ಡಾ.ಕಾರಂತ ಪ್ರತಿಷ್ಠಾನ ಕೋಟ,ಕೋಟತಟ್ಟು ಗ್ರಾಮಪಂಚಾಯತ್ ಹಾಗೂ ಉಡುಪಿಯ ಡಾ.ಶಿವರಾಮ್ ಕಾರಂತ ಟ್ರಸ್ಟ್ ಕೊಡಮಾಡುವ ತಿಂಗಳ ದತ್ತಿ ಪುರಸ್ಕಾರಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಆಯ್ಕೆ ಮಾಡಲಾಗಿದೆ.

ಈ ಪೈಕಿ ಕಳೆದ 30 ವರ್ಷಗಳಿಂದ ವೀಕ್ಷಕ ವಿವರಣೆಕಾರರರಾಗಿ ಹಾಗೂ 20 ವರ್ಷಗಳಿಂದ ಕೆ.ಎಸ್.ಸಿ.ಎ ಅಂಗೀಕೃತ ತೀರ್ಪುಗಾರರಾಗಿ ಸೇವೆ ಸಲ್ಲಿಸುತ್ತಿರುವ ಶಿವನಾರಾಯಣ್ ಐತಾಳ್ ಕೋಟ ಇವರನ್ನು ದಿ.ಮನೋಹರ್ ತೋಳಾರ್ ಕ್ರೀಡಾಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಮಾರ್ಚ್ 21 ರ ಸಂಜೆ ಕೋಟ ಡಾ.ಶಿವರಾಮ್ ಕಾರಂತ ಥೀಮ್ ಪಾರ್ಕ್ ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.