ಕಳೆದ 10 ವರ್ಷಗಳಿಂದ ಸದ್ದಿಲ್ಲದೇ ಸಮಾಜಸೇವೆಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ಕೋಲಾರ ಶ್ರೀನಿವಾಸಪುರ ತಾಲ್ಲೂಕಿನ ಮಣಿಗಾನಹಳ್ಳಿಯ ಶ್ರೀ ಗಾಯತ್ರಿ ಮುತ್ತಪ್ಪ ಇವರ ಸಮಾಜಸೇವೆಯನ್ನು ಗುರುತಿಸಿ ಜನ್ಮಭೂಮಿ ಫೌಂಡೇಶನ್(ರಿ) ಬೆಂಗಳೂರು ವತಿಯಿಂದ ಕೊಡಲ್ಪಡುವ ಪ್ರತಿಷ್ಠಿತ ರಾಷ್ಟ್ರಮಟ್ಟದ “ಭಾರತ ಗೌರವ” ಪ್ರಶಸ್ತಿಗೆ ಆಯ್ಕೆ ಮಾಡಿದೆ.
ದಿನಾಂಕ 14 ನೇ ಫೆಬ್ರವರಿ 2021 ರವಿವಾರ ಗೋವಾದ ಮಾಸ್ಕೋದಲ್ಲಿ ನಡೆಯುವ ರಾಷ್ಟ್ರೀಯ ಕಲಾ ಉತ್ಸವ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಬಡಕುಟುಂಬದಲ್ಲಿ ಹುಟ್ಟಿ ಬೆಳೆದು,
ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ,
ಬೆಂಗಳೂರಿನ ಕೋರಮಂಗಲದಲ್ಲಿ ಸ್ಟಾರ್ ವರ್ಟೆಕ್ಸ್ ಸಾಫ್ಟ್‌ವೇರ್ ಕಂಪೆನಿಯನ್ನು ಸ್ಥಾಪಿಸಿ,ಹಲವಾರು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಿದ್ದರು.
ಬಡತನದ ಆಳವನ್ನರಿತು,ಬಡವರ್ಗದ ಮಕ್ಕಳು ಶಿಕ್ಷಣ ವಂಚಿತರಾಗಬಾರದೆಂಬ ಉದ್ದೇಶದಿಂದ ಉಚಿತ ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸಿ,ಸರಕಾರಿ ಶಾಲೆಗಳಿಗೆ ಆಗಾಗ ಭೇಟಿ ನೀಡಿ,ಕ್ರೀಡೆ ಹಾಗೂ ಶಿಕ್ಷಣಕ್ಕೆ ಅಗತ್ಯ ಪರಿಕರಗಳನ್ನು ಪೂರೈಸಿ ಶೈಕ್ಷಣಿಕ ಸೇವೆಯಲ್ಲಿ ನಿರತರಾಗಿದ್ದಾರೆ.
ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಮನೆ ಮನೆಗಳಿಗೆ ತೆರಳಿ ಊಟ ರೇಷನ್,ದಿನ ನಿತ್ಯ ಸಾಮಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದರು.
ಕಳೆದ 4 ತಿಂಗಳ ಹಿಂದೆ ಟಿ.ವಿ.9 ವರದಿಯಲ್ಲಿ ನೆಲಮಂಗಲದ ಗೌರಮ್ಮ ಸಂಕಷ್ಟದ ಪರಿಸ್ಥಿತಿಗೆ ಮರುಗಿ,ಖುದ್ದು ನಿನ್ನೆ ನೆಲಮಂಗಲದ ಗೌರಮ್ಮ ಅವರನ್ನು ಸಂಪರ್ಕಿಸಿ
3 ತಿಂಗಳಿಗಾಗುವಷ್ಟು ರೇಷನ್ ಹಾಗೂ ಆರ್ಥಿಕ ಸಹಾಯ ನೀಡಿದ್ದು ಇಂತಹ ಅನೇಕ ಬಡ ಕುಟುಂಬದ ಸಹಾಯ ನೀಡಿ ಪ್ರಚಾರ ಬಯಸದ ವ್ಯಕ್ತಿತ್ವ ಇವರದ್ದು.
ಸ್ಟಾರ್ ವರ್ಟೆಕ್ಸ್ ಕಂಪೆನಿಯ ಹೆಸರಲ್ಲಿ ಕ್ರಿಕೆಟ್ ತಂಡವೊಂದನ್ನು ಕಟ್ಟಿ ಕೋಲಾರ ಪರಿಸರದ ಯುವ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ಘನ ವೇದಿಕೆಯನ್ನು ಸೃಷ್ಟಿಸಿದ್ದಾರೆ.
ಪ್ರಶಸ್ತಿಯ ಸುದ್ದಿ ತಿಳಿಯುತ್ತಿದ್ದಂತೆ ಸ್ಪೋರ್ಟ್ಸ್ ಕನ್ನಡ ದೊಂದಿಗೆ ಮಾತನಾಡಿದ ಶ್ರೀ ಗಾಯತ್ರಿ ಮುತ್ತಪ್ಪ ಇವರು ಮುಂದಿನ ದಿನಗಳಲ್ಲಿ ಬಡ,ಅಶಕ್ತರ ಪರವಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿರುವ ಬಗ್ಗೆ ತಿಳಿಸಿದರು.