10.1 C
London
Tuesday, April 23, 2024
Homeಭರವಸೆಯ ಬೆಳಕುಯಶಸ್ಸುಗಳ ಶಿಖರಗಾಮಿ ಮಾತಿನ ಮಲ್ಲಿ -ಶ್ರೇಯಾ ದಾಸ್, ಮಂಗಳೂರು

ಯಶಸ್ಸುಗಳ ಶಿಖರಗಾಮಿ ಮಾತಿನ ಮಲ್ಲಿ -ಶ್ರೇಯಾ ದಾಸ್, ಮಂಗಳೂರು

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಲೇಖನ: ಉದಯ ಬಿ. ಶೆಟ್ಟಿ,  ಪಂಜಿಮಾರು
    “ನುಡಿದರೆ ಮುತ್ತಿನ ಹಾರದಂತೆ, ಮಾಣಿಕ್ಯದ ದೀಪ್ತಿಯಂತೆ, ಸ್ಪಟಿಕದ ಶಲಾಕೆಯಂತೆ” ಇರಬೇಕು ಎನ್ನುತ್ತಾರೆ ಬಸವಣ್ಣ. ಮಾತು ಮುತ್ತಾಗಬೇಕು. ಮುತ್ತಿನ ಸರವಾಗಬೇಕು.
ಸ್ವರಾಕ್ಷರಗಳು ಮಣಿಗಳಾಗಿ ಹಾರವಾಗಬೇಕು. ಆ ಹಾರ ಭಾರವಾಗಿರಬೇಕು. ಮಾತು ಒಡೆಯದ ಮುತ್ತಾಗಬೇಕು. ಶುಕಮುನಿಗಳು “ಕೇಳು ಜನಮೇಜಯನೇ” ಎಂದಾಗ…ಜನಮೇಜಯ ಮಾತ್ರವಲ್ಲ ಜನಸಮೂಹವೇ ಮಂತ್ರಮುಗ್ಧರಾಗಿ ಕೇಳಬೇಕು. ಇಂಥ ಮುತ್ತಿನಂತಹ ಮಾತುಗಳಿಗೆ ಕರ್ಣಗಳು ಹಾತೊರೆಯಬೇಕು. ಕರ್ಣಗಳು ನಿಮಿರಿ ನಿಂತು ಆಲಿಸಬೇಕು. ಮುಂದಿನ ಅಕ್ಷರ, ಪದ, ವಾಕ್ಯ, ವಿಷಯ ಏನೀರಬಹುದೆಂದು ಮನವು ಕುತೂಹಲಿಯಾಗಬೇಕು. ಮಾತಿನ ವೈಖರಿಗೆ ಕೇಳುಗರ ಮನವು ಅರಳಿ ವಲ್ಲರಿಯಂತೆ ಬಳುಕಬೇಕು. ಹೀಗೆ ಮಾತನಾಡುವವರು ಇನ್ನೂ ಕಿಶೋರಾವಸ್ಥೆಯಲ್ಲಿರುವ ಎಳೆಯರಾಗಿದ್ದರೆ ಕೇಳುವ ಕರ್ಣಗಳು, ನೋಡುವ ನಯನಗಳು ಶಬ್ದಾದಾತಿಶಯಕ್ಕೆ ಮಾರುಹೋಗುತ್ತವೆ. ಮಿಡಿಯುತ್ತವೆ. ತುಡಿಯುತ್ತವೆ. ಮಾತಿನ ಏರಿತಳಕ್ಕೆ ಸ್ಪಂದಿಸುತ್ತವೆ. ಆಸ್ವಾದಿಸುತ್ತವೆ. ಆನಂದಿಸುತ್ತವೆ. ಮುಗಿಯದಿರಲಿ ಎಂದು ಬಯಸುತ್ತವೆ. ಪದ ಪರಿಣತಿಗೆ ಬೆರಗುಗೊಳ್ಳುತ್ತವೆ. ಹೀಗೆ ಪ್ರತ್ಯುತ್ಪನಮತಿ, ನಿರ್ದಿಷ್ಟ, ನಿಖರ, ವಾಕ್ಚಾತುರ್ಯದಿಂದ
ಅರಳು ಹುರಿದಂತೆ, ತಡವರಿಸದೆ, ನಿರರ್ಗಳವಾಗಿ ಮಾತನಾಡುವುದರೊಂದಿಗೆ ನಟನೆ, ನೃತ್ಯ ಮುಂತಾದ ಕಲೆಗಳನ್ನು ಕರಗತ ಮಾಡಿಕೊಂಡಿರುವವರು ಶ್ರೇಯಾ ದಾಸ್, ಮಂಗಳೂರು.
