ಬಾಂಗ್ಲಾದೇಶ ಕ್ರಿಕೆಟ್ ತಂಡದ ಭರವಸೆಯ ಆಲ್ ರೌಂಡರ್ ಶಕೀಬ್ ಅಲ್ ಹಸನ್‌ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ 2 ವರ್ಷಗಳ ಕಾಲ ನಿಷೇಧ ಹೇರಿದೆ . ಭ್ರಷ್ಟಾಚಾರ ಆರೋಪದಲ್ಲಿ ಶಕೀಬ್ ಅಲ್ ಹಸನ್ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. 3 ಬಾರಿ ಬುಕ್ಕಿಗಳು ಸಂಪರ್ಕಿಸಿದ್ದನ್ನು ಐಸಿಸಿಗೆ ತಿಳಿಸದ ಕಾರಣ ಶಕೀಬ್ ನಿಷೇಧಕ್ಕೆ ಒಳಗಾಗಿದ್ದಾರೆ.
2017ರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ವೇಳೆ ಬುಕ್ಕಿ ಅಗರ್‌ವಾಲ್, ಶಕೀಬ್‌ಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದು ತಂಡದ ಆಂತರಿಕ ವಿಚಾರಗಳನ್ನು ಹಂಚಿಕೊಳ್ಳುವಂತೆ ಕೇಳಿದ್ದಾನೆ. ಈ ಘಟನೆಯನ್ನು ಶಕೀಬ್, ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ತಿಳಿಸಿಲ್ಲ. ಬಳಿಕ 2018ರ ಬಾಂಗ್ಲಾ, ಶ್ರೀಲಂಕಾ ಹಾಗೂ ಜಿಂಬಾಬ್ವೆ ನಡುವಿನ ತ್ರಿಕೋನ ಸರಣಿ, 2018ರ ಏ.26ರಂದು ಸನ್ರೈಸರ್ಸ್-ಕಿಂಗ್ಸ್ ಇಲೆವೆನ್ ನಡುವಿನ ಐಪಿಎಲ್ ಪಂದ್ಯದ ವೇಳೆ ಬುಕ್ಕಿ ಅಗರ್‌ವಾಲ್ ಮತ್ತೊಮ್ಮೆ ಸಂಪರ್ಕಿಸಿದ್ದಾನೆ. ಆದರೂ ಶಕೀಬ್, ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮಾಹಿತಿ ರವಾನಿಸಿಲ್ಲ.
ಈ ಮೇಲಿನ ಎಲ್ಲಾ ಕಾರಣಗಳಿಂದಾಗಿ ಶಕೀಬ್ ಅಲ್ ಹಸನ್ 2 ವರ್ಷಗಳ ಕಾಲ ಕ್ರಿಕೆಟ್ ನಿಂದ ದೂರ ಉಳಿಯಬೇಕಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾರತ ಪ್ರವಾಸದಿಂದ ಶಕೀಬ್ ಔಟ್: ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಬಾಂಗ್ಲಾ ಕ್ರಿಕೆಟ್ ತಂಡ, ಆತಿಥೇಯ ಭಾರತದ ವಿರುದ್ಧ 3 ಪಂದ್ಯಗಳ ಟಿ20 ಮತ್ತು 2 ಟೆಸ್ಟ್ ಪಂದ್ಯಗಳನ್ನಾಡಲಿದೆ. ಶಕೀಬ್ ಅಲ್ ಹಸನ್ ಅನುಪಸ್ಥಿತಿಯಲ್ಲಿ ಪ್ರವಾಸಿ ಬಾಂಗ್ಲಾ ಬಲಿಷ್ಠ ಭಾರತವನ್ನು ಎದುರಿಸಬೇಕಾಗಿದೆ.
– ಪ್ರೀತಮ್ ಹೆಬ್ಬಾರ್