ಕುಂದಾಪುರ-ಶಂಕರನಾರಾಯಣ ಸ್ಪೋರ್ಟ್&ಕಲ್ಚರಲ್ ಕ್ಲಬ್ ಇವರ ಆಶ್ರಯದಲ್ಲಿ ಶಂಕರನಾರಾಯಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಟಗಾರರಿಗಾಗಿ ಐದನೇ ಆವೃತ್ತಿಯ ಶಂಕರನಾರಾಯಣ ಪ್ರೀಮಿಯರ್ ಲೀಗ್-ಎಸ್.ಎನ್.ಪಿ.ಎಲ್-5 ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ.
ಡಿಸೆಂಬರ್ 16 ಮತ್ತು 17 ರಂದು ಶಂಕರನಾರಾಯಣ ಕಾಲೇಜು ಮೈದಾನದಲ್ಲಿ ನಡೆಯುವ ಈ ಪಂದ್ಯಾಟದಲ್ಲಿ ಸಮೃದ್ಧಿ ಸ್ಟ್ರೈಕರ್ಸ್,ಆರ್ ಆರ್ ಆರ್ ಕಿಂಗ್ಸ್, ಎಸ್.ಜಿ.ಪಿ ಕ್ರಿಕೆಟರ್ಸ್, ಅರುಣೋದಯ ಅಟ್ಯಾಕರ್ಸ್,ನಂ ಟೀಂ,ಬೈಲೂರ್ ರಾಯಲ್ಸ್,ಸಾನಿಕಾ ಸ್ಟ್ರೈಕರ್ಸ್ ಕಾರೆಬೈಲು,ಆರ್ವಿ ಕ್ರಿಕೆಟರ್ಸ್ ಕೊಂಡಳ್ಳಿ,ರಾಯಲ್ ಬಂಟ್ಸ್ ಶಾಡಿಗುಂಡಿ,ಜೈ ಹೋ ಫೈಟರ್ಸ್ ವೀರ ಇಲೆವೆನ್,ಅಜಿತ್ ಕ್ರಿಕೆಟರ್ಸ್ ಶಂಕರನಾರಾಯಣ, ಧನಲಕ್ಷ್ಮೀ ಕ್ರಿಕೆಟರ್ಸ್ ಕೊಂಡಳ್ಳಿ ಹೀಗೆ ಒಟ್ಟು 12 ತಂಡಗಳು ಲೀಗ್ ಕಂ ನಾಕೌಟ್ ಮಾದರಿಯಲ್ಲಿ ಸೆಣಸಾಡಲಿದೆ.ಟೂರ್ನಮೆಂಟ್ ನ ಪ್ರಥಮ ಸ್ಥಾನಿ
60 ಸಾವಿರ ನಗದು ಮತ್ತು ದ್ವಿತೀಯ ಸ್ಥಾನಿ
40 ಸಾವಿರ ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.
ಪಂದ್ಯಾಟದ ನೇರ ಪ್ರಸಾರ ಸ್ಟಾರ್ ವರ್ಟೆಕ್ಸ್ Sportskannadatv. ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.