           ಶ್ರೇಯಾ ದಾಸ್ ಅವರು ಕುಡ್ಲದ ಬೊಳಾರ ನಿವಾಸಿ ಶ್ರೀಮತಿ ಚಂದ್ರಾವತಿ ಹಾಗೂ ಶ್ರೀ ಮೋಹನ್ ದಾಸ್ ಅವರ ಏಕಮಾತ್ರ ಸಂಜಾತೆ. ಪ್ರಸ್ತುತ ಶ್ರೇಯಾ ಅವರು ಪಾಂಡೇಶ್ವರದ ಸೈಂಟ್ ಆನ್ಸ್ ಕಾರ್ಮೆಲ್ ಶಾಲೆಯಲ್ಲಿ ಹತ್ತನೆ ತರಗತಿಯ ವಿದ್ಯಾರ್ಥಿನಿ. ಎರಡರ ಹರೆಯದಲ್ಲೇ ವೇದಿಕೆ ಏರಿದವರು ಏರುತ್ತಲೇ ಇದ್ದಾರೆ. ಬಹುಮುಖ ಪ್ರತಿಭೆಯನ್ನು ಮೈಗೂಡಿಸಿಕೊಂಡಿರುವ ಶ್ರೇಯಾ ಯಕ್ಷಗಾನ, ಜಾನಪದ/ ಪಾಶ್ಚಾತ್ಯ/ಚಲನಚಿತ್ರ/ಭರತನಾಟ್ಯ ನೃತ್ಯಗಳು, ಛದ್ಮವೇಷ, ಮಾಡೆಲಿಂಗ್, ಸಂಗೀತ, ಈ ಚಿತ್ರಕಲೆ, ದೂರದರ್ಶನ ವಾಹಿನಿಯ ವರದಿಗಾರಿಕೆ, ನಿರೂಪಣೆ ಮುಂತಾದ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯ ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜ್ಯಮಟ್ಟದ ಹತ್ತು ಮಕ್ಕಳಲ್ಲಿ ಮೊದಲ ಅಭ್ಯರ್ಥಿಯಾಗಿ ಆಯ್ಕೆ. ಸ್ಟಾರ್ ಸುವರ್ಣ ವಾಹಿನಿಯ ಮೂರು ತಿಂಗಳ ಕಾಲ ‘ಪ್ರಸಿದ್ಧ ವ್ಯಕ್ತಿ’ ಗಳೊಂದಿಗೆ ಭರ್ಜರಿ ಹಾಸ್ಯದೊಂದಿಗೆ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ.ಸುವರ್ಣ ವಾಹಿನಿಯ ಛೋಟ ರಿಪೋರ್ಟರ್ ಕಾರ್ಯಕ್ರಮದಲ್ಲಿ ಅಂತಿಮ ಸುತ್ತಿನಲ್ಲಿ ಐದನೆ ಸ್ಥಾನ. ‘ಡ್ಯಾನ್ಸ್ ಕಾ ಸೂಪರ್ ಸ್ಟಾರ್ ‘ ಕಾರ್ಯಕ್ರಮದಲ್ಲಿ ತೃತೀಯ ಸ್ಥಾನ.
