ಚಿತ್ರದುರ್ಗ-ಇಲ್ಲಿನ ದುರ್ಗಾ ಇಲೆವೆನ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ನಡೆದ ಮೊದಲ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ದುರ್ಗನ್ಸ್ ಕಪ್-2022 ಪ್ರಶಸ್ತಿಯನ್ನು ಎಸ್.ಎಮ್.ಸಿ.ಸಿ ನ್ಯಾಶ್ ಮುಡಿಗೇರಿಸಿಕೊಂಡಿದೆ.
ರೋಚಕವಾಗಿ ಸಾಗಿದ ಫೈನಲ್ ಪಂದ್ಯದಲ್ಲಿ ಎಸ್.ಎಮ್.ಸಿ.ಸಿ ನ್ಯಾಶ್,ಜೈ ಕರ್ನಾಟಕ ಬೆಂಗಳೂರು ತಂಡವನ್ನು ಸೋಲಿಸುವುದರ ಮೂಲಕ ಪ್ರಥಮ ಪ್ರಶಸ್ತಿ ರೂಪದಲ್ಲಿ ಆಕರ್ಷಕ ಪಾರಿತೋಷಕ ಸಹಿತ 2 ಲಕ್ಷ ನಗದು ಬಹುಮಾನ ತನ್ನದಾಗಿಸಿಕೊಂಡಿತು.
ದ್ವಿತೀಯ ಸ್ಥಾನಿ ಜೈ ಕರ್ನಾಟಕ ಬೆಂಗಳೂರು 1ಲಕ್ಷ ನಗದು ಸಹಿತ ಆಕರ್ಷಕ ಪಾರಿತೋಷಕವನ್ನು ಪಡೆದರು.
ಪಂದ್ಯಾಟದ ಬೆಸ್ಟ್ ಬ್ಯಾಟರ್ ಪ್ರಶಾಂತ್ ಕುಟ್ಟಿ,ಬೆಸ್ಟ್ ಬೌಲರ್ ಮಾರ್ಕ್ ಮಹೇಶ್,ಸರಣಿ ಶ್ರೇಷ್ಠ ಗೌರವ ಫ್ರೆಂಡ್ಸ್ ಬೆಂಗಳೂರಿನ ಸಾಗರ್ ಭಂಡಾರಿ ಮತ್ತು ನ್ಯಾಶ್ ಪುರುಷೋತ್ತಮ್(ಪುರುಷಿ) ಜಂಟಿಯಾಗಿ ಪಡೆದರು.