ಭಾರತೀಯ ಅಂತರಾಷ್ಟ್ರೀಯ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ರ ಅತ್ಯಾಪ್ತ ಅಭಿಮಾನಿ ಬೆಂಗಳೂರಿನ ಶಂಕರ್ ಧವನ್, ಶಿಖರ್ ಧವನ್ ಜನ್ಮದಿನಕ್ಕಾಗಿ ತನ್ನ ಎದೆಯ ಹಾಗೂ ಹೊಟ್ಟೆ ಭಾಗದಲ್ಲಿ ಧವನ್ ರ ಭಾವಚಿತ್ರಿರುವ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಟ್ಯಾಟೂ ನೋಡಿ ಶಿಖರ್ ಧವನ್ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.ಕಳೆದ ವರ್ಷ ಶಿಖರ್ ಧವನ್ ಜನ್ಮದಿನವನ್ನು ತಮ್ಮ ದೇಹದ ಅಂಗಾಂಗ ದಾನ ಮಾಡುವ ನಿರ್ಧಾರ ಪ್ರಕ್ರಿಯೆಗೆ ಮುಂಚಿತವಾಗಿ ಸಹಿ ಮಾಡಿ ಮಾನವೀಯತೆ ಮೆರೆದಿದ್ದರು ಶಂಕರ್ ಗೀತಾ ದಂಪತಿಗಳು.
ಭಾರತೀಯ ತಂಡದ ನಿಕಟ ಸಂಪರ್ಕದಲ್ಲಿರುವ ಶಂಕರ್ ಯಾವುದೇ ಫಲಾಪೇಕ್ಷೆಯಿಲ್ಲದ ಅಭಿಮಾನ,ತಂಡ ಹಾಗೂ ಆಟಗಾರರು ಎಲ್ಲೇ ಹೋದರು ಜಾಡು ಹಿಡಿದು ಹಿಂಬಾಲಿಸುವ ಅಭಿಮಾನಿ. ಧವನ್ ರಂತೆಯೇ ಕೇಶವಿನ್ಯಾಸ, ಮೀಸೆ, ಕಿವಿಗೆ ಟಿಕ್ಕಿ,ಧವನ್ ರ ಭಾವ ಚಿತ್ರವಿರುವ ಟ್ಯಾಟೂ ಹೀಗೆ ಪ್ರತಿಯೊಂದು ವಿಚಾರದಲ್ಲೂ ಧವನ್ ರನ್ನು ಅನುಕರಿಸುವ ಶಂಕರ್ ಅವರು ಶಿಖರ್ ಧವನ್ ಪಾಲಿಗೆ ಮನೆಯ ಸದಸ್ಯನಂತೆ.
2008 ರ ಸಮಯದಲ್ಲಿ ಶಿಖರ್ ಧವನ್ ಸಂಪರ್ಕಕ್ಕೆ ಬಂದ ಶಂಕರ್, ಧವನ್ ರವರ ವಿವಾಹ ವಾರ್ಷಿಕೋತ್ಸವ,ಜನ್ಮದಿನದಂತಹ ಖಾಸಗಿ ಸಮಾರಂಭಕ್ಕೂ ಶಂಕರ್ ಕುಟುಂಬವನ್ನೇ ಆಹ್ವಾನಿಸುತ್ತಾರೆ.ಪ್ರತಿಯೊಂದು ಪಂದ್ಯಕ್ಕೂ ಟಿಕೆಟ್ ಉಚಿತವಾಗಿ ನೀಡುತ್ತಾರೆ.