         ಸಿಟಿ ಸೆಂಟರ್ ‘ಡ್ಯಾನ್ಸ್ ಡ್ಯಾನ್ಸ್’ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ. ಡಿ. ಡಿ. ಗ್ರೂಪ್ ನಿಟ್ಟೂರು ರಾಜ್ಯ ವಿಜ್ಞಾನ ಮಟ್ಟದ ನೃತ್ಯ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ. ರಾಜ್ಯ ವಿಜ್ಞಾನ ಮಟ್ಟದ “ರಾಷ್ಟ್ರೀಯ ಮಕ್ಕಳ ಉತ್ಸವ” ಕಾರ್ಯಕ್ರಮದಲ್ಲಿ ಸತತ ಎರಡು ಸಲ ಪ್ರಥಮ ಸ್ಥಾನ. ಇಸ್ಕಾನ್ ನಡೆಸಿದ ಅಂತರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಒಂದು ಸಲ ಪ್ರಥಮ ಮತ್ತು ಒಂದು ಬಾರಿ ದ್ವಿತೀಯ ಸ್ಥಾನ. ಕೇರಳ ಸಮಾಜ ನಡೆಸಿದ ರಾಜ್ಯ ಮಟ್ಟದ ‘ಚಮಕ್ ಚಲೋ’ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ. ಸಾರ್ವಜನಿಕ ಶಿಕ್ಷಣ  ಇಲಾಖೆ ನಡೆಸಿದ ‘ಪ್ರತಿಭಾ ಕಾರಂಜಿ’ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ಸರೋಜಿನಿ ಮಧುಸೂದನ್ ಖುಷೆ ಆಂತರಿಕ ಶಾಲಾ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. 2013ರಲ್ಲಿ ಕಂಕನಾಡಿ ಯುವಕ ವೃಂದ ಆಯೋಜಿಸಿದ್ದ ರಾಜ್ಯ ಮಟ್ಟದ ‘ದಸರಾ ನೃತ್ಯ’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. ರಾಜ್ಯ ಮಟ್ಟದ “RARASAM’ 2016 ಡ್ಯಾನ್ಸ್ ಜೂನಿಯರ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ. ಸುವರ್ಣ ವಾಹಿನಿಯ ವಿನೂತನ ಕಾರ್ಯಕ್ರಮ ‘ಛೋಟ ರಿಪೋರ್ಟರ್’ ಸ್ಪರ್ಧೆಯಲ್ಲಿ ಏಳನೇ ಸ್ಥಾನ. ಕನ್ನಡ ಕರಾವಳಿ ವಾಹಿನಿಯಲ್ಲಿ ‘ಬಣ್ಣದ ಬದುಕು’ ಎಂಬ ಗಣ್ಯ ಸಾಧಕ ವ್ಯಕ್ತಿಗಳ ನೇರ ಸಂದರ್ಶನ ಕಾರ್ಯಕ್ರಮದ ಯಶಸ್ವೀ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
             ಶ್ರೇಯಾ ಅವರು ತುಳು ಹಾಗೂ ಕನ್ನಡ ಚಲನಚಿತ್ರಗಳಲ್ಲಿ ಬಾಲನಟಿಯಾಗಿ ಬಣ್ಣ ಹಚ್ಚಿದ್ದಾರೆ. ಗೋಲ್ ಮಾಲ್, ಉಮಿಲ್ (ತುಳು), ಒಂದು ಮೊಟ್ಟೆಯ ಕತೆ, ದೇವ್ರಾಣಿ ಬುಡು ಗುರು, ಇವಳು ಯಾರು ಕಾಣಿ, ಬಣ್ಣ ಬಣ್ಣ ಬದುಕು, ರಾಳ, ಅವ್ಯಯ ಇತ್ಯಾದಿ ಕನ್ನಡ ಚಿತ್ರಗಳು. ಸದ್ಯದಲ್ಲೇ ಮಲೆಯಾಳಂ ಚಿತ್ರವೊಂದು ತೆರೆ ಕಾಣಲಿದೆ. ಹ್ಯಾಂಗೊ ಮಿಲ್ಕ್ ಶೇಕ್, ಇನ್ಲ್ಯಾಂಡ್ ಬಿಲ್ಡರ್ (ಕನ್ನಡ ಜಾಹೀರಾತುಗಳು)
