ಕಾರ್ನಾಡ್ ಫ್ರೆಂಡ್ಸ್ ಕ್ರಿಕೆಟರ್ಸ್ ಮೂಲ್ಕಿ ಇವರು ಸಮಾಜ ಸೇವೆಯ ಸದುದ್ದೇಶದಿಂದ ನವೆಂಬರ್ 22 ಹಾಗೂ 29 ರಂದು ಕಾರ್ನಾಡು ಮೈದಾನದಲ್ಲಿ ಸೌಹಾರ್ದ ಟ್ರೋಫಿ-2020 ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದಾರೆ.
2 ವಿಭಾಗಗಳಲ್ಲಿ ಈ ಪಂದ್ಯಾವಳಿ ನಡೆಯಲಿದ್ದು ನವೆಂಬರ್ 22 ರಂದು ಮೂಲ್ಕಿ ವಲಯ ಮಟ್ಟದ ಆಟಗಾರರು ಹಾಗೂ 29 ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಆಟಗಾರರಿಗೆ ಆಡಲು ಅವಕಾಶ ಕಲ್ಪಿಸಿದ್ದಾರೆ.
ಪ್ರಥಮ ಪ್ರಶಸ್ತಿ ವಿಜೇತ ತಂಡ 18,000 ಹಾಗೂ ದ್ವಿತೀಯ ಸ್ಥಾನಿ
9,000 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಹಾಗೂ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.