ಭಾರತದ ಡ್ರೆಸ್ಸಿಂಗ್ ರೂಮ್ ನಲ್ಲಿ ಶಂಕರ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಟೆನ್ನಿಸ್ ಬಾಲ್ ಕ್ರಿಕೆಟ್ ನ ತಂಡ ಫೀನಿಕ್ಸ್ ಬೆಂಗಳೂರು ತಂಡದಿಂದ ಕ್ರಿಕೆಟ್ ಜೀವನ ಪ್ರಾರಂಭಿಸಿದ ಧವನ್ ಇಂದು ಯುವ ಪ್ರತಿಭೆಗಳಿಗೆ ತರಬೇತಿಯನ್ನು ನೀಡುತ್ತಾರೆ. ಹೈದರಾಬಾದ್ ನಲ್ಲಿ ಲೆದರ್ ಬಾಲ್ ನ ಲೀಗ್ ಪಂದ್ಯವನ್ನಾಡಿದ ಅನುಭವವನ್ನು ಹೊಂದಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ನಿತ್ಯದ ಅತಿಥಿ. ಆರಂಭದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಶಂಕರ್ ಫೀನಿಕ್ಸ್, ಅಂಬೇಡ್ಕರ್ ಯಂಗ್ ಬಾಯ್ಸ್, ಬ್ಲೂ ಸ್ಟಾರ್ಸ್, ಜೆ.ಪಿ. ಕ್ರಿಕೆಟರ್ಸ್, ಜೆ.ಎಸ್.ಆರ್, ಹಾಗೂ ಎಂ.ಎಸ್.ಆರ್ ತಂಡಗಳ ಪರವಾಗಿ ಆಡಿ, ಕೆ.ಎಸ್.ಸಿ.ಎ ನಾಲ್ಕು ಹಾಗೂ ಐದನೇ ಹಂತದ ಲೀಗ್ ನಲ್ಲಿ ವಿ.ಸಿ.ಸಿ, ಬಿ.ಯು.ಸಿ.ಸಿ ಹಾಗೂ ಮಿತ್ರ ಕ್ರಿಕೆಟ್ ಕ್ಲಬ್ ಪರವಾಗಿ ಆಡಿದ್ದ ಅನುಭವಿ.
ಶಿಖರ್ ಧವನ್ ಅವರ ಮೈಯಲ್ಲಿ ಯಾವ ವಿಧದ ಟ್ಯಾಟೂ ಇದೆಯೋ ಅದಷ್ಟೂ ಬಗೆಯ ಟ್ಯಾಟೂ ಶಂಕರ್ ಮೈಯಲ್ಲಿದೆ. ಕೈ,ಬೆನ್ನು,ಬೆರಳು , ಎದೆ, ಭುಜ ಹೀಗೆ ಧವನ್ ಅವರು ಹಾಕಿಸಿಕೊಂಡಿರುವ ಟ್ಯಾಟೂ ಶಂಕರ್ ಅವರ ಮೈ ಮೇಲೆ ಇದೆ. ಶಿಖರ್ – ಶಂಕರ್ ಆತ್ಮೀಯತೆ ಎಷ್ಟೆಂದರೆ ಧವನ್ ಒಮ್ಮೆ ಶಂಕರ್ ಅನುಕರಿಸುವ ಪ್ರಯತ್ನಕ್ಕೂ ಕೈ ಹಾಕಿದ್ದರು.
ಇದುವರೆಗೂ ಧವನ್ ರಿಂದ ಹಣವನ್ನು ಸ್ವೀಕರಿಸದ ಶಂಕರ್, ಶಿಖರ್ ಜೊತೆಗಿನ ಸಂಬಂಧವನ್ನು ಹಾಳುಗೆಡಹುವ ಕೆಲಸ ಮಾಡಿಲ್ಲ,ಅವರ ದೂರವಾಣಿ ಸಂಖ್ಯೆಯನ್ನು ಯಾರೊಂದಿಗೂ ಹಂಚಿಕೊಂಡಿಲ್ಲ.
ತನ್ನ ಅಭಿಮಾನಿಯನ್ನು ಅತೀವವಾಗಿ ಪ್ರೀತಿಸುವ ಧವನ್ ರವರು ಇಂಡಿಯನ್ ಪ್ರಿಮಿಯರ್ ಲೀಗ್ ನ ಪ್ರತಿಯೊಂದು ಪಂದ್ಯಕ್ಕೂ ಹೋಟೆಲ್ ಬುಕ್ ಮಾಡಿ ಟಿಕೆಟ್ ನೀಡುತ್ತಾರೆ.ಶಂಕರ್ ಹಲವಾರು ಅಸಹಾಯಕ ಪ್ರತಿಭೆಗಳಿಗೆ ನೆರವಾಗಿರುತ್ತಾರೆ.