 ತೆಲುಗು ಭಾಷೆಯಲ್ಲಿ rita hair oil”
‘ಕೂದಲಿನ ಎಣ್ಣೆ’ಯ ಜಾಹೀರಾತಿನಲ್ಲಿ ಅಭಿನಯಿಸಿದ್ದಾರೆ. ಇವರು ನಟಿಸಿದ ‘ bad creatures of god ಕಿರುಚಿತ್ರ ಉತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಈವರೆಗೆ 150ಕ್ಕೂ ಹೆಚ್ಚು ಸಾಂಸ್ಕೃತಿಕ ಸಂಭ್ರಮಗಳನ್ನು ಯಶಸ್ವಿಯಾಗಿ ನಿರೂಪಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.
            ಶ್ರೇಯಾ ಅವರ ಪ್ರತಿಭೆಯನ್ನು ನಾಡಿನ ಹಲವಾರು ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಗುರುತಿಸಿವೆ. 2016ರಲ್ಲಿ ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತು ‘ರಾಜೋತ್ಸವ’ ಪ್ರಶಸ್ತಿ ನೀಡಿ ಗೌರವಿಸಿದೆ. ಪೇಜಾವರ ಮಠದ ಹಿಂದಿನ ಶ್ರೀಗಳಾದ ವಿಶ್ವೇಶ ತೀರ್ಥರು ‘ಚೈತನ್ಯ ಶ್ರೀ’ ಪ್ರಶಸ್ತಿ ನೀಡಿ ಗೌರವಿಸುದ್ದಾರೆ. ಕಲ್ಕೂರ ಪ್ರತಿಷ್ಠಾನ ‘ಕಲ್ಕೂರ ಬಾಲಸಿರಿ’ ಪುರಸ್ಕಾರ ನೀಡಿ ಗೌರವಿಸಿದೆ. ಬೆಳಂದಿಗಳ ಸಾಹಿತ್ಯ ಸಮ್ಮೇಳನದಲ್ಲಿ ‘ಕರ್ನಾಟಕ ಪ್ರತಿಭಾರತ್ನ’ ಪ್ರಶಸ್ತಿ ಪಡೆದಿದ್ದಾರೆ. ಬೆಳ್ತಂಗಡಿಯ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ‘ಯುವ ಸಾಂಸ್ಕೃತಿಕ ಸಾಧನ ಪುರಸ್ಕಾರ ನೀಡಿ ಗೌರವಿಸಿದೆ. ಗೋವಾ ಕನ್ನಡಿಗರ 9ನೇ ಸಾಂಸ್ಕೃತಿಕ ಸಮ್ಮೇಳನದಲ್ಲಿ ‘ಕರುನಾಡ ಪದ್ಮಶ್ರೀ’ ಪಡೆದಿದ್ದಾರೆ. ಮಡ್ಯಾಂತರು ಜೆ. ಸಿ ಸಂಸ್ಥೆ ‘ಸಾಧನ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ಶ್ರೇಯಾ ಅವರ ಭವಿತವ್ಯದ ಬದುಕು ಹಸನಾಗಲಿ. ಸರ್ವ ಇಷ್ಟಾರ್ಥಗಳು ಸಿದ್ಧಿಸಲಿ ಎಂಬ ಆಶಯ ನಮ್ಮದು.
ಲೇಖನ: ಉದಯ ಬಿ. ಶೆಟ್ಟಿ,  ಪಂಜಿಮಾರು
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

7 + 7 =