಾದ ಎಸ್.ಎಫ್.ಸಿ ಆಸಿಫ್ ಮೈತ್ರಿ ಹಾಗೂ ರಾಜಾ ಅಲೆವೂರು ಇವರ ಸಾರಥ್ಯದಲ್ಲಿ ಸೌಹಾರ್ದತೆಯ ಪ್ರತೀಕವಾಗಿ ಫೆಬ್ರವರಿ 27 ಮತ್ತು 28 ರಂದು ಉಡುಪಿಯ ಬೀಡಿನಗುಡ್ಡೆ ಮೈದಾನದಲ್ಲಿ ಸೌಹಾರ್ದ ಟ್ರೋಫಿ-2021 ಪಂದ್ಯಾವಳಿ ಆಯೋಜಿಸಲಾಗಿದೆ.
ಈ ಪಂದ್ಯಾಕೂಟದ ವಿಶೇಷವಾಗಿ 12 ಜಾತಿಗಳ ತಂಡಗಳ ನಡುವೆ ನಡೆಯಲಿದ್ದು,ಲೀಗ್ ಕಂ ನಾಕೌಟ್ ಮಾದರಿಯಲ್ಲಿ ಸಾಗಲಿದೆ.ಟೂರ್ನಮೆಂಟ್ ನ ಪ್ರಥಮ ಪ್ರಶಸ್ತಿ ವಿಜೇತ ತಂಡ 66,666 ನಗದು,ದ್ವಿತೀಯ ಸ್ಥಾನಿ 33,333 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು,ವೈಯಕ್ತಿಕ ಶ್ರೇಷ್ಟ ನಿರ್ವಹಣೆ ನೀಡುವ ಆಟಗಾರರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತಿದೆ.
ಆಸಕ್ತ ತಂಡಗಳು ಆಸಿಫ್ ಮೈತ್ರಿ-8197603292,ರಾಜಾ ಅಲೆವೂರು-9448169458
ಇವರನ್ನು ಸಂಪರ್ಕಿಸಬಹುದು.