ದುಬೈ-ಶಾನ್ ದುಬೈ ಇವರ ಆಶ್ರಯದಲ್ಲಿ,ಕ್ರೀಡಾ ಸಂಘಟಕರಾದ ಮುನಾವರ್ ಶಾ ಬಸ್ರೂರು ಮತ್ತು ಇಮ್ರಾನ್ ತೆಕ್ಕಟ್ಟೆ ಇವರ ಸಾರಥ್ಯದಲ್ಲಿ ಮಾರ್ಚ್ 11 ಶನಿವಾರದಂದು ದುಬೈ ನ ಅಬುಹೈಲ್ ಮೈದಾನದಲ್ಲಿ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಹಂಗಾಮ “ಶಾನ್ ಪ್ರೀಮಿಯರ್ ಲೀಗ್ ಸೀಸನ್-2 ಆಯೋಜಿಸಲಾಗಿದೆ.
ಈ ಪಂದ್ಯಾಟದಲ್ಲಿ ಒಟ್ಟು 5 ತಂಡಗಳು ಭಾಗವಹಿಸಲಿದ್ದು ತಂಡಗಳ ವಿವರ 1)ಶಾನ್ ವಾರಿಯರ್ಸ್ 2)ಶಾನ್ ಟೈಟನ್ಸ್ 3)ಶಾನ್ ನೈಟ್ ರೈಡರ್ಸ್ 4)ಶಾನ್ ಗ್ಲ್ಯಾಡಿಯೇಟರ್ಸ್ 5)ಶಾನ್ ಚಾಲೆಂಜರ್ಸ್
ಈ ಪಂದ್ಯಾಟದ ಪ್ರಥಮ ಪ್ರಶಸ್ತಿ ವಿಜೇತ ತಂಡ 2222 ದಿರಮ್ಸ್ ಮತ್ತು ದ್ವಿತೀಯ ಸ್ಥಾನಿ 1111 ದಿರಮ್ಸ್ ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.
ವೈಯಕ್ತಿಕ ಶ್ರೇಷ್ಠ ನಿರ್ವಹಣೆ ಪ್ರದರ್ಶಿಸಿದ ಆಟಗಾರರಿಗೆ ವಿಶೇಷ ಉಡುಗೊರೆಗಳನ್ನು ನೀಡಲಾಗುತ್ತಿದೆ.