ಮಂಗಳೂರಿನ ಆಟಗಾರರನ್ನೊಳಗೊಂಡ ಸೌದಿ ಅರೇಬಿಯಾದ ಪ್ರತಿಷ್ಟಿತ ಎ.ಟಿ.ಎಸ್.ಜೆದ್ದಾ ತಂಡವು ಇದೇ ಬರುವ ನವೆಂಬರ್ 26,27 ಹಾಗೂ 28 ರಂದು ಹೊನಲು ಬೆಳಕಿನ ಎ.ಟಿ.ಎಸ್.ಕಪ್-2020 ಪಂದ್ಯಾವಳಿ ಆಯೋಜಿಸಿದ್ದು ಮರ್ಸಲ್ ನ ಬಿ.ಎಮ್.ಟಿ ಗ್ರೌಂಡ್ ನಲ್ಲಿ ನಡೆಯಲಿದೆ.
ಈ ಪ್ರಯುಕ್ತ ನಿನ್ನೆ ಸೌದಿ ಅರೇಬಿಯಾ ಜೆದ್ದಾ ಬಳಿಯ ಅರೇಬಿಯನ್ ಸ್ಟ್ರೀಟ್ ನ ದಿ ವಿಲೇಜ್ ರೆಸ್ಟೋರೆಂಟ್ ನಲ್ಲಿ ಆಕರ್ಷಕ “ಎ.ಟಿ.ಎಸ್ ಟ್ರೋಫಿ ಅನಾವರಣ ಹಾಗೂ ಜೆರ್ಸಿ ವಿತರಣಾ ಕಾರ್ಯಕ್ರಮ ಜರುಗಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಸೌದಿ ಅರೇಬಿಯಾ ಕ್ರಿಕೆಟ್ ಫೆಡರೇಶನ್ ನ ಮುಖ್ಯಸ್ಥರಾದ ಸಾಧಿಕ್ ಯು ಇಸ್ಲಾಂ ಹಾಗೂ ಖಾಸಿಮ್ ನಕ್ವಿ ,ಎ.ಎಲ್.ಎಸ್ ನ ಶಿಯಾಮ್ ಶೇಖ್,ಎಮ್.ಎಮ್.ಎ ನ ಡಾ.ಅಬ್ದುಲ್ ಶಕೀಲ್,ಅಲ್ ಅಮ್ರಿಯಾದ ಝೈನುದ್ದೀನ್ ಮುನ್ನೂರ್ ಇನ್ನಿತರ ಗಣ್ಯರು ಹಾಗೂ ಎ.ಟಿ.ಎಸ್ ತಂಡದ ಸದಸ್ಯರು ಉಪಸ್ಥಿತರಿದ್ದರು.
ಪ್ರತಿಷ್ಠಿತ ಎ.ಟಿ.ಎಸ್ ಕಪ್ ಗಾಗಿ 12 ತಂಡಗಳು ಸೆಣಸಾಡಲಿದ್ದು,
ರಿಯಾದ್,ದಮಾಮ್,ಸೌದಿ ಅರೇಬಿಯಾದ ಆಟಗಾರರು ಭಾಗವಹಿಸಲಿದ್ದಾರೆ.ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಸಾಗಲಿದ್ದು,ಮೂರು ತಂಡಗಳ 4 ಪೂಲ್ ಗಳನ್ನಾಗಿ ವಿಭಾಗಿಸಲಾಗಿದೆ.
ಪಂದ್ಯಾಕೂಟದ ವಿಜೇತ ತಂಡ 5,555 ರಿಯಲ್ ಹಾಗೂ ರನ್ನರ್ ಅಪ್ ತಂಡ 3,333 ರಿಯಲ್ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು,ವೈಯಕ್ತಿಕ ಪ್ರಶಸ್ತಿ ರೂಪದಲ್ಲಿ ದುಬಾರಿ ಬೆಲೆಯ ಉಡುಗೊರೆಗಳನ್ನು ನೀಡಲಾಗುತ್ತಿದೆ.
ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕನ್ನಡಿಗರ ಹೆಮ್ಮೆಯ ಕ್ರೀಡಾ ವೆಬ್ಸೈಟ್ ಸ್ಪೋರ್ಟ್ಸ್ ಕನ್ನಡ ಕಾರ್ಯ ನಿರ್ವಹಿಸಲಿದೆ .
ವಿಶೇಷವಾಗಿ ಮೊತ್ತ ಮೊದಲ ಬಾರಿಗೆ ಕರ್ನಾಟಕದ M.Sports ಯೂ ಟ್ಯೂಬ್ ಚಾನೆಲ್ ಈ ಪಂದ್ಯಾವಳಿಯ ನೇರ ಪ್ರಸಾರವನ್ನು ದೇಶ,ವಿದೇಶದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಪಂದ್ಯಾಟವನ್ನು ಕೂತಲ್ಲಿಯೇ ವೀಕ್ಷಿಸುವ ಅವಕಾಶವನ್ನು ಆಯೋಜಕರು ಕಲ್ಪಿಸಿದ್ದಾರೆ.