Udupi Branch of SIRC Of ICAI ಮತ್ತು ಸದರ್ನ್ ಇಂಡಿಯಾ ಚಾರ್ಟರ್ಡ್ ಅಕೌಂಟೆಂಟ್ಸ್ ಸ್ಟೂಡೆಂಟ್ಸ್ ಅಸೋಸಿಯೇಷನ್(SICASA) ಉಡುಪಿ ಇವರ ಸಹಯೋಗದೊಂದಿಗೆ ರವಿವಾರದಂದು ಮಣಿಪಾಲದ ಪ್ರಿ-ಯೂನಿವರ್ಸಿಟಿ ಕಾಲೇಜು ಮೈದಾನದಲ್ಲಿ ಒಂದು ದಿನದ ಕ್ರಿಕೆಟ್ ಮತ್ತು ತ್ರೋಬಾಲ್ ಪಂದ್ಯಾಟ ನಡೆಯಿತು.
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ Udupi Branch of SIRC of ICAI ಮಾಜಿ ಛೇರ್ಮನ್ C.A ಗಣೇಶ್ ಕಾಂಚನ್,ಮಣಿಪಾಲ್ ಪ್ರಿ-ಯೂನಿವರ್ಸಿಟಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ.ರೂಪಾ ಭಟ್ ಮತ್ತು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ ಪ್ರವರ್ತಕರಾದ ಕೋಟ ರಾಮಕೃಷ್ಣ ಆಚಾರ್ ಉಪಸ್ಥಿತರಿದ್ದರು.ಈ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಿಸಲಾಯಿತು.
7 ತಂಡಗಳು ಭಾಗವಹಿಸಿದ ಕ್ರಿಕೆಟ್ ಪಂದ್ಯಾಟದಲ್ಲಿ CA ಬೋರ್ಡ್ ಇಲೆವೆನ್ ತಂಡ ಪ್ರಥಮ ಹಾಗೂ ಶೆಟ್ಟಿ&ಭಟ್ ಇಲೆವೆನ್ ದ್ವಿತೀಯ ಪ್ರಶಸ್ತಿ ಜಯಿಸಿದರೆ,ತ್ರೋಬಾಲ್ ಪಂದ್ಯಾಟದಲ್ಲಿ SPPEC ತಂಡ ಪ್ರಥಮ ಹಾಗೂ ತ್ರಿಶಾ ಸ್ಪಿನ್ನರ್ಸ್ ತಂಡ ದ್ವಿತೀಯ ಪ್ರಶಸ್ತಿ ಜಯಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ Udupi Branch OF SIRC of ICAI ಮಾಜಿ ಚೇರ್ಮನ್ C.A ದೇವಾನಂದ್,ಮೊಫಸ್ಸಿಲ್ ಮೆಂಬರ್ಸ್ ಎಂಪವರ್ಮೆಂಟ್ ಸ್ಪೋರ್ಟ್ಸ್&ಕಲ್ಚರಲ್ ಕಮಿಟಿ KSCAA ಛೇರ್ಮನ್ CA ಪ್ರದೀಪ್ ಜೋಗಿ,Branch ಚೇರ್ಮನ್ CA ಲೋಕೇಶ್ ಶೆಟ್ಟಿ,ಕಾರ್ಯದರ್ಶಿ CA ಮಹೇಂದ್ರ ಶೆಣೈ.ಪಿ,SICASA ಚೇರ್ಮನ್ ಮಲ್ಲೇಶ್ ಕುಮಾರ್,SICASA Vice Chairperson ಅಮಲಿನ್.ಜಿ.ಜೋಸೆಫ್ ಮತ್ತು SICASA ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು…